ಸಾಂದರ್ಭಿಕ ಚಿತ್ರ ವಾಕಿಂಗ್ (Walking) ಒಂದು ಅತ್ಯದ್ಭುತ ವ್ಯಾಯಾಮವಾಗಿ (Exercise) ಗುರುತಿಸಿಕೊಂಡಿದೆ. ಹೃದಯದ ಆರೋಗ್ಯದ (Heart Health) ಜೊತೆಗೆ ನಡಿಗೆ ಮೂಳೆಯ ಆರೋಗ್ಯವನ್ನು (Bone Health) ಹೆಚ್ಚಿಸುತ್ತದೆ. ವಾಕಿಂಗ್ ತೂಕ ನಷ್ಟಕ್ಕೂ (Weight Loss) ಸಹಕಾರಿಯಾಗಿದೆ. ನಿಮ್ಮ ದೇಹವನ್ನು ಫಿಟ್ (Fit) ಆಗಿರಿಸಿಕೊಳ್ಳಲು, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ದಿನಕ್ಕೆ 10,000 ಹೆಜ್ಜೆಗಳನ್ನು ಹಾಕುವುದು ಆರೋಗ್ಯಕರ ಎಂದೆನಿಸಿದೆ. ನಡಿಗೆಯಲ್ಲಿ ಗಾಯ, ಅಪಘಾತದ ಭಯವಿಲ್ಲ! ಯಾವುದೇ ವಯಸ್ಸಿನವರು ಮಾಡಬಹುದಾದ ಸುಲಭ ವ್ಯಾಯಾಮವಾಗಿರುವ ನಡಿಗೆಯನ್ನು ಎಲ್ಲಿ ಬೇಕಾದರೂ ಮಾಡಬಹುದಾಗಿದೆ. ಸಮೀಪದ ಪಾರ್ಕ್‌ನಲ್ಲಿ, ಮನೆಯೊಳಗೆ, ಮನೆಯಂಗಳದಲ್ಲಿ ಹೀಗೆ ಸಮಯ ಸಿಕ್ಕಾಗಲೆಲ್ಲಾ ವಾಕಿಂಗ್ ಅನ್ನು ಅಭ್ಯಸಿಸಬಹುದು. ಯಾವುದೇ ಸೂಕ್ತ ಪರಿಕರದ ಸಹಾಯವಿಲ್ಲದೆ ನಡಿಗೆಯನ್ನು ಅನುಸರಿಸಬಹುದು. ನಡಿಗೆಯು ಇನ್ನೊಂದು ವಿಷಯಕ್ಕೆ ಉಪಕಾರಿಯಾಗಿದೆ ಏಕೆಂದರೆ ಇದರಲ್ಲಿ ಬೀಳುವ, ಗಾಯಗಳುಂಟಾಗುವ ಅಪಾಯವೂ ಇರುವುದಿಲ್ಲ. ನಡಿಗೆಯ ಫಲಿತಾಂಶ ನಿಧಾನವಾಗಿರುತ್ತದೆ! ವಾಕಿಂಗ್, ಉತ್ತಮ ವ್ಯಾಯಾಮವಾಗಿದ್ದರೂ ಕ್ಯಾಲೊರಿ ಬರ್ನ್ ಮಾಡಲು ಹಾಗೂ ಫಲಿತಾಂಶ ಬೀರಲು ಸಮಯ ಬೇಕಾಗುತ್ತದೆ. ನಡಿಗೆಯ ಫಲಿತಾಂಶ ದೊರೆಯಬೇಕು ಎಂದಾದರೆ ಕಾಯಬೇಕು ಜೊತೆಗೆ ನಿರಂತರತೆ, ಬದ್ಧತೆಯನ್ನು ಅನುಸರಿಸಬೇಕು. ಒಂದು ಅಧ್ಯಯನದ ಪ್ರಕಾರ ಸುಮಾರು 4,50,000 ವಯಸ್ಕರು ನಡಿಗೆಗಿಂತಲೂ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಪರಿಣಾಮಕಾರಿ ಎಂದು ಹೇಳಿದ್ದಾರೆ. ವಾಕಿಂಗ್‌ಗಿಂತ ಮೆಟ್ಟಿಲುಗಳನ್ನು ಹತ್ತಿಳಿಯುವುದು ಪರಿಣಾಮಕಾರಿ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ದಿನಕ್ಕೆ ಐದು ಸ್ತರದ ಮಾಳಿಗೆ ಇಲ್ಲವೇ 50 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಹೃದಯದ ಸಮಸ್ಯೆಗಳನ್ನು 20% ಕಡಿಮೆ ಮಾಡುತ್ತದೆ ಎಂದಿದೆ. ಆಗಾಗ್ಗೆ ಮೆಟ್ಟಿಲುಗಳನ್ನು ಹತ್ತಿಳಿಯುವುದು ಕೂಡ ಸಂಪೂರ್ಣ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಅಧ್ಯಯನ ಹೇಳಿದೆ. ಇದನ್ನೂ ಓದಿ: ಕೇವಲ 24 ತಿಂಗಳಲ್ಲಿ ಬರೋಬ್ಬರಿ 54 ಕೆಜಿ ತೂಕ ಇಳಿಸಿಕೊಂಡ ಲೇಡಿ! ಇಲ್ಲಿದೆ ಆಕೆಯ ಸಿಂಪಲ್ ಟಿಪ್ಸ್! ನಡಿಗೆಗೆ ಹೋಲಿಸಿದಾಗ ಮೆಟ್ಟಿಲುಗಳನ್ನು ಹತ್ತಿಳಿಯುವುದು ಪರ್ವತ, ಗುಡ್ಡಗಾಡುಗಳಲ್ಲಿ ಮಾಡುವ ನಡಿಗೆಗೆ ಸಮನಾಗಿರುತ್ತದೆ. ಈ ಸಮಯದಲ್ಲಿ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ದೇಹವನ್ನು ಎತ್ತಬೇಕಾಗುತ್ತದೆ ಹಾಗೂ ಇದೊಂದು ಹೆಚ್ಚಿನ ಕ್ಯಾಲೊರಿ ಬರ್ನಿಂಗ್ ವ್ಯಾಯಾಮ ಕೂಡ ಆಗಿದೆ. ಮೆಟ್ಟಿಲುಗಳನ್ನು ಹತ್ತುವುದು ಸ್ನಾಯುಗಳನ್ನು ಬಲಪಡಿಸುತ್ತದೆ ಇದು ಕ್ವಾಡ್ಸ್, ಗ್ಲಟ್ಸ್ ಕ್ಲವ್ಸ್ ಹಾಗೂ ಕೋರ್ ಮಸಲ್‌ಗೆ ಉತ್ತಮ ವ್ಯಾಯಾಮ ನೀಡುತ್ತದೆ. ಕ್ಯಾಲೊರಿ ಬರ್ನಿಂಗ್ ಹೆಚ್ಚು ನಡೆಯುತ್ತದೆ! ನಡಿಗೆಯಂತೆ ಮೆಟ್ಟಿಲುಗಳನ್ನು ಏರುವುದು ನಿಮ್ಮ ಹೃದಯ ಬಡಿತವನ್ನು ಏರಿಸುತ್ತದೆ ಹಾಗೂ ಇದೊಂದು ಪರಿಪೂರ್ಣ ಕಾರ್ಡಿಯೊ ವರ್ಕೌಟ್ ಆಗಿದೆ. ಸಮತಟ್ಟಾದ ನೆಲದಲ್ಲಿ ನಡೆಯುವುದಕ್ಕಿಂತ ಮೆಟ್ಟಿಲುಗಳನ್ನು ಏರುವುದಕ್ಕೆ ಹೆಚ್ಚಿನ ದೃಢತೆ ಸಾಮರ್ಥ್ಯ ಬೇಕು ಹಾಗಾಗಿ ಮೆಟ್ಟಿಲು ಏರುವಾಗ ಕ್ಯಾಲೊರಿ ಬರ್ನಿಂಗ್ ಕೂಡ ಹೆಚ್ಚಿನ ಮಟ್ಟದಲ್ಲಿರುತ್ತದೆ. ಮೆಟ್ಟಿಲುಗಳನ್ನು ಹತ್ತಿಳಿಯುವ ವ್ಯಾಯಾಮವು ಹೃದಯ ರಕ್ತನಾಳದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ತೂಕ ನಷ್ಟ, ಮಸಲ್‌ಗಳನ್ನು ಬಲಪಡಿಸುವುದು, ಕ್ಯಾಲೊರಿ ಬರ್ನಿಂಗ್ ಅನ್ನು ಮಾಡಬಹುದಾಗಿದೆ. ಇದೊಂದು ತೀವ್ರ ತರದ ವ್ಯಾಯಾಮವಾಗಿದ್ದು ನಡಿಗೆಗೆ ಸಮಯ ಸೀಮಿತವಾಗಿದ್ದಾಗ ಮೆಟ್ಟಿಲುಗಳನ್ನು ಏರುವ ವ್ಯಾಯಾಮವನ್ನು ಮಾಡಬಹುದಾಗಿದೆ. 10,000 ಸ್ಟೆಪ್ಸ್‌ಗಳ ಗುರಿಯನ್ನು ಮೆಟ್ಟಿಲುಗಳನ್ನೇರುವುದರ ಮೂಲಕ ಪೂರೈಸಿಕೊಳ್ಳಬಹುದೇ? ದಿನವೊಂದಕ್ಕೆ 10,000 ಹೆಜ್ಜೆಗಳನ್ನಿರಿಸುವ ನಿಮ್ಮ ಗುರಿಯನ್ನು ಮೆಟ್ಟಿಲುಗಳನ್ನು ಹತ್ತಿಳಿಯುವ ವ್ಯಾಯಾಮದ ಮೂಲಕ ಈಡೇರಿಸಿಕೊಳ್ಳುವುದು ಸ್ವಲ್ಪ ಕಷ್ಟ. 10,000 ಹೆಜ್ಜೆಗಳ ಎಣಿಕೆಯು ಹೆಜ್ಜೆಯ ಅಳತೆಯಾದ 2.5 ಫೀಟ್ ಅನ್ನು ಆಧರಿಸಿದೆ ಇದಕ್ಕೆ ಹೋಲಿಸಿದಾಗ ಮೆಟ್ಟಿಲುಗಳು ಚಿಕ್ಕದಾಗಿವೆ. ಮೆಟ್ಟಿಲುಗಳ ವ್ಯಾಯಾಮದಲ್ಲಿ ಹತ್ತುವುದು, ಇಳಿಯುವುದು ಎರಡೂ ಇದೆ. ಟ್ರ್ಯಾಕರ್ ಈ ಎರಡೂ ವಿಧಾನಗಳನ್ನು ಲೆಕ್ಕಾಚಾರ ಮಾಡುತ್ತದೆ ಹಾಗೂ ಎರಡೂ ವಿಧಾನಗಳಲ್ಲಿ ಒಟ್ಟು ಹೆಜ್ಜೆಗಳ ಎಣಿಕೆಯನ್ನು ತೋರಿಸುತ್ತದೆ. ಉದಾಹರಣೆಗೆ ನೀವು 100 ಮೆಟ್ಟಿಲುಗಳನ್ನು ಏರಿದರೆ ನಿಮ್ಮ ಟ್ರ್ಯಾಕರ್ ನಿಮ್ಮ ದೈನಂದಿನ ಗುರಿಗೆದುರಾಗಿ 200 ಮೆಟ್ಟಿಲುಗಳ ಎಣಿಕೆಯನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಮೆಟ್ಟಿಲುಗಳನ್ನು ಏರುವುದು, ಇಳಿಯುವುದು ಎರಡೂ ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯಾವುದೇ ಬಗೆಯ ವ್ಯಾಯಾಮ ಮಾಡುವುದು ಒಳಿತಾಗಿದೆ. None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.