ಸಾಂದರ್ಭಿಕ ಚಿತ್ರ ಪ್ರಯಾಣ (Travelling) ಯಾರಿಗೆ ಇಷ್ಟವಿಲ್ಲ ಹೇಳಿ, ಅದರಲ್ಲೂ ವಿಮಾನ ಪ್ರಯಾಣವೆಂದರೆ ಅದೊಂದು ವೈಭವೋಪೇತ ಅನುಭವವನ್ನು ನೀಡುತ್ತದೆ. ವಿಮಾನ ಪ್ರಯಾಣದ (Aeroplane journey ) ಸಮಯದಲ್ಲಿ ಹೆಚ್ಚಿನವರು ವಿಮಾನ ನಿಲ್ದಾಣಗಳ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ವಿಮಾನ ನಿಲ್ದಾಣಗಳ (International airports) ಸೌಂದರ್ಯಕ್ಕೆ ಮಾರು ಅಲ್ಲಿಂದಲೇ ವಿಮಾನ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರು ಇದ್ದಾರೆ. ಏರ್‌ಹೆಲ್ಪ್ ಇಂಕ್ 2024 ರ (Airhelp Inc 2024) ಸ್ಕೋರ್ ರಿಪೋರ್ಟ್ ಅನ್ನು ಬಿಡುಗಡೆ ಮಾಡಿದ್ದು, ಇದು ವಿಶ್ವದ ಉತ್ತಮ ಹಾಗೂ ಕೆಟ್ಟ ಏರ್‌ಪೋರ್ಟ್‌ಗಳ ವಿವರವನ್ನು ನೀಡಿದೆ. ವಿಶ್ವದ ಅತ್ಯುತ್ತಮ ಏರ್‌ಪೋರ್ಟ್‌ಗಳ ಪಟ್ಟಿ ತಯಾರಿಸಿರುವ ಏರ್‌ಹೆಲ್ಪ್ ಇಂಕ್ ವಿಮಾನ ಪ್ರಯಾಣಿಕರಿಗೆ ವಿಮಾನ ವಿಳಂಬವಾದಲ್ಲಿ ಇಲ್ಲವೇ ರದ್ದುಗೊಂಡಲ್ಲಿ ಅವರಿಗೆ ಪರಿಹಾರವನ್ನೊದಗಿಸುವ ಸಂಸ್ಥೆಯು ವಿಶ್ವದಾದ್ಯಂತ ಇದು ಕ್ಲೇಮ್‌ಗಳನ್ನು ಪ್ರಕ್ರಿಯೆ ಮಾಡುವುದನ್ನು ಆಧರಿಸಿ ಭಾಗಶಃ ರ‍್ಯಾಂಕ್‌ಗಳನ್ನು ನೀಡಿದೆ. ಇದರೊಂದಿಗೆ ಹೊರಗಿನ ಮೂಲಗಳನ್ನು ಆಧಾರಗಳನ್ನು ಸಮೀಕ್ಷೆಗೆ ಬಳಸಿಕೊಂಡಿದ್ದು, ಸರಿಯಾದ ಸಮಯಕ್ಕೆ ಕಾರ್ಯನಿರ್ವಹಣೆ, ಗ್ರಾಹಕರ ಪ್ರತಿಕ್ರಿಯೆ ಹಾಗೂ ಆಹಾರ ಮತ್ತು ವಿಶ್ವದಾದ್ಯಂತವಿರುವ 239 ವಿಮಾನ ನಿಲ್ದಾಣಗಳಲ್ಲಿ ಶಾಪಿಂಗ್ ಆಯ್ಕೆಗಳನ್ನಾಧರಿಸಿ ಪಟ್ಟಿ ತಯಾರಿಸಿದೆ. ಸರಿಯಾದ ಸಮಯಕ್ಕೆ ವಿಮಾನ ಆಗಮನ ಹಾಗೂ ನಿರ್ಗಮನದಲ್ಲಿ ಪ್ರತಿಯೊಂದು ವಿಮಾನ ನಿಲ್ದಾಣಗಳು 60% ಅಂಕವನ್ನು ಗಳಿಸಿವೆ. ಇದನ್ನೂ ಓದಿ: Mysuru-Chennai Bullet Train Project: ಕೋಲಾರದಲ್ಲೂ ಬುಲೆಟ್ ಟ್ರೈನ್ ನಿಲ್ದಾಣ; ರೈತರಿಗೆ ಜಿಲ್ಲಾಧಿಕಾರಿಗಳ ಅಭಯ, ಏನಿದು ಆಶ್ವಾಸನೆ? ಮೇ 1, 2023 ರಿಂದ ಏಪ್ರಿಲ್ 30, 2024 ರವರೆಗಿನ ಅಂಕಿ ಅಂಶಗಳನ್ನು ಸಮೀಕ್ಷೆಗೆ ಬಳಸಿಕೊಂಡಿದ್ದು 17,550 ವಿಮಾನ ನಿಲ್ದಾಣಗಳ ರೇಟಿಂಗ್‌ಗಳನ್ನು ತಯಾರಿಸಲಾಗಿದ್ದು, 64 ದೇಶಗಳ ಪ್ರಯಾಣಿಕರು ತಾವು ಹೆಚ್ಚಾಗಿ ಪ್ರಯಾಣಕ್ಕೆ ಬಳಸಿರುವ ವಿಮಾನ ನಿಲ್ದಾಣಗಳ ಪ್ರತಿಕ್ರಿಯೆಗಳನ್ನಾಧರಿಸಿ ಸಮೀಕ್ಷೆ ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ ಒಂದನೇ ಸ್ಥಾನ ಪಡೆದುಕೊಂಡ ಹಮಾದ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಈ ವರ್ಷ ಕತಾರ್‌ನ ಹಮಾದ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಇದುವೇ ವಿಮಾನ ನಿಲ್ದಾಣ ಕಳೆದ ವರ್ಷ ಐದನೇ ಸ್ಥಾನವನ್ನು ಪಡೆದುಕೊಂಡಿತ್ತು. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಹಾಗೂ ಜಪಾನ್‌ನ ಚುಬು ಸೆಂಟಾಯರ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಎರಡನೆಯ ಹಾಗೂ ಮೂರನೆಯ ಸ್ಥಾನ ಗಳಿಸಿಕೊಂಡಿವೆ. ಆದರೆ ಆಶ್ಚರ್ಯಕರವಾಗಿ ಯುಎಸ್, ಸಾಲ್ಟ್ ಲೇಕ್ ಸಿಟಿ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಪಟ್ಟಿಯಲ್ಲಿ 12 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಗೇಟ್‌ವೆ ಟು ಉತಾಸ್ ಎಪಿಕ್ ಸೈಕಿಂಗ್ ಹಾಗೂ ನ್ಯಾಶನಲ್ ಪಾರ್ಕ್ಸ್ ವಿಶ್ವದ ಪಟ್ಟಿಯಲ್ಲಿ 8 ನೇ ರ‍್ಯಾಂಕ್ ಪಡೆದುಕೊಂಡಿವೆ ಹಾಗೂ ಯುಎಸ್‌ನಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಪಟ್ಟಿಯಲ್ಲಿರುವ 50 ವಿಮಾನ ನಿಲ್ದಾಣಗಳಲ್ಲಿ ಈ ಬಾರಿ ಯುಎಸ್‌ನ ಹತ್ತು ವಿಮಾನ ನಿಲ್ದಾಣಗಳಾದ ವಾಶಿಂಗ್ಟನ್ ಡಲ್ಲಾಸ್ ಇಂಟರ್ನ್ಯಾಶನಲ್ (11 ನೇ ಸ್ಥಾನ), ಹಾರ್ಟ್ಸ್‌ಫೈಡ್ ಜಾಕ್ಸಸನ್ ಅಟ್ಲಾಂಟಾ ಇಂಟರ್ನ್ಯಾಶನಲ್ (16 ನೇ ಸ್ಥಾನ), ನಶ್‌ವಿಲ್ಲೆ ಇಂಟರ್ನ್ಯಾಶನಲ್ (18 ನೇ ಸ್ಥಾನ), ಫೋನಿಕ್ಸ್ ಹಾರ್ಬರ್ ಇಂಟರ್ನ್ಯಾಶನಲ್ (21 ನೇ ಸ್ಥಾನ) ಪಡೆದುಕೊಂಡಿವೆ. 2024 ರ ರ‍್ಯಾಂಕಿಂಗ್‌ಗಳ ಪಟ್ಟಿಯನ್ನು ಗಮನಿಸಿದಾಗ ಟಾಪ್ 30 ರಲ್ಲಿ ಏಳು ವಿಮಾನ ನಿಲ್ದಾಣಗಳನ್ನಿರಿಸುವ ಮೂಲಕ ಯುಎಸ್ ಪಟ್ಟಿಯಲ್ಲಿ ಮುಂದಿದೆ ಎಂದು ಏರ್‌ಹೆಲ್ಪ್ ಸಿಇಒ ತೋಮಸ್ ಪವಿಲ್ಜನ್ ಹೇಳಿದ್ದಾರೆ. ಕೋವಿಡ್ ನಂತರ ಯುಎಸ್ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಅಭಿವೃದ್ಧಿಗಳು ನಡೆದಿವೆ ಎಂದು ತೋಮಸ್ ತಿಳಿಸಿದ್ದಾರೆ. ಪಟ್ಟಿಯಲ್ಲಿರುವ ಟಾಪ್ ಯುಎಸ್ ವಿಮಾನ ನಿಲ್ದಾಣಗಳಿಂದ ಪ್ರಗತಿ ತಿಳಿದು ಬರುತ್ತದೆ ಎಂದು ಅವರು ಹೇಳಿದ್ದು, ಕಳೆದ ವರ್ಷದ ಅಂಕಗಳಿಗೆ ಹೋಲಿಸಿದಾಗ ಈ ಬಾರಿ ಉತ್ತಮ ಅಭಿವೃದ್ಧಿ ಇದೆ ಎಂದು ಹೇಳಿದ್ದಾರೆ. 2023 ರ ಪಟ್ಟಿಯಲ್ಲಿ ಉತ್ತಮ ಸ್ಥಾನ ದಾಖಲಿಸಿದ ಯುಎಸ್ ವಿಮಾನ ನಿಲ್ದಾಣಗಳಾದ ಮಿನಿಪ್ಪೊಲಿಸ್ ಸೈಂಟ್ ಪಾಲ್, ಈ ಬಾರಿ 8.15 (ಗರಿಷ್ಠ 10 ಪಾಯಿಂಟ್‌ಗಳಲ್ಲಿ) ಅಂಕ ಪಡೆದಿದೆ. ಈ ವರ್ಷ ಯುಎಸ್‌ನ ಟಾಪ್ 10 ವಿಮಾನ ನಿಲ್ದಾಣಗಳು ಹೆಚ್ಚಿನ ಸ್ಕೋರ್ ದಾಖಲಿಸಿವೆ. ಭಾರತದ ಯಾವುದೇ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿಲ್ಲ. ಏರ್‌ಹೆಲ್ಪ್ ಬಿಡುಗಡೆ ಮಾಡಿರುವ ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳು 10. ನತ್ರಿಯಾ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಟೋಕಿಯೊ (ಜಪಾನ್) 9. ವಡ್ಲೆ ಕಾನ್ಸ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಬೆಲಿಮ್ ಬ್ರೆಜಿಲ್ 8. ಸಾಲ್ಟ್ ಲೇಕ್ ಸಿಟಿ ಇಂಟರ್ನ್ಯಾಶನಲ್ ಏರ್‌ಪೋರ್ಟ್, ಯುಎಸ್ 7. ಮಸ್ಕತ್ ಇಂಟರ್ನ್ಯಾಶನಲ್ ಏರ್‌ಪೋರ್ಟ್, ಒಮನ್ 6. ಜೊಹಾನ್ಸ್‌ಬರ್ಗ್ ಟಂಬೊ ಇಂಟರ್ನ್ಯಾಶನಲ್ ಏರ್‌ಪೋರ್ಟ್, ದಕ್ಷಿಣ ಆಫ್ರಿಕಾ 5. ಬ್ರೆಸಲಿಯಾ ಪ್ರೆಸಿಡೆಂಟ್ ಇಂಟರ್ನ್ಯಾಶನಲ್ ಏರ್‌ಪೋರ್ಟ್, ಬ್ರೆಜಿಲ್ 4. ಒಸ್ಕಾರಾ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಜಪಾನ್ 3. ಚುಬು ಸೆಂಟಿಯಾರ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಜಪಾನ್ 2. ಕೇಪ್ ಟೌನ್ ಇಂಟರ್ನ್ಯಾಶನಲ್ ಏರ್‌ಪೋರ್ಟ್, ದಕ್ಷಿಣ ಆಫ್ರಿಕಾ 1. ಹಮಾದ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಕತಾರ್ ಯುಎಸ್‌ನ ಟಾಪ್ 10 ವಿಮಾನ ನಿಲ್ದಾಣಗಳು 10. ಆಸ್ಟಿನ್ ಬರ್ಗ್‌ಸ್ಟ್ರೋಮ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ 9. ಡೇನಿಯಲ್. ಕೆ ಇನೊಯ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ 8. ಚಾರ್ಲೊಟ್ಟೆ ಡಾಗ್ಲಸ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ 7. ಫೋನಿಕ್ಸ್ ಸ್ಕೈ ಹಾರ್ಬರ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ 6. ನಶ್‌ವಿಲ್ಲೆ ಇಂಟರ್ನ್ಯಾಶನಲ್ ಏರ್‌ಪೋರ್ಟ್ 5. ಮಿನಾಪೊಲಿಸ್ ಸೈಂಟ್ ಪಾಲ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ 4. ಹಾರ್ಟ್ಸ್‌ಫೀಲ್ಡ್ ಜಾಕ್ಸನ್ ಅಟ್ಲಾಂಟಾ ಇಂಟರ್ನ್ಯಾಶನಲ್ ಏರ್‌ಪೋರ್ಟ್ 3. ಡೆಟ್ರೊಯ್ಟ್ ಮೆಟ್ರೊಪೊಲಿಟನ್ ವಯಾನೆ ಕಂಟ್ರಿ ಏರ್‌ಪೋರ್ಟ್ 2. ವಾಶಿಂಗ್ಟನ್ ಡಲ್ಲಾಸ್ ಇಂಟರ್ನ್ಯಾಶನಲ್ ಏರ್‌ಪೋರ್ಟ್ 1. ಸಾಲ್ಟ್ ಲೇಕ್ ಸಿಟಿ ಇಂಟರ್ನ್ಯಾಶನಲ್ ಏರ್‌ಪೋರ್ಟ್ None
Popular Tags:
Share This Post:
Darshan: ದರ್ಶನ್ ಆಚೆ ಬರೋಕೆ ಅದೊಂದೇ ದೊಡ್ಡ ಸಮಸ್ಯೆ? ಹೈಡ್ರಾಮಾ ನಡೆಯುತ್ತಾ?
- by Sarkai Info
- October 30, 2024
What’s New
Spotlight
Today’s Hot
-
- October 30, 2024
-
- October 30, 2024
-
- October 30, 2024
Featured News
Latest From This Week
Subscribe To Our Newsletter
No spam, notifications only about new products, updates.