ಪ್ರತಿಭಾವಂತ ನಟಿ ಕೀರ್ತಿ ಸುರೇಶ್ (Actress Keerthy Suresh), ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದವರು. ಇದೀಗ ಹಿಂದಿಯ ಬೇಬಿ ಜಾನ್ (Baby John) ಚಿತ್ರದಲ್ಲೂ ನಟಿಸುವ ಮೂಲಕ ಬಹುಭಾಷಾ ತಾರೆಯಾಗಿ ಮಿಂಚಿದ್ದಾರೆ. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಮೇನಕಾ ಪುತ್ರಿ ಕೀರ್ತಿ ಸುರೇಶ್ ಮಹಾನಟಿಯಂತಹ ಬಯೋಪಿಕ್ ಚಿತ್ರಗಳಲ್ಲೂ ನಟಿಸಿ ಸೈ ಎಂದೆನ್ನಿಸಿಕೊಂಡವರು. ಹಲವಾರು ಹಿಟ್ ಚಿತ್ರಗಳನ್ನು ನೀಡಿ ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರಿದ್ದಾರೆ. ಬಾಲ್ಯದ ಗೆಳೆಯನ ಕೈ ಹಿಡಿದ ನಟಿ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವಂತೆಯೇ ವೈಯಕ್ತಿಕ ಜೀವನಕ್ಕೂ ಮಹತ್ವ ನೀಡಿ ತಮ್ಮ ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರೊಂದಿಗೆ ವೈವಾಹಿಕ ಜೀವನವನ್ನೂ ಆರಂಭಿಸಿದ್ದಾರೆ. ಡಿಸೆಂಬರ್ 12, 2024 ರಂದು ವಿವಾಹ ಜೀವನಕ್ಕೆ ಅಡಿ ಇಟ್ಟ ಜೋಡಿ ದಕ್ಷಿಣ ಭಾರತ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಗೋವಾದಲ್ಲಿ ಡೆಸ್ಟಿನೇಶನ್ ವಿವಾಹ ಮಾಡಿಕೊಂಡರು. ಹಲವಾರು ವರ್ಷಗಳಿಂದ ಆಂಟೋನಿ ಅವರ ಜೊತೆ ಡೇಟ್ ಮಾಡುತ್ತಿದ್ದ ಕೀರ್ತಿ ಎಲ್ಲಿಯೂ ಇದರ ಬಗ್ಗೆ ಕಿಂಚಿತ್ತು ಸುದ್ದಿಯೂ ಹಬ್ಬದಂತೆ ಜಾಗರೂಕತೆ ವಹಿಸಿದ್ದರು. ಇನ್ನೇನು ವಿವಾಹ ದಿನ ಸಮೀಪಿಸುತ್ತಿದ್ದಂತೆ ಗಲಟ್ಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಕೀರ್ತಿ ತಮ್ಮ ಪ್ರೇಮಕಥೆಯ ಬಗ್ಗೆ ರಿವೀಲ್ ಮಾಡಿದ್ದರು. ಕೀರ್ತಿಗಿಂತ ಆಂಟನಿ ಏಳು ವರ್ಷ ದೊಡ್ಡವರು ತಾವು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವಾಗಲೇ ತನ್ನ ಹಾಗೂ ಆಂಟನಿ ನಡುವಿನ ಸಂಬಂಧ ಚಿಗುರೊಡೆಯಿತು ಎಂಬುದನ್ನು ನಟಿ ನೆನಪಿಸಿಕೊಂಡಿದ್ದಾರೆ. ನಾನು 12 ನೇ ತರಗತಿಯಲ್ಲಿ ಕಲಿಯುತ್ತಿರಬೇಕಾದರೆ ನಾವು ಡೇಟಿಂಗ್ ಆರಂಭಿಸಿದ್ದೆವು, ಆಂಟನಿ ನನಗಿಂತ ಏಳು ವರ್ಷ ದೊಡ್ಡವರು ಎಂಬ ವಿಷಯವನ್ನು ಕೀರ್ತಿ ಬಹಿರಂಗಪಡಿಸಿದ್ದಾರೆ. ಎಲ್ಲಾ ರಿಲೇಶನ್‌ಶಿಪ್‌ನಂತೆ ನಮ್ಮದು ಏರಿಳಿತಗಳನ್ನು ಕಂಡಿದೆ. 5-6 ವರ್ಷ ನಾವು ತುಂಬಾ ಅಂತರ ಹೊಂದಿದ್ದೆವು. ನಾನು ಕಾಲೇಜಿನಲ್ಲಿರಬೇಕಾದರೆ ಅವರು ಕತಾರ್‌ನಲ್ಲಿ ಉದ್ಯೋಗದಲ್ಲಿದ್ದರು. ಹಲವಾರು ವರ್ಷಗಳ ನಂತರ ಆಂಟನಿ ಭಾರತಕ್ಕೆ ಮರಳಿ ಕೊಚ್ಚಿ ನಂತರ ಚೆನ್ನೈನಲ್ಲಿ ಬ್ಯುಸಿನೆಸ್ ಆರಂಭಿಸಿದರು. ದುಬೈನಲ್ಲಿ ತಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸುವ ಯೋಜನೆ ಕೂಡ ತಮ್ಮ ಪತಿಗಿದೆ ಎಂದು ಕೀರ್ತಿ ತಿಳಿಸಿದ್ದಾರೆ. ಆಂಟನಿ ಹಾಗೂ ತಮ್ಮ ರಿಲೇಶನ್‌ಶಿಪ್ ಕುರಿತು ಭಾವಾನತ್ಮಕವಾಗಿ ಹಂಚಿಕೊಂಡಿರುವ ಕೀರ್ತಿ, ಪ್ರತಿಯೊಬ್ಬ ಮಗಳಿಗೂ ತನ್ನ ತಂದೆ ಸೂಪರ್ ಹೀರೋ ಆಗಿರುತ್ತಾರೆ. ತನ್ನ ತಂದೆಯ ನಂತರ ಆಕೆಯ ಜೀವನದಲ್ಲಿ ಬರುವ ಸೂಪರ್ ಹೀರೊ ಆಕೆ ಕೈಹಿಡಿಯುವ ಜೀವನ ಸಂಗಾತಿ, ಈ ವಿಷಯದಲ್ಲಿ ನಾನು ಅದೃಷ್ಟವಂತೆ, ಏಕೆಂದರೆ ನನ್ನ ತಂದೆಯ ಬಹುತೇಕ ಎಲ್ಲಾ ಗುಣಗಳು ಆಂಟನಿಯಲ್ಲಿದೆ ಎಂದು ಪತಿಯನ್ನು ಹೊಗಳಿದ್ದಾರೆ. ಕೀರ್ತಿ ಹಾಗೂ ಆಂಟನಿ ವಿವಾಹ ಕಂಡ ಕನಸು ನೆರವೇರಿತು ಕೀರ್ತಿ ಹಾಗೂ ಆಂಟನಿ ವಿವಾಹ ಸಾಂಪ್ರದಾಯಿಕತೆ ಹಾಗೂ ಸಂಸ್ಕೃತಿಯ ಸಮ್ಮಿಶ್ರತೆಯಿಂದ ಕೂಡಿದ್ದು ಇಬ್ಬರಿಗೂ ಭಾವನಾತ್ಮಕ ಕ್ಷಣವಾಗಿತ್ತು. ನಮ್ಮ ಮದುವೆಯ ಬಗ್ಗೆ ನಾವು ಕನಸು ಕಂಡಿದ್ದೆವು ಹಾಗೆಯೇ ನಮ್ಮ ವಿವಾಹ ನಡೆದಿದೆ ಎಂದು ಕೀರ್ತಿ ಹೇಳಿದ್ದಾರೆ. ಹತ್ತಿರದ ಬಂಧು ಮಿತ್ರರು, ಸ್ನೇಹಿತರು ಹಾಗೂ ಚಿತ್ರ ನಟ ವಿಜಯ್ ಸೇರಿದಂತೆ ಕೆಲವೇ ಕೆಲವು ಆಹ್ವಾನಿತರು ಸೇರಿದ್ದ ಖಾಸಗಿ ಸಮಾರಂಭದಲ್ಲಿ ಕೀರ್ತಿ, ಆಂಟನಿ ಸತಿ ಪತಿಗಳಾದರು. ತಮ್ಮ ತಂದೆಯೊಂದಿಗಿನ ವಿಶೇಷ ಕ್ಷಣ ಕ್ರಿಶ್ಚಿಯನ್ ವಿವಾಹ ಸಂಪ್ರದಾಯದಲ್ಲಿ ವಧುವನ್ನು ಆಕೆಯ ತಂದೆ ಕೈಹಿಡಿದು ವಿವಾಹ ಸ್ಥಳಕ್ಕೆ ಕರೆತರುತ್ತಾರೆ. ಕೀರ್ತಿ ತಮ್ಮ ತಂದೆಯಲ್ಲಿ ಈ ಕುರಿತು ಕೇಳಿದಾಗ ಅವರ ತಂದೆ ಕೂಡಲೇ ಒಪ್ಪಿಕೊಂಡಿದ್ದರಂತೆ ಹಾಗೂ ನಾನಲ್ಲದೆ ಈ ವಿಧಿಯನ್ನು ಬೇರಾರೂ ಮಾಡಲು ಸಾಧ್ಯವಿಲ್ಲ ಎಂದು ನಗುತ್ತಾ ಸಮ್ಮತಿಸಿದರು ಎಂದು ಕೀರ್ತಿ ಹೇಳುತ್ತಾರೆ. ನನ್ನ ತಂದೆ ನನಗಾಗಿ ಈ ಪದ್ಧತಿಯನ್ನು ಒಪ್ಪಿಕೊಂಡಿದ್ದರು ಇದು ನನಗೆ ಇನ್ನಷ್ಟು ಖುಷಿ ನೀಡಿತು ಎಂದು ನಟಿ ಹೇಳಿದ್ದಾರೆ. ಕೀರ್ತಿ ಹಾಗೂ ಆಂಟನಿ 15 ವರ್ಷಗಳ ಕಾಲ ಪ್ರೀತಿಯಲ್ಲಿದ್ದರು ಹಾಗೂ ತಮ್ಮ ರಿಲೇಶನ್‌ಶಿಪ್‌ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ ಆದರೆ ಅವರ ಪ್ರೀತಿ ಗಟ್ಟಿಯಾಗಿತ್ತು. ಹೀಗಾಗಿ ಪ್ರೀತಿಸಿ ವಿವಾಹವಾಗಬೇಕು ಎಂದು ನಿರ್ಧರಿಸಿರುವ ಹಲವಾರು ಜೋಡಿಗಳಿಗೆ ಇವರ ಪ್ರೇಮ ಕಥೆ ಒಂದು ಮಾದರಿಯಾಗಿದೆ. ತಮ್ಮ ಪ್ರೇಮದ ಸವಿನೆನಪನ್ನು ಆಚರಿಸುವ ನಿಟ್ಟಿನಲ್ಲಿ ಕೀರ್ತಿ ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅವರ ವಿವಾಹ ಪ್ರೀತಿಯ ಆಚರಣೆ ಮಾತ್ರವಲ್ಲ ಎರಡೂ ಸಂಸ್ಕೃತಿ, ಸಂಪ್ರದಾಯಗಳ ಒಂದು ಸುಂದರ ಸಮ್ಮಿಶ್ರಣವಾಗಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.