ವೈರಲ್ ವಿಡಿಯೋದ ದೃಶ್ಯ ಅದೊಂದು ಅದ್ಭುತ ಲೋಕ, ಅಲ್ಲಿ ವಾಸಿಸುವವರೆಲ್ಲ ಮಾನವನೇ ಆದರೂ ಅಲ್ಲಿರುವುದು ಮಾನವನ ಅಂರ್ತಮುಖವಲ್ಲ ಬಹುಮುಖ. ಹಾಗಾದರೆ ಆ ಲೋಕ ಯಾವುದೆನ್ನುತ್ತೀರಾ, ಅದುವೇ ಸಾಮಾಜಿಕ ಜಾಲತಾಣ. ಮಾನವನ ಕೈ ಅಂಗಳದಲ್ಲಿರುವ ಈ ಸಾಮಾಜಿಕ ಜಾಲತಾಣವೆಂಬ (Social media) ಲೋಕದ ಬಳಕೆ ಹೆಚ್ಚಾಗುತ್ತಿದ್ದಂತೆ, ಖ್ಯಾತಿ (Famous) ಪಡೆಯಲು ಕಸರತ್ತು ನಡೆಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಕಸರತ್ತು ನಡೆಸಿ ಖ್ಯಾತಿಗೊಂಡವರ ನಡುವೆ ಖ್ಯಾತಿಗೊಳ್ಳಲು ಹುಚ್ಚು ಸಾಹಸದಿಂದ (Adventure) ಸಾವಿಗೀಡಾದವರ ಸಂಖ್ಯೆಯು ಏರಿಕೆಯಾಗುತ್ತಿದೆ. ಇದರ ನಡುವೆ ದೈತ್ಯಾಕಾರದ ಹೆಬ್ಬಾವೊಂದನ್ನು (Python) ಕೈಯಿಂದ ಹಿಡಿಯಲು ಹೋಗಿ ಗದ್ದೆಯಲ್ಲಿ ಬಿದ್ದು ಮಿಲಿಯನ್ ವೀವ್ಸ್ಗಳೊಂದಿಗೆ ರೈತ (Former) ಹುಡುಗಿಯೊಬ್ಬಳು ವಿಶ್ವಾದಾದ್ಯಂತ ಪ್ರಶಂಸೆಗೊಳಪಟ್ಟಿದ್ದಾಳೆ. ರೈತ ಹುಡುಗಿಯ ಧೈರ್ಯ ವಿಡಿಯೋದಲ್ಲಿ, ಕೆಸರುಗದ್ದೆ ಒಳಗೆ ಕೃಷಿ ಚಟುವಟಿಕೆ ಮಾಡುತ್ತಿರುವ ಹುಡುಗಿಯೊಬ್ಬಳಿಗೆ ತನ್ನ ಬಳಿ ಹೆಬ್ಬಾವೊಂದು ಚಲಿಸುತ್ತಿರುವುದು ಗಮನಕ್ಕೆ ಬರುತ್ತದೆ. ಹೆಬ್ಬಾವಿನ ಚಲನೆಯನ್ನು ಗಮನಿಸಿದ ರೈತ ಹುಡುಗಿಯು ಧೈರ್ಯದಿಂದ ಹಾವನ್ನು ಹಿಡಿಯಲು ಪ್ರಯತ್ನಿಸುತ್ತಾಳೆ. ಆದರೆ ಅವಳ ಕೈಯಿಂದ ಹಲವು ಬಾರಿ ತಪ್ಪಿಸಿಕೊಂಡ ಹೆಬ್ಬಾವು ಕೊನೆಗೂ ರೈತ ಹುಡುಗಿಯ ಕೈಗೆ ಸಿಗುವುದಿಲ್ಲ. ಇದನ್ನೂ ಓದಿ: ಏನ್ ಸ್ವಾಮಿ ಇದು! ಹೆಂಡತಿಯ ಅನೈತಿಕ ಸಂಬಂಧವನ್ನು ಬಯಲಿಗೆಳೆದ ಗಂಡನಿಗೇ 3 ತಿಂಗಳು ಜೈಲು? ಹುಡುಗಿಯ ಕೈಯಿಂದ ನುಳುಚಿಕೊಂಡ ದೈತ್ಯ ಹಾವು! ಹುಡುಗಿಯು ಹಾವನ್ನು ಹೊಲದಿಂದ ಓಡಿಸಲು ಬಯಸಿದ್ದು, ಆದರೆ ದೈತ್ಯಾಕಾರದ ಹೆಬ್ಬಾವು ತನ್ನ ಬಾಲದಿಂದ ನುಳುಚಿಕೊಳ್ಳುವ ಪ್ರಯತ್ನದಲ್ಲಿ ಪ್ರತಿ ಬಾರಿಯು ಯಶಸ್ವಿಯಾಗಿ ಹುಡುಗಿಯ ಕೈಯಿಂದ ತಪ್ಪಿಸಿಕೊಳ್ಳುತ್ತದೆ. ಹಾವನ್ನು ಹಿಡಿಯುವ ಪ್ರಯತ್ನದಲ್ಲಿ ಒಮ್ಮೆ ಹುಡುಗಿಯೆಡೆಗೆ ಕಚ್ಚಲು ಬರುವ ಹೆಬ್ಬಾವಿನಿಂದ ಹುಡುಗಿಯು ಅದೃಷ್ಟವಶಾತ್ ಪಾರಾಗುತ್ತಾಳೆ. ಹುಡುಗಿಯ ಧೈರ್ಯವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸಿಸಲ್ಪಡುತ್ತಿದೆ. ಸಾಮಾನ್ಯವಾಗಿ ಹೆಬ್ಬಾವುಗಳು ವಿಷಕಾರಿಯಲ್ಲದಿದ್ದರೂ, ಹುಡುಗಿ ಅದನ್ನು ಹಿಡಿಯಲು ಪದೇ ಪದೇ ಪ್ರಯತ್ನಿಸುತ್ತಿದ್ದಳು. ಕೊನೆಗೆ ಹಾವು ಹುಡುಗಿಯಿಂದ ದೂರ ಸರಿದಿದ್ದರಿಂದ ಆಕೆಗೆ ಹಿಡಿಯಲು ಸಾಧ್ಯವಾಗಲಿಲ್ಲ. 85.5 ಮಿಲಿಯನ್ಸ್ ವೀವ್ಸ್ ಸಾಮಾಜಿಕ ಜಾಲತಾಣದಲ್ಲಿ 85.5 ಮೀಲಿಯನ್ ವೀವ್ಸ್ಗಳೊಂದಿಗೆ ವೈರಲ್ ಆಗಿರುವ ವಿಡಿಯೋವನ್ನು @aartiyadav7082 ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಮೂರು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ 1.2 ಮಿಲಿಯನ್ ಲೈಕ್ಸ್ಗಳೊಂದಿಗೆ 11 ಸಾವಿರ ಜನರು ಹುಡುಗಿಯ ಸಾಹಸದ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಬ್ಬರಂತೂ ಈ ಹುಡುಗಿಯಷ್ಟು ಧೈರ್ಯವಿದ್ದರೆ ಸಾಕು ಎಂದರೆ, ಮತ್ತೊಬ್ಬರು ಭಾರತ ದೇಶ ಹೊಸಬರಿಗಲ್ಲ ಎನ್ನುತ್ತಾರೆ. ಹೀಗೆ ಹಲವಾರು ಜನರು ಹಲವು ವಿಭಿನ್ನ ರೀತಿಯ ಕಾಮೆಂಟ್ಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗೆ ಆ ಹುಡುಗಿ ಹೆಬ್ಬಾವನ್ನು ಹೊಲದಿಂದ ಹೊರಹಾಕುವ ಪ್ರಯತ್ನದಲ್ಲಿದ್ದಳೇ ಹೊರತು ಖ್ಯಾತಿಗಲ್ಲ ಎನ್ನಬಹುದು. ಆದರೆ ಆ ಹುಡುಗಿ ಮಾಡಲು ಹೊರಟಂತಹ ಸಾಹಸದಂತೆ, ಇನ್ನೂ ಹಲವು ಜನರು ಖ್ಯಾತಿಗಾಗಿ ತಮ್ಮ ಪ್ರಾಣವನ್ನೇ ಲೆಕ್ಕ ಹಾಕದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ವರದಿ: ಹೃತಿನ್ ಶೆಟ್ಟಿ, ನ್ಯೂಸ್18 ಕನ್ನಡ ಡಿಜಿಟಲ್ None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.