ಪ್ರೇಕ್ಷಕರು ಭಾವುಕ ಕೆಲವೊಂದು ಸಿನಿಮಾಗಳು ಭಾರೀ ಕಡಿಮೆ ಬಜೆಟ್ನಲ್ಲಿ (Budget) ನಿರ್ಮಾಣವಾಗಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತವೆ. ಈ ಸಿನಿಮಾ (Cinema) ಕೂಡಾ ಅಂಥವುಗಳಲ್ಲಿ ಒಂದು. ಈ ಒಂದು ಮೂವಿ (Movie) ಭಾರೀ ಕಲೆಕ್ಷನ್ ಮಾಡಿದ್ದಷ್ಟೇ ಅಲ್ಲದೆ ವಿದೇಶದಲ್ಲಿಯೂ ಸಿನಿ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿದೆ. ಈ ಮೂವಿ ನೋಡಿದ ಫಾರಿನ್ ಪ್ರೇಕ್ಷಕರು ಥಿಯೇಟರ್ನಲ್ಲೇ ಕಣ್ಣೀರಿಟ್ಟಿದ್ದಾರೆ. ವಿಜಯ್ ಸೇತುಪತಿ ಅಭಿನಯದ ತಮಿಳಿನ ಆಕ್ಷನ್ ಥ್ರಿಲ್ಲರ್ ಮಹಾರಾಜ ಜೂನ್ 2024 ರಲ್ಲಿ ಬಿಡುಗಡೆಯಾಯಿತು. ವಿಶೇಷವಾಗಿ ಸೇತುಪತಿ ಅವರ ಅದ್ಭುತ ಅಭಿನಯಕ್ಕಾಗಿ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದ ಈ ಮೂವಿ ಕಳೆದ ವರ್ಷ ನವೆಂಬರ್‌ನಲ್ಲಿ, ಆಕ್ಷನ್ ಥ್ರಿಲ್ಲರ್ ಚೀನಾದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಗಳಿಸಿದೆ. ವೈರಲ್ ಆಗುತ್ತಿದೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಚೀನಾದ ಪ್ರೇಕ್ಷಕರು ಮಹಾರಾಜ ಮೂವಿಯನ್ನು ಥಿಯೇಟರ್‌ನಲ್ಲಿ ನೋಡುವಾಗ ಭಾವುಕರಾಗುತ್ತಿರುವುದನ್ನು ತೋರಿಸಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ತಕ್ಷಣ ವೈರಲ್ ಆಗಿದೆ. ಮಹಾರಾಜ ತಂದೆ-ಮಗಳ ಬಾಂಧವ್ಯದ ಸುತ್ತ ಸುತ್ತುವ ಎಮೋಷನಲ್ ಮೂವಿ. ಭಾವನಾತ್ಮಕ ಕಥಾವಸ್ತು ತೆರೆಯ ಮೇಲೆ ತೆರೆದುಕೊಳ್ಳುತ್ತಿದ್ದಂತೆ ಪ್ರೇಕ್ಷಕರು ಕಣ್ಣೀರು ಒರೆಸುತ್ತಿರುವ ದೃಶ್ಯಗಳು ಚೀನಾ ಥಿಯೇಟರ್‌ನಲ್ಲಿ ಕಂಡು ಬಂದವು. Somehow Father-daughter Indian movies do really well in China. Dangal, Singing Superstar and now Maharaja. pic.twitter.com/CeSlNPDknk ಕ್ಲಿಪ್ ಅನ್ನು ಟ್ವಿಟರ್ನಲ್ಲಿ ಗಬ್ಬರ್ ಸಿಂಗ್ ಖಾತೆಯಿಂದ ಶೇರ್ ಮಾಡಲಾಗಿದೆ. ತಂದೆ-ಮಗಳ ಭಾರತೀಯ ಸಿನಿಮಾ ಚೀನಾದಲ್ಲಿ ನಿಜವಾಗಿಯೂ ಭಾರೀ ಪ್ರತಿಕ್ರಿಯೆ ಪಡೆದಿದೆ. ದಂಗಲ್, ಸಿಂಗಿಂಗ್ ಸೂಪರ್‌ಸ್ಟಾರ್ ಮತ್ತು ಈಗ ಮಹಾರಾಜ ಚೀನಾದಲ್ಲಿ ಮಿಂಚಿದೆ ಎಂಬ ಟೈಟಲ್ನಲ್ಲಿ ಪೋಸ್ಟ್ ಶೇರ್ ಮಾಡಲಾಗಿದೆ. ಮಹಾರಾಜ ಐದು ವರ್ಷಗಳಲ್ಲಿ ಚೀನಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರ ಹೊಮ್ಮಿದೆ. 100 ಕೋಟಿ ರೂಪಾಯಿಗಳ ಗಡಿಯನ್ನು ತಲುಪಿದ ಮೂವಿ ವಿಮರ್ಶಾತ್ಮಕವಾಗಿ ಭಾರೀ ಮೆಚ್ಚುಗೆ ಗಳಿಸಿದೆ. ಭಾರತದ ಚೀನೀ ರಾಯಭಾರ ಕಚೇರಿಯ ವಕ್ತಾರರಾದ ಯು ಜಿಂಗ್, ಚೀನಾದಲ್ಲಿ ಮಹಾರಾಜ ಸಿನಿಮಾದ ಬಾಕ್ಸ್ ಆಫೀಸ್ ಯಶಸ್ಸಿನ ಅಪ್ಡೇಟ್ ಶೇರ್ ಮಾಡಿದ್ದರು. ಅವರು ಫಿಲ್ಮ್ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಮಹಾರಾಜ 2018 ರಿಂದ ಚೀನಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರ ಹೊಮ್ಮಿದೆ. 91.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: Trisha Krishnan: ದಳಪತಿ ವಿಜಯ್ ರಾಜ್ಯಭಾರಕ್ಕೂ ಮುನ್ನ ಪಾಲಿಟಿಕ್ಸ್ಗೆ ತ್ರಿಶಾ ಎಂಟ್ರಿ? ಸಿಎಂ ಕುರ್ಚಿ ಮೇಲೆ ಬಿತ್ತು ತಮಿಳು ನಟಿಯ ಕಣ್ಣು! ವಿಜಯ್ ಸೇತುಪತಿಯವರ ಮಹಾರಾಜ ಮೂವಿಯ ಹೊರತಾಗಿ, ಖಾನ್‌ರ ದಂಗಲ್ ಮತ್ತು ಸೀಕ್ರೆಟ್ ಸೂಪರ್‌ಸ್ಟಾರ್, ಆಯುಷ್ಮಾನ್ ಖುರಾನಾ ಅವರ ಅಂಧಧುನ್ ಮತ್ತು ರಾಣಿ ಮುಖರ್ಜಿಯವರ ಹಿಚ್ಕಿಯಂತಹ ಇತರ ಭಾರತೀಯ ಸಿನಿಮಾಗಳು ಚೀನಾದಲ್ಲಿ ರಿಲೀಸ್ ಆಗಿ ಭಾರೀ ಮೆಚ್ಚುಗೆ ಗಳಿಸಿವೆ. ಇದಕ್ಕೂ ಮುನ್ನ ಕೇರಳದಲ್ಲಿ ನಡೆದ ಮಹಾರಾಜ ಸಕ್ಸಸ್ ಮೀಟ್ನಲ್ಲಿ ನಟ ವಿಜಯ್ ಅವರು ಮಾತನಾಡಿದ್ದರು. ತಮಿಳುನಾಡಿನಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತದೆ ಎಂದು ನಾವು ಮೊದಲೇ ಅಂದುಕೊಂಡಿದ್ದೆವು. ಆದರೆ ರಾಜ್ಯದ ಹೊರಗೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಜನರು ಪ್ರೀತಿ ತೋರಿಸುತ್ತಿದ್ದಾರೆ ಎಂದಿದ್ದರು. ಇದನ್ನೂ ಓದಿ: Maharaja Movie: ಚೀನಾದಲ್ಲೂ ‘ಮಹಾರಾಜ’ನ ಕಮಾಲ್! ಡ್ರ್ಯಾಗನ್ ರಾಷ್ಟ್ರದಲ್ಲಿ ಹೊಸ ದಾಖಲೆ ಬರೆದ ವಿಜಯ್ ಸೇತುಪತಿ ಸಿನಿಮಾ ಈ ಸಿನಿಮಾವನ್ನು ನಿಥಿಲನ್ ಸಾಮಿನಾಥನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ನಟ್ಟಿ ಸುಬ್ರಮಣ್ಯಂ, ಅಭಿರಾಮಿ ಗೋಪಿಕುಮಾರ್, ದಿವ್ಯಭಾರತಿ, ಸಿಂಗಂಪುಲಿ, ಅರುಲ್ದಾಸ್, ಮುನಿಷ್ಕಾಂತ್, ಸಚನಾ ನಮಿದಾಸ್, ಮಣಿಕಂಠನ್ ಮತ್ತು ಭಾರತಿರಾಜ ನಟಿಸಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.