ನಿಖಿಲ್ ಪರ ದೇವೇಗೌಡರ ಪ್ರಚಾರ ಚನ್ನಪಟ್ಟಣ: ಮೊಮ್ಮಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪರ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Deve Gowda) ಇಂದು ಚುನಾವಣಾ ರಣಕಣಕ್ಕೆ ಇಳಿದಿದ್ದಾರೆ. ಚನ್ನಪಟ್ಟಣ (Channapatna) ವಿಧಾನಸಭಾ ವ್ಯಾಪ್ತಿಯ ಕೋಡಂಬಳ್ಳಿಯಲ್ಲಿ ದೇವೇಗೌಡ್ರು ಇಂದು ಭರ್ಜರಿ ಮತಯಾಚನೆ ಮಾಡಿದ್ರು. ಈ ವೇಳೆ ಕಾಂಗ್ರೆಸ್ ನಾಯಕರು (Congress Leaders) ಹಾಗೂ ಡಿಕೆ ಬ್ರದರ್ಸ್ (DK Brothers) ವಿರುದ್ಧ ಗೌಡ್ರು ಗುಡುಗಿದ್ರು. ನನಗೆ ಆರೋಗ್ಯ ಸಮಸ್ಯೆ ಸರಿ ಇಲ್ಲ, ನನಗೆ ಮಂಡಿ ನೋವಿದೆ. ಇವಾಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ಒಬ್ಬ ಅಭ್ಯರ್ಥಿಯನ್ನು, ನಾನು ಅವರ ಹೆಸರು ಹೇಳಲ್ಲ, ನಾನು ಹೆಸರು ಹೇಳಿದ್ರೆ ನಾನು ವೆಂಟಿಲೇಟರ್‌ನಲ್ಲೂ ಭಾಷಣ ಮಾಡೋಕೆ ಬರ್ತಾರೆ ಎಂದು ಬಹಳ ಲಘುವಾಗಿ ಮಾತಾಡಿದ್ರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ ಅಂತ ದೇವೇಗೌಡರು ಟಾಂಗ್ ಕೊಟ್ರು. ಕುಮಾರಸ್ವಾಮಿ ನಿಲ್ಲುವಂತೆ ಪ್ರಧಾನಿಗಳ ಹಠ ಈ ಸರ್ಕಾರದ ಬಗ್ಗೆ ನಾನು ಗುಣಗಾನ ಮಾಡೋಕೆ ಬಂದಿಲ್ಲ. ಮಂಡ್ಯ ಜಿಲ್ಲೆಯ ಜನರು ಕುಮಾರಸ್ವಾಮಿಯನ್ನು ಲೋಕಸಭೆಗೆ ಕಳುಹಿಸಿದ್ದಾರೆ. ಪ್ರಧಾನಿಗಳು ನಿಲ್ಲಲೇಬೇಕು ಎಂದು ಹಠ ಮಾಡಿದ್ರಿಂದ ಅವರು ನಿಲ್ಲಲೇಬೇಕಾಯ್ತು. ಅವರಿಂದ ರಾಜೀನಾಮೆಯಾಗಿ, ಇವಾಗ ಚನ್ನಪಟ್ಟಣ ಕ್ಷೇತ್ರ ಖಾಲಿಯಾಗಿದೆ ಅಂತ ದೇವೇಗೌಡರು ಹೇಳಿದ್ರು. ನಾನೇ ನಾನೇ ಎನ್ನುವವರು ಈಗ ಎಲ್ಲಿ ಹೋದ್ರು? ಆರು ತಿಂಗಳಿಂದ ಅಣಕದ ಮಾತು ಕೇಳಿದ್ದೇನೆ. ಯಾರು ಅಭ್ಯರ್ಥಿ ಅಂದರೆ ನಾನೇ.. ನಾನೇ…ನಾನೇ.. ನಾನೇ.. ಎಂದರು. ಆ ನಾನೇ ಈಗ ಎಲ್ಲಿ ಹೋದ್ರು ಇವಾಗ? ಚನ್ನಪಟ್ಟಣಕ್ಕೆ ನಿಲ್ಲುವ ನಾನೇ ಇವಾಗ ಎಲ್ಲಿ ಹೋದ್ರು? ಅಂತ ಡಿಕೆ ಶಿವಕುಮಾರ್‌ಗೆ ಪರೋಕ್ಷವಾಗಿ ದೇವೇಗೌಡರು ಟಾಂಗ್ ಕೊಟ್ರು. ಇದನ್ನೂ ಓದಿ: Siddaramaiah-Muda Scam: 14 ಸೈಟ್ ಗಾಗಿ ರಾಜಕಾರಣ ಮಾಡಬೇಕಾ? ನಾನೇನೂ ತಪ್ಪು ಮಾಡಿಲ್ಲ ಎಂದ ಸಿದ್ದರಾಮಯ್ಯ ‘ಅಪೂರ್ವ ಸಹೋದರ’ರ ಬಗ್ಗೆ ಲೇವಡಿ ಡಿಕೆ ಬ್ರದರ್ಸ್‌ಗೆ ಅಪೂರ್ವ ಸಹೋದರರು ಅಂತ ಲೇವಡಿ ಮಾಡಿದ ಗೌಡರು, ಇವಾಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ಒಬ್ಬ ಅಭ್ಯರ್ಥಿಯನ್ನು, ನಾನು ಅವರ ಹೆಸರು ಹೇಳೋದಿಲ್ಲ, ನಾನು ಹೆಸರು ಹೇಳಿದ್ರೆ ನಾನು ವೆಂಟಿಲೇಟರ್‌ನಲ್ಲೂ ಭಾಷಣ ಮಾಡೋಕೆ ಬರ್ತಾರೆ ಎಂದು ಬಹಳ ಲಘುವಾಗಿ ಮಾತಾಡಿದ್ರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ. ಯಾವ ವೆಂಟಿಲೇಟರ್ ಇಲ್ಲ, ಕೈಯೂ ನಡಗಲ್ಲ ಅಂತ ದೇವೇಗೌಡರು ಹೇಳಿದ್ರು. ಎತ್ತಿನಹೊಳೆ ನೀರು ಬಂದ್ರೆ ದೀರ್ಘದಂಡ ನಮಸ್ಕಾರ ಮಾಡ್ತೀನಿ ಎತ್ತಿನಹೊಳೆ ನೀರು ಕೋಲಾರಕ್ಕೆ ಬಂದರೆ ನಾನು ದೀರ್ಘದಂಡವಾಗಿ ನಮಸ್ಕಾರ ಮಾಡ್ತೀನಿ ಅಂತ ದೇವೇಗೌಡರು ಸವಾಲು ಹಾಕಿದ್ರು. ಮಹಾನುಭಾವರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ತರುತ್ತಾರಂತೆ? ತುಂಬಾ ವಿಷಯ ಇದೆ ಮಾತಾಡಿದ್ರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ನನ್ನ, ಮೋದಿ ಸಂಬಂಧ ಚೆನ್ನಾಗಿತ್ತು ದೇವೇಗೌಡರ ಕೈ ನಡುಗುತ್ತವೆ, ಅವ್ರು ಪ್ರಚಾರಕ್ಕೆ ಬರ್ತಾರೆ ಅಂತ ವ್ಯಂಗ್ಯವಾಡಿದ್ರು. ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್ ಮೆನ್, ಪ್ರಚಾರಕ್ಕೆ ಬರುತ್ತೇನೆ ಅಂತ ಗುಡುಗಿದ್ರು. ಮೋದಿ ಹಾಗೂ ನನ್ನ ಸಂಬಂಧ ಚೆನ್ನಾಗಿತ್ತು. ಕಾಂಗ್ರೆಸ್‌ನವರ ಹೇಯ ಕೆಲಸ, ಈ ಕಾಂಗ್ರೆಸ್ ತಮ್ಮ ಕುಟುಂಬ ಬಿಟ್ಟರೇ ಎರಡು ಮಾತಿಲ್ಲ ಅಂತ ಕುಟುಕಿದ್ರು. ಯೋಗೇಶ್ವರ್ ವಿರುದ್ಧ ಗೌಡರ ಗುಡುಗು ದೇವೇಗೌಡ್ರೇ ನೀವು ಯಾಕೇ ನಿಮ್ಮ ಮೊಮ್ಮಗನನ್ನು ನಿಲ್ಲಿಸಿದ್ದೀರಿ ಎಂದು ಕೇಳಬಹುದು. ಯಾವ ಕನ್ವರ್ಟೆಡ್ ಕಾಂಗ್ರೆಸ್ ಇದ್ದಾರೋ ಬಿಜೆಪಿಯಿಂದ ಆದರೂ ನಿಲ್ಲೂ, ಜೆಡಿಎಸ್‌ನಿಂದ ನಿಲ್ಲು ಅಂದ್ವಿ. ಆದರೆ ನೋ ನೋ ನೋ ಅಂತಾ ಕಾಂಗ್ರೆಸ್‌ನಲ್ಲೇ ನಿಲ್ಲೋದು ಅಂತಾ ನಿಂತಿದ್ದಾರೆ ಅಂತ ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ದೇವೇಗೌಡರು ಗುಡುಗಿದ್ರು. ಜೆಡಿಎಸ್‌ನ ಸ್ಥಳೀಯ ಮುಖಂಡರು ಎಲ್ಲರೂ ಸೇರಿ ನಿಖಿಲ್ ನಿಲ್ಲಿಸಬೇಕು ಎಂದು ಅಭ್ಯರ್ಥಿ ಮಾಡಿದ್ದಾರೆ ಅಂತ ದೇವೇಗೌಡರು ಸ್ಪಷ್ಟಪಡಿಸಿದ್ರು. (ವರದಿ: ಕೃಷ್ಣ ಜಿ.ವಿ., ನ್ಯೂಸ್ 18 ಕನ್ನಡ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.