ಚಗಳಿ ಚಟ್ನಿ Food Culture: ಆಹಾರ ಸಂಸ್ಕೃತಿ ಅನ್ನೋದೇ ಹಾಗೆ.. ಒಂದು ಊರಿಗಿಂತ ಇನ್ನೊಂದು ಊರಿನ ಆಹಾರ ಪದ್ಧತಿ ವಿಭಿನ್ನ. ನಮ್ಮ ಆಹಾರ ಶ್ರೇಷ್ಠನೋ ನಿಮ್ಮ ಆಹಾರ ಶ್ರೇಷ್ಠನೋ ಅಥವಾ ಇತ್ತೀಚೆಗೆ ಟ್ರೆಂಡ್‌ನಲ್ಲಿರುವ ವೆಜ್ ಶ್ರೇಷ್ಠನೋ, ನಾನ್‌ವೆಜ್ ಶ್ರೇಷ್ಠನೋ ಅನ್ನುವಂತಹ ನಾನ್‌ಸೆನ್ಸ್ ಮನಸ್ಥಿತಿಗಳನ್ನು ಬದಿಗಿಟ್ಟು ಜಗತ್ತಿನ ಮೂಲೆ ಮೂಲೆಯ ಆಹಾರ ಸಂಸ್ಕೃತಿಯನ್ನು ಗೌರವಿಸಿದಾಗಲಷ್ಟೇ ಸಹ ಮನುಷ್ಯರನ್ನೂ ಗೌರವಿಸಿದಂತಾಗುತ್ತದೆ. ಕರ್ನಾಟಕ ಒಂದು ರಾಜ್ಯವಾದರೂ ಇಲ್ಲಿ ಕೂಡ ಊರಿಂದ ಊರಿಗೆ ಆಹಾರ ಪದ್ಧತಿ ತನ್ನ ಮಗ್ಗುಲುಗಳನ್ನು ಬದಲಾಯಿಸುತ್ತಲೇ ಹೋಗುತ್ತದೆ. ಉತ್ತರ ಕರ್ನಾಟಕದ ಆಹಾರ ಪದ್ಧತಿಗೂ, ದಕ್ಷಿಣ ಕರ್ನಾಟಕದ ಆಹಾರ ಪದ್ಧತಿಗೂ ಸಂಪೂರ್ಣ ವಿಭಿನ್ನತೆ ಇದೆ. ಖಡಕ್ ರೊಟ್ಟಿ, ರಾಗಿ ಮುದ್ದೆ ಕರಾವಳಿ ಭಾಗದ ತುಳುವರಿಗೆ ಆಗಲ್ಲ, ತುಳುನಾಡಿನ ಕುಚ್ಚಲಕ್ಕಿ ಅನ್ನ ಉತ್ತರ ಕರ್ನಾಟಕದವರಿಗೂ ಆಗಲ್ಲ. ಹೀಗೆ ಊರಿಂದ ಊರಿಗೆ ಆಹಾರ ಪದ್ಧತಿ ಅನ್ನೋದು ಸಮುದಾಯ ಮತ್ತು ಪ್ರಾದೇಶಿಕವಾಗಿ ವಿಭಿನ್ನ ಸ್ವರೂಪವನ್ನು ಪಡೆದುಕೊಂಡಿದೆ. ಇಂದು ನಾವು ನಿಮಗೆ ಹೇಳೋಕೆ ಹೊರಟಿರೋದು ನಮ್ಮದೇ ಕರ್ನಾಟಕದಲ್ಲಿ ವಿಶೇಷವಾಗಿ ಮಲೆನಾಡು ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕೆಂಪು ಇರುವೆ ಚಟ್ನಿಯ ಬಗ್ಗೆ. ಇದನ್ನೂ ಓದಿ: Interesting Story: ‘ನಾನು ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಬೇಕು, ಮನೆಯಲ್ಲಿ ಹೇಳೋಕಾಗ್ತಿಲ್ಲ ಸಲಹೆ ನೀಡಿ’ ಎಂದ ಮುಸ್ಲಿಂ ಯುವತಿ! ಕೆಂಪಿರುವ ಚಟ್ನಿಯ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಚಗಳಿ ಚಟ್ನಿ, ಸವಳಿ ಚಟ್ನಿ ಅಂತಾನೂ ಇದನ್ನು ಕರೆಯುತ್ತಾರೆ. ಕೆಂಪು ಇರುವೆ ಚಟ್ನಿ ಅಂದಾಕ್ಷಣ ಅದನ್ನು ಕೇಳಿ ಒಂಥರಾ ಅನ್ನಿಸಿರಲೂಬಹುದು. ಆದರೆ ಮಲೆನಾಡು ಭಾಗದವರು ಈ ಕೆಂಪಿರುವ ಚಟ್ನಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಿದ್ಧಿ ಸಮುದಾಯದ ಸಾಂಪ್ರದಾಯಿಕ ಖಾದ್ಯವಾಗಿರುವ ಕೆಂಪಿರುವ ಚಟ್ನಿ ಹಲವು ಕಾಯಿಲೆಗಳನ್ನೂ ಒದ್ದೋಡಿಸುವ ವಿಶೇಷ ಔಷಧವೂ ಹೌದು. ಅನಾದಿ ಕಾಲದಿಂದಲೂ ಚಗಳಿ ಚಟ್ನಿಯನ್ನು ಮಲೆನಾಡು ಜನತೆ ತಿನ್ನುತ್ತಲೇ ಬಂದಿದ್ದಾರೆ. ಮನೆಯಲ್ಲಿ ಯಾರಿಗಾದರೂ ಶೀತ, ಜ್ವರ, ಕೆಮ್ಮು ಈ ರೀತಿಯ ಕಾಯಿಲೆಗಳು ಕಾಣಿಸಿಕೊಂಡರೆ ಖಾರವಾದ ಚಗಳಿ ಚಟ್ನಿ ತಿನ್ನಿಸಿದರೆ ಎಲ್ಲಾ ಕಾಯಿಲೆಗಳೂ ಮಾಯವಾಗುತ್ತದೆ. ಹೀಗಾಗಿ ಈ ಚಟ್ನಿ ಹಳ್ಳಿಗರ ಮನೆಮದ್ದು ಕೂಡ ಹೌದು. ಇದರ ಜೊತೆಗೆ ಕೆಂಪಿರುವೆ ಚಟ್ನಿಯನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಕಣ್ಣಿನ ದೃಷ್ಟಿಯೂ ಸುಧಾರಿಸುತ್ತದೆ. ಮುಖ್ಯವಾಗಿ ಮೆದುಳು ಮತ್ತು ನರ ಮಂಡಲಕ್ಕೆ ಪ್ರಯೋಜನವನ್ನು ನೀಡುವುದಲ್ಲದೇ, ಕೆಂಪು ಇರುವೆಗಳಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಫಾರ್ಮಿಕ್ ಆ್ಯಸಿಡ್, ವಿಟಮಿನ್ ಬಿ12, ಜಿಂಕ್ ಸೇರಿದಂತೆ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಮಲೆನಾಡು ಜನತೆ ಕೆಂಪು ಇರುವೆ ಚಟ್ನಿಯನ್ನು ದೋಸೆ, ಇಡ್ಲಿ ಸೇರಿದಂತೆ ಇತರ ತಿಂಡಿಗಳ ಜೊತೆಗೆ ನೆಂಚಿಕೊಂಡು ತಿನ್ನುತ್ತಾರೆ. ಉತ್ತರ ಕನ್ನಡದಲ್ಲಿ ಇರುವ ಸಿದ್ಧಿ ಜನಾಂಗದವರು ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ಈ ಚಟ್ನಿಯನ್ನು ಇಂದಿಗೂ ತಿನ್ನುತ್ತಾರೆ. ಇದನ್ನೂ ಓದಿ: Interesting Facts: ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡೋದು ಏಕೆ? ಇದರ ಹಿಂದಿದೆ 90% ಜನರಿಗೆ ಗೊತ್ತಿರದ ಆ ಮಹತ್ವದ ಕಾರಣ! ಚಗಳಿ ಚಟ್ನಿ ಮಾಡೋದು ಹೇಗೆ? ಮೊದಲು ಮರ ಹತ್ತಿ ಕೆಂಪಿರುವೆ ಗೂಡನ್ನು ಕೆಳಗಿಳಿಸಿ ಇರುವೆ, ಮೊಟ್ಟೆ, ಮರಿಗಳನ್ನು ಹಾಕಿದ ಪಾತ್ರಕ್ಕೆ ಉಪ್ಪು ಹಾಕಬೇಕು. ಇರುವೆಗಳು ಸತ್ತ ನಂತರ ಅವುಗಳನ್ನು ಬಾಣಲೆಯಲ್ಲಿ ಹಾಕಿ ಹುರಿದು, ನಂತರ ಶುಂಠಿ, ರಾಮಪತ್ರೆ, ಕರಿಬೇವು, ಸಾಸಿವೆ, ಜೀರಿಗೆ, ಅರಿಶಿನ ಎಲ್ಲವನ್ನೂ ಸೇರಿಸಿ ಮಸಾಲೆ ಮಾಡಿಕೊಳ್ಳಬೇಕು. ನಂತರ ಮಿಕ್ಸಿಗೆ ಹಾಕಿ ಅಥವಾ ಗುಂಡುಕಲ್ಲಲ್ಲಿ ರುಬ್ಬಿದ್ರೆ ರುಚಿಕರವಾದ ಚಗಳಿ ಚಟ್ನಿ ರೆಡಿ. ಇದನ್ನು ಈಗಾಗಲೇ ತಿಂದಿರುವವರು ಈ ಸುದ್ದಿಯನ್ನು ಓದುತ್ತಲೇ ಬಾಯಿಯಲ್ಲಿ ನೀರು ಹರಿಸಿದರೆ ಅಚ್ಚರಿಯೇನಿಲ್ಲ. ನೀವು ಚಗಳಿ ಚಟ್ನಿಯನ್ನು ತಿಂದಿಲ್ಲವಾದರೆ ಒಂದು ಸಲ ಟ್ರೈ ಮಾಡಿ ನೋಡಿ. ಖಂಡಿತಾ ಇಷ್ಟವಾಗುತ್ತೆ. ವಿವಿಧ ಊರು, ಸಂಪ್ರದಾಯದ ಆಹಾರವನ್ನು ಸವಿಯುವ ಹವ್ಯಾಸವನ್ನು ಹೊಂದಿರುವ ಜನ ನೀವಾದರೆ ಯಾವುದೇ ಕಾರಣಕ್ಕೂ ಚಗಳಿ ಚಟ್ನಿ ಮಿಸ್ ಮಾಡಬೇಡಿ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.