NEWS

Vinod Kambli: ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ! ಮತ್ತೆ ಆಸ್ಪತ್ರೆ ಸೇರಿದ ಭಾರತದ ಮಾಜಿ ಕ್ರಿಕೆಟಿಗ

ವಿನೋದ್ ಕಾಂಬ್ಳಿ ಭಾರತ ತಂಡದ (Team India) ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನ ಥಾಣೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವರದಿಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ (critical) ಎಂದು ಹೇಳಲಾಗುತ್ತಿದೆ. ಶನಿವಾರವೇ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟಿದ್ದು, ಅಂದೇ ಅವರನ್ನು ಠಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದು ತಿಳಿದುಬಂದಿದೆ. ವಿನೋದ್ ಕಾಂಬ್ಳಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬಾಲ್ಯದ ಕೋಚ್ ಆಚ್ರೇಕರ್​ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಆತ್ಮೀಯ ಸ್ನೇಹಿತ ಸಚಿನ್ ತೆಂಡೂಲ್ಕರ್ ಅವರನ್ನ ಭೇಟಿಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಸಮಯದಲ್ಲೂ ಕಾಂಬ್ಳಿ ಆರೋಗ್ಯ ಚೆನ್ನಾಗಿರಲಿಲ್ಲ. 52 ನೇ ವಯಸ್ಸಿನಲ್ಲಿ, ಅವರು 75 ವರ್ಷ ವಯಸ್ಸಿನವರಂತೆ ಕಾಣುತ್ತಿದ್ದರು. ಮಾತನಾಡಲು ಸಹಾ ಕಷ್ಟಪಡುತ್ತಿದ್ದರು. ಐಎಎನ್​ಎಸ್​ ವರದಿ ಪ್ರಕಾರ, 52 ವರ್ಷದ ಮಾಜಿ ಕ್ರಿಕೆಟಿಗನ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ, ಸಂಪೂರ್ಣ ಗುಣಮುಖರಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸಂಪೂರ್ಣ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: Vinod Kambli: ಹತಾಶೆಯಿಂದ ಸಚಿನ್ ಟೀಕಿಸಿಬಿಟ್ಟಿದ್ದೆ, ಆದ್ರೆ ಸಚಿನ್ ನನ್ನ ಜೀವ ಉಳಿಸಿದ್ರು! ಗೆಳೆಯನ ಸಹಾಯ ನೆನೆದ ಕಾಂಬ್ಳಿ ಸಚಿನ್ ಸಹಾಯ ನೆನೆದಿದ್ದ ಕಾಂಬ್ಳಿ ಇತ್ತೀಚೆಗೆ ವಿಕ್ಕಿ ಲಾಲ್ವಾನಿ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ್ದ ಸಂದರ್ಧಶನದಲ್ಲಿ ಕಾಂಬ್ಳಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರು. ಅವರು, ‘ಮೂತ್ರ ಸೋಂಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವಾಗಿ ತಿಳಿಸಿದ್ದರು. ಈ ಕಾಯಿಲೆಯಿಂದ ಹಲವು ಬಾರಿ ತಲೆ ತಿರುಗಿ ಬಿದ್ದಿದ್ದರೆ, ನನ್ನ ಮಗ, ಹೆಂಡತಿ ನನ್ನನ್ನು ಜೊತೆಗಿದ್ದು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಕಾಂಬ್ಳಿ ಅವರು 2013 ರಲ್ಲಿ ಎರಡು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನ್ನ ಹೇಳಿಕೊಂಡಿದ್ದರು. ಆ ಎರಡು ಶಸ್ತ್ರಚಿಕಿತ್ಸೆಯ ವೆಚ್ಚವನ್ನ ಗೆಳೆಯ ಸಚಿನ್ ತೆಂಡೂಲ್ಕರ್ ಭರಿಸಿದ್ದರು ಎಂದು ಬಹಿರಂಗಪಡಿಸಿದ್ದರು. 1983ರ ಭಾರತ ತಂಡದಿಂದ ಸಹಾಯ ಹಸ್ತ ವಿನೋದ್ ಕಾಂಬ್ಳಿಯ ಸ್ಥಿತಿ ಗಮನಿಸಿದ್ದ 1983 ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ವಿನೋದ್ ಕಾಂಬ್ಳಿಗೆ ಸಹಾಯ ಮಾಡಲು ಮುಂದಾಗಿದ್ದರು. ಕಾಂಬ್ಳಿಗೆ ಸಹಾಯ ಮಾಡಲು ಸಿದ್ಧ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಕಾಂಬ್ಳಿ ದುಶ್ಚಟಗಳನ್ನ ಬಿಡಲು ಪುನರ್ವಸತಿಗೆ ಹೋಗಬೇಕು ಎಂದು ಷರತ್ತು ಹಾಕಿದ್ದರು. ಈ ಕುರಿತು ವಿನೋದ್ ಕಾಂಬ್ಳಿ, ‘ನಾನು 15ನೇ ಬಾರಿಗೆ ರಿಹ್ಯಾಬ್‌ಗೆ ಹೋಗಲು ಸಿದ್ಧನಿದ್ದೇನೆ. ನನ್ನ ಮಕ್ಕಳು ಮತ್ತು ಕುಟುಂಬಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದರು. In pictures: Cricketer Vinod Kambli's condition deteriorated again, leading to his admission at Akriti Hospital in Thane late Saturday night. His condition is now stable but remains critical. pic.twitter.com/7NBektzQ54 ಕಾಂಬ್ಳಿ ವೃತ್ತಿ ಜೀವನ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್​ ಕಲಿತಿದ್ದ ಕಾಂಬ್ಳಿ-ಸಚಿನ್ ಶಿವಾಜಿ ಪಾರ್ಕ್‌ನಲ್ಲಿ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದರು. ಕಾಂಬ್ಳಿ 1991 ರಲ್ಲಿ ಟೀಮ್ ಇಂಡಿಯಾ ಪರ ತಮ್ಮ ODI ಪಾದಾರ್ಪಣೆ ಮಾಡಿದ್ದರು. ತಂಡದಲ್ಲಿ ಅಸ್ಥಿರ ಪ್ರದರ್ಶನ ತೋರುತ್ತಿದ್ದ ಅವರು 2000 ರಲ್ಲಿ ತಮ್ಮ ಕೊನೆಯ ODI ಆಡಿದರು. 2009 ರಲ್ಲಿ, ಕಾಂಬ್ಳಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು, 2011 ರಲ್ಲಿ ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದರು. ಕಾಂಬ್ಳಿ ಭಾರತದ ಪರ 17 ಟೆಸ್ಟ್ ಮತ್ತು 104 ODI ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಕಾಂಬ್ಳಿ ಟೆಸ್ಟ್‌ನಲ್ಲಿ 54.20 ಸರಾಸರಿಯಲ್ಲಿ 1084 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧ ಶತಕಗಳು ಸೇರಿವೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅವರು 32.59 ಸರಾಸರಿಯಲ್ಲಿ 2477 ರನ್ ಗಳಿಸಿದ್ದಾರೆ. ಕಾಂಬ್ಳಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಎರಡು ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.