ಬೆಂಗಳೂರು: ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಈ ನಡುವೆ ಕಳೆದ ನಾಲ್ಕು ದಿನ ಚೀನಾ ಪ್ರವಾಸ ಕೈಗೊಂಡಿದ್ದ ಶಾಸಕ ರವಿ ಗಣಿಗ (Ravi Ganiga) ಅವರು, ಚೀನಾದಲ್ಲಿ ಶೇಕಡ 80 ರಷ್ಟು ಜನ ಮಾಸ್ಕ್ (Mask) ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದೀಗ ಬೆಂಗಳೂರಿಗೂ ಈ ವೈರಸ್ ಎಂಟ್ರಿ ಕೊಟ್ಟಿದೆ. ಭಾರತದಲ್ಲೂ ಆತಂಕ ಸೃಷ್ಟಿ ಚೀನಾ ನೆಲದಲ್ಲಿ ಕೊರೊನಾ ರೀತಿ ಪರಿಸ್ಥಿತಿ ಇದೀಗ ಮತ್ತೆ ನಿರ್ಮಾಣ ಆಗಿದೆ. ಆ ರೀತಿ ನೋಡುವುದಾದರೆ ಇದು ಕೊರೊನಾ ಮೀರಿಸುವ ಪರಿಸ್ಥಿತಿ ಅಂತಾ ಹೇಳಲಾಗುತ್ತಿದೆ. ಈ ಕಾರಣಕ್ಕೆ ಜನರು ಕೂಡ ನಲುಗಿ ಹೋಗಿದ್ದು, ಇದೀಗ ಹ್ಯೂಮನ್ ಮೆಟಾಫೆನೋಮೋ ವೈರಸ್ ಹಾವಳಿ ಹಿನ್ನೆಲೆ ಚೀನಾ ನೆಲದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಭಾರತದಲ್ಲೂ ಇದೀಗ ಆತಂಕ ಶುರುವಾಗಿದೆ. 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆ ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈ ವೇಳೆ ಬ್ಲಡ್ ಟೆಸ್ಟ್ ಮಾಡಿಸಿದಾಗ HMPV ವೈರಸ್ ಪತ್ತೆಯಾಗಿದೆ. ಇದನ್ನೂ ಓದಿ: Amit Shah: ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್‌ಗೆ ಕರೆ; ಸಂಜೆ 6ರವರೆಗೆ ಇಲ್ಲಿ ಬಸ್ ಸಂಚಾರ ಇರಲ್ಲ, ಶಾಲಾ ಕಾಲೇಜುಗಳಿಗೆ ರಜೆ HMPV ವೈರಸ್ ಭಾರತದಲ್ಲೂ ಇದೆ, ಮ್ಯೂಟೆಷನ್ ಆಗಿರುವ ಬಗ್ಗೆ ಸ್ಪಷ್ಟನೆ ಇಲ್ಲ ಈ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಹಿತಿ ನೀಡಿದ್ದು, HMPV ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. HMPV ವೈರಸ್ ಭಾರತದಲ್ಲೂ ಇದೆ. ಆದ್ರೆ ಅದು ಮ್ಯೂಟೆಷನ್ ಆಗಿದಿಯಾ ಅನ್ನೋ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾ ವೈರಸ್ ನ ಸ್ಟ್ರಚರ್ ಹೇಗಿದೆ ಎಂದು ತಿಳಿದಿಲ್ಲ. ಈ ಹಿನ್ನೆಲೆ ಇದು ಸಾಮಾನ್ಯ HMPV ಅಥವಾ ಚೀನಾದ ಸ್ಟ್ರೈನ್ ಎನ್ನೋದು ಗೊಂದಲ ಇದೆ. 0.78 ರಷ್ಟು ಭಾರತದಲ್ಲೂ ಸಾಮಾನ್ಯ HMPV ವೈರಸ್ ಕಾಣಿಸುತ್ತೆ. ಇವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Bus Ticket Price: ಸಾರಿಗೆ ಬಸ್ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣವಂತೆ! ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸಂತೋಷ್ ಲಾಡ್! ಕೇಂದ್ರ ಆರೋಗ್ಯ ಇಲಾಖೆ ಜೊತೆ ರಾಜ್ಯ ಆರೋಗ್ಯ ಇಲಾಖೆ ನಿರಂತರ ಸಂಪರ್ಕ ಮಗುವಿಗೆ HMPV ಪತ್ತೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕ ರಾಜ್ಯ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಇದು ಚೀನಾದ ಸ್ಟ್ರೈನ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ ಮಗುವಿನಲ್ಲಿ ಡಿಟೆಕ್ಟ್ ಆಗಿರೋ ಬಗ್ಗೆ ಮಾಹಿತಿ ನೀಡಲಾಗಿದ್ದು, ಇದು ಚೀನಾದ ಸ್ಟ್ರೈನ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಈ ಹಿನ್ನೆಲೆ ಭಯ ಪಡುವ ಅಗತ್ಯವಿಲ್ಲ. ಎಚ್ಚರಿಕೆಯನ್ನ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಚೀನಾದ ಆಸ್ಪತ್ರೆಗಳು ಮತ್ತು ಸ್ಮಶಾನಗಳು ಜನರಿಂದ ತುಂಬಿವೆ ಹೊಸ ವೈರಸ್ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ ಎಂದು ಅನೇಕ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸಿವೆ. ಚೀನಾದ ಆಸ್ಪತ್ರೆಗಳು ಮತ್ತು ಸ್ಮಶಾನಗಳು ಜನರಿಂದ ತುಂಬಿವೆ ಎಂದು ಚೀನಾದ ಮೇಲೆ ಕಣ್ಣಿಟ್ಟಿರುವ ಹಲವರು ಹೇಳಿಕೊಳ್ಳುತ್ತಿದ್ದಾರೆ. ‘80 ರಷ್ಟು ಜನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ’ ಚೀನಾದಲ್ಲಿ ಮತ್ತೆ ಹೊಸ ವೈರಸ್ ಪತ್ತೆಯಾಗಿದೆ ಎನ್ನುವುದು ಶಾಸಕ ಮಾತಿನಿಂದ ಗೊತ್ತಾಗುತ್ತಿದೆ. ನಾಲ್ಕು ದಿನ ಚೀನಾ ಪ್ರವಾಸ ಮುಗಿಸಿ ಬಂದಿದರುವ ರವಿ ಗಣಿಗ ಅವರು ಚೀನಾ ಪರಿಸ್ಥಿತಿಯ ಬಗ್ಗೆ ವಿವರಸಿದ್ದಾರೆ. ಚೀನಾದಲ್ಲಿ ಶೇಖಡ 80 ರಷ್ಟು ಜನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಟೆಸ್ಟ್ ಮಾಡುತ್ತಿದ್ದಾರೆ. ಯಾವುದೋ ವೈರಸ್ ಅಥವಾ ಕೋವಿಡ್ ರೀತಿಯ ವೈರಸ್ ಬಂದಿರಬಹುದು. ಹಾಗಾಗಿ ಮುಂಜಾಗ್ರತೆ ಕ್ರಮಕ್ಕಾಗಿ ಮಾಸ್ಕ್ ಹಾಕಿರಬಹುದು ಎಂದು ಹೇಳಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.