WWE WWE Raw: WWE ಅಭಿಮಾನಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ. ಯಾಕೆಂದರೆ ಕೋಟ್ಯಂತರ ಜನರ ಮೆಚ್ಚಿನ WWE ಇನ್ಮುಂದೆ ಟಿವಿಯಲ್ಲಿ ಬರೋದಿಲ್ಲ. ಇದು ಸಾಕಷ್ಟು ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಆದರೆ ಇನ್ಮುಂದೆ ಡಬ್ಲ್ಯೂಡಬ್ಲ್ಯೂಇ ಶೋ ಟಿವಿಯಲ್ಲಿ ಬರುವ ಬದಲಿಗೆ ಒಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ ಪ್ರಸಾರವಾಗಲಿದೆ. ಹೌದು.. WWE ಈಗ ದೂರದರ್ಶನದಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇಂದಿನಿಂದ ಅಂದರೆ ಸೋಮವಾರದಿಂದ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ. 1993 ರಲ್ಲಿ WWE ಪ್ರಾರಂಭವಾದ ನಂತರ WWE ಸ್ಪರ್ಧೆಯನ್ನು ಟಿವಿಯಲ್ಲಿ ಪ್ರಸಾರ ಮಾಡದಿರುವುದು ಇದೇ ಮೊದಲು. ಇಂದಿನ ವಿಶೇಷ ಸಂಚಿಕೆಯಲ್ಲಿ ಕುಸ್ತಿ ಮನರಂಜನಾ ಉದ್ಯಮದ ಹಲವು ಸ್ಟಾರ್ ಮುಖಗಳು ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳ ಕುತೂಹಲ ಗಗನಕ್ಕೇರಿದೆ. ಇದನ್ನೂ ಓದಿ: Weight Loss: ಕೇವಲ 24 ತಿಂಗಳಲ್ಲಿ ಬರೋಬ್ಬರಿ 54 ಕೆಜಿ ತೂಕ ಇಳಿಸಿಕೊಂಡ ಲೇಡಿ! ಇಲ್ಲಿದೆ ಆಕೆಯ ಸಿಂಪಲ್ ಟಿಪ್ಸ್! ನೆಟ್‌ಫ್ಲಿಕ್ಸ್‌ನಲ್ಲಿ WWE ನ ಮೊದಲ ಸಂಚಿಕೆಯಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು ಕಾಣಿಸಿಕೊಳ್ಳಲಿದ್ದಾರೆ. ಇವುಗಳಲ್ಲಿ ಜಾನ್ ಸೆನಾ, ರೋಮನ್ ರೀನ್ಸ್, ಬಿಯಾಂಕಾ ಬ್ಲೇರ್, ಸಿಎಮ್ ಪಂಕ್, ಸೇಥ್ ರೋಲಿನ್ಸ್ ಮುಂತಾದ ಸ್ಟಾರ್ ಹೆಸರುಗಳು ಸೇರಿವೆ. ಇದಲ್ಲದೆ, ರೋಗನ್ ಪಾಲ್ ಮತ್ತು ರಾಪರ್ ಟ್ರಾವಿಸ್ ಸ್ಕಾಟ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಮೊದಲ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆ ಸಿಗಲಿದೆ. ಈ ಸ್ಟ್ರೀಮಿಂಗ್ ಸಮಯದಲ್ಲಿ WWE ಸ್ಟಾರ್ ಜಾನ್ ಸೆನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಿಂದ ಅವರು ತಮ್ಮ ವಿದಾಯ ಜೀವನವನ್ನು ಪ್ರಾರಂಭಿಸಲಿದ್ದಾರೆ. ಅಂದರೆ ಜಾನ್ ಸೆನಾ ಅವರು ಈ ವರ್ಷ ಪೂರ್ತಿ ಸ್ಪರ್ಧಿಸಲಿದ್ದು, ಈ ವರ್ಷದ ಕೊನೆಯಲ್ಲಿ WWE ಗೆ ವಿದಾಯ ಹೇಳಲಿದ್ದಾರೆ. WWE RAW Netflix 2025: ಸಮಯ ಮತ್ತು ದಿನಾಂಕ WWE RAW ನೆಟ್‌ಫ್ಲಿಕ್ಸ್ ಅಮೆರಿಕದ ಕ್ಯಾಲಿಫೋರ್ನಿಯಾದ ಇಂಟ್ಯೂಟ್ ಡೋಮ್‌ನಲ್ಲಿ ನಡೆಯಲಿದೆ. ಮೊದಲ ಸಂಚಿಕೆಯ ಸ್ಟ್ರೀಮಿಂಗ್ ಸೋಮವಾರ ರಾತ್ರಿ 8 ಗಂಟೆಗೆ EST (ಮಂಗಳವಾರ ಬೆಳಗ್ಗೆ 6:30 IST ಕ್ಕೆ) ಪ್ರಾರಂಭವಾಗುತ್ತದೆ. ಸ್ಟ್ರೀಮಿಂಗ್ ಮುಗಿದ ನಂತರ, ಈ ಸಂಚಿಕೆಯು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಕರಿಗೆ ಸಹ ಲಭ್ಯವಿರುತ್ತದೆ. ಪ್ರಸ್ತುತ, ನೆಟ್‌ಫ್ಲಿಕ್ಸ್ ಯುಎಸ್, ಕೆನಡಾ, ಇಂಗ್ಲೆಂಡ್ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿದೆ, ಆದರೆ ಎಪಿಸೋಡ್ ಜಾಗತಿಕವಾಗಿ ಲಭ್ಯವಿರುತ್ತದೆ. ಇದನ್ನೂ ಓದಿ: Interesting Story: ‘ನಾನು ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಬೇಕು, ಮನೆಯಲ್ಲಿ ಹೇಳೋಕಾಗ್ತಿಲ್ಲ ಸಲಹೆ ನೀಡಿ’ ಎಂದ ಮುಸ್ಲಿಂ ಯುವತಿ! 10 ವರ್ಷಗಳವರೆಗೆ ಒಪ್ಪಂದ WWE ಮತ್ತು ನೆಟ್‌ಫ್ಲಿಕ್ಸ್ 10 ವರ್ಷಗಳ ಕಾಲ 5 ಶತಕೋಟಿ US ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಲ್ಲಿ, ನೆಟ್‌ಫ್ಲಿಕ್ಸ್ ವಾರಕ್ಕೊಮ್ಮೆ ಪ್ರತಿ ಸೋಮವಾರ RAW ಪಂದ್ಯಗಳನ್ನು ಸ್ಟ್ರೀಮಿಂಗ್ ಮಾಡುತ್ತದೆ. ಇದರ ಹೊರತಾಗಿ, ರೆಸಲ್‌ಮೇನಿಯಾ, ಸಮ್ಮರ್‌ಸ್ಲ್ಯಾಮ್ ಮತ್ತು ರಾಯಲ್ ರಂಬಲ್‌ನಂತಹ ದೊಡ್ಡ ಈವೆಂಟ್‌ಗಳು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಪಂಚದಾದ್ಯಂತದ ವೀಕ್ಷಕರಿಗೆ ಲಭ್ಯವಿರುತ್ತವೆ. ನೆಟ್‌ಫ್ಲಿಕ್ಸ್‌ನಲ್ಲಿ WWE ನ ಮೊದಲ ಸಂಚಿಕೆಯಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು ಕಾಣಿಸಿಕೊಳ್ಳುವುದರಿಂದ ಟಿಆರ್‌ಪಿ ಕಿತ್ತು ಹೋಗುವ ಸಾಧ್ಯತೆ ಇದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.