ಲಾಪತಾ ಲೇಡಿಸ್ ನ್ಯಾಯಾಧೀಶರು ಹಾಗೂ ಅವರ ಕುಟುಂಬಕ್ಕಾಗಿ ಲಾಪತಾ ಲೇಡೀಸ್ (Laapataa Ladies) ಚಿತ್ರವನ್ನು ಪ್ರದರ್ಶಿಸಲು ಸುಪ್ರೀಂ ಕೋರ್ಟ್ (Supreme Court) ಮುಂದಾಗಿದ್ದು, ಆಗಸ್ಟ್ 9 ರಂದು (ಇಂದು) ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರದರ್ಶನಕ್ಕೆ ಹಾಜರಾಗಲಿದ್ದಾರೆ. ಸಂಜೆ 4.15ರಿಂದ 6.20ರವರೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರವು ಲಿಂಗ ಸಮಾನತೆಯ ವಿಷಯವನ್ನು ಆಧರಿಸಿದೆ. ಅಮೀರ್ ಖಾನ್ ಹಾಗೂ ಕಿರಣ್ ರಾವ್ ಉಪಸ್ಥಿತಿ ಸುಪ್ರೀಂ ಕೋರ್ಟ್‌ನ ಆಡಳಿತ ವಿಭಾಗವು ಪ್ರಸಾರ ಮಾಡಿದ ಸಂವಹನದ ಪ್ರಕಾರ, ಖ್ಯಾತ ನಟ ಮತ್ತು ನಿರ್ಮಾಪಕ ಅಮೀರ್ ಖಾನ್ ಮತ್ತು ಚಿತ್ರದ ನಿರ್ದೇಶಕರಾದ ಕಿರಣ್ ರಾವ್ ಕೂಡ ಪ್ರದರ್ಶನದ ಸಮಯದಲ್ಲಿ ಹಾಜರಿರುತ್ತಾರೆ. ಎಪ್ಪತ್ತೈದನೇ ವರ್ಷದ ಸಂಭ್ರಮದಲ್ಲಿ ಲಾಪತಾ ಲೇಡೀಸ್ ಚಿತ್ರ ಪ್ರದರ್ಶನ ಭಾರತದ ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆಯ ಎಪ್ಪತ್ತೈದನೇ ವರ್ಷದಲ್ಲಿ ಆಯೋಜಿಸಲಾದ ಚಟುವಟಿಕೆಗಳ ಭಾಗವಾಗಿ, ಲಿಂಗ ಸಮಾನತೆಯ ವಿಷಯವನ್ನು ಆಧರಿಸಿದ ‘ಲಾಪತಾ ಲೇಡೀಸ್’ ಚಲನಚಿತ್ರವನ್ನು ಶುಕ್ರವಾರ, 9 ರಂದು (ಇಂದು) ಪ್ರದರ್ಶಿಸಲಾಗುವುದು. ಆಗಸ್ಟ್ 2024 ರಲ್ಲಿ ಆಡಿಟೋರಿಯಂ, ಸಿ-ಬ್ಲಾಕ್, ಅಡ್ಮಿನಿಸ್ಟ್ರೇಟಿವ್ ಬಿಲ್ಡಿಂಗ್ ಕಾಂಪ್ಲೆಕ್ಸ್‌ನಲ್ಲಿ ಚಿತ್ರ ಪ್ರಸಾರ ನಡೆಯಲಿದ್ದು, ಚಿತ್ರವನ್ನು ನಿರ್ದೇಶಿಸಿರುವ ಕಿರಣ್ ರಾವ್ ಮತ್ತು ನಿರ್ಮಾಪಕ ಶ್ರೀ ಅಮೀರ್ ಖಾನ್ ಸಹ ಪ್ರದರ್ಶನದ ಸಮಯದಲ್ಲಿ ಉಪಸ್ಥಿತರಿರುತ್ತಾರೆ ಎಂದು ಆಡಳಿತ ವಿಭಾಗ ಮಾಹಿತಿ ನೀಡಿದೆ. ಕಿರಣ್ ರಾವ್ ನಿರ್ದೇಶನದಲ್ಲಿ ಲಾಪತಾ ಲೇಡೀಸ್ ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಕಿಂಡ್ಲಿಂಗ್ ಪ್ರೊಡಕ್ಷನ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ತಯಾರಾದ ‘ಲಾಪತಾ ಲೇಡೀಸ್’ ಕಿರಣ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು ಧೋಬಿ ಘಾಟ್ ನಂತರ ಕಿರಣ್ ನಿರ್ದೇಶನಕ್ಕೆ ಪುನರಾಗಮನ ಮಾಡಿದ್ದಾರೆ. ಥಿಯೇಟ್ರಿಕಲ್ ಬಿಡುಗಡೆಗೂ ಮುನ್ನ, ಚಲನಚಿತ್ರವು 2023 ರಲ್ಲಿ ಪ್ರತಿಷ್ಠಿತ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (TIFF) ನಲ್ಲಿ ಪ್ರದರ್ಶಿಸಲಾಯಿತು. ಫೆಸ್ಟಿವಲ್‌ನಲ್ಲಿ ಹಾಜರಿದ್ದ ಪ್ರೇಕ್ಷಕರಿಂದ ಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಕೂಡ ನಡೆದಿತ್ತು ಹಾಗೂ ಸಭಿಕರಿಗೆ ಚಿತ್ರ ಮೆಚ್ಚುಗೆಯಾಗಿತ್ತು. ಚಿತ್ರದ್ಯೋಮದ ಗಣ್ಯರಿಂದ ಲಾಪತಾ ಲೇಡೀಸ್‌ಗೆ ವಿಶೇಷ ಮನ್ನಣೆ ದೊರಕಿದೆ ಚಿತ್ರ ಬಿಡುಗಡೆಯಾದ ನಂತರ, ಲಾಪತಾ ಲೇಡೀಸ್ ಅನ್ನು ಹನ್ಸಲ್ ಮೆಹ್ತಾ ಮತ್ತು ಮೀರಾ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹೊಗಳಿದ್ದಾರೆ. ಇತ್ತೀಚೆಗೆ, ವಿಜಯ್ ವರ್ಮಾ ಕೂಡ ಚಿತ್ರವನ್ನು ಹೊಗಳಿದರು ಮತ್ತು ಅದನ್ನು ಅಸಾಧಾರಣ ಎಂದು ಉಲ್ಲೇಖಿಸಿದ್ದಾರೆ. ಹೊಸ ಪ್ರತಿಭೆಗಳ ಅನಾವರಣ ಲಾಪತಾ ಲೇಡೀಸ್ ಅಸಾಧಾರಣ ಕಥೆಯನ್ನೊಳಗೊಂಡಿರುವ ಚಿತ್ರವಾಗಿದ್ದು ಅಸಾಧಾರಣ ಚಿತ್ರ ಎಂದೆನಿಸಿದೆ. ಕೆಲವು ಚಿತ್ರಗಳು ನಿಮ್ಮನ್ನು ಮತ್ತೆ ಸಿನಿಮಾದ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ ಮತ್ತು ಇದು ಅದಕ್ಕಿಂತ ಹೆಚ್ಚಿನದನ್ನು ಮಾಡಿದೆ. ಇಂತಹ ಅತ್ಯುತ್ತಮ ಚಿತ್ರವನ್ನು ನಮ್ಮ ಮುಂದಿಟ್ಟ @raodyness ಮತ್ತು ಅವರ ಪ್ರತಿಭಾನ್ವಿತ ತಂಡಕ್ಕೆ ಅನೇಕ ಅಭಿನಂದನೆಗಳು. ಯುವ ನಟರು ಈ ರೀತಿ ಬೆಳೆಯುವುದನ್ನು ನೋಡುವುದು ತುಂಬಾ ಸ್ಪೂರ್ತಿದಾಯಕವಾಗಿದೆ! ಎಂದು ವಿಜಯ್ ವರ್ಮಾ ತಿಳಿಸಿದ್ದಾರೆ. ಹೊಸಬರು ಈ ರೀತಿ ಮುಂದೆ ಬರುತ್ತಿರುವುದು ಹಾಗೂ ಹೊಸ ಬಗೆಯ ಕತೆಗಳನ್ನು ನಮ್ಮ ಮುಂದೆ ತೆರೆದಿಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ವರ್ಮಾ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: Prashant Neel: KGF 3 ಅಲ್ಲ, ಯಂಗ್ ಟೈಗರ್ ಜೊತೆ ಕೈ ಜೋಡಿಸಿದ ನೀಲ್! ಮುಂದಿನ ಸಿನಿಮಾ ತಾರಕ್ ಜೊತೆ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 9 ಅಂದರೆ ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ತಮ್ಮ ಕುಟುಂಬ ಸದಸ್ಯರೊಂದಿಗೆ ಚಲನಚಿತ್ರದ ಪ್ರದರ್ಶನಕ್ಕೆ ಆಗಮಿಸುತ್ತಾರೆ. ಸಂಜೆ 4.15ರಿಂದ 6.20ರವರೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರಕ್ಕಾಗಿ ನೋಂದಾವಣೆ ಅಧಿಕಾರಿಗಳನ್ನು ಸಹ ಆಹ್ವಾನಿಸಲಾಗಿದೆ ಎಂಬುದು ವರದಿಯಾಗಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.