ವೈರಲ್ ಫೋಟೋಸ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case ) ಜೈಲು ಸೇರಿರುವ ದರ್ಶನ್ (Actor Darshan) ಜೈಲಿನಲ್ಲೂ ಬಿಂದಾಸ್ ಆಗಿದ್ದಾರಂತೆ. ಜೈಲನ್ನೇ ರೆಸಾರ್ಟ್ ಮಾಡಿಕೊಂಡಿರುವ ದರ್ಶನ್ ಸೆರೆಮನೆಯಲ್ಲೂ ಆರಾಮಾಗಿದ್ದಾರೆ, ಪರಪ್ಪನ ಅಗ್ರಹಾರದದಲ್ಲಿ (Parappana Agrahara Jail) ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಫೋಟೋವೊಂದು ವೈರಲ್ (Viral Photos and Video) ಆಗಿದೆ. ಫೋಟೋದಲ್ಲಿ ದರ್ಶನ್ ಜೈಲಿನ ಬ್ಯಾರಕ್‌ನಿಂದ ಹೊರಗೆ ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ದರ್ಶನ್ ಜೊತೆಗೆ A11 ಆರೋಪಿ ದರ್ಶನ್ ಮ್ಯಾನೇಜರ್ ನಾಗರಾಜ್ ವೈರಲ್ ಫೋಟೋದಲ್ಲಿ ಕಾಣಬಹುದಾಗಿದೆ. ನನಗೆ ಮಾಹಿತಿ ಸಿಕ್ಕಿದೆ ವೈರಲ್ ಫೋಟೋ ಹಾಗೂ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು, ನಿನ್ನೆ ಸುಮಾರು 4:30ಕ್ಕೆ ವೈರಲ್ ಫೋಟೋ ಬಗ್ಗೆ ಸುದ್ದಿ ಬಂತು. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಹಾಗೂ ಇತರೇ ನಾಲ್ವರು ಟೀ ಕುಡಿದುಕೊಂಡು ಬಹಳ ಆರಾಮವಾಗಿದ್ದಾರೆ ಎಂಬ ಮಾಹಿತಿ ಸಿಕ್ತು. ಕೂಡಲೇ ಬಂದೀಖಾನೆ ಇಲಾಖೆಯ ಡಿಜಿ ಅವರೊಂದಿಗೆ ನಾನು ಮಾತನಾಡಿದೆ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು ತನಿಖೆ ಮಾಡಿದ್ದೇವೆ, ರಾತ್ರಿ 1 ಗಂಟೆವರೆಗೂ ವಿಚಾರಣೆ ಮಾಡಿದ್ದಾರೆ. ಏಳು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ. ಜೈಲರ್ ಗಳಾದ ಶರಣ ಬಸಪ್ಪ ಅಮೀನ ಗಡ್, ಪ್ರಭು ಎಸ್ ಖಂಡೇಲ್ವಾಲ್, ಅಸಿಸ್ಟೆಂಟ್ ಜೈಲರ್ ಗಳಾದ ಶ್ರೀಂಕಾತ್ ತಲವಾರ, ಎಲ್ ಎಸ್ ತಿಪ್ಪೇಸ್ವಾಮಿ ಹಾಗೂ ಹೆಡ್ ವಡರ್ಸ್ ಗಳಾದ ವೆಂಕಪ್ಪ ಕುರ್ತಿ, ಸಂಪತ್ ಕುಮಾರ್ ಕಡಪಟ್ಟಿ ಸೇರಿದಂತೆ ವರ್ಡರ್ ಬಸಪ್ಪ ತೇಲಿ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: Actor Darshan Case: ರೇಣುಕಾಸ್ವಾಮಿ ಕೇಸ್ನ ರೋಚಕ ರಹಸ್ಯ ರಿವೀಲ್! ಆ ಎಡವಟ್ಟಿನಿಂದಲೇ ಬೆಳಕಿಗೆ ಬಂತು ಪ್ರಕರಣ ಏಳು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಯಾವ ರೀತಿ ಘಟನೆ ಆಗಿದೆ ಅಂತ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಈಗಾಗಲೇ ಡಿಜಿ ಅವರು ಜೈಲಿಗೆ ಭೇಟಿ ನೀಡಲಿದ್ದಾರೆ. ಇಂತಹ ಘಟನೆ ಯಾವುದೇ ಕಾರಣಕ್ಕೂ ನಡೆಯಬಾರದು, ಈ 7 ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರ ಅನ್ವಯವೇ ಅಮಾನತು ಮಾಡಲಾಗಿದೆ. ಜೈಲಿನ ಹಿರಿಯ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡ್ತೇವೆ, ವರದಿ ಬರಲು ಕಾಯುತ್ತಿದ್ದೇವೆ. ಎಲ್ಲಾ ಜೈಲುಗಳಲ್ಲಿ ಜ್ಯಾಮರ್, ಸಿಸಿಟಿವಿ ಹಾಕುತ್ತಿದ್ದೇವೆ. ಆದ್ದರಿಂದ ಇಂತಹ ಘಟನೆಗಳು ನಡೆಯಬಾರದು ಎಂದು ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಇದೇ ವೇಳೆ ಕೇವಲ ಕೆಳಮಟ್ಟದ ಅಧಿಕಾರಿಗಳನ್ನು ಅಮಾನತು ಮಾಡಿ ಉನ್ನತ ಅಧಿಕಾರಿಗಳನ್ನ ವರ್ಗಾವಣೆ ಮಾಡ್ತೀವಿ ಅನ್ನೋದು ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪರಮೇಶ್ವರ್ ಅವರು, ಘಟನೆ ಆಗಿದೆ ಅದನ್ನು ನಾವು ಸಮರ್ಥನೆ ಮಾಡುತ್ತಿಲ್ಲ, ಈಗ ಪ್ರಕರಣದ ತನಿಕೆ ಆಗ್ತಿದೆ. ಅಲ್ಲದೇ ಹಿರಿಯ ಅಧಿಕಾರಿಗಳ ಬಗ್ಗೆಯೂ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಅವರು ಭಾಗಿಯಾಗಿದ್ದಾರೆ ಅಂತ ಗೊತ್ತಾದರೆ ಅವರನ್ನು ಅಮಾನತು ಮಾಡ್ತೇವೆ. ತನಿಖೆಯಲ್ಲಿ ಎಲ್ಲವೂ ಬೆಳಕಿಗೆ ಬರುತ್ತೆ, ಆಗ ಮುಂದಿನ ಕ್ರಮ ಆಗುತ್ತೆ ಎಂದು ಭರವಸೆ ನೀಡಿದರು. ಕಾರಾಗೃಹಗಳ ಡಿಜಿಪಿ ಮಾಲೀನಿ ಕೃಷ್ಣ ಮೂರ್ತಿ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಪ್ರಾಥಮಿಕ ವರದಿ ಸಿಕ್ಕಿದೆ, ನಾನು ಪರಪ್ಪನ ಆಗ್ರಹಾರ ಜೈಲಿಗೆ ಹೋಗ್ತಾ ಇದ್ದಿನಿ. ಇದೆಲ್ಲದರ ಬಗ್ಗೆ ಅಲ್ಲೆ ಮಾತಾಡ್ತಿನಿ ಎಂದಷ್ಟೇ ತಿಳಿಸಿದರು. (ವರದಿ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್ 18 ಕನ್ನಡ) None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.