ಬಾಲಿವುಡ್ ಟೈಗರ್‌ಗೆ ಡೆಗ್ಯೂ ಫೀವರ್; ಜ್ವರ್ ಬಿಟ್ಟ ಬಳಿಕ ತೆಗೆದ ಆ ಒಂದು ಫೋಟೋ ಈಗ ಫುಲ್ ವೈರಲ್! ಬಾಲಿವುಡ್‌ನ ನಾಯಕ ನಟ ಟೈಗರ್ ಶ್ರಾಫ್‌ಗೆ (Tiger Shroff) ಡೆಂಗ್ಯೂ ಜ್ವರ ಬಂದಿತ್ತು. ಈ ವಿಷಯವನ್ನ ಸ್ವತಃ ಟೈಗರ್ ಶ್ರಾಫರ್ ಹೇಳಿಕೊಂಡಿದ್ದಾರೆ. ಆದರೆ, ರಿಕವರಿ ಆದ್ಮೇಲೇನೆ ಈ ಬಗ್ಗೆ ಮಾತನಾಡಿದ್ದಾರೆ. ಜ್ವರ ಇಳಿದ ಮರು ದಿನವೇ ಟೈಗರ್ ಶ್ರಾಫ್ ಒಂದು ಫೋಟೋ ತೆಗೆಸಿಕೊಡಿದ್ದಾರೆ. ಆ ಫೋಟೋ ಜೊತೆಗೇನೆ ಟೈಗರ್ ಶ್ರಾಫರ್ (Tiger Shroff) ತಮಗೆ ಡೆಗ್ಯೂ ಜ್ವರ ಬಂದಿದ್ದರ (Dengue Fever) ಮಾಹಿತಿಯನ್ನ ಕೊಟ್ಟಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್ (Fans) ಟೇಕ್ ಕೇರ್ ಅಂತಲೇ ಹೇಳಿದ್ದಾರೆ. ಇದರ ಮಧ್ಯೆ ಅದ್ಯಾರೋ ಪೂರ್ತಿ ಬಾಡಿನೇ ಖಾಲಿ ಖಾಲಿ ಐತೆ ಅಂತಲೇ ಬರೆದಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ಟೈಗರ್‌ಗೆ ಡೆಂಗ್ಯೂ ಫೀವರ್ ಟೈಗರ್ ಶ್ರಾಫ್ ಡೆಂಗ್ಯೂ ಫೀವರ್ನಿಂದ ಬಳಲಿದ್ದಾರೆ. ಆದರೆ, ಈ ಒಂದು ವಿಷಯವನ್ನ ಜ್ವರ ಇಳಿದ ಮರುದಿನವೇ ಹೇಳಿಕೊಂಡಿದ್ದಾರೆ. ತಮ್ಮ ಬೇರ್ ಬಾಡಿಯ ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಡೆಂಗ್ಯೂ ಜ್ವರ ಬಂದಿತ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್ ಟೇಕ್ ಕೇರ್ ಅಂತಲೇ ಹೇಳಿದ್ದಾರೆ. ಬೇರ್ ಬಾಡಿಯ ಫೋಟೋ ನೋಡಿದ ಫ್ಯಾನ್ಸ್ ಒಬ್ಬರು ದೇಹದಲ್ಲಿ ಏನೂ ಇಲ್ಲ. ಎಲ್ಲವೂ ಖಾಲಿ ಖಾಲಿ ಆಗಿದೆ ಅಂತಲೇ ಹೇಳಿದ್ದಾರೆ. ಟೈಗರ್ ಶ್ರಾಫ್ ಸುದ್ದಿ ವೈರಲ್ ಟೈಗರ್ ಶ್ರಾಫ್‌ಗೆ ಡೆಂಗ್ಯೂ ಫೀವರ್ ಬಂದು ಹೋಗಿರೋ ಮಾಹಿತಿಯ ಪೋಸ್ಟ್ ವೈರಲ್ ಆಗಿದೆ. ಇದನ್ನ ನೋಡಿದ ಫ್ಯಾನ್ ಹೀಗೆ ಬರೆದಿದ್ದಾರೆ. Action Hero on the Spot ಅನ್ನುವ ಮೂಲಕ ಟೈಗರ್ ಇನ್ ಆ್ಯಕ್ಷನ್ ಅನ್ನೋದನ್ನೆ ಇಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Sanvi Sudeep: ಬರ್ತ್ಡೇ ದಿನ ಅಮ್ಮನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ಸಾನ್ವಿ ಸುದೀಪ್ ಟೈಗರ್ ಶ್ರಾಫ್ ಸದ್ಯ ಬಾಘೀ-4 ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಕೂಡ ನಡೆಯುತ್ತಿದೆ. ವಿಶ್ರಾಂತಿನೇ ಇಲ್ಲದೇನೆ ಇಡೀ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಒಂದಷ್ಟು ಮಾಹಿತಿಯನ್ನ ಡೈರೆಕ್ಟರ್ ಈಗಾಗಲೇ ಕೊಟ್ಟಿದ್ದಾರೆ. ಎ ಹರ್ಷ ಡೈರೆಕ್ಷನ್ ಮಾಡಿರೋ ಚಿತ್ರ ಕನ್ನಡದ ಡೈರೆಕ್ಟರ್ ಎ.ಹರ್ಷ ಈ ಒಂದು ಬಾಘೀ-4 ಚಿತ್ರ ಮಾಡ್ತಿದ್ದಾರೆ. ಇದು ಇವರಿಗೆ ಮೊದಲ ಹಿಂದಿ ಚಿತ್ರವೇ ಆಗಿದೆ. ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ಬಂದ ಹರ್ಷ, ಇದೀಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಮೊದಲ ಅವಕಾಶದಲ್ಲಿಯೇ ಒಳ್ಳೆ ಚಿತ್ರ ಮಾಡ್ತಿರೋ ಖುಷಿಯಲ್ಲಿಯೇ ಇದ್ದಾರೆ. ಕಳೆದ ವರ್ಷದ ದೀಪಾವಳಿ ಹಬ್ಬದ ಮುಂಚೇನೆ ಈ ಒಂದು ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ಕೆಲಸದ ನಿಮಿತ್ತ ಮುಂಬೈಲ್ಲಿಯೇ ಇದ್ದ ಎ.ಹರ್ಷ, ಹಬ್ಬಕ್ಕೆ ಒಂದೆರಡು ದಿನ ಬಂದು ಹೋಗಿದ್ದಾರೆ. ಅಷ್ಟು ಬಿಟ್ರೆ, ಎ.ಹರ್ಷ ಮೊದಲ ಹಿಂದಿ ಚಿತ್ರ ಮಾಡ್ತಿರೋ ಖುಷಿಯಲ್ಲಿಯೇ ಕಂಪ್ಲೀಟ್ ಇನ್ವಾಲ್ವ್ ಆಗಿದ್ದಾರೆ. ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಕೇರ್ ಫೌಂಡೇಷನ್! ಲೋಗೋ ಲಾಂಚ್ ಮಾಡಿದ ಸಂಚಿತ್ ಸಂಜೀವ್ ಬಾಘೀ-4 ಸಿನಿಮಾ ರಿಲೀಸ್ ಬಾಘೀ-4 ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇದೇ ವರ್ಷ ಸೆಪ್ಟೆಂಬರ್-5 ರಂದು ರಿಲೀಸ್ ಆಗುತ್ತಿದೆ. ಟೈಗರ್ ಶ್ರಾಫ್ ಈ ಚಿತ್ರದಲ್ಲಿ ಸಖತ್ ಆ್ಯಕ್ಷನ್ ಮಾಡಿದ್ದಾರೆ. ಪಾತ್ರದ ಲುಕ್ ಆ್ಯಂಡ್ ಫೀಲ್ ಕೂಡ ವಿಭಿನ್ನವಾಗಿಯೇ ಇದೆ. ಈ ಹಿಂದಿನ ಬಾಘೀ ಚಿತ್ರಕ್ಕೆ ಹೋಲಿಸಿದ್ರೆ, ಇದು ವಿಭಿನ್ನವಾಗಿಯೇ ಇದೆ ಅನಿಸುತ್ತಿದೆ. ಚಿತ್ರದಲ್ಲಿ ಸಂಜಯ್ ದತ್ ಇದ್ದಾರೆ. ಸೋನಮ್ ಬಾಜ್ವಾ ಅಭಿನಯಿಸಿದ್ದಾರೆ. ರಜತ್ ಅರೋರಾ ಈ ಚಿತ್ರದ ಕಥೆ ಬರೆದಿದ್ದಾರೆ. ಕನ್ನಡದ ಎ.ಹರ್ಷ ಡೈರೆಕ್ಷನ್ ಮಾಡುತ್ತಿದ್ದಾರೆ. ಒಟ್ಟಾರೆ, ಬಾಘೀ-4 ಚಿತ್ರ ತನ್ನದೇ ರೀತಿಯಲ್ಲಿಯೇ ಇದೀಗ ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.