NEWS

Winter Tips: ಚಳಿ ತಡೆಯೋಕೆ ರಾತ್ರಿ ಕಾಲಿಗೆ ಸಾಕ್ಸ್​ ಧರಿಸಿ ಮಲಗ್ತೀರಾ? ಇದರಿಂದ ಏನಾಗುತ್ತೆ ಗೊತ್ತಾ?

ಕಳೆದ ಕೆಲವು ದಿನಗಳಿಮದ ಚಳಿ (Cold) ಹೆಚ್ಚಾಗಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಹೊತ್ತು ಮೈ ಕೊರೆಯುವಷ್ಟರ ಮಟ್ಟಿಗೆ ಚಳಿ ಇದೆ. ಈ ರೀತಿ ನಡುವಷ್ಟರ ಮಟ್ಟಿಗೆ ಇರುವ ಚಳಿಯಿಂದ ತಪ್ಪಿಸಿಕೊಳ್ಳಲು ಜನ ಸ್ವೆಟರ್‌****ಗಳು, ಮಫ್ಲರ್‌****ಗಳು ಮತ್ತು ಸಾಕ್ಸ್‌****ಗಳನ್ನು (Socks) ಧರಿಸುವತ್ತ ಮೊರೆ ಹೋಗಿದ್ದಾರೆ. ಅದರಲ್ಲೂ ಕೆಲ ಮಂದಿ ರಾತ್ರಿ ಮಲಗುವಾಗಲೂ ಸಾಕ್ಸ್ ಧರಿಸಿ, ಬೆಚ್ಚಗೆ ಮತ್ತು ಆರಾಮದಾಯಕವಾಗಿ ಮಲಗುತ್ತಿದ್ದಾರೆ. ಆದರೆ ಈ ಸೀಸನ್​ನಲ್ಲಿ (Winter Season) ಕಾಲಿಗೆ ಸಾಕ್ಸ್ ಹಾಕಿಕೊಂಡು ಮಲಗೋದು ಒಳ್ಳೆಯದಾ? ಇದರಿಂದಾಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಸಾಕ್ಸ್​ ಧರಿಸಿ ಮಲಗುವುದರಿಂದ ಸಿಗುವ ಪ್ರಯೋಜನಗಳು ಬೆಚ್ಚನೆಯ ಮತ್ತು ತಣ್ಣನೆಯ ಗಾಳಿ ಚರ್ಮಕ್ಕೆ ತಾಗಿದಾಗ ಅದು ಕೂಡ ತಣ್ಣಗಾಗುತ್ತದೆ. ಅದರಲ್ಲೂ ಪಾದಗಳು ತಣ್ಣಗಾದರೆ ಇಡೀ ದೇಹದಲ್ಲಿ ಚಳಿಯಿಂದ ಹೆಪ್ಪುಗಟ್ಟಿದ ಭಾವನೆ ಉಂಟಾಗುತ್ತದೆ. ಆದರೆ ಸಾಕ್ಸ್ ಧರಿಸಿದರೆ, ಪಾದಗಳು ಬೆಚ್ಚಗಿರುತ್ತದೆ ಮತ್ತು ಆರಾಮದಾಯಕವಾಗಿರುತ್ತದೆ. ಜೊತೆಗೆ ದೇಹದ ಉಷ್ಣತೆ ಕೂಡ ನಿಯಂತ್ರಣದಲ್ಲಿರುತ್ತದೆ. ನೀವು ಆರಾಮವಾಗಿ ಬೆಚ್ಚಗೆ ಮಲಗುತ್ತೀರಿ, ಆದ್ದರಿಂದ ರಾತ್ರಿಯಿಡೀ ಬೆಚ್ಚಗಿರಲು ಸಾಕ್ಸ್ ಧರಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಸರಾಗವಾದ ರಕ್ತ ಪರಿಚಲನೆ ಚಳಿಯಿಂದಾಗಿ ಪಾದಗಳಲ್ಲಿ ರಕ್ತ ಸಂಚಾರ ನಿಧಾನವಾಗುತ್ತದೆ. ಅದರಲ್ಲೂ ಪಾದಗಳಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವುದಿಲ್ಲ. ಇದು ಶೀತ ಮತ್ತು ಸೆಳೆತಕ್ಕೆ ಕಾರಣವಾಗುತ್ತದೆ. ಆದರೆ ಸಾಕ್ಸ್ ಧರಿಸಿ ಮಲಗಿದರೆ ರಕ್ತ ಸಂಚಾರ ಸುಗಮವಾಗಿ ನಡೆಯುತ್ತದೆ. ಪಾದಗಳಿಗೆ ರಕ್ತ ಸಂಚಾರ ಚೆನ್ನಾಗಿದ್ದರೆ ಇಡೀ ದೇಹ ಬೆಚ್ಚಗಿರುತ್ತದೆ. ಇದಲ್ಲದೇ, ಇದು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಸರಿಯಾದ ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ. ಆದ್ದರಿಂದ, ಸಾಕ್ಸ್ ಧರಿಸುವುದು ಬೆಚ್ಚಗಿರುವುದಕ್ಕಷ್ಟೇ ಅಲ್ಲದೇ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ನಿದ್ರಾಹೀನತೆಗೆ ಪರಿಹಾರ ನಿದ್ರೆ ಮತ್ತು ಪಾದಗಳೆರಡಕ್ಕೂ ಕೂಡ ಸಂಬಂಧವಿದೆ. ಪಾದಗಳು ತಣ್ಣಗಾಗಿದ್ದರೆ ಮಲಗಲು ಸಾಧ್ಯವಾಗುವುದಿಲ್ಲ ಮತ್ತು ಇದರಿಂದ ಕಿರಿಕಿರಿ ಉಂಟಾಗುತ್ತದೆ. ಆದರೆ ಸಾಕ್ಸ್ ಧರಿಸಿದರೆ ನಿಮ್ಮ ಪಾದಗಳು ಬೆಚ್ಚಗಿರುತ್ತದೆ ಮತ್ತು ನೀವು ಆರಾಮವಾಗಿ ಮಲಗುತ್ತೀರಿ. ಇದಲ್ಲದೇ, ನೀವು ಬೇಗನೆ ನಿದ್ರಿಸಬಹುದು. ನಿದ್ರೆಯಿಂದ ಎಚ್ಚರಗೊಳ್ಳದೇ ಆರಾಮದಾಯಕವಾಗಿ ಮಲಗಬಹುದು. ನೀವೂ ಸಹ ತಣ್ಣನೆಯ ಪಾದಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಸಾಕ್ಸ್ ಧರಿಸುವುದು ಉತ್ತಮ ಪರಿಹಾರವಾಗಿದೆ. ಸಾಕ್ಸ್​ ಧರಿಸಿ ಮಲಗುವುದರಿಂದ ಉಂಟಾಗುವ ಅನಾನುಕೂಲಗಳು ಸೋಂಕಿನ ಭಯ ಒದ್ದೆಯಾದ ಸಾಕ್ಸ್ ಧರಿಸಿದರೆ ಸೋಂಕು ತಗಲುವ ಅಪಾಯವಿದೆ. ಸಾಕ್ಸ್ ಒದ್ದೆಯಾಗಿದ್ದರೆ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಯಾಗಿ ಇದು ಸೋಂಕುಗಳಿಗೆ ಕಾರಣವಾಗಬಹುದು. ಹಾಗಾಗಿ ಯಾವಾಗಲೂ ಒಣಗಿರುವ ಸಾಕ್ಸ್​ಗಳನ್ನು ಪಾದಗಳಿಗೆ ಧರಿಸಬೇಕು. ಒದ್ದೆ ಇರುವ ಸಾಕ್ಸ್‌ಗಳನ್ನು ಧರಿಸಬಾರದು. ಗಾಳಿಯಾಡುವುದಿಲ್ಲ ರಾತ್ರಿಯಿಡೀ ಸಾಕ್ಸ್ ಹಾಕಿಕೊಂಡರೆ ಪಾದಗಳಿಗೆ ಗಾಳಿಯಾಡುವುದಿಲ್ಲ. ಇದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ. ಇದರಿಂದ ಬೆವರು ಮತ್ತು ಬ್ಯಾಕ್ಟೀರಿಯಾ ಉಂಟಾಗುತ್ತದೆ ಕೆಲವೊಮ್ಮೆ ಪಾದಗಳಿಂದ ಅಸಹನೀಯ ವಾಸನೆ ಬರುತ್ತದೆ. ಇದನ್ನೂ ಓದಿ: ಕಳೆದುಕೊಂಡ ಪ್ರೀತಿಯ ನೋವನ್ನು ಸಹಿಸೋಕೆ ಆಗ್ತಿಲ್ವಾ? ಬ್ರೇಕಪ್​ನಿಂದ ಹೊರ ಬರೋಕೆ ಈ ಟಿಪ್ಸ್​ ಫಾಲೋ ಮಾಡಿ! ಬೆವರಿನಿಂದ ಕಿರಿಕಿರಿ ತುಂಬಾ ಬಿಗಿಯಾದ ಅಥವಾ ತುಂಬಾ ಬೆಚ್ಚಗಿರುವ ಸಾಕ್ಸ್‌ಗಳು ಬೆವರುವಿಕೆಗೆ ಕಾರಣವಾಗಬಹುದು. ಬೆವರಿನಿಂದ ಅವು ಜಿಡ್ಡು ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇದಲ್ಲದೇ, ತುರಿಕೆ ಮತ್ತು ಕಿರಿಕಿರಿ ಸಹ ಸಂಭವಿಸುತ್ತದೆ. ಸಾಕ್ಸ್ ನಲ್ಲಿ ಬೆವರು ಶೇಖರಣೆಗೊಂಡರೆ ಚರ್ಮದ ಸಮಸ್ಯೆಗಳಿಂದ ಗುಳ್ಳೆಗಳು ಮತ್ತು ದದ್ದುಗಳು ಬರುವ ಸಾಧ್ಯತೆ ಹೆಚ್ಚು. ಇದನ್ನೂ ಓದಿ: ಕಪ್ಪಾದ ಮೊಣಕೈಯಿಂದಿ ನಿಮ್ಮ ಅಂದ ಹಾಳಾಗಿದ್ಯಾ? ಈ ಸಮಸ್ಯೆಗೆ ಇಲ್ಲಿದೆ ನೋಡಿ ಮದ್ದು! ಇತರ ಸಲಹೆಗಳು ಕೆಲವರಿಗೆ ಮಲಗುವಾಗ ಸಾಕ್ಸ್ ಧರಿಸುವ ಅಭ್ಯಾಸವಿರುತ್ತದೆ. ಚಳಿಗಾಲದಲ್ಲಿ ಪಾದಗಳನ್ನು ಬೆಚ್ಚಗೆ ಇಡುವುದು ಒಳ್ಳೆಯದು. ಆದರೆ, ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಬೇಕು. ಹತ್ತಿ ಮತ್ತು ಉಣ್ಣೆಯಂತಹ ಮೃದುವಾದ ತಯಾರಿಸಿದ ಸಾಕ್ಸ್ಗಳನ್ನು ಆಯ್ಕೆ ಮಾಡಿ. ಇದು ಪಾದಗಳನ್ನು ಒಣಗಿಸುತ್ತದೆ. ಸಾಕ್ಸ್ ತುಂಬಾ ಬಿಗಿಯಾಗಿರಬಾರದು ಅಥವಾ ತುಂಬಾ ಸಡಿಲವಾಗಿಯೂ ಇರಬಾರದು. ಸರಿಯಾಗಿ ಹೊಂದಿಕೊಳ್ಳುವ ಸಾಕ್ಸ್‌ಗಳನ್ನು ಮಾತ್ರ ಧರಿಸಬೇಕು. ಮಲಗುವ ಮುನ್ನ ಯಾವಾಗಲೂ ತಾಜಾ ಮತ್ತು ಸ್ವಚ್ಛವಾದ ಸಾಕ್ಸ್ ಧರಿಸಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.