NEWS

Game Changer: ಇಬ್ಬರು ಅಭಿಮಾನಿಗಳ ಸಾವು! ರಾಮ್​ ಚರಣ್​​ರನ್ನ ಅರೆಸ್ಟ್ ಮಾಡಿ ಅಂತಿದ್ದಾರೆ ಜನ, ಪವನ್​ ಕಲ್ಯಾಣ್ ಹೇಳಿದ್ದೇನು?

ಅಲ್ಲು ಅರ್ಜುನ್ (Allu Arjun) ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದ್ದು, ಟಾಲಿವುಡ್​ ಟಾಪ್​ ಹೀರೋಗಳಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗ್ತಿದೆ. ಜನವರಿ 4ರಂದು ಗೇಮ್ ಚೇಂಜರ್ (Game Changer) ಕಾರ್ಯಕ್ರಮ ನಡೆದಿತ್ತು. ನಟ ರಾಮ್​ ಚರಣ್ (Ram Charan)​ ಅಭಿನಯದ ಗೇಮ್ ಚೇಂಜರ್ ಸಿನಿಮಾ ಇವೆಂಟ್​ಗೆ ಆಂಧ್ರ ಡಿಸಿಎಂ ಪವನ್​ ಕಲ್ಯಾಣ್ (Pawan Kalyan) ಕೂಡ ಆಗಮಿಸಿದ್ರು. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಆಗಮಿಸಿದ್ರು. ಇವೆಂಟ್ ಮುಗಿಸಿ ಮನೆಗೆ ತೆರಳುವಾಗ ಅಪಘಾತದಲ್ಲಿ ಇಬ್ಬರೂ ಯುವಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಡಿಸಿಎಂ ಪವನ್ ಕಲ್ಯಾಣ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಇವೆಂಟ್​ಗೆ ಹೋಗಿದ್ದ ಇಬ್ಬರು ಯುವಕರ ಸಾವು ಆವಾ ಮಣಿಕಂಠ (23) ಹಾಗೂ ಚರಣ್ (22) ಎಂಬ ಇಬ್ಬರು ಯುವಕರು ರಾಮ್​ ಚರಣ್ ಹಾಗೂ ಪವನ್ ಕಲ್ಯಾಣ್ ನೋಡಲು​ ಕಾರ್ಯಕ್ರಮಕ್ಕೆ ಬಂದಿದ್ರು. ಇವೆಂಟ್ ಮುಗಿಸಿಕೊಂಡು ಮನೆಗೆ ಹೋಗ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ರಾಜಮಂಡ್ರಿಯಿಂದ-ಕಾಕಿನಾಡ ಮುಖ್ಯರಸ್ತೆಯ ಎಡಿಬಿ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ವ್ಯಾನ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ರು. ಅವರನ್ನ ಆಂಬ್ಯುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಒಬ್ಬರು ಯುವಕರು ಕಾಕಿನಾಡ ಜಿಲ್ಲೆಯ ಗೈಗೋಳುಪಾಡು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಪವನ್ ಕಲ್ಯಾಣ್ ಪ್ರತಿಕ್ರಿಯೆ ಯುವಕರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಯುವಕರ ಸಾವು ದುಃಖ ತಂದಿದೆ. ಮೃತರ ಕುಟುಂಬಕ್ಕೆ ಜನಸೇನಾ ಪಕ್ಷದ ವತಿಯಿಂದ 5 ಲಕ್ಷ ರೂಪಾಯಿ ಹಾಗೂ ಸರಕಾರದಿಂದ ಸೂಕ್ತ ನೆರವು ನೀಡಲು ವ್ಯವಸ್ಥೆ ಮಾಡಬೇಕು ಎಂದು ಕಚೇರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ನಿರ್ಮಾಪಕರಿಂದ 5 ಲಕ್ಷ ಪರಿಹಾರ ಘೋಷಣೆ ಸಿನಿಮಾ ಇವೆಂಟ್​ಗೆ ಬಂದು ಸಾವನ್ನಪ್ಪಿದ ಯುವಕರ ಬಗ್ಗೆ ನಿರ್ಮಾಪಕ ದಿಲ್ ರಾಜು ಕೂಡ ಪ್ರತಿಕ್ರಿಯಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. YCP ವಿರುದ್ಧ ಪವನ್ ಟೀಕೆ ರಸ್ತೆ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಪವನ್, ಹಿಂದಿನ YCP ಸರ್ಕಾರವನ್ನು ಟೀಕಿಸಿದ್ರು. “ಕಾಕಿನಾಡ-ರಾಜಮಹೇಂದ್ರವರಂ ನಗರಗಳ ನಡುವಿನ ಪ್ರಯಾಣಕ್ಕೆ ಎಡಿಬಿ ರಸ್ತೆ ಬಹಳ ಮುಖ್ಯವಾದ ರಸ್ತೆಯಾಗಿದೆ. ಹಿಂದಿನ ಸರಕಾರ ಈ ರಸ್ತೆಯ ವಿಸ್ತರಣೆ, ಪುನರ್ ನಿರ್ಮಾಣದ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಕನಿಷ್ಠ ನಿರ್ವಹಣೆ ಕಾಮಗಾರಿಯನ್ನೂ ಕೈಗೊಂಡಿಲ್ಲ. ಸರಿಯಾದ ವಿದ್ಯುತ್ ದೀಪಗಳೂ ಇಲ್ಲ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಿವೆ ಎಂದಿದ್ದಾರೆ. ಇದನ್ನೂ ಓದಿ: Game Changer-Pawan Kalyan: ಚಿಕ್ಕಪ್ಪನ ಮುಂದೆ ಕೈ ಕಟ್ಟಿ ನಿಂತ ರಾಮ್​ ಚರಣ್​, ರಾಜಕೀಯದ ಅಸಲಿ ಗೇಮ್​ ಚೇಂಜರ್ ಪವನ್ ಕಲ್ಯಾಣ್ ಅಂದ್ರು ಗ್ಲೋಬಲ್ ಸ್ಟಾರ್! ದಿ: ರಾಮ್​ ಚರಣ್​​ನನ್ನು ಬಂಧಿಸಿ ಎಂದ ಜನ ಸೋಷಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ್ ವಿರುದ್ಧ ಕೂಡ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಸಂದ್ಯಾ ಥಿಯೇಟರ್ ಘಟನೆಯಲ್ಲಿ ಅಲ್ಲು ಅರ್ಜುನ್ ಮಾಡಿದ್ದು ತಪ್ಪು ಎಂದಾದ್ರೆ ರಾಮ ಚರಣ್​ ಮಾಡಿದ್ದು ತಪ್ಪು ಎಂದು ನೆಟ್ಟಿಗರು. ಇಬ್ಬರು ಅಭಿಮಾನಿಗಳು ಸತ್ತಿದ್ರು ರಾಮಚರಣ್ ಮೌನವಾಗಿದ್ದಾರೆ. ಇನ್ನು ಕೆಲವರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ರಾಮ್ ಚರಣ್ ಅವರನ್ನು ಕೂಡ ಅರೆಸ್ಟ್ ಮಾಡಿ ಎಂದು ಕೆಲವರು ಕಮೆಂಟ್ ಮಾಡ್ತಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.