ತೆಲುಗಿನ ಜಬರ್ದಸ್ತ್ ಕಾಮಿಡಿ ಶೋನಲ್ಲಿ (Jabardasth Comedy Show) ವಿಭಿನ್ನ ಗೆಟಪ್‌ಗಳಲ್ಲಿ ಎಲ್ಲರನ್ನೂ ನಗಿಸಿದ ನಟಿ ತನ್ಮಯಿ ಮನೆಯಲ್ಲಿ ಶೋಕ ಮಡುಗಟ್ಟಿದೆ. ಬಾಲ್ಯದಿಂದಲೂ ತನ್ನ ಕೈ ಹಿಡಿದು ಮುನ್ನಡೆಸಿದ ತಂದೆಯನ್ನ ಕಳೆದುಕೊಂಡು ನಟಿ ಕಣ್ಣೀರು ಹಾಕ್ತಿದ್ದಾರೆ. ತಂದೆಯ ಸಾವಿನ ಸುದ್ದಿಯನ್ನು ನಟಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ತಂದೆ ಮೃತದೇಹ ಪಟ್ಟ ಬಗ್ಗೆ ನಟಿ ತನ್ಮಯಿ (Actress Tanmayi) ಶೇರ್ ಮಾಡಿರುವ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಅಪ್ಪನನ್ನು ಕಳೆದುಕೊಂಡ ನಟಿಯ ಕಣ್ಣೀರು! ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ಬಲು ಪ್ರೀತಿ. ಅಪ್ಪನನ್ನು ಕಳೆದುಕೊಂಡ ನಟಿ ಇದೀಗ ಕಣ್ಣೀರು ಹಾಕ್ತಿದ್ದಾರೆ. ನಟಿಯ ದುಃಖ ಕಂಡು ಅಭಿಮಾನಿಗಳು ಕಣ್ಣಂಚಿನಲ್ಲಿ ನೀರು ಮೂಡಿಸಿದೆ. ನಟಿ ತನ್ನ ತಂದೆಯ ಅಂತ್ಯಸಂಸ್ಕಾರದ ಕಾರ್ಯ ಮಾಡಿದ್ದಾರೆ. ‘ನನ್ನ ಅಪ್ಪ ನನ್ನ ಹೀರೋ.. ನನ್ನ ಅಪ್ಪ ಒಂದು ಭಾವನೆ.. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅಪ್ಪ, ನೀವು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತೀರಿ. ನಾನು ಮಗನಾಗಿರಲಿ ಅಥವಾ ಮಗಳಾಗಿರಲಿ ನಾನು ನಿಮ್ಮ ಮಗು’ ಎಂದು ತನ್ಮಯಿ ಹಂಚಿಕೊಂಡ ವೀಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ ಫ್ಯಾನ್ಸ್ ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ರಿಪ್ ಎಂದು ಕಮೆಂಟ್‌ಗಳನ್ನು ಮಾಡಲಾಗುತ್ತಿದೆ. ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತನ್ಮಯಿ ಬರೆದಿದ್ದಾರೆ. ಅಲ್ಲದೆ ಜಬರ್ದಸ್ತ್ ನಟಿಗೆ ಅಭಿಮಾನಿಗಳು ಕೂಡ ಸಾಂತ್ವನದ ಕಮೆಂಟ್ ಮಾಡ್ತಿದ್ದಾರೆ. ಗಂಡು ಮಗುವಾಗಿ ಹುಟ್ಟಿದ್ದ ತನ್ಮಯಿ! ತನ್ಮಯಿ ಗಂಡು ಮಗುವಾಗಿ ಹುಟ್ಟಿದರೂ ಹಾರ್ಮೋನ್ ಅಸಮತೋಲನದಿಂದ ಹುಡುಗಿಯಾಗಿ ಬದಲಾದ್ರು. ತಾನು ಲೈಂಗಿಕ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ತಿಳಿಸಿದ್ರು. ಜಬರ್ದಸ್ತ್ ಶೋ ಮೂಲಕ ತನ್ಮಯಿ ಉತ್ತಮ ಮನ್ನಣೆ ಗಳಿಸಿದ್ದರು. ಇದರಲ್ಲಿ ಅವರು ಧರಿಸಿರುವ ರಾಗಿಣಿ ಗೆಟಪ್‌ಗಳು ಪ್ರೇಕ್ಷಕರನ್ನು ರಂಜಿಸುತ್ತಿದೆ. ಅಷ್ಟೇ ಅಲ್ಲದೇ ನಾಟಕ ಕಂಪನಿ ಕಾರ್ಯಕ್ರಮಗಳಲ್ಲಿ ತನ್ಮಯಿ ಸದ್ದು ಮಾಡುತ್ತಿದ್ದಾರೆ. ಟಿವಿ ಕಾರ್ಯಕ್ರಮಗಳ ಹೊರತಾಗಿ, ತನ್ಮಯಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದನ್ನೂ ಓದಿ: Malayalam Actress: ಒಮ್ಮೆ ಬಾತ್ರೂಮ್ನಲ್ಲಿ, ಕೆಲವೊಮ್ಮೆ ಬೆಡ್ರೂಮ್ನಲ್ಲಿ, ಒಬ್ಬರಲ್ಲ ನಾಲ್ವರು ನಟರಿಂದ ದೌರ್ಜನ್ಯ! ಕರಾಳ ಸತ್ಯ ಬಾಯ್ಬಿಟ್ರು ನಟಿ! ಇನ್ಸ್ಟಾದಲ್ಲಿ ರೀಲ್ಸ್ ಮತ್ತು ವೀಡಿಯೊಗಳನ್ನು ಮಾಡುವ ಮೂಲಕ ತನ್ನ ಫಾಲೋವರ್ಸ್ ನನ್ನು ಸೆಳೆದಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲೂ ಆಕೆಗೆ ಉತ್ತಮ ಫಾಲೋವರ್ಸ್ ಇದೆ. ತನ್ಮಯಿ ಬಹುತೇಕ ಜಬರ್ದಸ್ತ್ ನಟರ ಜೊತೆ ರೀಲ್ ಮಾಡಿ ಜನರನ್ನು ನಗಿಸುತ್ತಾರೆ. ಮುಗುಳ್ನಗುತ್ತಾ ಎಲ್ಲರನ್ನು ನಗಿಸುತ್ತಿದ್ದ ಈ ಹಾಸ್ಯನಟಿ ಈಗ ದುಃಖದಲ್ಲಿರುವುದನ್ನು ಕಂಡು ಅಭಿಮಾನಿಗಳು, ನೆಟ್ಟಿಗರು ಕೂಡ ಧೈರ್ಯ ತುಂಬುತ್ತಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.