ಸಾಂದರ್ಭಿಕ ಚಿತ್ರ ಈಗ ಎಲ್ಲೆಡೆ ಕೃತಕ ಬುದ್ಧಿಮತ್ತೆ (Artificial Intelligence) ಅಥವಾ ಎಐನದ್ದೇ ಹವಾ. ಪ್ರತಿಯೊಬ್ಬರು ತಮ್ಮ ಕೆಲಸವನ್ನು ಸುಲಭಗೊಳಿಸುವ ಈ ಟೆಕ್ನಾಲಜಿಯನ್ನು (Technology) ಬಳಸಿಕೊಳ್ಳುತ್ತಾರೆ. ಪ್ರಸ್ತುತ ದಿನಗಳಲ್ಲಿ ಸಮಯದಲ್ಲಿ ಚಾಟ್‌ಜಿಪಿಟಿ (Chat GPT) ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ ಎಐ ಬಳಕೆದಾರರೊಬ್ಬರು ಚಾಟ್‌ಜಿಪಿಟಿ ಬಳಿ ತನ್ನ ಗೆಳತಿ (Lover) ಜೊತೆಗೆ ಬ್ರೇಕ್ ಲೆಟರ್ (Break up Letter) ಬರೆದುಕೊಡುವಂತೆ ಕೇಳಿದ್ದಾರೆ. ಮತ್ತು ಈ ಅದನ್ನು ಬರೆದುಕೊಟ್ಟಿದೆ. ಇದಕ್ಕೆ ಸಾಕಷ್ಟು ಪರ ವಿರೋಧ ಕಾಮೆಂಟ್‌ಗಳು ಬಂದಿವೆ. ಮೊದ ಮೊದಲು ಈ ಚಾಟ್‌ಜಿಪಿಟಿಗೆ ವಿರೋಧ ವ್ಯಕ್ತವಾದ್ರೂ ಆಮೇಲೆ ಬಹುತೇಕ ಕಂಪನಿಗಳು ಇದನ್ನು ಅಳವಡಿಸಿಕೊಂಡವು. ಚಾಟ್‌ಜಿಪಿಟಿಯ ಸಹಾಯದೊಂದಿಗೆ ಹಲವಾರು ಜನರು ತಮ್ಮ ಅಸೈನ್‌ಮೆಂಟ್‌ಗಳು, ಹೋಮ್‌ವರ್ಕ್, ಪ್ರಾಜೆಕ್ಟ್‌ಗಳು, ಸಿವಿಗಳು, ಕಛೇರಿ ಕೆಲಸ ಹೀಗೆ ಶಿಕ್ಷಣ, ತಂತ್ರಜ್ಞಾನ, ಬ್ಯುಸಿನೆಸ್ ಎಲ್ಲಾ ಕ್ಷೇತ್ರಗಳಲ್ಲಿಯೂ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವಕ್ಕೆ ಪ್ರತಿಯೊಬ್ಬರೂ ಒಳಗಾಗುತ್ತಿದ್ದು ಇದರ ಸಹಾಯದಿಂದ ತಮ್ಮ ಸಾಕಷ್ಟು ಕೆಲಸಗಳನ್ನು ಸುಲಭಗೊಳಿಸಿಕೊಂಡಿದ್ದಾರೆ. ಬ್ರೇಕ್-ಅಪ್ ಲೆಟರ್ ಬರೆದುಕೊಟ್ಟ ಚಾಟ್‌ಜಿಪಿಟಿ ಪರೀಕ್ಷೆಗೆ ಓದಲು, ರೆಸ್ಯೂಮ್ ರೆಡಿ ಮಾಡಲು, ಪಿಪಿಟಿ ಮಾಡಲು ಅನೇಕ ವಿಷಯಗಳಲ್ಲಿ ಸಹಾಯ ಮಾಡುವ ಚಾಟ್‌ಜಿಪಿಟಿಗೆ ಇಲ್ಲೊಬ್ಬ ಬಳಕೆದಾರ ಬ್ರೇಕ್-ಅಪ್ ಲೆಟರ್ ಬರೆದು ಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಚಾಟ್‌ಜಿಪಿಟಿ ಕೊಟ್ಟ ಉತ್ತರ ವೈರಲ್ ಆಗಿದೆ. ಕೆಲವು ಬಳಕೆದಾರರು ಘೋರವಾದ ಟೆಕ್ನಾಲಜಿ ಇದು ಎಂದು ಹೇಳಿದ್ದಾರೆ. ರೆಡ್ಡಿಟ್ ಬಳಕೆದಾರರೊಬ್ಬರು ಚಾಟ್‌ಜಿಪಿಟಿಗೆ ನೀನು ನನ್ನ ಗರ್ಲ್‌ಫ್ರೆಂಂಡ್ ಎಂದುಕೊಂಡು ನನಗೆ ಪತ್ರವೊಂದನ್ನು ಬರೆದುಕೊಡು. ಆ ಪತ್ರದಲ್ಲಿ ನನ್ನ ಬಗ್ಗೆ ಏನ್ ಗೊತ್ತು ಅದನ್ನೆಲ್ಲಾ ಇಟ್ಟುಕೊಂಡು ಅವಮಾನಿಸಬೇಕು ಅಥವಾ ನಾವಿಬ್ಬರೂ ದೂರವಾಗುವಂತಹ ಪದಬಳಕೆ ಮಾಡಬೇಕು. ಸಾಧ್ಯವಾದಷ್ಟು ನೀಚ ಮತ್ತು ಕೆಟ್ಟವನಂತೆ ಬಿಂಬಿಸಿ ಬರೆದುಕೊಡು ಎಂದು ಕೇಳಿದ್ದರು. ಬಳಕೆದಾರನ ಪ್ರಶ್ನೆಗಳಿಗೆ ಉತ್ತರಿಸಿದ AI ಇದು ನಿಮ್ಮನ್ನು ಬೌದ್ಧಿಕವಾಗಿ ಅಥವಾ ವಿಶಿಷ್ಟವಾಗಿ ಕಾಣುವಂತೆ ಮಾಡುತ್ತಿಲ್ಲ. ನೀವು ಯಾವುದು ಅಲ್ಲವೋ ಅದರ ಬಗ್ಗೆ ತುಂಬಾ ಕಷ್ಟಪಟ್ಟು ಪ್ರಯತ್ನಿಸುತ್ತಿರುವಂತೆ ಕಾಣುವಂತೆ ನಿಮ್ಮ ನಡವಳಿಕೆ ತೋರುತ್ತಿದೆ ಎಂದು ಮರು-ಉತ್ತರ ನೀಡಿದೆ. ಅಲ್ಲದೇ ನಾನು ನನ್ನ ಫೋಟೋ ಕಳುಹಿಸುತ್ತೇನೆ. ಅದನ್ನು ನೋಡಿ ನಾನು ಹೇಗಿದ್ದೀನಿ ಎಂದು ನನ್ನ ಲುಕ್ ಅನ್ನು ಅವಮಾನಿಸಬೇಕು ಎಂಬ ಪ್ರಶ್ನೆಯನ್ನು ಚಾಟ್‌ಜಿಪಿಟಿಗೆ ಕೇಳಿದ್ದಾರೆ. AI ಬೋಟ್ ರೆಡ್ಡಿಟ್ ಬಳಕೆದಾರನ ಈ ಪ್ರಶ್ನೆಗೆ ಅವನ ಅಭ್ಯಾಸಗಳು ಮತ್ತು ಹವ್ಯಾಸಗಳ ಜೊತೆಗೆ ಅವನ ಲುಕ್ ಬಗ್ಗೆ ವಿವರಿಸಿರುವ ಉತ್ತರವನ್ನು ನೀಡಿದೆ. AI ಬ್ರೇಕ್-ಅಪ್ ಪತ್ರ “ನಾನು ಈವರೆಗೂ ಹೇಗೋ ಕಷ್ಟಪಟ್ಟು ನಮ್ಮಿಬ್ಬರ ಸಂಬಂಧ ಉಳಿಸಿಕೊಂಡು ಬಂದಿದ್ದೇನೆ. ಈಗ ನಿಮ್ಮಂತಹ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ನನ್ನ ಮೇಲೆ ನನಗೆ ಅಸಹ್ಯವಾಗುತ್ತಿದೆ. ನನ್ನ ಸಮಯಕ್ಕೆ ನೀವು ಯೋಗ್ಯರಲ್ಲ” ಎಂದು AI ಬೋಟ್ ರೆಡ್ಡಿಟ್ ಬಳಕೆದಾರನ ಪ್ರಶ್ನೆಗೆ ಉತ್ತರ ನೀಡಿದೆ. ಬಳಕೆದಾರನ ಲುಕ್ ಅನ್ನು ಟೀಕಿಸಿದ AI ಬೋಟ್ ರೆಡ್ಡಿಟ್ ಬಳಕೆದಾರನ ನೋಟದ ಬಗ್ಗೆ ಪ್ರತಿಕ್ರಿಯಿಸಿದ AI ಬೋಟ್ “ನಿಮ್ಮ ಕುರುಚುಲು ಗಡ್ಡ ನಿಮಗೆ ಯಾವುದೇ ಪ್ರಯೋಜನವನ್ನು ನೀಡುತ್ತಿಲ್ಲ” ಎಂಬ ಉತ್ತರ ನೀಡಿದೆ. ಪೋಸ್ಟ್‌ನ ಕೊನೆಯಲ್ಲಿ ಚಾಟ್‌ಜಿಪಿಟಿ, ನೀವು ನನ್ನ ಸಮಯಕ್ಕೆ ಯೋಗ್ಯರು ಎಂದು ನಟಿಸುವುದನ್ನು ನಾನು ಮುಗಿಸಿದ್ದೇನೆ. ನನಗೆ ಈಗಾಗ್ಲೇ ಒಳ್ಳೆಯ ಪಾರ್ಟ್ನರ್ ಸಿಕ್ಕಿದ್ದಾರೆ ಎಂದು ಬ್ರೇಕ್-ಅಪ್ ಲೆಟರ್‌ನಲ್ಲಿ ಉಲ್ಲೇಖಿಸಿದೆ. ಈ ಉತ್ತರ ಕಂಡು ರೆಡ್ಡಿಟ್ ಬಳಕೆದಾರ ಶಾಕ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದ ಬಳಕೆದಾರರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಕಾಮೆಂಟ್ ಕೆಲವರು ಈ ಉತ್ತರ ನೋಡಿದ ಮೇಲೆ ನನಗೆ ಸುಧಾರಿಸಿಕೊಳ್ಳಲು ಸಮಯ ಬೇಕಿದೆ, ಗ್ರೇಟ್ ಆನ್ಸರ್ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಉತ್ತರ ನಿಜಕ್ಕೂ ಘೋರವಾಗಿದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ಎಐ ಬಂದಮೇಲೆ ಉದ್ಯೋಗ ಹೋಗುತ್ತವೆ, ಮಾನಮವೀಯತೆ ಹೋಗುತ್ತದೆ ಎಂದು ಹೇಳ್ತಿದ್ದರು, ಆದರೆ ಈಗ ಅದನ್ನು ಕಣ್ಣಾರೆ ಕಾಣುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.