NEWS

India vs Australia: ಸಿಡ್ನಿ ಟೆಸ್ಟ್​ನಲ್ಲಿ ಟೀಂ ಇಂಡಿಯಾಗೆ ಸೋಲು; 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ!

ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ಭಾನುವಾರ (ಜನವರಿ 4) ಸಿಡ್ನಿ (Sydney) ಕ್ರಿಕೆಟ್ ಮೈದಾನದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಅನ್ನು ಆಸ್ಟ್ರೇಲಿಯಾವು (Australia) ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿತು. 162 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯರು 27 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ ಗುರಿ ತಲುಪಿದರು. ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ (Usman Khawaja) 41 ರನ್ ಗಳಿಸಿ ಪ್ಯಾಟ್ ಕಮಿನ್ಸ್ (Pat Cummins) ನೇತೃತ್ವದ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು. ಟ್ರಾವಿಸ್ ಹೆಡ್ 34 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಸಿಡ್ನಿ ಟೆಸ್ಟ್‌ನ ಗೆಲುವಿನ ಮೂಲಕ ಆಸ್ಟ್ರೇಲಿಯಾವು 3-1ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ವಶಪಡಿಸಿಕೊಂಡಿತು. ಅಲ್ಲದೆ ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯಿತು. ಇದನ್ನೂ ಓದಿ: ಪಾಕ್ ವಿರುದ್ಧ ದ್ವಿಶತಕ ಸಿಡಿಸಿ ಅಬ್ಬರಿಸಿದ ರಿಕೆಲ್ಟನ್! 9 ವರ್ಷದ ಬಳಿಕ ವಿಶೇಷ ದಾಖಲೆ ಬರೆದ ರಿಯಾನ್ ಟೀಂ ಇಂಡಿಯಾ ದಾಳಿಗೆ ಆಸಿಸ್ ನಡುಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಭಾರತವನ್ನ 185ಕ್ಕೆ ಆಲೌಟ್ ಮಾಡಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಆಸೀಸ್​ 9ಕ್ಕೆ1 ವಿಕೆಟ್​ ಕಳೆದುಕೊಂಡಿತ್ತು. ಎರಡನೇ ದಿನ ಉತ್ತಮ ಬೌಲಿಂಗ್ ನಡೆಸಿದ ಟೀಂ ಇಂಡಿಯಾ ವೇಗಿಗಳು ಅತಿಥೇಯರನ್ನ ಕ್ರೀಸ್​ನಲ್ಲಿ ನೆಲೆಯೂರಲು ಬಿಡಲಿಲ್ಲ. ಚೊಚ್ಚಲ ಪಂದ್ಯವಾಡಿದ ವೆಬ್​ಸ್ಟರ್​ 105 ಎಸೆತಗಳಲ್ಲಿ 5 ಬೌಂಡರಿ ಸಹಿತ 57 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಆಟಗಾರ ಯಾರು? ಈ ಪಟ್ಟಿಯಲ್ಲಿ ವಿರಾಟ್-ರೋಹಿತ್‌ಗೆ ಎಷ್ಟನೇ ಸ್ಥಾನ? ಶನಿವಾರದ ಆರಂಭದಲ್ಲೇ ಕ್ಯಾಪ್ಟನ್​ ಬುಮ್ರಾ ಮಾರ್ನಸ್​ ಲಾಬುಶೇನ್ (2) ವಿಕೆಟ್ ಪಡೆದು ಶಾಕ್ ನೀಡಿದರೆ. ಕೆಲವೇ ಸಮಯದಲ್ಲಿ ಒಂದೇ ಓವರ್​ನಲ್ಲಿ ಸ್ಯಾಮ್ ಕಾನ್ಸ್ಟಾಸ್ ​(23) ಹಾಗೂ ಟ್ರಾವಿಸ್​ ಹೆಡ್​(4)ರನ್ನ ಸಿರಾಜ್​ ಪೆವಿಲಿಯನ್​ಗಟ್ಟಿದರು. ಭೋಜನ ವಿರಾಮದ ಕೊನೆ ಓವರ್​ನಲ್ಲಿ ಪ್ರಸಿಧ್ ಕೃಷ್ಣ 57 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 57 ರನ್​ಗಳಿಸಿದ್ದ ಸ್ಟೀವ್​ ಸ್ಮಿತ್​ರನ್ನ ಔಟ್ ಮಾಡುವ ಮೂಲಕ ಭಾರತಕ್ಕೆ ಬಿಗ್​ ಬ್ರೇಕ್ ತಂದುಕೊಟ್ಟರು. ಒಟ್ಟಾರೆ 51 ಓವರ್​ಗಳಲ್ಲಿ ಆಸ್ಟ್ರೇಲಿಯಾ 181 ರನ್​ಗಳಿಸಿ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ 51ಕ್ಕೆ3, ಪ್ರಸಿಧ್ ಕೃಷ್ಣ 42ಕ್ಕೆ 3, ನಿತೀಶ್ ರೆಡ್ಡಿ 32ಕ್ಕೆ2 ಹಾಗೂ ನಾಯಕ ಜಸ್ಪ್ರೀತ್​ ಬುಮ್ರಾ 33ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟರ್ಸ್ ವೈಫಲ್ಯ 4ರನ್​ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಕೂಡ ಬ್ಯಾಟಿಂಗ್​ನಲ್ಲಿ ಎಡವಿತು. 32 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 141 ರನ್​ಗಳಿಸಿತು. 42 ರನ್​ಗಳ ಉತ್ತಮ ಆರಂಭ ಪಡೆದರೂ ನಂತರ ದಿಢೀರ್ ಕುಸಿತ ಕಂಡಿತು. ಕೆಎಲ್ ರಾಹುಲ್ 13 ರನ್​ಗಳಿಸಿ ಮತ್ತೊಮ್ಮೆ ಕೈಕೊಟ್ಟರೆ, ಜೈಸ್ವಾಲ್ 22 ರನ್​ಗಳಿಗೆ ಸೀಮಿತವಾದರು. ಇಬ್ಬರು ಬೊಲ್ಯಾಂಡ್​ಗೆ ವಿಕೆಟ್ ಒಪ್ಪಿಸಿದರು. ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲೂ ನೆರವಾಗಲಿಲ್ಲ. 12 ಎಸೆತಗಳಲ್ಲಿ 6 ರನ್​ಗಳಿಸಿ ಎಂದಿನಂತೆ ಔಟ್​ ಸೈಡ್ ಹೋಗುತ್ತಿದ್ದ ಚೆಂಡನ್ನ ಕೆಣಕಿ ಸ್ಲಿಪ್​ ಫೀಲ್ಡರ್​ಗೆ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ವೆಬ್​ಸ್ಟರ್​ ಬೌಲಿಂಗ್​ನಲ್ಲಿ ಸುಖಾಸುಮ್ಮನೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸುವ ಯತ್ನದಲ್ಲಿ ಗಿಲ್ (13) ಕೀಪರ್​ಗೆ ಕ್ಯಾಚ್ ನೀಡಿ ಔಟ್ ಆದರು. ಭಾರತ 78ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗೆ ಆಗಮಿಸಿದ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ರಂಜಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪಂತ್ 33 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 64 ರನ್​ಗಳಿಸಿ ಔಟ್ ಆದರು. ನಂತರ ಬಂದ ನಿತೀಶ್ ಕುಮಾರ್ ರೆಡ್ಡಿ 2ನೇ ದಿನದ ಅಂತ್ಯಕ್ಕೆ 5 ಓವರ್​ ಇರುವಾಗ ಬೊಲ್ಯಾಂಡ್​ಗೆ 4ನೇ ಬಲಿಯಾದರು. ಮೂರನೇ ದಿನದಾಟಕ್ಕೆ ಅಜೇಯರಾಗಿ ಉಳಿದಿದ್ದ ಜಡೇಜಾ 13 ಹಾಗೂ ವಾಷಿಂಗ್ಟನ್ ಸುಂದರ್ 12 ರನ್​ಗಳಿಸಿ ಔಟ್ ಆದ್ರು. ಭಾರತ 157 ರನ್​ಗೆ ಆಲೌಟ್ ಆಗಿ 162 ರನ್​ಗಳ ಅಲ್ಪ ಗುರಿ ನೀಡಿತು None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.