ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಕಿ ಭಾಯ್; ವಿಡಿಯೋ ಫುಲ್ ವೈರಲ್ ! ರಾಕಿಂಗ್ ಸ್ಟಾರ್ ಯಶ್ (Yash) ಜನ್ಮ ದಿನದ ಸಂಭ್ರಮ ಜೋರಾಗುತ್ತಿದೆ. ಅಭಿಮಾನಿಗಳು ಅತಿ ದೊಡ್ಡ ಸಂಭ್ರಮಕ್ಕೆ ರೆಡಿ ಆಗಿದ್ದಾರೆ. ಈ ಮಧ್ಯೆ ಟಾಕ್ಸಿಕ್ ಚಿತ್ರದ ಫಸ್ಟ್ ಗ್ಲಿಂಮ್ಸ್ (First Glimpse) ಕೂಡ ರಿಲೀಸ್ ಆಗ್ತದೆ ಅನ್ನುವ ಸುದ್ದಿ ಕೂಡ ಇದೆ. ಆದರೆ, ಕಳೆದ ಎರಡು ದಿನಗಳ ಹಿಂದಿನ ಒಂದು ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಈ ಒಂದು ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ (Rocking Star) ಮಂಗಳೂರಿನ ವಿಮಾನ ನಿಲ್ದಾಣದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಮುಂಬೈಯಲ್ಲಿ (Mumbai) ಯಾವ ರೀತಿ ಮಾಸ್ಕ್ ಹಾಕಿಕೊಂಡು ಓಡಾಡ್ತಿದ್ದರೋ? ಅದೇ ರೀತಿನೇ ಇಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ಇನ್ಸ್ಟಾಗ್ರಾಮ್‌ನ ಪೇಜ್ ಅಲ್ಲಿಯೇ ಈ ಒಂದು ವಿಡಿಯೋ ಶೇರ್ ಆಗಿದೆ. ಆದರೆ, ಮಂಗಳೂರಿಗೆ ರಾಕಿ ಭಾಯ್ ಯಾಕೆ ಬಂದ್ರು ಅನ್ನುವ ಪ್ರಶ್ನೆ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಂಗಳೂರಿನಲ್ಲಿ ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಮೊನ್ನೆ ಮುಂಬೈಯಿಂದ ಬೆಂಗಳೂರಿಗೆ ಬಂದಿದ್ದಾರೆ. ಬಂದಾದ್ಮೇಲೆ ಉಪ್ಪಿ ಯುಐ ಚಿತ್ರ ನೋಡಿದ್ದಾರೆ. ಮಾಜಿ ಸಿ.ಎಂ.ಕೃಷ್ಣ ಅವರ ಮನೆಗೂ ಹೋಗಿ ಬಂದಿದ್ದಾರೆ. ಇದರ ಮಧ್ಯೆ ವಾಪಾಸ್ ಮುಂಬೈಗೆ ಹೋದ್ರು ಅನ್ನೋ ಸುದ್ದಿ ಕೂಡ ಇತ್ತು. ಆದರೆ, ಈ ಒಂದು ಸುದ್ದಿ ಇರೋ ಹೊತ್ತಿಗೆ ಮಂಗಳೂರಿನ ಒಂದು ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿರೋ ಯಶ್, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿಗೆ ಯಾಕ್ ಬಂದ್ರು ರಾಕಿಂಗ್ ಸ್ಟಾರ್ ಯಶ್ ಸದ್ಯ ತಮ್ಮ ಟಾಕ್ಸಿಕ್ ಚಿತ್ರದ ಕೆಲಸಲ್ಲಿಯೇ ಇದ್ದಾರೆ. ಮುಂಬೈಯಲ್ಲಿ ಹೆಚ್ಚು ಕಡಿಮೆ ಒಂದು ತಿಂಗಳಿಗೂ ಹೆಚ್ಚು ದಿನ ಶೂಟಿಂಗ್ ಮಾಡಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ನ್ಯೂ ಇಯರ್ ಕೂಡ ಸೆಲೆಬ್ರೇಟ್ ಮಾಡಿದ್ದಾರೆ. ಇದನ್ನೂ ಓದಿ: Sudeep: ಅಮ್ಮ ಬಳಸುತ್ತಿದ್ದ ಕುರ್ಚಿ, ಅಮ್ಮನ ಚಪ್ಪಲಿಯೇ ಈಗ ಕಿಚ್ಚನ ಅತಿ ದೊಡ್ಡ ಆಸ್ತಿ ಆದರೆ, ಇದೀಗ ಸಡನ್ ಆಗಿಯೇ ಯಶ್ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆ ಬಂದು ಹೋದ ವಿಡಿಯೋ ಕಳೆದ ಎರಡು ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಮಂಗಳೂರಿನಲ್ಲಿ ಟಾಕ್ಸಿಕ್ ಶೂಟಿಂಗ್ ಟಾಕ್ಸಿಕ್ ಚಿತ್ರದ ಶೂಟಿಂಗ್ ಮಂಗಳೂರಿನಲ್ಲಿ ಪ್ಲಾನ್ ಆಗಿದೆ. ಆ ಹಿನ್ನೆಲೆಯಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಮಂಗಳೂರಿಗೆ ಬಂದಿದ್ದಾರೆ. ಲೋಕೇಷನ್ ನೋಡೋಕೇನೆ ಇಲ್ಲಿಗೆ ಬಂದಿದ್ದಾರೆ ಅನ್ನುವ ಸುದ್ದಿ ಇದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾರೂ ಏನೂ ಹೇಳಿಲ್ಲ ಅಂತಲೇ ಹೇಳಬಹುದು. ಇದನ್ನೂ ಓದಿ: Sanvi Sudeep: ಬರ್ತ್ಡೇ ದಿನ ಅಮ್ಮನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ಸಾನ್ವಿ ಸುದೀಪ್ ಟಾಕ್ಸಿಕ್ ಚಿತ್ರದ ಒಂದು ಹಂತದ ಶೂಟಿಂಗ್ ಬೆಂಗಳೂರಿನಲ್ಲಿಯೇ ಆಗಿದೆ. ಇಲ್ಲಿಯ ಎಚ್.ಎಂ.ಟಿ. ಫ್ಯಾಕ್ಟರಿಯಲ್ಲಿಯೇ ಅತಿ ದೊಡ್ಡ ಸೆಟ್ ಹಾಕಲಾಗಿತ್ತು. ಅಲ್ಲಿಯೇ ಚಿತ್ರದ ಪ್ರಮುಖ ದೃಶ್ಯಗಳನ್ನ ತೆಗೆಲಾಗಿದೆ. ಮುಂಬೈಯಲ್ಲಿ ಶೂಟಿಂಗ್ ಟಾಕ್ಸಿಕ್ ಚಿತ್ರದ ಎರಡನೇ ಹಂತದ ಶೂಟಿಂಗ್ ಮುಂಬೈಯಲ್ಲಿಯೇ ಆಗಿದೆ. ಇಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನ ತೆಗೆಯಲಾಗಿದೆ. ನಾಯಕಿ ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಸೇರಿದಂತೆ ಹಾಲಿವುಡ್ ಕಲಾವಿದರ ಪಾತ್ರಗಳ ದೃಶ್ಯಗಳನ್ನ ಇಲ್ಲಿಯೇ ತೆಗೆಯಲಾಗಿದೆ. ಇದಾದ್ಮೇಲೆ ಇದೀಗ ಸಿನಿಮಾ ತಂಡ ಮಂಗಳೂರು ಶಿಫ್ಟ್ ಆಗುತ್ತದೆ ಅನ್ನೋ ಸುದ್ದಿ ಇದೆ. ಮಂಗಳೂರಿನಲ್ಲಿಯೇ ಶೂಟಿಂಗ್ ಪ್ಲಾನ್ ಆಗಿದೆ. ಇಲ್ಲಿಯೇ ಇಡಿ ಟಾಕ್ಸಿಕ್ ತಂಡ ಶೂಟಿಂಗ್ ಶುರು ಮಾಡ್ತದೆ ಅನ್ನುವ ನ್ಯೂಸ್ ಇದೆ. ಹಾಗಾಗಿಯೇ ಯಶ್ ಇಲ್ಲಿಗೆ ಬಂದಿದ್ದರು. ಲೋಕೇಷನ್ ಫೈನಲ್ ಆದ್ಮೇಲೆ ಶೂಟಿಂಗ್ ಬರ್ತಾರೆ ಅನ್ನುವ ನ್ಯೂಸ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.