ಸ್ಮರಣ್ ರವಿಚಂದ್ರನ್ (Photo: Fancode) ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಪಂದ್ಯಾವಳಿಯಲ್ಲಿ ಕರ್ನಾಟಕ (Karnataka) ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ (Mumbai) ವಿರುದ್ಧ 383 ರನ್‌ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆಲುವು ಸಾಧಿಸಿದ್ದ ಕರ್ನಾಟಕ ತಂಡ, ಸೋಮವಾರ ಎರಡನೇ ಪಂದ್ಯದಲ್ಲಿ ಅಷ್ಟೇನು ಬಲಿಷ್ಠವಲ್ಲದ ಪುದುಚೆರಿ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಆದರೂ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಿಂಚಿದ ಬೌಲರ್ಗಳು ಮೊದಲ ಪಂದ್ಯದಲ್ಲಿ ಚೇಸಿಂಗ್ ಮಾಡಿ ಗೆದ್ದಿದ್ದರಿಂದ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಚೇಸಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪುದುಚೆರಿ ಕೇವಲ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡರೂ ನಾಯಕ ಅರುಣ್ ಕಾರ್ತಿಕ್ (71) ಸಿಡಿಸಿದ ಅರ್ಧಶತಕ ಹಾಗೂ ಅಮನ್ ಖಾನ್ರ 45 ರನ್ಗಳಿಂದ 200 ಗಟಿ ದಾಟಿತು. ವಿದ್ಯಾಧರ್ ಪಾಟೀಲ್ ನಾಲ್ಕು ವಿಕೆಟ್ ಪಡೆದು ಪುದುಚೆರಿಗೆ ಆಘಾತ ನೀಡಿದರೆ, ಶ್ರೇಯಸ್ ಗೋಪಾಲ್ 44ಕ್ಕೆ 2 ಹಾಗೂ ವಿ ಕೌಶಿಕ್ ಹಾಗೂ ಗೋಪಾಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: WTC Final: ಭಾರತದ ಫೈನಲ್ ಆಸೆಗೆ ಮತ್ತಷ್ಟು ಬಲ ತಂದ ಪಾಕಿಸ್ತಾನ! ಹೀಗಿದೆ ನೋಡಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲೆಕ್ಕಾಚಾರ ಸ್ಮರಣ್ ಅಜೇಯ ಶತಕ 212ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ನಿಕಿನ್ ಜೋಸ್ 10, ಮಯಾಂಕ್ ಅಗರ್ವಾಲ್ 18 ಹಾಗೂ ಅನೀಶ್ ಕೆವಿ ಹಾಗೂ ಕಳೆದ ಪಂದ್ಯದ ಹೀರೋ ಕೃಷ್ಣನ್ ಶ್ರೀಜಿತ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸ್ಮರಣ್ ರವಿಚಂದ್ರನ್ ಅದ್ಭುತ ಬ್ಯಾಟಿಂಗ್ ಮಾಡಿದರು. 78ಕ್ಕೆ4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಸ್ಮರಣ್ ಹಾಗೂ ಗೋಪಾಲ್ 5ನೇ ವಿಕೆಟ್ಗೆ 113 ರನ್ ಸೇರಿಸಿ ಗೆಲುವಿನ ಗಡಿಗೆ ತಂದರು. ಗೋಪಾಲ್ 59 ಎಸೆತಗಳಲ್ಲಿ 40 ರನ್ಗಳಿಸಿದರೆ, ಸ್ಮರಣ್ 87 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ100 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಮುಂಬೈಗೆ ಸೋಲುಣಿಸಿದ್ದ ಮುಂಬೈ ಕರ್ನಾಟಕ ಮೊದಲ ಪಂದ್ಯದಲ್ಲಿ ಬರೋಬ್ಬರಿ 383 ರನ್‌ಗಳ ಬೃಹತ್ ಗುರಿಯನ್ನ 46.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಶ್ರೀಜಿತ್ 101 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 150 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದ್ದರು. ಪ್ರವೀಣ್ ದುಬೆ 65, ಅನೀಶ್ 82, ಮಯಾಂಕ್ ಅಗರ್ವಾಲ್ 47, ನಿಕಿನ್ ಜೋಸ್ 21 ರನ್ಗಳಿಸಿದ್ದರು. ಇದನ್ನೂ ಓದಿ: ಅಶ್ವಿನ್ ಬದಲಿಗೆ ಉಡುಪಿ ಮೂಲದ ಮುಂಬೈ ಸ್ಪಿನ್ನರ್ ಆಯ್ಕೆ! ಮುಂಬರುವ 2 ಪಂದ್ಯಗಳಿಗೆ ಟೀಮ್ ಇಂಡಿಯಾ ಸೇರ್ಪಡೆ ಕರ್ನಾಟಕ ತಂಡದ ವೇಳಾಪಟ್ಟಿ ಕರ್ನಾಟಕ ತಂಡ ಮುಂದಿನ ಪಂದ್ಯದಲ್ಲಿ ಸ್ಫೋಟಕ ಆಟಗಾರರ ದಂಡನ್ನೇ ಹೊಂದಿರುವ ಪಂಜಾಬ್ ತಂಡವನ್ನ ಡಿಸೆಂಬರ್ 26ರಂದು ಎದುರಿಸಲಿದೆ. ಈ ಗುಂಪಿನಲ್ಲಿ ಎಲ್ಲಾ ತಂಡಗಳು ಬಲಿಷ್ಠವಾಗಿದೆ. ಡಿಸೆಂಬರ್ 28ರಂದು, ಆಂಧ್ರಪ್ರದೇಶದ ವಿರುದ್ಧ, ಡಿ 31ರಂದು ಹೈದರಾಬಾದ್ ವಿರುದ್ಧ, ಜನವರಿ 1ರಂದು ಸೌರಾಷ್ಟ್ರ ವಿರುದ್ಧ ಹಾಗೂ ಜನವರಿ 5ರಂದು ನಾಗಲ್ಯಾಂಡ್ ವಿರುದ್ಧ ಆಡಲಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.