ಸತೀಶ್ ಜಾರಕಿಹೊಳಿ ಪರ ಜೆಡಿಎಸ್ ಶಾಸಕ ಬ್ಯಾಟಿಂಗ್ ಯಾದಗಿರಿ: ರಾಜ್ಯದಲ್ಲಿ ಆಗಾಗ ಸಿಎಂ (CM) ಬದಲಾವಣೆ ಕೂಗು ಕೇಳಿ ಬರುತ್ತಿದೆ. ಡಿಕೆ ಶಿವಕುಮಾರ್ (DK Shivakumar), ಸತೀಶ್ ಜಾರಕಿಹೊಳಿ (Satish Jarkiholi), ಎಂಬಿ ಪಾಟೀಲ್ (MB Patil) ಸೇರಿದಂತೆ ಹಲವು ನಾಯಕರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇತ್ತೀಚಿಗಷ್ಟೇ ಒಂದೆಡೆ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟ್ ನಡೆದಿತ್ತು. ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಕಾಂಗ್ರೆಸ್‌ನ 35ಕ್ಕೂ ಹೆಚ್ಚು ಪ್ರಭಾವಿ ನಾಯಕರು ಇದರಲ್ಲಿ ಭಾಗಿಯಾಗಿದ್ರು. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬಂದಿದೆ. ಸಚಿವರ ಪರ ಜೆಡಿಎಸ್ ಶಾಸಕರೊಬ್ಬರು (JDS MLA) ಬ್ಯಾಟ್ ಬೀಸಿದ್ದಾರೆ. ಇನ್ನು ಅಭಿಮಾನಿಗಳೂ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತ ಘೋಷಣೆ ಕೂಗಿದ್ದಾರೆ! ಸತೀಶ್ ಜಾರಕಿಹೊಳಿ ಪರ ಜೆಡಿಎಸ್ ಶಾಸಕ ಬ್ಯಾಟಿಂಗ್ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡುವೆ ಜೆಡಿಎಸ್ ಶಾಸಕರೊಬ್ಬರು ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸತೀಶಣ್ಣ ಮುಂದಿನ ಸಿಎಂ ಆಗಲಿ ಯಾದಗಿರಿಯಲ್ಲಿ ನಡೆದ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣಗೌಡ ಕಂದಕೂರ, ಸಚಿವ ಸತೀಶ್ ಜಾರಕಿಹೊಳಿಯವರನ್ನು ಸಿಎಂ ಸ್ಥಾನದಲ್ಲಿ ನೋಡುವ ಇಂಗಿತ ಹೊರಹಾಕಿದ್ದಾರೆ. ಸತೀಶಣ್ಣ ಮುಂದಿನ ಸಿಎಂ ಆಗಲಿ ಎಂದಿದ್ದಾರೆ. ಇದನ್ನೂ ಓದಿ: Contractors: ಬಾಕಿ ಬಿಲ್ ಪಾವತಿಸಿ, ಇಲ್ಲದಿದ್ರೆ ದಯಾಮರಣ ನೀಡಿ! ಗುತ್ತಿಗೆದಾರರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ ಉತ್ತರ ಕರ್ನಾಟಕದವ್ರು ಸಿಎಂ ಆಗಿ ಬಹಳ ದಿನವಾಯ್ತು ಉತ್ತರ ಕರ್ನಾಟಕದವ್ರು ಸಿಎಂ ಆಗಿ ಬಹಳ ದಿವಸವಾಯ್ತು. ಹೀಗಾಗಿ ಈಗಲಾದರೂ ಸತೀಶಣ್ಣ ಸಿಎಂ ಆದರೇ ವೈಯಕ್ತಿಕವಾಗಿ ಸ್ವಾಗತ ಮಾಡ್ತಿನಿ ಅಂತ ಶಾಸಕ ಕಂದಕೂರ ಹೇಳಿದ್ದಾರೆ. ಸರ್ ನೀವು ಏನಾದರೂ ಸಿಎಂ ಆಗಬೇಕು ಅಂದರೆ 28/29ರ ಒಳಗೆ ಸಿಎಂ ಆಗಿ ಅಂತ ಜೆಡಿಎಸ್ ಶಾಸಕ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಸರಳ ಸಜ್ಜನಿಕೆಯ ವ್ಯಕ್ತಿ ಸತೀಶ್ ಜಾರಕಿಹೊಳಿಯವರ ಸರಳತೆಯನ್ನ ನಾನು ವಿಧಾನಸಭೆಯಲ್ಲಿ ನೋಡಿದ್ದೇನೆ. ಸತೀಶಣ್ಣ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ಇಂತವರು ಸಿಎಂ ಆಗಲಿ ಅಂತ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದ ಅಭಿಮಾನಿಗಳು ಇನ್ನು ಇದೇ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳೂ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತ ಘೋಷಣೆ ಕೂಗಿದ್ದಾರೆ. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಣ್ಣನವರಿಗೆ ಜೈ ಎಂದು ಜೈಕಾರ ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎನ್ನುತ್ತಿದ್ದಂತೆ ಸತೀಶ್ ಜಾರಕಿಹೊಳಿ ಅಲರ್ಟ್ ಆದ್ರು. ಘೋಷಣೆ ಕೂಗದಂತೆ ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ್ರು. ಯಾರು ಹೋಗಿದ್ದಾರೋ, ಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ ಗ್ಯಾರಂಟಿ ವಿಶ್ಲೇಷಣೆಗೆ ಹೈಕಮಾಂಡ್ ಡಿಕೆ ಶಿವಕುಮಾರ್‌ರನ್ನು ದೆಹಲಿಗೆ ಕರೆದಿರುವ ವಿಚಾರಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಯಾದಗಿರಿಯ ಸೈದಾಪುರದಲ್ಲಿ ಮಾತನಾಡಿದ ಅವರು, ನೀವು ಈ ಪ್ರಶ್ನೆ ನನಗೆ ಕೇಳಬೇಕಿಲ್ಲ. ಯಾರು ಹೋಗಿದ್ದಾರೋ ಬಿಟ್ಟಿದಾರೋ ನನಗೆ ಗೊತ್ತಿಲ್ಲ. ಈ ಪ್ರಶ್ನೆ ಕೇಳಬೇಕಾಗಿರೋದು ನನಗಲ್ಲ, ಸಿಎಂ ಅವರಿಗೆ ಕೇಳಿ. ಇದನ್ನ ನೀವು ಸಿಎಂ ಅವರಿಗೆ ಕೇಳಬೇಕು. ನನಗೆ ನಮ್ಮ ಇಲಾಖೆ ಡೆವಲಪ್ಮೆಂಟ್ ಬಗ್ಗೆ ಕೇಳಿದರೇ ಹೇಳಬಹುದು. ಬೆಂಗಳೂರಿನಲ್ಲಿ ಸಿಎಂ ಅವರಿಗೆ ಕೇಳೋಕೆ ಹೇಳಿ, ಅವರೆ ಉತ್ತರ ಕೊಡ್ತಾರೆ ಅಂತ ಹೇಳಿದ್ದಾರೆ. ಡಿಕೆಶಿ ಪ್ರೆಸ್ ಮೀಟ್ ಮಾಡಬಾರದಾ? ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಲ್ಲಾ ಸರಿಯಿದೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಮ್ಮ ಇಲಾಖೆಯದ್ದು ಏನಾದ್ರೂ ಇದ್ರೆ ಕೇಳಿ ಎಂದಿದ್ದಾರೆ. ದೆಯಲ್ಲಿ ಡಿಸಿಎಂ ಡಿಕೆಶಿ ಸುದ್ದಿಗೋಷ್ಠಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ಯಾಕೆ ಮಾಡಬಾರದು? ಅವರು ಪಕ್ಷದ ಅಧ್ಯಕ್ಷರಿದ್ದಾರೆ. ಏನಾದರೂ ಹೇಳೋದಕ್ಕೆ ಪ್ರೆಸ್ ಮೀಟ್ ಮಾಡ್ತಿರಬಹುದು ಎಂದಿದ್ದಾರೆ. (ವರದಿ: ಗಣೇಶ್ ಪಾಟೀಲ್, ನ್ಯೂಸ್ 18 ಕನ್ನಡ, ಯಾದಗಿರಿ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.