ಆಸ್ಟ್ರೇಲಿಯಾ (Australia) ವಿರುದ್ಧ 2023-25ರ ಬಾರ್ಡರ್-ಗವಾಸ್ಕರ್ ಟ್ರೋಫಿ (BGT)ಯಲ್ಲಿ ಭಾರತ (India) 1-3 ಅಂತರದಿಂದ ಸೋಲು ಕಂಡಿದೆ. ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ 6 ವಿಕೆಟ್‌ಗಳ ಸೋಲು ಕಾಣುತ್ತಿದ್ದಂತೆ ಭಾರತ ತಂಡ 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಂಡಿದೆ. ನ್ಯೂಜಿಲೆಂಡ್ (New Zealand) ವಿರುದ್ಧ 3-0 ಅಂತರದ ಸೋಲಿನ ಬಳಿಕ ಈ ಸರಣಿಯಲ್ಲಿ ಭಾರತದ ಮೇಲೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಪರ್ತ್‌ನಲ್ಲಿ ನಡೆದ ಮೊದಲನೇ ಟೆಸ್ಟ್ ಗೆದ್ದಿದ್ದರಿಂದ ಮತ್ತೆ ಸರಣಿ ಗೆಲ್ಲುವ ಆಸೆ ಚಿಗುರಿತ್ತು. ಆದರೆ ನಂತರ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಅಡಿಲೇಡ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಸೋಲು ಕಂಡು ಸರಣಿ ಕಳೆದುಕೊಂಡಿತು. ಈ ಸರಣಿ ಸೋಲಿಗೆ ಪ್ರಮುಖ ಕಾರಣಗಳೇನು ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ. ಕೊಹ್ಲಿ-ರೋಹಿತ್ ವೈಫಲ್ಯ ಭಾರತದ ಇಬ್ಬರು ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಅತ್ಯಂತ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ರೋಹಿತ್ ಮೊದಲ ಟೆಸ್ಟ್‌ನಿಂದ ಹೊರಗುಳಿದು, ನಂತರ 2ನೇ ಪಂದ್ಯದಿಂದ ತಂಡ ಸೇರಿಕೊಂಡರೂ, ಒಂದೂ ಪಂದ್ಯದಲ್ಲೂ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಕೊಹ್ಲಿ ಕೂಡ 9 ಇನ್ನಿಂಗ್ಸ್ಗಳಿಂದ ಕೇವಲ 190 ರನ್ಗಳಿಸುವ ಮೂಲಕ ವೈಫಲ್ಯ ಅನುಭವಿಸಿದರು. ಇದು ಮಧ್ಯಮ ಕ್ರಮಾಂಕದ ಮೇಲೆ ಅಪಾರ ಒತ್ತಡವನ್ನು ಉಂಟುಮಾಡಿತು. ಕೊಹ್ಲಿ ಪರ್ತ್‌ನಲ್ಲಿ ಶತಕಗಳಿಸಿದರಾದರು, ಆ ನಂತರ ದಯನೀಯ ವೈಫಲ್ಯ ಅನುಭಿಸಿದರು. ಅಗ್ರ ಕ್ರಮಾಂಕದಿಂದ ವೈಫಲ್ಯವೇ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ಸರಣಿಯುದ್ದಕ್ಕೂ ವಿಫಲವಾಯಿತು. ಇದನ್ನೂ ಓದಿ: ಭಾರತದ ಪ್ರಾಬಲ್ಯ ಅಂತ್ಯಗೊಳಿಸಿ WTC ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ! ಈ ಸಾಧನೆ ಮಾಡಿದ ಎರಡನೇ ತಂಡ ಬುಮ್ರಾ ಏಕಾಂಗಿ ಹೋರಾಟ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತದ ವೇಗದ ಬೌಲಿಂಗ್ ದಾಳಿ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಆದರೆ ಸರಣಿಯಲ್ಲಿ ಬುಮ್ರಾಗೆ ಸರಿಯಾದ ಜೊತೆಗಾರ ಸಿಗಲಿಲ್ಲ. ಸಿರಾಜ್ ಕೆಲವೊಮ್ಮ ಅದ್ಭುತ ಸ್ಪೆಲ್ ಮಾಡಿದರಾದರು. ಆದರೆ ಮೂರನೇ ಸೀಮರ್ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಆಕಾಶ್ ದೀಪ್, ಹರ್ಷಿತ್ ರಾಣಾ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಬುಮ್ರಾ 32 ವಿಕೆಟ್ ಪಡೆದು ಪ್ರಮುಖ ವಿಕೆಟ್ ಟೇಕರ್ ಆಗಿ ಸರಣಿಯನ್ನು ಕೊನೆಗೊಳಿಸಿದರು, ಸಿರಾಜ್ 20 ವಿಕೆಟ್ ಪಡೆದರೂ ತಂಡಕ್ಕೆ ಅಗತ್ಯವಾದಾ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಜೊತೆಗೆ ಸ್ಥಿರವಾದ ಮೂರನೇ ಬೌಲರ್ ಕೊರತೆಯಿಂದಾಗಿ ಭಾರತ ಎದುರಾಳಿ ಮೇಲೆ ನಿರಂತರ ಒತ್ತಡವನ್ನು ಏರಲು ಸಾಧ್ಯವಾಗಲಿಲ್ಲ. ಅದರಲ್ಲೂ ಮೆಲ್ಬೋರ್ನ್ನಲ್ಲಿ ಕೊನೆಯ ಮೂರು ವಿಕೆಟ್ಗೆ 100ಕ್ಕೂ ಹೆಚ್ಚು ರನ್ಗಳ ಹರಿದುಬಂದವು. ಆಲ್ರೌಂಡರ್ಗಳ ಅಸ್ಥಿರ ಪ್ರದರ್ಶನ ಭಾರತದ ಪ್ರದರ್ಶನದ ಅತ್ಯಂತ ಚರ್ಚೆಯ ಅಂಶವೆಂದರೆ ತಂಡದ ಆಯ್ಕೆ. ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರನ್ನು ಸೇರಿಸಿಕೊಂಡಿದ್ದು ಅಚ್ಚರಿಯನ್ನುಂಟು ಮಾಡಿತ್ತು. ಸುಂದರ್ ಒಳ್ಳೆಯ ಆಲ್ರೌಂಡರ್ ಆದರೂ, ಒಂದೂ ಪಂದ್ಯದಲ್ಲೂ ಅವರಿಂದ ಬೌಲಿಂಗ್ ಅತವಾ ಬ್ಯಾಟಿಂಗ್ನಿಂದ ತಂಡಕ್ಕೆ ನೆರವಾಗಲೇ ಇಲ್ಲ. ನಿತೀಶ್ ರೆಡ್ಡಿ ಬ್ಯಾಟಿಂಗ್ನಲ್ಲಿ ಸಫಲವಾದರೂ ಬೌಲಿಂಗ್ನಲ್ಲಿ ವಿಫಲರಾದರು. ಇದನ್ನೂ ಓದಿ: ಮೊದಲ ಓವರ್ನಲ್ಲಿ ಅತಿ ಹೆಚ್ಚು ರನ್! ಟೆಸ್ಟ್ ಕ್ರಿಕೆಟ್ನಲ್ಲಿ ಎಲ್ಲಾ ದಾಖಲೆ ಉಡೀಸ್ ಮಾಡಿದ ಜೈಸ್ವಾಲ್ ಮೈದಾನದಲ್ಲಿ ಆಕ್ರಮಣಶೀಲತೆಯ ಕೊರತೆ ಭಾರತವು ಸದಾ ಆಕ್ರಮಣಕಾರಿ ಮನೋಭಾವದಲ್ಲಿ ಆಡುವುದಕ್ಕೆ ಖ್ಯಾತಿ ಪಡೆದಿದೆ. ಆದರೆ ಸರಣಿಯ ಕೆಲವೊಂದು ಸಂದರ್ಭಗಳಲ್ಲಿ ಆಕ್ರಮಣಶೀಲತೆಯ ಕೊರತೆಯು ಸ್ಪಷ್ಟವಾಗಿ ಕಂಡುಬಂದಿದೆ. ಬ್ಯಾಟಿಂಗ್, ಬೌಲಿಂಗ್ ಅಥವಾ ಅವರ ಫೀಲ್ಡಿಂಗ್ ಯಾವುದರಲ್ಲೂ ಆಸ್ಟ್ರೇಲಿಯಾ ತಂಡದ ಮೇಲೆ ಒತ್ತಡ ಹೇರಲು ಅಗತ್ಯವಾದ ಆಕ್ರಮಣಕಾರಿ ಮನೋಭಾವನೆಯ ಕೊರತೆಯನ್ನು ಸರಣಿಯುದ್ದಕ್ಕೂ ಕಂಡು ಬಂದಿತು. ಬ್ಯಾಟರ್‌ಗಳು ಇಡೀ ಸರಣಿಯಲ್ಲಿ ಭಯದಿಂದ ಆಡತೊಡಗಿದರು. ರಾಹುಲ್, ಕೊಹ್ಲಿ, ಗಿಲ್, ರೋಹಿತ್ ಇಡೀ ಸರಣಿಯಲ್ಲಿ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಲಿಲ್ಲ. ಎಲ್ಲರೂ ವಿಕೆಟ್ ಉಳಿಸಿಕೊಳ್ಳುವ ಯತ್ನದಲ್ಲಿ ವಿಕೆಟ್ ಒಪ್ಪಿಸುತ್ತಿದ್ದರು. ಇನ್ನು ಪಂತ್ ಅತಿಯಾದ ಆತ್ಮವಿಶ್ವಾಸದಿಂದ ವಿಕೆಟ್ ಕೈಚೆಲ್ಲಿದರು. ಸ್ಕಾಟ್ ಬೊಲ್ಯಾಂಡ್ ಕಡಗಣನೆ ಭಾರತ ತಂಡ ಸ್ಕಾಟ್ ಬೊಲ್ಯಾಂಡ್ ಅವರನ್ನ ಕಡೆಗಣಿಸಿತು. ಆದರೆ ಅವರೇ ಕೊನೆಯ ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಕಂಟಕಪ್ರಾಯವಾದರು. ಪ್ರಮುಖ ಬೊಲ್ಯಾಂಡ್ ಅವರ ವೇಗ ಮತ್ತು ನಿಖರತೆಯ ಮುಂದೆ ಭಾರತದ ಬ್ಯಾಟರ್‌ಗಳು ನಿಲ್ಲಲಾರದಾದರು. ಭಾರತ ತಂಡ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಎದುರಿಸಲು ತಯಾರಿ ನಡೆಸಿದ್ದರೆ, ಬೊಲ್ಯಾಂಡ್ ಔಟ್ ಆಫ್ ಸಿಲಬಸ್ನಂತೆ ಎಂಟ್ರಿ ಕೊಟ್ಟಿದ್ದು, ಅವರನ್ನ ಟೀಮ್ ಇಂಡಿಯಾ ಆಟಗಾರರು ನಿಭಾಯಿಸಲು ವಿಫಲರಾದರು. ಸಿಡ್ನಿ ಟೆಸ್ಟ್‌ನಲ್ಲಿ ಬೊಲ್ಯಾಂಡ್ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಸೋಲಿಗೆ ಕಾರಣರಾದರು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.