NEWS

Health Tips: ದೋಸೆ-ಇಡ್ಲಿ, ಉಪ್ಪಿನಕಾಯಿಯಂತಹ ಹುದುಗಿದ ಆಹಾರ ಸೇವನೆಯಿಂದ ಇರುವ ಲಾಭವೇನು? ಇಲ್ಲಿದೆ ತಜ್ಞರ ಮಾಹಿತಿ

ಇಡ್ಲಿ ಆಹಾರವನ್ನು ಹುದುಗಿಸುವ ವಿಧಾನವು ಆಹಾರ ಸಂರಕ್ಷಣೆಯ ಒಂದು ಸಾಂಪ್ರದಾಯಿಕ ವಿಧಾನವಾಗಿದೆ. ಹುದುಗಿಸಿದ ಆಹಾರಗಳು ಮತ್ತು ಪಾನೀಯಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹುದುಗಿಸಿದ ಆಹಾರಗಳಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಇರುತ್ತವೆ. ಹುದುಗಿಸಿದ ಆಹಾರಗಳು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿವೆ. ಇತ್ತೀಚೆಗೆ ವಿಜ್ಞಾನಿಗಳು ಆಹಾರಕ್ರಮದಲ್ಲಿ ಹುದುಗಿಸಿದ ಆಹಾರಗಳನ್ನು ತಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಲು 3 ಸಲಹೆಗಳನ್ನು ತಿಳಿಸಿದ್ದಾರೆ. ಕರುಳಿನ ಆರೋಗ್ಯಕ್ಕೆ ಹುದುಗಿಸಿದ ಆಹಾರಗಳು ಅಗತ್ಯ - ಟಿಮ್‌ ಸ್ಪೆಕ್ಟರ್‌ ಬ್ರಿಟಿಷ್ ಎಪಿಡೆಮಿಯಾಲಜಿಸ್ಟ್ ಮತ್ತು ಪೋಷಣೆ ಕಂಪನಿ ಜೊಯಿ ಸಹಸಂಸ್ಥಾಪಕ ಟಿಮ್‌ ಸ್ಪೆಕ್ಟರ್‌ ಅವರು “ನಮ್ಮ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡಲು ಪ್ರತಿದಿನ ಕನಿಷ್ಠ ಮೂರು ವಿಭಿನ್ನ ರೀತಿಯ ಹುದುಗಿಸಿದ ಆಹಾರಗಳನ್ನು ಸೇವಿಸುವುದು ಅಗತ್ಯ” ಎನ್ನುತ್ತಾರೆ. ಹುದುಗಿಸಿದ ಆಹಾರಗಳ ಕುರಿತು ಸಂಶೋಧನೆಯು ಇನ್ನೂ ಅಭಿವೃದ್ಧಿ ಹೊಂದುತ್ತಿದೆ, ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ 2022 ರ ಅಧ್ಯಯನಗಳ ವಿಮರ್ಶೆಯ ಪ್ರಕಾರ, “ಹೃದಯರಕ್ತನಾಳದ ಕಾಯಿಲೆ ಮತ್ತು ಟೈಪ್ 2 ಮಧುಮೇಹದ ಅಪಾಯಗಳನ್ನು ಕಡಿಮೆ ಮಾಡಬಹುದು ಮತ್ತು ಕರುಳಿನಲ್ಲಿ ಬ್ಯಾಕ್ಟೀರಿಯಾದ ವೈವಿಧ್ಯತೆಯನ್ನು ಹೆಚ್ಚಿಸಬಹುದು. ಆದ್ದರಿಂದ ಈ ಹುದುಗಿಸಿದ ಆಹಾರಗಳು ಜೀರ್ಣಕಾರಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿವೆ” ಎಂದು ಸೂಚಿಸುತ್ತವೆ. ಸುದ್ದಿ ಮಾಧ್ಯಮ ಬಿಸಿನೆಸ್‌ ಇನ್‌ಸೈಡರ್‌ಗೆ ವಿಜ್ಞಾನಿ ಸ್ಪೆಕ್ಟರ್‌ ಹೇಳಿರುವುದೇನು? . ಸ್ಪೆಕ್ಟರ್ ಅವರು “ತಮ್ಮ ಆಹಾರದಲ್ಲಿ ಹುದುಗಿಸಿದ ಆಹಾರವನ್ನು ಹೇಗೆ ಸೇರಿಸಿಕೊಳ್ಳುತ್ತಾರೆ” ಎಂದು ಸುದ್ದಿ ಮಾಧ್ಯಮ ಬಿಸಿನೆಸ್ ಇನ್‌ಸೈಡರ್‌ಗೆ ತಿಳಿಸಿದರು. ನಿಮ್ಮ ಆಹಾರದಲ್ಲಿ ಹುದುಗಿಸಿದ ಆಹಾರವನ್ನು ಸ್ವಲ್ಪ- ಸ್ವಲ್ಪ ಮಾತ್ರ ಸೇವಿಸುವುದಕ್ಕೆ ಹೇಳಿದ್ದಾರೆ. ಅವರು ತಮ್ಮ ಅಡುಗೆ ಪುಸ್ತಕ “ಫುಡ್ ಫಾರ್ ಲೈಫ್” ಹುದುಗಿಸಿದ ಆಹಾರಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಈ ಪುಸ್ತಕ 2025 ರಲ್ಲಿ US ನಲ್ಲಿ ಪ್ರಕಟವಾಗಲಿದೆ. ಈ ಆಹಾರಗಳ ರುಚಿಗೆ ಒಗ್ಗಿಕೊಳ್ಳಲು ಮತ್ತು ನಿಮ್ಮ ಕರುಳು ಎಲ್ಲಾ ಹೊಸ ಬ್ಯಾಕ್ಟೀರಿಯಾಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಅಡುಗೆಗೆ ವಿವಿಧ ಹುದುಗಿಸಿದ ಆಹಾರಗಳನ್ನು ಸ್ವಲ್ಪ -ಸ್ವಲ್ಪ ಮಾತ್ರ ಸೇರಿಸಿಕೊಳ್ಳುವುದಕ್ಕೆ ಸ್ಪೆಕ್ಟರ್ ಶಿಫಾರಸು ಮಾಡುತ್ತಾರೆ. ಕರುಳಿನ ಆರೋಗ್ಯದಲ್ಲಿ ಪರಿಣತಿ ಪಡೆದಿರುವ ಡಯೆಟಿಷಿಯನ್‌ ತಂಜಿಲ್‌ ಅವರ ಅಭಿಪ್ರಾಯವೇನು? ಕರುಳಿನ ಆರೋಗ್ಯದಲ್ಲಿ ಪರಿಣತಿ ಹೊಂದಿರುವ ಡಯೆಟಿಷಿಯನ್ ತಂಜಿಲ್ ಮಿಯಾ ಅವರು, “ಸ್ಯಾಂಡ್‌ವಿಚ್‌ಗಳು ಅಥವಾ ಸಲಾಡ್‌ಗಳಿಗೆ ಕಿಮ್ಚಿ ಅಥವಾ ಸೌರ್‌ಕ್ರಾಟ್ ಅನ್ನು ಸೇರಿಸುವುದು ಮತ್ತು ಮೊಸರನ್ನು ಸಾಸ್ ಅಥವಾ ಮ್ಯಾರಿನೇಡ್‌ನಂತೆ ಬಳಸುವುದು, ನೀವು ಹುದುಗಿಸಿದ ಆಹಾರವನ್ನು ಸೇರಿಸುವುದಕ್ಕೆ ಸುಲಭವಾದ ಮಾರ್ಗವಾಗಿದೆ” ಎಂದು ಹೇಳಿದರು. ಅಂಗಡಿಯಿಂದ ಖರೀದಿಸಿದ ಹುದುಗಿಸಿದ ಆಹಾರಗಳ ಲೇಬಲ್‌ಗಳನ್ನು ಪರಿಶೀಲನೆ ಮಾಡುವುದು ಅಗತ್ಯ ಹುದುಗುವ ಆಹಾರವನ್ನು ಬಳಸುವ ಹೊಸಬರಿಗೆ ನನ್ನ ಸಲಹೆಯೆಂದರೆ ನೀವು ಆನಂದಿಸುವ ಕೆಲವು ಅಂಗಡಿಯಿಂದ ಖರೀದಿಸಿದ ವಾಣಿಜ್ಯ ಹುದುಗಿಸಿದ ಉತ್ಪನ್ನಗಳ ಲೇಬಲ್‌ಗಳನ್ನು ಕಂಡುಹಿಡಿದು ಆಹಾರವನ್ನು ಸೇವಿಸುವುದು ಉತ್ತಮ “ ಎಂದು ಸ್ಪೆಕ್ಟರ್ “ಫುಡ್ ಫಾರ್ ಲೈಫ್” ನಲ್ಲಿ ಬರೆದಿದ್ದಾರೆ. “ನೀವು ಹುದುಗಿಸಿದ ಆಹಾರಗಳ ವ್ಯಾಪ್ತಿಯನ್ನು ಕೇವಲ ಉಪ್ಪಿನಕಾಯಿ ಮತ್ತು ಕೆಫಿರ್‌ಗಳನ್ನು ಮೀರಿ ವಿಸ್ತರಿಸಬಹುದು. ನಾನು ಈಗ ನನ್ನ ಮನೆಯಲ್ಲಿ ತಯಾರಿಸಿದ ಲ್ಯಾಬ್ನೆ ಮತ್ತು ಹುದುಗಿಸಿದ ಅಣಬೆ ಮತ್ತು ಬೆಳ್ಳುಳ್ಳಿಯನ್ನು ತಯಾರಿಸಿ ಸೇವನೆ ಮಾಡುತ್ತೇನೆ” ಎಂದು ಸ್ಪೆಕ್ಟರ್‌ ಹೇಳಿದರು. ಮನೆಯಲ್ಲಿ ಹುದುಗಿಸಿದ ಆಹಾರವನ್ನು ತಯಾರಿಸಿ ಸೇವಿಸುವುದು ಉತ್ತಮ ಮನೆಯಲ್ಲಿ ಹುದುಗಿಸಿದ ಆಹಾರವನ್ನು ತಯಾರಿಸುವುದು ಪರಿಸರಕ್ಕೆ ಮತ್ತು ನಿಮ್ಮ ವ್ಯಾಲೆಟ್‌ಗೆ ಉತ್ತಮವಾಗಿದೆ, ಏಕೆಂದರೆ ಇದು ಆಹಾರದ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. “ನೀವು “ಬ್ಯಾಕ್‌ಸ್ಲಾಪಿಂಗ್” ಎಂಬ ತಂತ್ರದೊಂದಿಗೆ ಅಂಗಡಿಯಲ್ಲಿ ಖರೀದಿಸಿದ ಆಹಾರಗಳಿಂದ ನಿಮ್ಮ ಸ್ವಂತ ಕೆಫೀರ್ ಅನ್ನು ತಯಾರಿಸಬಹುದು. ಕೆಫೀರ್ ಅನ್ನು ಬ್ಯಾಕ್‌ಸ್ಲಾಪ್ ಮಾಡಲು, ಪೂರ್ಣ-ಕೊಬ್ಬಿನ ಹಾಲಿನ ಬಾಟಲಿಗೆ ಉತ್ತಮ-ಗುಣಮಟ್ಟದ ಕೆಫೀರ್ ಅನ್ನು ಸೇರಿಸಿ. ಅದು ಹುದುಗಲು ಕೋಣೆಯ ಉಷ್ಣಾಂಶದಲ್ಲಿ ಇರಿಸಿ, ತದನಂತರ ಫ್ರಿಜ್‌ನಲ್ಲಿ ಸಂಗ್ರಹಿಸಿ” ಎಂದು ಸ್ಪೆಕ್ಟರ್ ಹೇಳಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.