ಅಪರ್ಣಾಗೆ ದೊಡ್ಡ ದೊಡ್ಡ ಆಸೆ ಏನೂ ಇರಲಿಲ್ಲ.! ಕನ್ನಡದ ಸಿಹಿ ಕಂಠದ ಅಪರ್ಣಾ (Aparna) ಅವರನ್ನ ಮತ್ತೆ ನೆನಪಿಸಿಕೊಳ್ಳುವ ಕೆಲಸ ಆಗಿದೆ. ಗಿಚ್ಚಿ ಗಿಲಿಗಿಲಿ ಹಾಗೂ ರಾಜಾ ರಾಣಿ ಶೋದ ಮಹಾ ಸಂಗಮದಲ್ಲಿ ಅಪರ್ಣಾ ಅವರನ್ನ ಸ್ಮರಿಸಲಾಗಿದೆ. ಈ ಹಿನ್ನೆಯಲ್ಲಿ ಗಾಯಕಿ ಮತ್ತು ಅಪರ್ಣಾ ಗೆಳತಿ ಸುನಿತಾ (Sunitha) ಅವರು ಬಂದಿದ್ದರು. ಇಡೀ ಮಹಾಸಂಗಮದ ಶೋದಲ್ಲಿ (Maha Sangama Show) ಎಲ್ಲವನ್ನೂ ನೋಡಿ ಎಂಜಾಯ್ ಮಾಡಿದ್ರು. ಆದರೆ, ಅಪರ್ಣಾ ಅವರ ಮಾತು ಅಂತ ಬಂದಾಗ, ಕಣ್ಣೀರಾದರು. ಕಣ್ಣೀರಿನಲ್ಲಿಯೇ ಮಾತು ಆರಂಭಿಸಿದರು. ತಮ್ಮ 15 ವರ್ಷದ ಒಟ್ಟು ಸ್ನೇಹದ ಹಲವಾರು ಸೀಕ್ರೆಟ್‌ಗಳನ್ನ (Secrets) ಹೇಳಿದರು. ದೊಡ್ಡ ದೊಡ್ಡ ಆಸೆಗಳನ್ನ ಪಡೋ ಜನರ ಮಧ್ಯೆ ಅಪರ್ಣಾ ಅವರಿಗೆ ಚಿಕ್ಕ ಚಿಕ್ಕ ಆಸೆಗಳು ಇದ್ದವು ಅಂತ ಹೇಳಿಕೊಂಡ್ರು. ಪಾನಿಪುರಿ-ಕಡ್ಲೆ ಕಾಯಿ ತಿನ್ನೋದೇ ಬಲು ದೊಡ್ಡ ಆಸೆ.! ಅಪರ್ಣಾ ವಸ್ತಾರೆ ಒಟ್ಟು 7 ಸಾವಿರ ಶೋಗಳನ್ನ ಮಾಡಿದ್ದಾರೆ. ಕನ್ನಡವನ್ನ ಬೆಳಸಿಯೇ ಅದಕ್ಕೆ ಒಂದು ಹೊಸ ಹೊಳಪು ತಂದು ಕೊಟ್ಟಿದ್ದಾರೆ. ಅಪರ್ಣಾ ಎಂದೂ ತಾವೊಬ್ಬ ಗ್ರೇಟ್ ನಿರೂಪಕಿ ಅಂತ ಭಾವಿಸಿರಲಿಲ್ಲ. ಎಂದೂ ತಾವೊಬ್ಬ ಸೆಲೆಬ್ರಿಟಿ ಅಂತ ಬೀಗಲಿಲ್ಲ. ಇರೋವರೆಗೂ ಸಿಂಪಲ್ ಆಗಿಯೇ ಇದ್ದರು. ಅಪರ್ಣಾ ಅವರಿಗೆ ದೊಡ್ಡ ದೊಡ್ಡ ಆಸೆಗಳು ಏನೂ ಇರಲಿಲ್ಲ. ಬದಲಾಗಿ ಚಿಕ್ಕ ಚಿಕ್ಕ ಆಸೆಗಳೇ ಇದ್ದವು. ಆ ಆಸೆಗಳಲ್ಲಿ ಪಾನಿಪುರಿ ತಿನ್ನೋದು ಬಲು ಇಷ್ಟ ಆಗುತ್ತಿತ್ತು. ಕಡ್ಲೆ ಕಾಯಿ ಅಂದ್ರೆ ಅಪರ್ಣಾಗೆ ಪಂಚಪ್ರಾಣ ಹೀಗೆ ಸಣ್ಣಪುಟ್ಟ ಆಸೆಗಳ ಬಗ್ಗೆ ಅಪರ್ಣಾ ಹೇಳ್ತಾ ಇದ್ರು ಎಂದು ಗಾಯಕಿ ಸುನಿತಾ ಕಣ್ಣೀರಾದ್ರು. ಇದನ್ನೂ ಓದಿ: Tharun Sudhir: ಕಾಟೇರ ಡೈರೆಕ್ಟರ್ ಬಾಳಲ್ಲಿ ಪ್ರೀತಿ ಚೆಲ್ಲಿದ ಬ್ಯೂಟಿ! ನನ್ನ ಜೀವನದ ಹೀರೋಯಿನ್ ಇವರೇ ಅಂತಿದ್ದಾರೆ ತರುಣ್! ನನ್ನ ಅಪರ್ಣಾ ಸ್ನೇಹ 15 ವರ್ಷದ ಹಳೆಯದ್ದು..! ನನ್ನ ಮತ್ತು ಅಪರ್ಣಾ ಸ್ನೇಹ 15 ವರ್ಷದ ಸ್ನೇಹವೇ ಆಗಿದೆ. ನಮ್ಮ ತಂದೆಯ ಕುರಿತು ಒಂದು ಪ್ರೊಗ್ರಾಮ್ ಮಾಡೋದಿತ್ತು. ಆಗ ದೊಡ್ಡ ನಿರೂಪಕಿ ಆಗಿದ್ದ ಅಪರ್ಣಾ ಅವರ ಬಳಿಗೆ ಹೋಗಿದ್ದೆ. ಆಗ ಅಪರ್ಣಾ ನನ್ನ ಮಾತು ಕೇಳಿದರು. ನಾನು ಹೇಳಿದ್ದನ್ನ ಆಲಿಸಿದ್ರು. ನಮ್ಮ ತಂದೆ ಬಗ್ಗೆ ಎಲ್ಲ ತಿಳಿದುಕೊಂಡು ನಿರೂಪಣೆಗೆ ಓಕೆ ಅಂದ್ರು. ಹಾಗೇನೆ ಇಡೀ ಪ್ರೊಗ್ರಾಮ್ ಅನ್ನ ತುಂಬಾನೆ ಚೆನ್ನಾಗಿ ಮಾಡಿಕೊಟ್ಟರು. ಆಗಿನಿಂದಲೇ ನಮ್ಮ ಸ್ನೇಹ ಗಟ್ಟಿ ಆಗ್ತಾ ಬಂತು. ಅಪರ್ಣಾ ಮತ್ತು ನಾನು ಒಟ್ಟಿಗೆ ಸೇರಿ ಅದೆಷ್ಟೋ ಕಾರ್ಯಕ್ರಮವನ್ನ ಕೊಟ್ಟಿದ್ದೇವೆ. ಅಪರ್ಣಾ ಇಲ್ಲದೇ ಈಗ ಏನೂ ಮಾಡೋಕೆ ಆಗುತ್ತಿಲ್ಲ ಅಂತಲೇ ಸುನಿತಾ ಅವರು ಹೇಳಿಕೊಂಡ್ರು. ಅಪರ್ಣಾ ಅವರಿಗೆ ಸರ್ಕಾರಿ ಗೌರವ ಸಿಕ್ಕಿದ್ದು ಹೇಗೆ..? ಅಪರ್ಣಾ ಅವರನ್ನ ಸರ್ಕಾರಿ ಗೌರವದೊಂದಿಗೆ ಕಳಿಸಿಕೊಟ್ಟರು. ಅದು ಹೇಗೆ ಸಾಧ್ಯವಾಯಿತು ಅನ್ನೋದನ್ನ ಯಾರು ಪ್ರಶ್ನೆ ಮಾಡಲಿಲ್ಲ. ಆದರೆ, ಗಿಚ್ಚಿ ಗಿಲಿಗಿಲಿ ಮತ್ತು ರಾಜಾರಾಣಿ ಮಹಾಸಂಗಮದಲ್ಲಿ ಈ ವಿಚಾರ ನೆನಪಿಸಿಕೊಳ್ಳಲಾಯಿತು. ಈ ಬಗ್ಗೆ ಗಾಯಕಿ ಸುನಿತಾ ಅವರೇ ಹೇಳಿಕೊಂಡರು. ಸೃಜನ್ ಲೋಕೇಶ್ ಅವರಿಗೆ ಧನ್ಯವಾದ ಹೇಳಿದರು. ಕಾರಣ ಸೃಜನ್ ಲೋಕೇಶ್ ಆ ದಿನ ಏನು ಸಾಧ್ಯವೋ ಆ ಎಲ್ಲ ಕೆಲಸ ಮಾಡಿದ್ದರು. ತಾರಾ ಅವರಿಗೆ ಈ ವಿಚಾರವಾಗಿ ಹೇಳಿದ್ದಾರೆ. ಉಮಾಶ್ರೀ ಅವರಿಗೆ ಕಾಲ್ ಮಾಡಿ ಕೇಳಿದ್ದಾರೆ. ಎಲ್ಲರ ತಲೆ ತಿಂದು ಈ ಒಂದು ಸರ್ಕಾರಿ ಗೌರವ ಮೂಲಕ ಅಪರ್ಣಾ ಅವರನ್ನ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಈ ಒಂದು ವಿಚಾರವನ್ನ ಸ್ವತಃ ಸೃಜನ್ ಲೋಕೇಶ್ ಇದೇ ಶೋದಲ್ಲಿಯೇ ಹೇಳಿದರು. ಮಹಾ ಶೋದಲ್ಲಿ ಅಪರ್ಣಾ ವಿಶೇಷ ವಿಡಿಯೋ.! ಅಪರ್ಣಾ ಅವರನ್ನ ಈ ಶೋದಲ್ಲಿ ವಿಶೇಷವಾಗಿಯೇ ಸ್ಮರಿಸಲಾಗಿದೆ. ಅವರ ಬಗೆಗಿನ ಒಂದು ವಿಶೇಷ ವಿಡಿಯೋ ಮೂಲಕ ಇಲ್ಲಿ ಅವರ ಜರ್ನಿಯನ್ನ ನೆನಪಿಸಿಕೊಳ್ಳಲಾಗಿದೆ. ಜೊತೆಗೆ ಅಪರ್ಣಾ ಅವರ ವಿಶೇಷ ಗುಣಗಳ ಬಗ್ಗೆ ಇಲ್ಲಿದ್ದ ನಿರ್ಣಾಯಕರು ಅಷ್ಟೇ ಪ್ರೀತಿ ಮತ್ತು ಗೌರವದೊಂದಿಗೆ ಹೇಳಿಕೊಂಡರು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.