ತೂಕ ಇಳಿಕೆ Weight Loss: ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ವ್ಯಕ್ತಿಯಲ್ಲಿ ಸ್ವಾಭಿಮಾನವನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸಾಧನೆಯ ಉತ್ತಮ ಅರ್ಥವನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಜೊತೆಗೆ ಆ ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸಹ ಸುಧಾರಿಸುತ್ತದೆ ಮತ್ತು ಹೊಸ ಅವಕಾಶಗಳನ್ನು ನೀಡುತ್ತದೆ. ಹೀಗೆ ತಮ್ಮ ದೇಹದಲ್ಲಿನ ತೂಕವನ್ನು ಇಳಿಸಿಕೊಂಡು ಫಿಟ್ ಆಂಡ್ ಫೈನ್ ಆದವರ ಕಥೆಗಳು ನಮ್ಮ ಸುತ್ತಮುತ್ತಲೂ ತುಂಬಾನೇ ನೋಡಲು ಸಿಗುತ್ತವೆ. ಎರಡು ವರ್ಷಗಳಲ್ಲಿ 54 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ.. ಮೆರೆಡಿತ್ ಹಟ್ಸನ್, ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಕೇವಲ ಎರಡೇ ಎರಡು ವರ್ಷಗಳಲ್ಲಿ 256 ಪೌಂಡ್‌ಗಳಿಂದ 136 ಪೌಂಡ್‌ಗಳಿಗೆ ಎಂದರೆ 116.1 ಕೆಜಿಯಿಂದ 61.6 ಕೆಜಿ ತೂಕಕ್ಕೆ ಇಳಿಸಿಕೊಂಡಿರುವುದರ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Red Ant Chutney: ಬಾಯಿ ನೀರೂರಿಸುತ್ತೆ ಮಲೆನಾಡಿನ ಚಗಳಿ ಚಟ್ನಿ! ನೋಡೋಕೆ ಒಂಥರಾ ಅನ್ಸಿದ್ರೂ ಕೆಂಪಿರುವೆ ಚಟ್ನಿ ಸಖತ್ ಟೇಸ್ಟ್! ‘ನೈಸರ್ಗಿಕವಾಗಿಯೇ’ ತಮ್ಮ ತೂಕವನ್ನು ಇಳಿಸಿಕೊಂಡಿರುವುದರ ಬಗ್ಗೆ ಇವರು ಬರೆದುಕೊಂಡಿದ್ದು, ಇವರ ಸಾಮಾಜಿಕ ಮಾಧ್ಯಮದ ಫಾಲೋವರ್‌ಗಳು ಇದನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಇತ್ತೀಚಿನ ಪೋಸ್ಟ್‌ನಲ್ಲಿ, ಮೆರೆಡಿತ್ ತಮ್ಮ 120 ಪೌಂಡ್-ತೂಕ ನಷ್ಟದ ಬಗ್ಗೆ (ಸುಮಾರು 54.5 ಕೆಜಿ) ಮತ್ತು ಅದು ತನ್ನ ಜೀವನದ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿತು ಮತ್ತು ಅದು ‘ಅವಳ ನೋಟಕ್ಕೆ ಯಾವುದೇ ಸಂಬಂಧವಿಲ್ಲ’ ಎಂದು ಸಹ ಹೇಳಿಕೊಂಡಿದ್ದಾರೆ. ಹೆಚ್ಚು ಶಕ್ತಿ ಮತ್ತು ಕಡಿಮೆ ಆರೋಗ್ಯ ಸಮಸ್ಯೆಗಳು ನನ್ನ ತೂಕ ಇಳಿಸಿಕೊಳ್ಳುವ ಪ್ರಯಾಣವನ್ನು ಶುರು ಮಾಡುವ ಮೊದಲು, ನಾನು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದೆ ಮತ್ತು ಭಯಾನಕ ಮೈಗ್ರೇನ್, ದೇಹದ ನೋವು ಮತ್ತು ಕಡಿಮೆ ಶಕ್ತಿಯೊಂದಿಗೆ ಹೋರಾಡಿದೆ. ಈಗ, ನಾನು ತುಂಬಾನೇ ಶಕ್ತಿಯುತವಾಗಿದ್ದೇನೆ, ಅಲ್ಲದೆ ಹೊಸ ನೆನಪುಗಳನ್ನು ಮಾಡಿಕೊಳ್ಳುತ್ತಿದ್ದೇನೆ, ಇದು ನನಗೆ ನಾನು ಪ್ರೀತಿಸುವವರೊಂದಿಗೆ ಹೆಚ್ಚು ಪ್ರಸ್ತುತವಾಗಿರಲು ತುಂಬಾನೇ ಸಹಾಯ ಮಾಡುತ್ತಿದೆ ಅಂತ ಅವರು ಹೇಳಿದ್ದಾರೆ. ಜೀವಂತ ಮತ್ತು ಉತ್ಸಾಹದ ಭಾವನೆ ಆಗಿನ ಜೀವನವು ದುಡಿಯುವುದು, ಪಾರ್ಟಿ ಮಾಡುವುದು, ಟಿವಿ ನೋಡುವುದು ಮತ್ತು ಆಹಾರದಲ್ಲಿ ತೊಡಗಿಸಿಕೊಳ್ಳುವುದು, ಮತ್ತು ಈಗ ಪ್ರತಿ ದಿನವೂ ಹೊಸ ಸಾಹಸವಾಗಿದೆ. ಹೊಸ ವಿಷಯಗಳನ್ನು ಪ್ರಯತ್ನಿಸುವುದರಲ್ಲಿ, ಹೊಸ ಸ್ಥಳಗಳನ್ನು ನೋಡುವುದರಲ್ಲಿ, ಹೊಸ ಜನರನ್ನು ಭೇಟಿಯಾಗುವುದರಲ್ಲಿ ಮತ್ತು ಸದಾ ಕಾಲ ಹೆಚ್ಚು ಸಕ್ರಿಯವಾಗಿರುವುದು ತುಂಬಾನೇ ಸಂತೋಷ ತಂದಿದೆ. ಒಟ್ಟಾಗಿ ಹೇಳುವುದಾದರೆ, ಇದು ನನಗೆ ಮತ್ತೆ ಜೀವಂತವಾದ ಅನುಭವವನ್ನು ನೀಡಿದೆ ಮತ್ತು ಹೆಚ್ಚು ಉತ್ಸುಕರಾಗಿರಲು ಸಹ ಸಹಾಯ ಮಾಡುತ್ತಿದೆ. ವೃತ್ತಿಯಲ್ಲಿ ಬದಲಾವಣೆ ನಾನು ಸುರಕ್ಷಿತವಾಗಿರುವ ಬದಲು ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ನಾನು ಇರುವ ವೃತ್ತಿಜೀವನವು ದೇವರು ನನಗೆ ನಿಗದಿಪಡಿಸಿದ ಮಾರ್ಗವಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ನನ್ನ ಹೃದಯವನ್ನು ಆಲಿಸಿದೆ, ಕೇಶ ವಿನ್ಯಾಸಕಿಯಾಗಿ ನನ್ನ ವೃತ್ತಿಜೀವನವನ್ನು ತ್ಯಜಿಸಿದೆ, ನಾನು ಉಳಿಸಿದ ಪ್ರತಿ ಡಾಲರ್ ಅನ್ನು ನನ್ನ ಕನಸಿನಲ್ಲಿ ಹೂಡಿಕೆ ಮಾಡಿದೆ ಮತ್ತು ನನ್ನ ಫಿಟ್ನೆಸ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. 2.5 ವರ್ಷಗಳಲ್ಲಿ, ಇದು 3,000ಕ್ಕೂ ಹೆಚ್ಚು ಜನರ ಜೀವನವನ್ನು ಬದಲಾಯಿಸಿದೆ, ಜೀವನದಲ್ಲಿ ಉದ್ದೇಶವನ್ನು ಕಂಡುಕೊಳ್ಳಲು ಇದು ನನಗೆ ಸಹಾಯ ಮಾಡಿತು ಅಂತ ಹೇಳುತ್ತಾರೆ. ಹೆಚ್ಚು ಸ್ವತಂತ್ರಳಾಗಿದ್ದೇನೆ ನಾನು ಏಕಾಂಗಿಯಾಗಿರುವ ಯಾವುದೇ ಸಮಯದಲ್ಲಿ, ನಾನು ಖಿನ್ನತೆಗೆ ಒಳಗಾಗುತ್ತೇನೆ ಮತ್ತು ಆತಂಕದಿಂದ ಉಸಿರುಗಟ್ಟಿದಂತಾಗುತ್ತಿತ್ತು. ಇದು ನನ್ನ ಸಂತೋಷಕ್ಕಾಗಿ ಇತರರ ಮೇಲೆ ಹೆಚ್ಚು ಅವಲಂಬಿತವಾಗುವಂತೆ ಮಾಡಿತ್ತು. ಈಗ, ನಾನು ಬಹಿರಂಗವಾಗಿ ಸ್ವತಂತ್ರಳಾಗಿದ್ದೇನೆ, ನನ್ನ ಸಮಯಕ್ಕಿಂತ ಹೆಚ್ಚೇನೂ ಪ್ರೀತಿಸುವುದಿಲ್ಲ ಮತ್ತು ಪ್ರಪಂಚದಾದ್ಯಂತ ಒಂದು ದಿನ ಏಕಾಂಗಿ ಪ್ರವಾಸವನ್ನು ಮಾಡುವ ಗುರಿಯನ್ನು ಸಹ ಹೊಂದಿದ್ದೇನೆ ಅಂತ ಮೆರೆಡಿತ್ ಹಟ್ಸನ್ ಹೇಳುತ್ತಾರೆ. ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಮೆರೆಡಿತ್ ಹಟ್ಸನ್ ಅವರು “ನಾನು ಬೇಗನೆ ಕೋಪಗೊಳ್ಳುತ್ತಿದ್ದೆ ಮತ್ತು ನನ್ನ ಭಾವನೆಗಳನ್ನು ನಿರ್ವಹಿಸಲು ಹೆಣಗಾಡುತ್ತಿದ್ದೆ. ಆದರೆ ಈಗ, ನಾನು ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದೇನೆ. ಹೆಚ್ಚಿನ ತಾಳ್ಮೆ ಮತ್ತು ಮುನ್ನುಗ್ಗುವ ಹೃದಯವನ್ನು ಹೊಂದಿದ್ದೇನೆ, ಇದು ದೇವರೊಂದಿಗೆ ಮತ್ತು ನನ್ನ ಜೀವನದಲ್ಲಿ ಪ್ರತಿಯೊಬ್ಬರೊಂದಿಗೆ ನಿಕಟ ಸಂಬಂಧವನ್ನು ನಿರ್ಮಿಸಲು ನನಗೆ ಸಹಾಯ ಮಾಡುತ್ತಿದೆ” ಅಂತ ಹೇಳುತ್ತಾರೆ. ಇದನ್ನೂ ಓದಿ: Red-Hot Object: ಬಾಹ್ಯಾಕಾಶದಿಂದ ಭೂಮಿಗೆ ಬಿದ್ದ ಬರೋಬ್ಬರಿ 500 ಕೆಜಿ ತೂಕದ ಉಂಗುರಾಕಾರದ ವಸ್ತು! ಬೆಚ್ಚಿ ಬಿದ್ದ ಹಳ್ಳಿಗರು ಇನ್ನು ಯಾವುದಕ್ಕೂ ಹೆದರುವುದಿಲ್ಲ ನಾನು ಇನ್ನು ಮುಂದೆ ಭಯದ ಹಿಂದೆ ಅಡಗಿಕೊಳ್ಳುವುದಿಲ್ಲ ಮತ್ತು ಹಿಂದಿನ ದಿನಕ್ಕಿಂತ ಉತ್ತಮವಾಗಿರಲು ನಿರಂತರವಾಗಿ ಪ್ರಯತ್ನ ಪಡುತ್ತೇನೆ. ನಾನು ಹೊಸ ಅವಕಾಶಗಳನ್ನು ಪ್ರಶ್ನಿಸುವ ಬದಲು ಕಣ್ಣು ಮಿಟುಕಿಸದೆ ‘ಐ ವಿಶ್’ ಎಂದು ಹೇಳುತ್ತೇನೆ. ಅದೊಂದೇ ನನ್ನ ಬದುಕನ್ನು ಹಲವು ರೀತಿಯಲ್ಲಿ ಬದಲಾಯಿಸಿದೆ ಅಂತ ಮೆರೆಡಿತ್ ಹೇಳುತ್ತಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.