NEWS

Karnataka Politics: ಕಾಂಗ್ರೆಸ್​​​ ಶಾಸಕರ ಖರೀದಿಗೆ 100 ಕೋಟಿ ಆಫರ್! ಬಿಜೆಪಿ ವಿರುದ್ಧ ಎಂಎಲ್​ಎ ಗಣಿಗ ರವಿಕುಮಾರ್ ಬಾಂಬ್!

ಶಾಸಕ ರವಿಕುಮಾರ್ ಗಣಿಗ ಮಂಡ್ಯ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲದ (Operation Kamala) ಸದ್ದು ಕೇಳಿ ಬರುತ್ತಿದ್ದು, ಮಂಡ್ಯದಲ್ಲಿ ಕಾಂಗ್ರೆಸ್ ಶಾಸಕರ (Mandya Congress MLA) ಖರೀದಿ ಬಗ್ಗೆ ಶಾಸಕ ಗಣಿಗ ರವಿಕುಮಾರ್ (MLA Ravi Kumar Ganiga) ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ MLA ಗಳ ಖರೀದಿಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ (BJP Master Plan) ಮಾಡಿದೆ, ಹಿಂದೆ 50 ಕೋಟಿ ಇದ್ದ ಆಫರ್ ಇದೀಗ 100 ಕೋಟಿಗೆ ಏರಿಕೆಯಾಗಿದೆ. ಎಂಎಲ್ಎ ಗಳ ಖರೀದಿ ಮಾಡಲು ಬಿಜೆಪಿಯವರು 100 ಕೋಟಿಗೆ ಹೋಗಿದ್ದಾರೆ. ನಿತ್ಯ ಸರ್ಕಾರ (Karnataka Govt) ಬಿಳಿಸಲು ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ಬೀಳಿಸಲು ಮಾತು ಕೊಟ್ಟಿದ್ದಾರಂತೆ ಈ ಐದು ಮಂದಿ ನಮ್ಮ ಸರ್ಕಾರ ಗಟ್ಟಿ ಇದೆ ಅಲ್ಲಾಡಿಸಲು ಹಾಗಲ್ಲ. ಸಂತೋಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹಲಾದ್ ಜೋಶಿಯಿಂದ ಕಾಂಗ್ರೆಸ್ ಅಸ್ಥಿರಕ್ಕೆ ತಂತ್ರ. ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿ ಇರುವ ಸರ್ಕಾರ, ಈ ಸರ್ಕಾರ ಬಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಮೋದಿಗೆ ಈ ಐದು ಜನ ಮಾತು ಕೊಟ್ಟಿದ್ದಾರೆ. ನಮ್ಮ ಶಾಸಕರಿಗೆ ಬಿಜೆಪಿಯ ಬ್ರೋಕರ್ ಗಳಿಂದ ಡಿಮ್ಯಾಂಡ್. ಆದರೆ ನಮ್ಮ ಶಾಸಕರು ಬಲಿಯಾಗಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ ಆದ್ದರಿಂದಲೇ ಅಸ್ಥಿರ ಗೊಳಿಸಲು ಸಂಚು ಮಾಡ್ತಿದ್ದಾರೆ. ಪ್ರತಿನಿತ್ಯ ಶಾಸಕರನ್ನ ಸಂಪರ್ಕ ಮಾಡ್ತಿದ್ದಾರೆ. ನೀವು ಬರ್ತಿರಾ? ನೀವು ಬರ್ತಿರಾ ಅಂತ ತಿರುಗುತ್ತಿದ್ದಾರೆ. ನಮ್ಮ ಶಾಸಕರು ಯಾರು ಹೋಗಲ್ಲ. ಕಾಂಗ್ರೆಸ್ ಸರ್ಕಾರ ಬಿಳಿಸೋದಕ್ಕೆ ಯಾವ ಬಿಜೆಪಿಯವರಿಗು ತಾಕತ್ ಇಲ್ಲ. 50 ರಿಂದ 100ಕೋಟಿಗೆ ಬಿಜೆಪಿ ಹೋಗಿದ್ದಾರೆ. ಸಾಕ್ಷಿ ಕಲೆ ಹಾಕುತ್ತಿದ್ದೇವೆ ಶೀಘ್ರದಲ್ಲೇ ಬಿಡ್ತೇವೆ. EDಗೆ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು. ಇದೇ ವೇಳೆ ರಾಜ್ಯಪಾಲರ ವಿರುದ್ಧವೂ ಕಿಡಿಕಾರಿರುವ ಕಾಂಗ್ರೆಸ್ ಶಾಸಕ, ರಾಜ್ಯಪಾಲರು ಬಿಜೆಪಿ ಏಜೆಂಟ್, ಬಿಜೆಪಿ ತಂತ್ರ ವಿಫಲಗೊಳಿಸಲು ಕಾಂಗ್ರೆಸ್ ರಣತಂತ್ರ ಮಾಡ್ತೇವೆ. ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರಿಗೆ ಕಾಮನ್ ಸೆನ್ಸ್ ಇರಬೇಕಿತ್ತು. ಬೀದಿಲಿ ಹೋಗೋರೆಲ್ಲ ಅವರ ಮೇಲೆ ಪ್ರಾಸಿಕ್ಯೂಷನ್ ಕೊಡಿ, ಇವರ ಮೇಲೆ ಕೊಡಿ ಅಂತ ಲೆಟರ್ ಕೊಟ್ಟರೆ ರಾಜ್ಯ ನಡೆಸೋದು ಹೇಗೆ? 17B ಯಲ್ಲಿ ಸರಿಯಾಗಿ ನಮೂದಾಗಿದೆ ತನಿಖೆ ಅಧಿಕಾರಿ ಕೇಳಿದರೆ ಮಾತ್ರ ಕೊಡಬೇಕು. ಈ ಕಾನೂನು ಮಾಡಿದ್ದೆ ಬಿಜೆಪಿಯವರು. ರೋಡ್ ನಲ್ಲಿ ಹೋಗುವವರೆಲ್ಲ ಮುಖ್ಯಮಂತ್ರಿ ಮೇಲೆ ತನಿಖೆ ಮಾಡಬೇಕು ಅಂತ ಲೆಟರ್ ಕೊಟ್ಟರೆ. ದಾಸಯ್ಯ ನಂತರ ಲೆಟರ್ ತಕೊಂಡು ರಾಜ್ಯಪಾಲರು ಬಿಜೆಪಿ ಹಾಕೊಟ್ಟಂತಹ ಟ್ರಾಪ್ಟ್ ಮೇಲೆ ಸಹಿ ಹಾಕಿ ಪ್ರಾಸಿಕ್ಯೂಷನ್ ಕೊಟ್ಟಿದ್ದೇವೆ ಅಂದ್ರೆ ಸಂವಿಧಾನದಲ್ಲೇ ತಪ್ಪು. ತಪ್ಪು ನಿರ್ಧಾರವನ್ನು ರಾಜ್ಯಪಾಲರು ಮಾಡಿದ್ದಾರೆ ಎಂದರು. ಅಲ್ಲದೇ, ರಾಜ್ಯಪಾಲರು ಬಿಜೆಪಿಯ ಏಜೆಂಟರು. ಡೆಲ್ಲಿಗೆ ಹೋದರೂ ಅಮಿತ್ ಶಾ, ಕುಮಾರಸ್ವಾಮಿ, ದೇವೇಗೌಡನ ಮೀಟ್ ಮಾಡಿದ್ದರು. ಬೆಳಿಗ್ಗೆ ಬಂದು ಮುಖ್ಯಮಂತ್ರಿಗೆ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ಕೊಟ್ಟಿದ್ದಾರೆ ಸಂವಿಧಾನ ಬಾಹಿರ, ರಾಜ್ಯಪಾಲರ ಮೂಲಕ ಬಿಜೆಪಿ ಕಾಂಗ್ರೆಸ್ ತೆಗೆಯಲು ಷಡ್ಯಂತ್ರ. ತಮಿಳುನಾಡು, ಪಶ್ಚಿಮ ಬಂಗಾಳ, ಚತ್ತಿಸ್ಗಡ,ಡೆಲ್ಲಿ,ಯಲ್ಲಿ ಅಸ್ಥಿರ ಮಾಡ್ತಿದ್ದಾರೆ. ಬಿಜೆಪಿ ತಂತ್ರ ವಿಫಲಗೊಳಿಸಲು ಕಾಂಗ್ರೆಸ್ ರಣತಂತ್ರ ಎಣೆಯುತ್ತಿದೆ ಎಂದಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯಲ್ಲಿ ನೂರು ತೂತೂ ಆಗಿದೆ ಇದೇ ವೇಳೆ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕರು, ನಾನು ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಸಿಎಂ ಗಟ್ಟಿ, ಸ್ಟ್ರಾಂಗ್ ಇದ್ದಾರೆ ಅವರ ಪರ ನಾವೆಲ್ಲರೂ ಇದ್ದೇವೆ. ರಾಜ್ಯಪಾಲರ ನಡೆ ವಿರುದ್ದ 136 ಜನರು ಒಟ್ಟಿಗೆ ಹೋರಾಟ. ನಮ್ಮ ಮುಖ್ಯಮಂತ್ರಿ ಗಟ್ಟಿಯಾಗಿದ್ದಾರೆ ಸಿಕ್ಕಿಸಲು ಬಿಜೆಪಿ ಆಟವಾಡ್ತಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಬಿಜೆಪಿಯಲ್ಲಿ ನೂರು ತೂತೂ ಆಗಿದೆ. ಯಡಿಯೂರಪ್ಪ, ವಿಜಯೇಂದ್ರ,ಯತ್ನಾಳ, ಕುಮಾರಸ್ವಾಮಿ ಅವರವರಲ್ಲೇ ಕಿತ್ತಾಟ. 5 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತೆ, ಅಭಿವೃದ್ಧಿ ಕೆಲಸವನ್ನು ಮುಖ್ಯಮಂತ್ರಿ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.