ಬೆಂಗಳೂರು: ವಿಶ್ವವಿದ್ಯಾಲಯಗಳ ಯಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯದ ಭಾರೀ ಪರಿಣಾಮ ಬೀಳುತ್ತದೆ. ಅದೇ ರೀತಿ ಇದೀಗ ಬೆಂಗಳೂರು ವಿಶ್ವ ವಿದ್ಯಾಲಯ ಮಾಡಿರುವ ಯಡವಟ್ಟಿನಿಂದ ಪಾಸ್ ಆಗಬೇಕಾದ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ರಿ ವ್ಯಾಲುವೇಷನ್ ಹಾಕಿದ್ರೂ ಮತ್ತೆ ಫೇಲ್ ಮಾಡಲಾಗಿದೆ. ಎಲ್ಲ ವಿಷಯಗಳಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆದ್ರೆ ಒಂದು ವಿಷಯದಲ್ಲಿ ಫೇಲ್! ಇದು ಜ್ಞಾನಭಾರತಿ ಪರೀಕ್ಷಾ ವಿಭಾಗದ ಎಡವಟ್ಟು ಎಂದು ಹೇಳಲಾಗುತ್ತಿದೆ. ವಿಜಯನಗರ ಎಎಸ್ ಸಿ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ ಪ್ರಜ್ವಲ್ ಗೆ ಅನ್ಯಾಯವಾಗಿದೆ ಎಂದು ತಿಳಿದುಬಂದಿದೆ. ಮ್ಯಾನೇಜ್ ಮೆಂಟ್ ಅಕೌಂಟಿಂಗ್ ವಿಷಯ ಹೊರತುಪಡಿಸಿ ಇನ್ನುಳಿದ ವಿಷಯಗಳಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾನೆ. ಆದರೆ ಒಂದು ವಿಷಯದಲ್ಲಿ ಬರಬೇಕಾಗಿದ್ದದ್ದು 40 ಅಂಕ ಆದರೆ ಬಂದಿದ್ದು ಕೇವಲ 12 ಅಂಕ ಇದರಿಂದ ವಿದ್ಯಾರ್ಥಿಗೆ ತುಂಬಾ ಅನ್ಯಾಯವಾಗಿದೆ. ಇದನ್ನೂ ಓದಿ: Prajwal Revanna: ಜೈಲಲ್ಲಿರೋ ಪ್ರಜ್ವಲ್ ರೇವಣ್ಣಗೆ ಇಂದು ಅಗ್ನಿಪರೀಕ್ಷೆ! ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಮತ್ತೊಮ್ಮೆ ಶಾಕ್! ಫೋಟೋ ಕಾಪಿ ತರಿಸಿ ನೋಡಿದ್ರೆ ಅಸಲಿ ಕಹಾನಿ ಬಹಿರಂಗ ಮರು ಮೌಲ್ಯಮಾಪನ ಮಾಡಿಸಿದ್ರೂ ಕೇವಲ 13 ಅಂಕ ಬಂದಿದೆ. ವಿದ್ಯಾರ್ಥಿ ಫೋಟೋ ಕಾಪಿ ತರಿಸಿ ನೋಡಿದ್ರೆ ಅಸಲಿ ಕಹಾನಿ ಗೊತ್ತಾಗಿದೆ. ಮ್ಯಾನೇಜ್ ಮೆಂಟ್ ಅಕೌಂಟಿಂಗ್ 60 ಅಂಕದ ಪ್ರಶ್ನೆಪತ್ರಿಕೆ ಮೂರು ಸೆಕ್ಷನ್ ಪ್ರಶ್ನೆಗಳಲ್ಲಿ ಎರಡನೇ ಸೆಕ್ಷನ್ ಮೂರು ಪ್ರಶ್ನೆಗೆ ಮೌಲ್ಯಮಾಪಕರು ಉತ್ತರ ಪರಿಗಣಿಸಿಲ್ಲ. ಸೆಕ್ಷನ್ ಬಿ ತಲಾ 4 ಅಂಕಗಳ ಮೂರು ಉತ್ತರಕ್ಕೆ ಅಂಕ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ. ಇದೇ ರೀತಿ ಸೆಕ್ಷನ್ ಸಿಯ ಎರಡು ಪ್ರಶ್ನೆಗಳಿಗೆ ಕೇವಲ ನಾಲ್ಕು ಅಂಕ ನೀಡಿದ್ದಾರೆ. ಫೋಟೋ ಕಾಪಿ ಹಿಡಿದು ನ್ಯಾಯ ಕೇಳುತ್ತಿರುವ ವಿದ್ಯಾರ್ಥಿ ಈ ಯುವಕ ಪಾಸ್ ಆಗಲು 18 ಅಂಕಗಳಾದರೂ ಬರಬೇಕು ಆದರೆ ಬೆಂಗಳೂರು ವಿಶ್ವವಿದ್ಯಾಲಯ ಕೇವಲ 13 ಅಂಕ ನೀಡುವ ಮೂಲಕ ಫೇಲ್ ಮಾಡಿದೆ. ಇದನ್ನು ವಿದ್ಯಾರ್ಥಿ ಪ್ರಶ್ನಿಸಿದ್ರೆ ನಾಟ್ ಅಟೆಂಡೆಡ್ ಎಂದು ಬೆಂ. ವಿ.ವಿ. ಉತ್ತರಿಸಿದೆ. ವಿದ್ಯಾರ್ಥಿಯು ಇದೀಗ ಫೋಟೋ ಕಾಪಿ ಹಿಡಿದು ನ್ಯಾಯ ಕೇಳುತ್ತಿದ್ದಾನೆ. ಈ ವಿದ್ಯಾರ್ಥಿಯು ಬೆಂಗಳೂರು ವಿವಿ ಪರೀಕ್ಷಾ ಕಚೇರಿಗೆ ದಿನವೂ ಅಲೆಯುತ್ತಿದ್ದಾನೆ. ಇದೇ ರೀತಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.