NEWS

Contractors: ಬಾಕಿ ಬಿಲ್ ಪಾವತಿಸಿ, ಇಲ್ಲದಿದ್ರೆ ದಯಾಮರಣ ನೀಡಿ! ಗುತ್ತಿಗೆದಾರರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ

ಸಿಎಂಗೆ ಗುತ್ತಿಗೆದಾರರು ಬರೆದ ಪತ್ರ ಶಿವಮೊಗ್ಗ: ಗುತ್ತಿಗೆದಾರರು (Contractors) ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಪತ್ರವೊಂದನ್ನು (Letter) ಬರೆದಿದ್ದಾರೆ. ಅದರಲ್ಲೂ ತಮಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಮನವಿ (mercy death) ಮಾಡಿದ್ದಾರೆ. ಪೂರ್ಣಗೊಂಡ ಕಾಮಗಾರಿಗಳಿಗೆ ಬಿಲ್ ಪಾವತಿ ಆಗದ ಹಿನ್ನೆಲೆಯಲ್ಲಿ ದಯಾ ಮರಣ ಕೋರಿ ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ (Teerthahalli) ತಾಲೂಕಿನ ಗುತ್ತಿಗೆದಾರರು ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದಾರೆ. ಅದರ ಪ್ರತಿಯನ್ನು ಮಾಜಿ ಗೃಹಸಚಿವ, ತೀರ್ಥಹಳ್ಳಿ ಹಾಲಿ ಶಾಸಕ ಆರಗ ಜ್ಞಾನೇಂದ್ರ (Araga Jnanendra) ಅವರಿಗೂ ಈ ಪತ್ರ ರವಾನಿಸಿದ್ದಾರೆ. ದಯಾಮರಣ ಕೋರಿ ಗುತ್ತಿಗೆದಾರರಿಂದ ಪತ್ರ ತೀರ್ಥಹಳ್ಳಿಯ ನಾಲ್ವರು ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ದಯಾ ಮರಣ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ಹಲವಾರು ಕಾಮಗಾರಿ ನಿರ್ವಹಿಸಿದ್ದು ಪೂರ್ಣಗೊಂಡಿದೆ. ಆದರೆ 2 ರಿಂದ 3 ವರ್ಷವಾದರೂ ಸಂಬಂಧಪಟ್ಟ ಇಲಾಖೆಯಿಂದ ಹಣ ಬಿಡುಗಡೆ ಆಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂಗೆ ಬರೆದ ಪತ್ರದಲ್ಲಿ ಏನಿದೆ? ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ನಾವುಗಳು ಹಿಂದಿನ ವರ್ಷಗಳಲ್ಲಿ ಹಲವಾರು ಸರ್ಕಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಅವುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿರುತ್ತವೆ. ಆದರೆ ಕಾಮಗಾರಿ ಪೂರ್ಣವಾಗಿ ಎರಡು-ಮೂರು ವರ್ಷಗಳು ಕಳೆದರೂ ಕೆಲಸ ಮಾಡಿದ ನಮಗೆ ಹಣ ಸಂದಾಯವಾಗಿರುವುದಿಲ್ಲ ಅಂತ ಬೇಸರಿಸಿದ್ದಾರೆ. ಇದನ್ನೂ ಓದಿ: Karnataka Naxals: ನಾಯಕನಿಲ್ಲದೇ ಕಂಗಾಲಾದ್ರ ನಕ್ಸಲರು? ಶರಣಾಗತಿಗೆ 6 ಮಂದಿ ನಿರ್ಧಾರ, ಬಂದೂಕು ಕೆಳಗಿರಿಸೋದು ಯಾವಾಗ? ಗುತ್ತಿಗೆ ಹಣ ಬರದೇ, ಜೀವನ ನಿರ್ವಹಣೆಗೆ ತೊಂದರೆ ಗುತ್ತಿಗೆ ಕೆಲಸವನ್ನೆ ಮಾಡಿಕೊಂಡಿರುವ ನಮಗೆ ಹಣ ಬಾರದಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಪ್ರಯುಕ್ತ ಸರ್ಕಾರದಿಂದ ಬರಬೇಕಾದ ಕಾಮಗಾರಿ ವೆಚ್ಚದ ಹಣವನ್ನು ಕೂಡಲೇ ಪಾವತಿಸುವಂತೆ ಪ್ರಾರ್ಥಿಸುತ್ತೇವೆ. ಇನ್ನೂ ಸಹ ನಮಗೆ ಹಣ ಪಾವತಿಯಾಗದೇ ಇದ್ದಲ್ಲಿ ನಮಗೆಲ್ಲರಿಗೂ ದಯಾ ಮರಣ ಅವಕಾಶವನ್ನು ಕಲ್ಪಿಸಿಕೊಡುವಂತೆ ವಿನಂತಿಸುತ್ತೇವೆ ಅಂತ ಪತ್ರದಲ್ಲಿ ಮನವಿ ಮಾಡಿದ್ದಾರೆ. ಸಾಕಷ್ಟು ಚರ್ಚೆಗೆ ಕಾರಣವಾದ ಪತ್ರ ಈಗಾಗಲೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ತಿರುಗಿ ಬಿದ್ದಿರುವುದು ಹೊಸ ವಿಚಾರವೇನಲ್ಲ. ಕಳೆದ ಸಪ್ಟೆಂಬರ್‌ನಲ್ಲಿ ಬಾಕಿ ಹಣ ನೀಡುವಂತೆ ಆಗ್ರಹಿಸಿ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರ ಬಳಿಕ ಅನೇಕ ಕಡೆ ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಗುತ್ತಿಗೆದಾರರು ದಯಾಮರಣ ನೀಡುವಂತೆ ಸಿಎಂಗೆ ಪತ್ರ ಬರೆದಿರೋದು ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಕಡೆಯವರು ಮನೆಗೆ ಬಂದಿದ್ರು **!** ಅತ್ತ ಬೀದರ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಚಿನ್ ಪಾಂಚಾಳ ಕೇಸ್‌ನ ವಿಚಾರಣೆ ತೀವ್ರಗೊಂಡಿದೆ. ಸಿಐಡಿ ಅಧಿಕಾರಿಗಳು ಸಚಿನ್ ಕುಟುಂಬಸ್ಥರಿಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಸಚಿನ್ ಸಹೋದರಿ ಸುರೇಖಾ, ಪ್ರಿಯಾಂಕ್ ಖರ್ಗೆಯವರ ಪರಿಚಯಸ್ಥರು ಮನೆಗೆ ಬಂದಿದ್ರು, ಸಿಐಡಿ ತನಿಖೆಯ ಬಗ್ಗೆ ಭರವಸೆ ಇದೆಯಾ ಎನ್ನುವ ಬಗ್ಗೆ ಕೇಳಿದ್ರು, ನಾವು ಕಾದು‌ ನೋಡ್ತೇವೆ ಅಂತಾ ಹೇಳಿದ್ದೇವೆ. ನಾವು ಏನು‌ ಕೇಳಲಿಲ್ಲ, ನಾವು ಪ್ರಿಯಾಂಕ್ ಖರ್ಗೆ ಕಡೆಯವ್ರು ಅಂತಾ ಹೇಳಿದ್ರು, ಪೊಲೀಸರಿಂದಲೇ ಹಿಂಗಾಯ್ತು ಅಂತಾ ಹೇಳಿದ್ರು. ಸರ್ ಅಂದರೆ ಪ್ರಿಯಾಂಕ್ ಖರ್ಗೆ ಮುಂದಿನ ವಾರ ಬರಬೇಕು ಅಂದುಕೊಂಡಿದ್ದಾರೆ, ಈಗ ಸ್ವಲ್ಪ ಕೆಲಸ ಇದೆಯಂತೆ ಎಂದರು ಅಂತ ಹೇಳಿದ್ದಾರೆ. ನ್ಯಾಯ ಸಿಗದಿದ್ರೆ ಸಿಬಿಐಗೆ ಹೋಗುತ್ತೇವೆ ಸಿಐಡಿ ತನಿಖೆಗೆ ಪ್ರಿಯಾಂಕ್ ಖರ್ಗೆಯವರೇ ಹೇಳಿದ್ದಾರೆ ಅಂತಾ ಹೇಳಿದ್ರು. ನಮಗೆ ನ್ಯಾಯ ಸಿಗದಿದ್ರೆ ನಾವು ಸಿಬಿಐಗೆ ಹೋಗೊದು ಗ್ಯಾರಂಟಿ, ಸಿಐಡಿ ತನಿಖೆಯ ಬಳಿಕ ಮೃತ ಸಚಿನ್ ಸಹೋದರಿ ಸುರೇಖಾ ಹೇಳಿಕೆ ನೀಡಿದ್ದಾರೆ. (ವರದಿ: ವಿನಯ್ ಪುರದಾಳ, ನ್ಯೂಸ್ 18 ಕನ್ನಡ, ಶಿವಮೊಗ್ಗ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.