ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್- ರೇಣುಕಾಸ್ವಾಮಿ ತಂದೆ ರೇಣುಕಾಸ್ವಾಮಿ ಹತ್ಯೆ (Renukaswamy Case) ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ದರ್ಶನ್ (Darshan) ಹಾಗೂ ನಟೋರಿಯಸ್ ಕ್ರಿಮಿನಲ್ ವಿಲ್ಸನ್ ಗಾರ್ಡನ್ ನಾಗನ (Wilson Gardan Naga) ಜೊತೆ ಕುಳಿತು ಫೋಟೋ ವೈರಲ್ ಆಗುತ್ತಿದ್ದು, ಜೈಲಿನಲ್ಲಿ ಅಧಿಕಾರಿಗಳ ನಡೆ ಬಗ್ಗೆ ಅಚ್ಚರಿ ವ್ಯಕ್ತವಾಗುತ್ತಿದೆ. ಕೊಲೆ ಆರೋಪಿ ಈ ರೀತಿ ರೌಡಿ ಶೀಟರ್ಗಳೊಂದಿಗೆ ಜೈಲಲ್ಲೂ ಕುರ್ಚಿಯಲ್ಲಿ ಕುಳಿತು ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಎಂಜಾಯ್ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ತಮ್ಮ ಮಗನ ಕೊಲೆಗೆ ನ್ಯಾಯ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ರೇಣುಕಾಸ್ವಾಮಿ ಕುಟುಂಬಕ್ಕೆ ಜೈಲಲ್ಲಿ ದರ್ಶನ್ಗೆ ಸಿಗುತ್ತಿರುವ ರಾಜಾತಿಥ್ಯ ಕಂಡು ಆಘಾತಕ್ಕೊಳಗಾಗಿದ್ದಾರೆ. ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾಥಿತ್ಯ ನೀಡುತ್ತಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಶಿವನಗೌಡರ್, " ಪೊಲೀಸರ ಮೇಲೆ ಮತ್ತು ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ಆದರೆ ಈ ಫೋಟೋಗಳನ್ನ ನೋಡಿ ನಮಗೆ ಶಾಕ್ ಆಗಿದೆ. ಜೈಲು ಜೈಲಾಗಿರಬೇಕು ವಿನಹ ಈ ರೀತಿ ನಾಲ್ಕು ಜನ ಕುರ್ಚಿಯಲ್ಲಿ ಕುಳಿತು ಅತಿಥಿಗೃಹದಲ್ಲಿರುವ ಹಾಗೆ ಎಂಜಾಯ್ ಮಾಡುತ್ತಿದ್ದಾರೆ " ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ! ಇಂಥ ದೃಶ್ಯ ನೋಡಿ ನಮ್ಮ ಹೊಟ್ಟೆ ಉರೀತಿದೆ ಎಂದ್ರು ರೇಣುಕಾಸ್ವಾಮಿ ತಂದೆ! ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಕೊಲೆ ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆ ಜೊತೆಗೆ ಈ ಘಟನೆ ಬಗ್ಗೆಯೂ ಸಮಗ್ರವಾಗಿ ತನಿಖೆ ಆಗಲಿ. ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ಮಾಡಲಿ. ಕಾನೂನು ಎನ್ನುವುದು ಸಾಮಾನ್ಯ ಜನರಿಗೂ, ಸೆಲೆಬ್ರಿಟಿಗಳಿಗೂ ಒಂದೇ ಇರಬೇಕು. ಯಾರಾದ್ರೂ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ಮಾಧ್ಯಮಗಳು ಎಲ್ಲವನ್ನ ಬಯಲಿಗೆ ತರುತ್ತಿವೆ. ಈ ಮೂಲಕ ಎಲ್ಲರಿಗೂ ಎಚ್ಚರಿಕೆ ಕೊಡ್ತದ್ದಿರಾ. ಸರ್ಕಾರ ಕೂಡ ಇದರ ಬಗ್ಗೆ ಗಮನ ಹರಿಸಬೇಕು. ನ್ಯಾಯಾಂಗ ವ್ಯವಸ್ಥೆ ಮೇಲೆ, ಜಡ್ಜ್ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಪೂರ್ಣ ನಂಬಿಕೆ ಇದೆ ಎಂದು ತಿಳಿಸಿದರು. ರೆಸಾರ್ಟ್ ನಲ್ಲಿ ಕುಳಿತಂತೆ ಕೂತಿದ್ದಾರೆ ಈ ಫೋಟೋ ನೋಡಿದ್ರೆ ತಪ್ಪು ಮಾಡಿದ್ದೇನೆ ಎಂಬ ಭಾವನೆ ಅವರಿಗಿಲ್ಲಾ ಎನಿಸುತ್ತಿದೆ. ಆ ಫೋಟೋ ನೋಡಿ ನಮಗೆ ಶಾಕ್ ಆಯ್ತು, ನ್ಯಾಯಾಂಗ ಮನೆ ಊಟ ಕೊಟ್ಟಿಲ್ಲ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಆದ್ರೆ ದೃಶ್ಯ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು ಕೈದಿಗಳ ಪಾಲಿಗೆ ಜೈಲೇ ಆಗಿರ್ಬೇಕು ಮತ್ತೊಂದು ಆಗಿರಬಾರದು ಎಂದ್ರು. ರೆಸಾರ್ಟ್ ನಲ್ಲಿ ಕುಳಿತಂತೆ ಕುರ್ಚಿ ಮೇಲೆ ಚಹ, ಸಿಗರೇಟ್ ಹಿಡಿದು ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೂ ನಮಗೆ ಪೂರ್ಣ ನಂಬಿಕೆ ಇದೆ ಎಂದ್ರು. ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಬೇಕು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಅವನ ಆತ್ಮಕ್ಕೆ ಶಾಂತಿ ಸಿಗಬೇಕು. ನನ್ನ ಮಗನನ್ನ ಕಳೆದುಕೊಂಡು ನಾವು ಕಣ್ಣೀರು ಕಳೆಯುವಂತಾಗಿದೆ. ನನ್ನ ಸೊಸೆ ನೋಡಿದ ದಿನ ಸಂಕಟಪಡುತ್ತಿದ್ದೇವೆ. ಮನುಷ್ಯತ್ವ ಕಳೆದುಕೊಂಡವರಂತೆ ಹೊಡೆದು ಕೊಂದಿದ್ದಾರೆ. ಅವರಿಗೆ ಶಿಕ್ಷೆಯಾಗುತ್ತದೆ ಎಂಬ ಬರವಸೆಯಲ್ಲಿದ್ದೆವು. ಆದರೆ ಜೈಲಲ್ಲಿ ಇಂತಹದ್ದೆನ್ನೆಲ್ಲಾ ನೋಡಿದರೆ ನಮಗೆ ಆಘಾತವಾಗುತ್ತಿದೆ. ಸರ್ಕಾರ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮೇಲೆ ಇಟ್ಟಿರುವ ನಂಬಿ ಹುಸಿಯಾಬಹುದಾ ಎಂಬ ಭಯ ಕಾಡುತ್ತಿದೆ ಎಂದು ಭಾವುಕರಾಗಿದ್ದಾರೆ. ವರದಿ: ವಿನಾಯಕ, ಚಿತ್ರದುರ್ಗ ನ್ಯೂಸ್18 ವರದಿಗಾರ None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.