ಗವಾಸ್ಕರ್- ಗಂಭೀರ್ ಬಾರ್ಡ್ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ಟೀಮ್ ಇಂಡಿಯಾ 10 ವರ್ಷಗಳ ಬಳಿಕ ಸೋಲು ಕಂಡಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ (Australia) 3-1ರಿಂದ ಗೆದ್ದುಕೊಂಡಿದೆ. ಸರಣಿಯನ್ನು ಕಳೆದುಕೊಂಡ ನಂತರ, ಟೀಮ್ ಇಂಡಿಯಾ (Team India) ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದ (World Test Championship Final) ಮೊದಲ ಬಾರಿಗೆ ಹೊರಗುಳಿಯಲಿದೆ. ಈ ಟೆಸ್ಟ್ ಸರಣಿಯಲ್ಲಿ ಭಾರತೀಯ ಬ್ಯಾಟರ್ಗಳು ಸಂಪೂರ್ಣ ವಿಫಲರಾದರು. ಭಾರತದ ಮಾಜಿ ಬ್ಯಾಟರ್ ಸುನಿಲ್ ಗವಾಸ್ಕರ್ ಸೋಲಿನ ನಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗವಾಸ್ಕರ್ ಗಂಭೀರ್ ಅಥವಾ ಟೀಮ್ ಇಂಡಿಯಾದ ಯಾವುದೇ ಆಟಗಾರನ ವಿರುದ್ಧ ಕೋಪವನ್ನು ವ್ಯಕ್ತಪಡಿಸಲಿಲ್ಲ, ಆದರೆ ಇಡೀ ಕೋಚಿಂಗ್ ಸಿಬ್ಬಂದಿಯ ಮೇಲೆ ಗುಡುಗಿದ್ದಾರೆ. ಕೋಚಿಂಗ್ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ನಿಮ್ಮ ಕೋಚಿಂಗ್ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ನೀವು ಬಂದಮೇಲೆ ಟೀಮ್ ಇಂಡಿಯಾದಲ್ಲಿ ಏನು ಸುಧಾರಣೆಯಾಗಿದೆ? ನಮಗೆ ಇಂಗ್ಲೆಂಡ್ ಪ್ರವಾಸಕ್ಕೆ ಎರಡರಿಂದ ಮೂರು ತಿಂಗಳುಗಳಿವೆ. ಆಟಗಾರರನ್ನು ಉಳಿಸಿಕೊಳ್ಳಬೇಕೇ ಎಂದು ನೀವು ಕೇಳುತ್ತೀರಿ. ಆದರೆ ಕೋಚಿಂಗ್ ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕೇ ಎಂದು ನೀವು ಕೇಳಬೇಕು. ಇನ್ನೂ ಮೂರು ಅಥವಾ ನಾಲ್ಕು ತಿಂಗಳು ಮಾತ್ರ ಸಮಯವಿದೆ, ಆದರೆ ನೀವು ಆರಾಮವಾಗಿದ್ದೀರಿ. ನೀವು ಈ ಸರಣಿಯ ನಂತರ ಯೋಚಿಸಬೇಕು, ನಾನು ಟೆಸ್ಟ್ ಮ್ಯಾಚ್ ಪ್ಲೇಯರ್ ಆದ್ದರಿಂದ ನಾನು ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಲಿದ್ದೇನೆ. ಆದ್ದರಿಂದ ನಾನು ಖಂಡಿತವಾಗಿಯೂ ಅವರಿಗೆ ಪ್ರಶ್ನೆಗಳನ್ನು ಕೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 9999 ರನ್ಗೆ ಔಟ್ ಆದ ಸ್ಮಿತ್! ಟೆಸ್ಟ್ ಇತಿಹಾಸದಲ್ಲಿ ಈ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್ಗಳೆಷ್ಟು? ಯಾವ ತಂತ್ರವನ್ನು ಬಳಸಲಾಯಿತು? ಆಟಗಾರರನ್ನು ಸುಧಾರಿಸಲು ನೀವು ಏನು ಮಾಡಿದ್ದೀರಿ ಎಂದು ಕೋಚಿಂಗ್ ಸಿಬ್ಬಂದಿ ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಇಲ್ಲಿಯವರೆಗೆ ನೀವು ಯಾವ ತಂತ್ರವನ್ನು ಬಳಸಿದ್ದೀರಾ? ಎಂದು ಸ್ಟಾರ್ಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗವಾಸ್ಕರ್, ಟೀಮ್ ಇಂಡಿಯಾದ ಆಟಗಾರರನ್ನು ಹಾಗೂ ಕೋಚ್ಗಳನ್ನ ತರಾಟೆಗೆ ತೆಗೆದುಕೊಂಡರು. ಒಂದು ಕಿವಿಯಿಂದ ಕೇಳಿ, ಇನ್ನೊಂದು ಕಿವಿಯಿಂದ ಬಿಡ್ತೀರಾ ಟೀಮ್ ಇಂಡಿಯಾದ ಬ್ಯಾಟಿಂಗ್ ಸುಧಾರಿಸಲು ನಾವು ದೇಶೀಯ ಕ್ರಿಕೆಟ್ನಿಂದ ಆಟಗಾರರನ್ನು ಕರೆತರಬೇಕೇ? ಈ ಪ್ರಶ್ನೆ ಉತ್ತರಿಸಿದ ಗವಾಸ್ಕರ್ ವಿಷಾದ ವ್ಯಕ್ತಪಡಿಸಿದರು. " ನಾವು ಯಾರು? ನಮಗೆ ಕ್ರಿಕೆಟ್ ಗೊತ್ತಿಲ್ಲ. ನಾವು ಕೇವಲ ಟಿವಿಗಾಗಿ ಮಾತನಾಡುತ್ತೇವೆ ಮತ್ತು ಹಣ ಸಂಪಾದಿಸುತ್ತೇವೆ, ನಮ್ಮ ಮಾತನ್ನು ಕೇಳಬೇಡಿ, ನಾವು ಅವರಿಗೆ ಏನೂ ಅಲ್ಲ. ಒಂದು ಕಿವಿಯಿಂದ ಕೇಳಿಸಿಕೊಂಡಿ, ಇನ್ನೊಂದು ಕಿವಿಯಿಂದ ಬಿಡುತ್ತಾರೆ “ಎಂದು ಸುನಿಲ್ ಗವಾಸ್ಕರ್ ಹೇಳಿದರು. ಇದನ್ನೂ ಓದಿ: ಆ ನಿಯಮಕ್ಕೆ ಬದ್ಧರಾಗಿದ್ದರೆ ಟೆಸ್ಟ್ನಲ್ಲಿ ಅವಕಾಶ! ಕೊಹ್ಲಿ-ರೋಹಿತ್ ಭವಿಷ್ಯದ ಬಗ್ಗೆಯೂ ಗಂಭೀರ್ ಮಾತು ಗೆಲುವಿನಿಂದ ಪ್ರಾಂರಂಭಿಸಿದರೂ ಸರಣಿ ಸೋಲು ಪರ್ತ್ ಟೆಸ್ಟ್ನಲ್ಲಿ ಭಾರತ 295 ರನ್ಗಳ ಜಯದೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ಅನ್ನು ಪ್ರಾರಂಭಿಸಿತು. ಅಡಿಲೇಡ್ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳಿಂದ ಸೋಲು ಕಂಡಿತ್ತು. ಸೋತಿದೆ. ಅದೇ ಸಮಯದಲ್ಲಿ, ಬ್ರಿಸ್ಬೇನ್ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತು. ಮೆಲ್ಬೋರ್ನ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು184 ರನ್ಗಳಿಂದ ಹಾಗೂ ಸಿಡ್ನಿ ಟೆಸ್ಟ್ ಪಂದ್ಯವನ್ನ 6 ವಿಕೆಟ್ಗಳಿಂದ ಸಿಡ್ನಿ ಗೆದ್ದು ಸರಣುಯನ್ನ 3-1ರಲ್ಲಿ ಗೆದ್ದುಕೊಂಡಿತ್ತು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.