NEWS

Max Movie: ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್! ಯಾರು ಆ ಖಳ ನಾಯಕಿ?

ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್; ಇದನ್ನ ಮಾಡಿರೊದು ಯಾರ್‌ ಗೊತ್ತಾ? ಆ ಸೀಕ್ರೆಟ್ ಇಲ್ಲಿದೆ ಓದಿ! ಮ್ಯಾಕ್ಸ್ ಚಿತ್ರ (Max Movie) ಒಂದು ರಾತ್ರಿಯಲ್ಲಿ ನಡೆಯೋ ಒಂದು ಸಿಂಪಲ್ ಕಥೆಯ ಚಿತ್ರವೇ ಆಗಿದೆ. ಈ ಸಿನಿಮಾದಲ್ಲಿ ಹಲವು ಪಾತ್ರಗಳೂ ಇವೆ. ಆಯಾ ಪಾತ್ರದ ಖದರ್ ಬೇರೇನೆ ಇದೆ. ಇಡೀ ಕಥೆಗೆ ನಾಯಕಿಯ (Heroine) ಅವಶ್ಯಕತೆ ಇಲ್ವೇ ಇಲ್ಲ. ಆ ಕಾರಣಕ್ಕೇನೆ ಈ ಚಿತ್ರದಲ್ಲಿ ನೋ ಲವ್, ನೋ ರೋಮ್ಯಾನ್ಸ್ ಅಂತಲೇ ಹೇಳಬಹುದು. ಈ ಒಂದು ವಿಚಾರವನ್ನ ಸ್ವತಃ ಸುದೀಪ್ ಹೇಳಿಕೊಂಡಾಗಿದೆ. ಆದರೆ, ಈ ಚಿತ್ರದಲ್ಲಿ ವಿಲನ್ (Villain) ಇಲ್ಲ ಅಂತ ಹೇಳೋಕೆ ಆಗೋದಿಲ್ಲ. ವಿಲನ್ ಇಲ್ಲದೇ ಇದ್ರೆ ಹೀರೋಗೆ (Hero) ಬೆಲೆನೂ ಇರೋದಿಲ್ಲ ಬಿಡಿ. ಹಾಗೆ ಈ ಒಂದು ಚಿತ್ರದಲ್ಲಿ ವಿಲನ್ ಇದ್ದಾರೆ. ಆ ವಿಲನ್ ಲೇಡಿ ವಿಲನ್ ಅನ್ನೋದೇ ಒಟ್ಟು ಸದ್ಯದ ಒಂದು ಇಂಟ್ರಸ್ಟಿಂಗ್ ಮ್ಯಾಟರ್ ಆಗಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ. ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್ ಮ್ಯಾಕ್ಸ್ ಚಿತ್ರದಲ್ಲಿ ವಿಲನ್ ಇದ್ದಾರೆ. ಅದು ಲೇಡಿ ವಿಲನ್ ಅನ್ನೋದು ವಿಶೇಷವೇ ನೋಡಿ. ಆ ಲೇಡಿ ವಿಲನ್ ಯಾರು ಅನ್ನೋದೇ ಸದ್ಯದ ಸೀಕ್ರೆಟ್ ಆಗಿದೆ. ಆದರೆ, ಇದನ್ನ ಸಿನಿಮಾ ತಂಡ ಈಗಲೇ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಆ ಲೇಡಿ ವಿಲನ್ ಪಾತ್ರ ಮಾಡಿರೋದು ಯಾರು? ಈಗಾಗಲೇ ಈ ಒಂದು ಚಿತ್ರದಲ್ಲಿ ಮೂವರು ನಟಿಯರಿದ್ದಾರೆ. ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ವರಲಕ್ಷ್ಮಿಶರತ್‌ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿಯೇ ಇವರೆಲ್ಲ ಅಭಿನಯಿಸಿದ್ದಾರೆ. ಇದನ್ನೂ ಓದಿ: Max Movie: ಮ್ಯಾಕ್ಸ್ ಫ್ಯಾನ್ಸ್‌ಗಾಗಿ ಮಾಡಿರೋ ಸಿನಿಮಾ ಅಲ್ಲ, ಆದ್ರೆ.. ಕಿಚ್ಚ ಹೀಗೆ ಹೇಳಿದ್ಯಾಕೆ? ಮೂವರಲ್ಲಿ ಇವರೇನಾ ವಿಲನ್ ಸುಕೃತಾ ವಾಗ್ಲೆ, ಸಂಯುಕ್ತಾ ಹೊರನಾಡ್, ವರಲಕ್ಷ್ಮಿಶರತ್‌ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ, ಇವರು ಮೂವರಲ್ಲಿ ವಿಲನ್ ಯಾರು? ಹಾಗಂತ ಪ್ರಶ್ನೆ ಕೂಡ ಹುಟ್ಟಿಕೊಳ್ಳುತ್ತದೆ. ಚಿತ್ರದ ಮೂವರಲ್ಲಿ ಇಬ್ಬರ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ವರಲಕ್ಷ್ಮಿಶರತ್‌ಕುಮಾರ್ ಇಲ್ಲಿ ಪೊಲೀಸ್ ಆಗಿದ್ದಾರೆ? ಈ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಬಿಡಿ. ಬಹುಶಃ ಚಿತ್ರದ ಮೊದಲ ಪ್ರೆಸ್‌ಮೀಟ್‌ಗೆ ಬಂದಿದ್ದರೇ, ಹೇಳ್ತಿದ್ದರೋ ಏನೊ? ಆದರೆ, ಈ ಬಗ್ಗೆ ವರಲಕ್ಷ್ಮಿ ಎಲ್ಲೂ ಹೇಳಿಕೊಂಡಿಲ್ಲ ಬಿಡಿ. ಈ ಚಿತ್ರದಲ್ಲಿ ಇವರ ಪಾತ್ರವೇನು ಅನ್ನೋದರ ಸುತ್ತ ಕುತೂಹಲ ಇದ್ದೇ ಇದೆ ನೋಡಿ. ಮ್ಯಾಕ್ಸ್ ಸಿನಿಮಾ ವಿಲನ್ ಯಾರು ಹೌದು, ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚನ ಮುಂದೆ ಅಬ್ಬರಿಸೋ ಆ ವಿಲನ್ ಯಾರು? ಅದು ಲೇಡಿ ವಿಲನ್ ಮಾತ್ರವೇ ಆಗಿರುತ್ತಾರಾ? ಇಲ್ಲ ಬೇರೆ ಯಾರಾದರೂ ವಿಲನ್ ಇದ್ದಾರಾ? ಈ ಒಂದು ಪ್ರಶ್ನೆ ಇದೀಗ ಜಾಸ್ತಿನೇ ಕ್ಯೂರಿಯೋಸಿಟಿ ಕ್ರಿಯೇಟ್ ಮಾಡ್ತಿದೆ ಅಂತಲೇ ಹೇಳಬಹುದು. ಅಂದ್ಹಾಗೆ ಮ್ಯಾಕ್ಸ್ ಚಿತ್ರ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಡಿಸೆಂಬರ್-25 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮೂಲಕ ಕನ್ನಡಕ್ಕೆ ಒಂದು ಒಳ್ಳೆ ಸಿಂಪಲ್ ಕಥೆಯ ಚಿತ್ರ ಬರ್ತಿದೆ. ಸಿಂಪಲ್ ಕಥೆಯ ಸಖತ್ ಮ್ಯಾಕ್ಸ್ ಮ್ಯಾಕ್ಸ್ ಚಿತ್ರದ ಕಥೆ ಸಿಂಪಲ್ ಆಗಿದೆ. ಡೈರೆಕ್ಟರ್ ವಿಜಯ್ ಕಾರ್ತಿಕೇಯ ಇದನ್ನ ಬರೆದಿದ್ದಾರೆ. ಡೈರೆಕ್ಷನ್ ಕೂಡ ಇವರೇ ಮಾಡಿದ್ದಾರೆ. ಇವರ ಈ ಒಂದು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಶೇಖರ್ಚಂದ್ರ ಅವರ ಕ್ಯಾಮರಾವರ್ಕ್ ಈ ಚಿತ್ರಕ್ಕಿದೆ. ಅಷ್ಟೆ ಅದ್ಭುತವಾಗಿಯೇ ಈ ಚಿತ್ರಕ್ಕೆ ಇವರು ಕೆಲಸ ಮಾಡಿದ್ದಾರೆ. ಬಿಗ್ ಬಾಸ್‌ನಲ್ಲಿರೋ ಉಗ್ರಂ ಮಂಜು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಅಲ್ಲಿಯೇ ಉಗ್ರಂ ಮಂಜು ಪಾತ್ರ ರಿವೀಲ್ ಆಗಿದೆ. ಒಟ್ಟಾರೆ, ಕನ್ನಡದ ಮ್ಯಾಕ್ಸ್ ಚಿತ್ರ ಬಹು ನಿರೀಕ್ಷೆಯನ್ನೂ ಹುಟ್ಟುಹಾಕಿದೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.