ಸಿರಿಯಾದ ಡಮಾಸ್ಕಸ್ ಉಪನಗರವಾದ ಮಜ್ಜೆ ಮೇಲೆ ಇಸ್ರೇಲ್ ದಾಳಿ ಡಮಾಸ್ಕಸ್: ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್-ಶಾಮ್ (Hayat Tahrir al-Sham) ನೇತೃತ್ವದ ಬಂಡುಕೋರ ಪಡೆಗಳು ಭಾನುವಾರ ಸಿರಿಯಾ (Syria) ರಾಜಧಾನಿ ಡಮಾಸ್ಕಸ್ (Damascus) ನಗರವನ್ನು ವಶಕ್ಕೆ ಪಡೆದ ನಂತರ ಇಸ್ರೇಲ್ (Israel) ದೇಶದ ಸೇನಾ ಪಡೆಗಳು ಡಮಾಸ್ಕಸ್ ಬಳಿಯ ವಾಯು ರಕ್ಷಣಾ ನೆಲೆಗಳು (Defense base) ಮತ್ತು ಯುದ್ಧಸಾಮಗ್ರಿ ಡಿಪೋಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಡಮಾಸ್ಕಸ್ ಬಳಿಯ ವಾಯು ರಕ್ಷಣಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ಬಂಡುಕೋರ ಪಡೆಗಳು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ನಂತರ, ಇಸ್ರೇಲ್ ಗಡಿಯಾದ ಗೋಲನ್ ಹೈಟ್ಸ್‌ನ ಪಕ್ಕದಲ್ಲಿರುವ ನೈಋತ್ಯ ಸಿರಿಯಾದಲ್ಲಿನ ಸೇನಾರಹಿತ ಬಫರ್ ವಲಯಕ್ಕೆ ವಿಶ್ವ ಸಂಸ್ಥೆಯ ಶಾಂತಿಪಾಲಕರಿಗೆ ಸಹಾಯ ಮಾಡಲು ಪಡೆಗಳನ್ನು ನಿಯೋಜಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದ್ದು, ಇದಾದ ಕೆಲವೇ ಸಮಯದಲ್ಲಿ ಡಮಾಸ್ಕಸ್ ಬಳಿಯ ವಾಯು ರಕ್ಷಣಾ ನೆಲೆಗಳ ಮೇಲೆ ದಾಳಿ ಮಾಡಿದೆ. ಡಮಾಸ್ಕಸ್‌ನಲ್ಲಿ ಕರ್ಫ್ಯೂ ಘೋಷಣೆ ಇಸ್ಲಾಮಿಸ್ಟ್ ನೇತೃತ್ವದ ಬಂಡುಕೋರರು ಸಿರಿಯಾವನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿದ್ದಂತೆ, ಅವರ ದಾಳಿಯನ್ನು ಹಿಮ್ಮೆಟ್ಟಿಸಲು ಶಾಂತಿಪಾಲಕರಿಗೆ ಸಹಾಯ ಮಾಡಲು ಯುಎನ್ ಗಸ್ತು ಬಫರ್ ವಲಯಕ್ಕೆ ತನ್ನ ಸೈನಿಕರು ಪ್ರವೇಶಿಸಿದ್ದಾರೆ ಎಂದು ಇಸ್ರೇಲ್ ಈಗಾಗಲೇ ಘೋಷಿಸಿತ್ತು. ಇನ್ನು ಇಸ್ರೆಲ್ ದಾಳಿಯ ವೇಳೆ ಸಿರಿಯನ್ ಬಂಡುಕೋರ ಪಡೆಗಳು ಡಮಾಸ್ಕಸ್‌ನಲ್ಲಿ ಸ್ಥಳೀಯ ಸಮಯ ಸಂಜೆ 4 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಘೋಷಿಸಿದವು. ಆದರೆ ಇಸ್ರೇಲಿ ಪಡೆಗಳು “ಬಫರ್ ವಲಯವನ್ನು ಸಂರಕ್ಷಿಸಲು ಮತ್ತು ಇಸ್ರೇಲ್ ಅನ್ನು ರಕ್ಷಿಸಲು ಅಗತ್ಯವಿರುವವರೆಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ” ಎಂದು ಹೇಳಿಕೆ ನೀಡಿದ್ದು, ಆದರೆ ಇಸ್ರೇಲಿ ಮಿಲಿಟರಿ “ಸಿರಿಯಾದಲ್ಲಿನ ಆಂತರಿಕ ಘಟನೆಗಳೊಂದಿಗೆ ಮಧ್ಯಪ್ರವೇಶಿಸುತ್ತಿಲ್ಲ” ಎಂದು ಹೇಳಿದೆ. ಇದನ್ನು ಓದಿ: ಬಂಡುಕೋರರ ಅಟ್ಟಹಾಸಕ್ಕೆ ಸಿರಿಯಾ ಅಲ್ಲೋಲ ಕಲ್ಲೋಲ! ಈ ಕ್ಷಣದ Top 10 ಬೆಳವಣಿಗೆಗಳು ಹೀಗಿದೆ 24 ವರ್ಷಗಳ ಅಸ್ಸಾದ್ ಆಡಳಿತ ಅಂತ್ಯ! ಸಿರಿಯಾವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡ ಬಂಡುಕೋರರು! ಸಿರಿಯಾ ದೇಶದಲ್ಲಿ ಸರ್ಕಾರ ಮತ್ತು ಬಂಡಾಯಕೋರರ (Syria Crisis) ಮಧ್ಯೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅಂತರ್ಯುದ್ಧ ಕೊನೆಯ ಹಂತಕ್ಕೆ ತಲುಪಿದೆ. ಇಸ್ಲಾಮಿ ಒಕ್ಕೂಟದ ಹಯಾತ್ ತಹ್ರೀರ್ ಅಲ್-ಶಾಮ್ (Hayat Tahrir al-Sham) ನೇತೃತ್ವದ ಬಂಡುಕೋರ ಪಡೆಗಳು ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ (Bashar Al-Assad) ಅವರಿಂದ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅಸ್ಸಾದ್ ಆಡಳಿತದಿಂದ ಸಿರಿಯಾ ಈಗ ‘ವಿಮೋಚನೆ’ ಹೌದು.. ಅಸ್ಸಾದ್ ಆಡಳಿತದಿಂದ ಸಿರಿಯಾ ಈಗ ‘ವಿಮೋಚನೆ’ಗೊಂಡಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ಸಿರಿಯಾ ಸೇನೆಯು ಬಂಡುಕೋರರಿಗೆ ಶರಣಾಗಿದೆ. ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದ ಪಲಾಯನಗೈದಿದ್ದಾರೆ. ಸಿರಿಯಾದ ಸೇನಾ ಕಮಾಂಡರ್ ಅಸ್ಸಾದ್ ಸರ್ಕಾರದ ಅಂತ್ಯವನ್ನು ಘೋಷಿಸಿದ್ದಾರೆ. ಅತ್ತ, ಬಶರ್ ಅಲ್-ಅಸ್ಸಾದ್ ರಾಜಧಾನಿಯಿಂದ ಪಲಾಯನ ಮಾಡಿದ್ದಾರೆ ಎಂದು ಸಿರಿಯನ್ ಬಂಡುಕೋರರು ಭಾನುವಾರ ಘೋಷಿಸಿದ್ದಾರೆ. ಪೊಲೀಸ್ ಕೇಂದ್ರ ಕಚೇರಿಯಿಂದ ಹಿಡಿದು ಟಿವಿ ನೆಟ್‌ವರ್ಕ್‌ವರೆಗೆ ಇಡೀ ದೇಶ ಈಗ ಬಂಡುಕೋರರ ಹಿಡಿತದಲ್ಲಿದೆ. ಡಮಾಸ್ಕಸ್‌ನ ಬೀದಿಗಳಲ್ಲಿ ಬಂಡುಕೋರರ ಫಿರಂಗಿಗಳು ಮತ್ತು ಟ್ಯಾಂಕ್‌ಗಳು ಪ್ರತಿಧ್ವನಿಸುತ್ತಿವೆ. ಮಿಲಿಟರಿ ಕಾರ್ಯಾಚರಣೆ ಕಮಾಂಡ್ ಟೆಲಿಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದರಲ್ಲಿ, ‘ನಾವು ಡಮಾಸ್ಕಸ್ ನಗರವನ್ನು ಸರ್ವಾಧಿಕಾರಿ ಬಶರ್ ಅಲ್-ಅಸ್ಸಾದ್‌ನಿಂದ ವಿಮೋಚನೆಗೊಳಿಸಿದ್ದೇವೆ ಎಂದು ಘೋಷಿಸುತ್ತೇವೆ’ ಎಂದು ಬರೆಯಲಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಸ್ಥಳಾಂತರಗೊಂಡ ಜನರಿಗೆ, ಫ್ರೀ ಸಿರಿಯಾ ನಿಮಗಾಗಿ ಕಾಯುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು, ರಾಜಧಾನಿಯನ್ನು ಪ್ರವೇಶಿಸಿದ್ದ ಬಂಡುಕೋರರು ಡಮಾಸ್ಕಸ್‌ನ ಉತ್ತರದಲ್ಲಿರುವ ಕುಖ್ಯಾತ ಸೈದ್ನಾಯಾ ಮಿಲಿಟರಿ ಜೈಲಿನ ನಿಯಂತ್ರಣವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು. ಮತ್ತೊಂದೆಡೆ, ಜನರಿಂದ ಆಯ್ಕೆಯಾದ ಯಾವುದೇ ನಾಯಕತ್ವದೊಂದಿಗೆ ಸಹಕರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಭಾನುವಾರ ಬೆಳಿಗ್ಗೆ ಧ್ವನಿಮುದ್ರಿತ ಸಂದೇಶದಲ್ಲಿ ತಿಳಿಸಿದ್ದಾರೆ. ನಾವು ಅಧಿಕಾರ ಹಸ್ತಾಂತರಕ್ಕೆ ಸಿದ್ಧ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. None
Popular Tags:
Share This Post:
Chaithra Kundapur: ಚೈತ್ರಾ ಕಣ್ಣೀರಿಗೆ ದೊಡ್ಮನೆ ದೇವರು ಸ್ಪಂದಿಸಿದ್ರಾ? ಬಲಗಡೆಯಿಂದ ಹೂ ಬಿದ್ದೇ ಬಿಡ್ತು
December 24, 2024What’s New
Spotlight
Today’s Hot
CT Ravi Release: ಸಿ.ಟಿ. ರವಿ ರಿಲೀಸ್! ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದ ಪೊಲೀಸರು
- By Sarkai Info
- December 20, 2024
Featured News
Latest From This Week
Subscribe To Our Newsletter
No spam, notifications only about new products, updates.