ಸಾಂದರ್ಭಿಕ ಚಿತ್ರ ಹೊಟ್ಟೆಯ ಕೊಬ್ಬನ್ನು (Lose Belly Fat) ಕಡಿಮೆ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ. ಹೊಟ್ಟೆಯ ಕೊಬ್ಬು ನಮ್ಮಲ್ಲಿ ಅನೇಕರಿಗೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಹಾಗಂತ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂತೇನು ಇಲ್ಲ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ನಿಮಗೆ ಬೇಕಾಗಿರುವುದು ಸ್ವಲ್ಪ ಸ್ಥಿರತೆ, ಕಡಿಮೆ ಕ್ಯಾಲೋರಿ (Low Calorie) ಸೇವಿಸುವುದು ಮತ್ತು ಹೊಟ್ಟೆಯ ಕೊಬ್ಬನ್ನು ಬರ್ನ್ ಮಾಡುವುದಕ್ಕೆ ಸಹಾಯ ಮಾಡುವ ಸರಿಯಾದ ವ್ಯಾಯಾಮಗಳು. ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಂಡು ಸ್ಲಿಮ್ ಆಗಲು ಈ 5 ವ್ಯಾಯಾಮಗಳನ್ನು ಪ್ರಯತ್ನಿಸಿ ಮೌಂಟೆನ್ ಕ್ಲೈಂಬ್ ಮೌಂಟೆನ್ ಕ್ಲೈಂಬ್ ಎಂದರೆ ಪರ್ವತವನ್ನು ಹತ್ತುವುದು ಎಂದರ್ಥ, ಇದು ಒಂದು ಶಕ್ತಿಯುತ ವ್ಯಾಯಾಮವಾಗಿದ್ದು ಕ್ಯಾಲೋರಿಗಳನ್ನು ಸುಡಲು ಮತ್ತು ಹೃದಯ ಬಡಿತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ತೊಡೆದು ಹಾಕಲು ಇದು ಸೂಕ್ತವಾದ ವ್ಯಾಯಾಮವಾಗಿದೆ, ಏಕೆಂದರೆ ಇದು ನಿಮ್ಮ ಕೋರ್ ಅನ್ನು ಬಲಪಡಿಸುತ್ತದೆ. ಒಂದು ಮೊಣಕಾಲು ನಿಮ್ಮ ಎದೆಯ ಎತ್ತರಕ್ಕೆ ತರಬೇಕು, ನಂತರ ನೀವು ಸ್ಥಳದಲ್ಲಿಯೇ ನಿಂತು ಓಡುತ್ತಿರುವಂತೆ ತ್ವರಿತವಾಗಿ ಕಾಲುಗಳನ್ನು ಬದಲಾಯಿಸಿ. ಹೀಗೆ ಮಾಡುವಾಗ ನಿಮ್ಮ ಹೊಟ್ಟೆಯನ್ನು ಬಿಗಿಯಾಗಿ ಮತ್ತು ಬೆನ್ನನ್ನು ನೇರವಾಗಿರಿಸಿಕೊಳ್ಳಿ. ಪ್ಲ್ಯಾಂಕ್ಸ್ ಪ್ಲ್ಯಾಂಕ್ಸ್ ನಿರ್ದಿಷ್ಟವಾಗಿ ಹೊಟ್ಟೆಯ ಕೊಬ್ಬನ್ನು ಗುರಿಯಾಗಿಸಿಕೊಂಡಿಲ್ಲವಾದರೂ, ಅವು ಕೋರ್ ಶಕ್ತಿ, ಸ್ಥಿರತೆ ಮತ್ತು ಸಹಿಷ್ಣುತೆಯನ್ನು ಸುಧಾರಿಸುತ್ತವೆ. ಏರೋಬಿಕ್ ಚಟುವಟಿಕೆ, ತೂಕ ತರಬೇತಿ ಮತ್ತು ಜೀವನಶೈಲಿ ಮಾರ್ಪಾಡುಗಳನ್ನು ಒಳಗೊಂಡಿರುವ ಸಂಪೂರ್ಣ ಫಿಟ್ನೆಸ್ ದಿನಚರಿಗೆ ಸೇರಿಸಿದಾಗ ಪ್ಲ್ಯಾಂಕ್ಸ್ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಸೊಂಟದ ಸುತ್ತಳತೆ ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಇದನ್ನು ಪುಷ್-ಅಪ್ ಭಂಗಿಯಲ್ಲಿ ಪ್ರಾರಂಭಿಸಿ ಮತ್ತು ನಿಮ್ಮ ದೇಹವನ್ನು ತಲೆಯಿಂದ ಹಿಮ್ಮಡಿಯವರೆಗೆ ನೇರವಾಗಿ ಇರಿಸಿ. ನಿಮ್ಮ ಶಕ್ತಿ ಹೆಚ್ಚಿದಂತೆ ನೀವು ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳುವ ಸಮಯವನ್ನು ಕ್ರಮೇಣ ಹೆಚ್ಚಿಸಿ. ಬೈಸಿಕಲ್ ಕ್ರಂಚಸ್ ಬೈಸಿಕಲ್ ಕ್ರಂಚಸ್ ಹೊಟ್ಟೆಯ ಭಾಗವನ್ನು ಸ್ಲಿಮ್ ಮಾಡಲು ಸಹಾಯ ಮಾಡುತ್ತದೆ. ಬೈಸಿಕಲ್ ಕ್ರಂಚ್‌ನಲ್ಲಿ ನೀವು ಕಿಬ್ಬೊಟ್ಟೆಯ ಸ್ನಾಯುಗಳಿಗೆ ತರಬೇತಿ ನೀಡಿದಾಗ ನಿಮ್ಮ ಕೋರ್ ಸ್ನಾಯುಗಳು ಬಲಗೊಳ್ಳುತ್ತವೆ, ಅದು ನಿಮ್ಮ ಸ್ನಾಯುಗಳನ್ನು ಟೋನ್ ಮಾಡುತ್ತದೆ ಮತ್ತು ಬಿಗಿಗೊಳಿಸುತ್ತದೆ. ಇದನ್ನು ಮಾಡುವ ವಿಧಾನವೆಂದರೆ ನಿಮ್ಮ ಬೆನ್ನಿನ ಮೇಲೆ ವಿಶ್ರಾಂತಿ ಪಡೆಯುತ್ತಾ, ನಿಮ್ಮ ಎರಡು ಕೈಗಳನ್ನು ನಿಮ್ಮ ತಲೆಯ ಹಿಂದೆ ಇರಿಸಿ. ನಿಮ್ಮ ಕಾಲುಗಳು ಮತ್ತು ಭುಜಗಳನ್ನು ನೆಲದಿಂದ ಮೇಲಕ್ಕೆತ್ತಿ. ನಿಮ್ಮ ಬಲಗಾಲನ್ನು ವಿಸ್ತರಿಸುವಾಗ ನಿಮ್ಮ ಎಡ ಮೊಣಕಾಲಿನ ಬಳಿ ನಿಮ್ಮ ಬಲ ಮೊಣಕೈಯನ್ನು ತನ್ನಿ. ಪ್ರತಿ ಬದಿಯಲ್ಲಿ ಒಂದೊಂದಾಗಿ ಪರ್ಯಾಯವಾಗಿ ಮಾಡಿ. ಲೆಗ್ ರೈಸಸ್ ಲೆಗ್ ಲಿಫ್ಟ್ ಮಾಡುವಾಗ ನೀವು ಪ್ರತಿ ಕಾಲನ್ನು ಪ್ರತ್ಯೇಕವಾಗಿ ಅಥವಾ ಎರಡನ್ನೂ ಏಕಕಾಲದಲ್ಲಿ ಎತ್ತುವ ಆಯ್ಕೆಯನ್ನು ಹೊಂದಿರುತ್ತೀರಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಾಕಷ್ಟು ಪರಿಣಾಮಕಾರಿ ವ್ಯಾಯಾಮವಾಗಿದೆ. ಏಕೆಂದರೆ ನೀವು ನಿಮ್ಮ ಕಾಲುಗಳನ್ನು ಎತ್ತುವುದರಿಂದ ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ ಮತ್ತು ಅವುಗಳನ್ನು ಸಂಕುಚಿತಗೊಳಿಸಲು ಮತ್ತು ಹಿಗ್ಗಿಸಲು ಸಹಾಯ ಮಾಡುತ್ತವೆ. ನಿಮ್ಮ ಬೆನ್ನಿನ ಮೇಲೆ ಮಲಗಿ ನಿಮ್ಮ ಕಾಲುಗಳನ್ನು ನೇರವಾಗಿ ಇರಿಸಿ. ಬೆಂಬಲಕ್ಕಾಗಿ ನಿಮ್ಮ ಕೈಗಳನ್ನು ನಿಮ್ಮ ಸೊಂಟದ ಕೆಳಗೆ ಇರಿಸಿ. ನಿಮ್ಮ ಕಾಲುಗಳನ್ನು ನೇರವಾಗಿ ಚಾವಣಿಯ ಕಡೆಗೆ ಮೇಲಕ್ಕೆತ್ತಿ ನಂತರ ನಿಧಾನವಾಗಿ ಕೆಳಕ್ಕೆ ಇಳಿಸಿ, ಆದರೆ ಅವುಗಳು ನೆಲವನ್ನು ಮುಟ್ಟಬಾರದು. ಇದನ್ನು ಮಾಡುವಾಗ ನಿಮ್ಮ ಕಾಲುಗಳನ್ನು ನೇರವಾಗಿ ಇರಿಸಿ. ರಷಿಯನ್ ಟ್ವಿಸ್ಟ್ಸ್ ರಷಿಯನ್ ಟ್ವಿಸ್ಟ್ಸ್ ಇತರ ಕಿಬ್ಬೊಟ್ಟೆಯ ವ್ಯಾಯಾಮದಂತೆ ನಿಮ್ಮ ಕೋರ್ ಅನ್ನು ಸ್ಲಿಮ್ ಮಾಡಲು ಮತ್ತು ನಿಮ್ಮ ಸೊಂಟದ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಕಷ್ಟು ಹೃದಯರಕ್ತನಾಳದ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀವು ಆರೋಗ್ಯಕರ ತೂಕವನ್ನು ಸಹ ಪಡೆದುಕೊಳ್ಳುತ್ತೀರಿ. ನಿಮ್ಮ ಮೊಣಕಾಲುಗಳನ್ನು ಬಾಗಿಸಿ ಮತ್ತು ನಿಮ್ಮ ಪಾದಗಳನ್ನು ಚಪ್ಪಟೆಯಾಗಿರಿಸಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ, ಸ್ವಲ್ಪ ಹಿಂದಕ್ಕೆ ತಿರುಗಿಸಿ. ಎರಡೂ ಕೈಗಳಿಂದ ತೂಕ ಅಥವಾ ನೀರಿನ ಬಾಟಲಿಯನ್ನು ಹಿಡಿದುಕೊಳ್ಳಿ, ನಿಮ್ಮ ದೇಹವನ್ನು ತಿರುಗಿಸಿ ಇದರಿಂದ ತೂಕವು ಎರಡೂ ಬದಿಗಳಲ್ಲಿ ನೆಲದೊಂದಿಗೆ ಸಂಪರ್ಕವನ್ನು ಉಂಟು ಮಾಡುತ್ತದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.