NEWS

MUDA Scam: ನಾನಲ್ಲ, ಗವರ್ನರ್ ರಾಜೀನಾಮೆ ಕೊಡಬೇಕು! ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಕೌಂಟರ್

ಸಿಎಂ ಸಿದ್ದರಾಮಯ್ಯ ಬೆಂಗಳೂರು: ಮುಡಾ (MUDA) ಹಗರಣಕ್ಕೆ (Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ತನಿಖೆ ನಡೆಸುವಂತೆ ರಾಜ್ಯಪಾಲರು (Governor) ಅನುಮತಿ ನೀಡಿದ್ದಾರೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ (Cabinet) ಸಭೆ ಕರೆದಿದ್ದರು. ಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಇಡೀ ಸಂಪುಟ ರಾಜ್ಯಪಾಲರ ನಿರ್ಧಾರವನ್ನು ಖಂಡಿಸುತ್ತದೆ ಮತ್ತು ಇಡೀ ಪಕ್ಷ ನನ್ನ ಜೊತೆಯಾಗಿದೆ ಎಂದರು. ಡಿಕೆಶಿ ಸೇರಿ ಇಡೀ ಕ್ಯಾಬಿನೆಟ್ ನನ್ನ ಜೊತೆಗಿದೆ ಹೌದು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ವಹಿಸಿರುವುದರ ಕುರಿತು ಕ್ಯಾಬಿನೆಟ್ ಸಭೆ ನಡೆಸಿ, ಬಳಿಕ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇವತ್ತು ತುರ್ತಾಗಿ ಕ್ಯಾಬಿನೆಟ್ ಸಭೆ ಕರೆಯಲಾಗಿತ್ತು. ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳ್ತೇನೆ ಯಾಕಂದ್ರೆ, ಇಡೀ ಕ್ಯಾಬಿನೆಟ್ ಅವಿರೋಧವಾಗಿ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷವೂ ಕೂಡ ಇದನ್ನ ಬಹಿರಂಗವಾಗಿ ಹೇಳಿದೆ. ಸಂಪೂರ್ಣ ಪಕ್ಷದ ಕಾರ್ಯಕರ್ತರು, ಶಾಸಕರು, ಸಚಿವರು, ಸಂಸದರು ಸಾಲಿಡಾರಿಟಿ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ನಾಯಕರು ಕೂಡ ನಿಮ್ಮ ಪರವಾಗಿ ನಾವಿದ್ದೇವೆ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ. ಹಾಗಾಗಿ ಜೊತೆಗಿರುವ ಎಲ್ಲರಿಗೂ ಧನ್ಯವಾದ ಹೇಳ್ತೇನೆ ಎಂದರು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ! ರಾಜ್ಯಪಾಲರ ತೀರ್ಮಾನ ಕಾನೂನು ಬಾಹಿರವಾಗಿದೆ, ಯಾವ ದೃಷ್ಟಿಕೋನದಿಂದ ನೋಡಿದರೂ ಅದು ಇಲ್ಲೀಗಲ್ ಅಂತ ತೀರ್ಮಾನ ಮಾಡಲಾಗಿದೆ. ರಾಜ್ಯಪಾಲರು ಈ ದೇಶದ ರಾಷ್ಟ್ರಾಧ್ಯಕ್ಷರ ಪ್ರತಿನಿಧಿಗಳು ಅವರು ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆ ಹೊರತು ಕೇಂದ್ರ ಸರ್ಕಾರದ, ಬಿಜೆಪಿಯ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಈ ಕೇಸಲ್ಲಿ ಕಾನೂನು ರೀತಿ ನಡೆದುಕೊಳ್ಳದೆ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಇದನ್ನು ಸಚಿವ ಸಂಪುಟ ತೀವ್ರವಾಗಿ ಖಂಡಿಸಿದೆ. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಕೇಂದ್ರದ ಕೈಗೊಂಬೆಯಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಎಂದರು. ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದೆ! ರಾಜ್ಯಪಾಲರ ಈ ನಡೆ ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತೆ. ಹೀಗಾಗಿ ರಾಜ್ಯಪಾಲರ ನಡೆಯನ್ನ ತೀವ್ರವಾಗಿ ಖಂಡಿಸಿದ್ದೇವೆ. ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್ 3 ರಂದು ಎಸ್‌ಓಪಿ ಕಳಿಸಿದೆ. ಅದರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಅದರ ಪ್ರಕಾರ ರಾಜ್ಯಪಾಲರ ನಿರ್ಧಾರ ಕಾನೂನು ಬಾಹಿರ, ಅವರ ನಡೆ ಸಂಪೂರ್ಣ ಸಂವಿಧಾನ ವಿರೋಧಿ ಎಂದು ಬೇಸರ ಹೊರಹಾಕಿದರು. ಪ್ರಾಸಿಕ್ಯೂಷನ್ ವಿರುದ್ದ ಕಾನೂನು ಹೋರಾಟ ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ. ರಾಜಕೀಯ ದುರುದ್ದೇಶದ ಈ ಪ್ರಾಸಿಕ್ಯೂಷನ್ ವಿರುದ್ದ ಹೋರಾಟ ನಡೆಯುತ್ತದೆ. ಬಡವರ ಪರವಾರ ನಮ್ಮ ಸರ್ಕಾರ ತೆಗೆಯಲು ಕೇಂದ್ರದ ಹುನ್ನಾರ, ಮೋದಿ, ಅಮಿತ್‌ಶಾರವರೆ ಗ್ಯಾರೆಂಟಿಗಳ ವಿರುದ್ದವಾಗಿದ್ರು, ಬಿಜೆಪಿ ಜೆಡಿಎಸ್ ಬಡವರಿಗೆ ವಿರುದ್ದವಾದ ಪಕ್ಷಗಳು. ನನ್ನನ್ನ ರಾಜಕೀಯವಾಗಿ ತೆಜೋವಧೆ ಮಾಡುವ ಪ್ರಯತ್ನ ಅವರ ಕುಟಿಲ ಪ್ರಯತ್ನ ಸಕ್ಸಸ್ ಆಗಲ್ಲ. ನನ್ನ ತೇಜೋವಧೆ ಮಾಡುವ ಕುಟಿಲ ಪ್ರಯತ್ನ ಅವರ ಭ್ರಮೆ ಅಷ್ಟೇ ಎಂದರು. ದಾಖಲೆ ಸಮೇತ ಹೆಚ್‌ಡಿಕೆ ವಿರುದ್ಧ ದೂರು ಕೊಟ್ಟರೂ ಪ್ರಾಸಿಕ್ಯೂಷನ್ ಇಲ್ಲ ಹೆಚ್‌ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ವಿರುದ್ದ ಇದುವರೆಗೂ ಪ್ರಾಸಿಕ್ಯೂಷನ್ ಕೊಟ್ಟಿಲ್ಲ, ದಾಖಲೆಗಳ ಸಮೇತ ಹೆಚ್‌ಡಿಕೆ ವಿರುದ್ದ ಪ್ರಾಸಿಕ್ಯೂಷನ್ ಕೋರಿದರೂ ಕೊಟ್ಟಿಲ್ಲ. ಲೋಕಾಯುಕ್ತದವರೆ ಹೆಚ್‌ಡಿಕೆ ವಿರುದ್ದ ದಾಖಲೆ ಸಮೇತ ಕೇಳಿದ್ದಾರೆ. ಕುಮಾರಸ್ವಾಮಿ ಲೂಟಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಅಂತ ಹೇಳಿದ್ದಾರೆ, ನನ್ನ ಮುಡಾ ಪ್ರಕರಣದಲ್ಲಿ ಯಾವುದೇ ದಾಖಲೆ ಇಲ್ಲ, ಯಾವುದೇ ತನಿಖೆ ನಡೆದಿಲ್ಲ. ಸ್ವತಂತ್ರ ಬುದ್ಧಿಯಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿಲ್ಲ. ಅಶೋಕ, ಕುಮಾರಸ್ವಾಮಿ, ವಿಜಯೇಂದ್ರ ಮಾತುಕೇಳಿ ಕೊಟ್ಟಿದ್ದಾರೆಂದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದರು. ಗವರ್ನರ್ ರಾಜೀನಾಮೆ ಕೊಡಬೇಕು! ಬಿಜೆಪಿ, ಜೆಡಿಎಸ್ ವಿರುದ್ದ ಇಷ್ಟೆಲ್ಲಾ ಆರೋಪಗಳಿದ್ದರೂ ನನ್ನ ಆತೂರಾತುರವಾಗಿ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ. ನನ್ನ ಲೆಟರ್, ನನ್ನ ಸಹಿ, ನನ್ನ ಪಾತ್ರ ಇಲ್ಲದಿದ್ದರೂ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ. ರಾಜಕೀಯ ಪ್ರೇರಿತವಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ಸಂವಿಧಾನ ವಿರುದ್ದವಾಗಿ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ. ರಾಜ್ಯದ ಏಳುಕೋಟಿ ಜನರಿಗೆ ತಿಳಿಸಲು ಈ ಸುದ್ದಿಗೋಷ್ಟಿ ಕರೆದಿದ್ದೇವೆ. ದೂರು ನೀಡಿರುವ ಪ್ರದೀಪ್ ಕುಮಾರ್ ಜೆಡಿಎಸ್ ಲೀಗಲ್ ಸೆಲ್ ಅಧ್ಯಕ್ಷ ಅಂತ ಹೇಳ್ತಿದ್ದಾರೆ. ನಾನು ಯಾಕೆ ರಾಜೀನಾಮೆ ಕೊಡಬೇಕು ಹೇಳಿ?. ನನ್ನ ಪ್ರಕಾರ ಗವರ್ನರ್ ರಾಜೀನಾಮೆ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಪುಟ ಸಿಎಂ ಪರ ಇದೆ ಎಂದ ಡಿಕೆಶಿ ರಾಜ್ಯಪಾಲರು ಕಾನೂನು ಬಾಹಿರವಾಗಿ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ. ಇಡೀ ಸಚಿವ ಸಂಪುಟ ಈ ನಿರ್ಣಯವನ್ನು ಖಂಡಿಸುತ್ತದೆ. ಇಡೀ ಕ್ಯಾಬಿನೆಟ್, ಪಕ್ಷ ಸಿಎಂ ಪರವಾಗಿದೆ. ಯಾವ ಒತ್ತಡಕ್ಕೂ ಮಣಿದು ಸಿಎಂ ರಾಜೀನಾಮೆ‌ ಕೊಡುವ ಪ್ರಶ್ನೆಯೇ ಇಲ್ಲ. ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೂ ಸಿದ್ದರಾಮಯ್ಯ ಇರಬೇಕೆಂಬ ಬಯಕೆ ಇದೆ. ಸಿಎಂ ಪರ ಇಡೀ ಕ್ಯಾಬಿನೆಟ್ ಇದೆ ಎಂಬ ನಿರ್ಣಯ ಪಾಸ್ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ವರದಿ: ತಿಮ್ಮೇಗೌಡ, ನ್ಯೂಸ್ 18 ಕನ್ನಡ, ಬೆಂಗಳೂರು None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.