NEWS

Vijay Hazare: 4ನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್! ಟೂರ್ನಿಯಲ್ಲಿ 6ನೇ ಜಯ ಸಾಧಿಸಿ ನಾಕೌಟ್​ ಪ್ರವೇಶಿಸಿದ ಕರ್ನಾಟಕ

ಮಯಾಂಕ್ ಅಗರ್ವಾಲ್ ನಾಗಲ್ಯಾಂಡ್ ವಿರುದ್ಧ (Nagaland vs Karnataka) ನಡೆದ ಕೊನೆಯ ಲೀಗ್ ಪಂದ್ಯದಲ್ಲಿ 9 ವಿಕೆಟ್ ಗೆಲುವಿನೊಂದಿಗೆ ಕರ್ನಾಟಕ ತಂಡ ನಾಕೌಟ್​ ಪ್ರವೇಶವನ್ನ ಖಚಿತಪಡಿಸಿಕೊಂಡಿದೆ. ಆದರೆ ಕ್ವಾರ್ಟರ್ ಫೈನಲ್ (Quarter Final) ಅಥವಾ ಪ್ರಿಕ್ವಾರ್ಟರ್ ಫೈನಲ್ ಎಂಬುದು ಪಂಜಾಬ್-ಪಾಂಡಿಚೇರಿ ನಡುವಿನ ಪಂದ್ಯದ ಫಲಿತಾಂಶದ ನಂತರ ತಿಳಿಯಲಿದೆ. ಕರ್ನಾಟಕಕ್ಕೆ ಇದು ಟೂರ್ನಿಯಲ್ಲಿ 6ನೇ ಜಯವಾಗಿದೆ. ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ್ದು, ಹೈದರಾಬಾದ್ ವಿರುದ್ಧ ಮಾತ್ರ ಸೋಲು ಕಂಡಿತ್ತು. ಟೂರ್ನಿಯಲ್ಲಿ 6ನೇ ಗೆಲುವು ವಿಜಯ ಹಜಾರೆ 2024-25ರ ಆವೃತ್ತಿಯಲ್ಲಿ ಮುಂಬೈ ವಿರುದ್ಧ 383 ರನ್​ಗಳ ಗುರಿಯನ್ನ ಬೆನ್ನಟ್ಟುವ ಮೂಲಕ ತನ್ನ ಅಭಿಯಾನ ಆರಂಭಿಸಿದ ಕರ್ನಾಟಕ ನಂತರ ಪಾಂಡಿಚೇರಿ, ಪಂಜಾಬ್, ಅರುಣಾಚಲ ಪ್ರದೇಶದ ವಿರುದ್ಧ ಸತತ ಗೆಲುವು ಸಾಧಿಸಿತು. ಹೈದರಾಬಾದ್ ವಿರುದ್ಧ 320 ರನ್​ಗಳಿಸದರೂ ಕೊನೆಯ ಓವರ್​ವರೆಗೂ ಹೋರಾಟ ನಡೆಸಿ 3 ವಿಕೆಟ್​ಗಳ ಸೋಲು ಕಂಡಿತು. ನಂತರ ಸೌರಾಷ್ಟ್ರ ವಿರುದ್ಧ 60 ರನ್ಗಳಿಂದ ಗೆದ್ದ ಮಯಾಂಕ್ ಪಡೆ, ಇದೀಗ ಕೊನೆಯ ಪಂದ್ಯದಲ್ಲಿ 9 ವಿಕೆಟ್​ಗಳಿಂದ ಪಾಂಡಿಚೇರಿ ಮಣಿಸಿ ನಾಕೌಟ್ ಪ್ರವೇಶಿಸಿದೆ. ಇದನ್ನೂ ಓದಿ: 9999 ರನ್​ಗೆ ಔಟ್ ಆದ ಸ್ಮಿತ್! ಟೆಸ್ಟ್ ಇತಿಹಾಸದಲ್ಲಿ ಈ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್​ಗಳೆಷ್ಟು? ನಾಗಲ್ಯಾಂಡ್ ವಿರುದ್ಧ ಸುಲಭ ಜಯ ಟಾಸ್ ಗೆದ್ದು ನಾಗಲ್ಯಾಂಡ್​ಗೆ ಬ್ಯಾಟಿಂಗ್ ನೀಡಿದ ಕರ್ನಾಟಕ ತಂಡ 206ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಸಫಲವಾಯಿತು. ಅನುಭವಿ ಬೌಲರ್ ಶ್ರೇಯಸ್ ಗೋಪಾಲ್ 24ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ನಾಗಲ್ಯಾಂಡ್ ಪರ ಚೇತನ್ ಬಿಸ್ತ್ 77, ನಾಯಕ ಜೊನಾಥನ್ ಆರ್ 51 ರನ್​ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. 207ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 37.5 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮಯಾಂಕ್ ಅಗರ್ವಾಲ್ 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 116 ರನ್​ಗಳಿಸಿದರೆ, ಅನೀಶ್ ಕೆವಿ 95 ಎಸೆತಗಳಲ್ಲಿ 10 ಬೌಂಡರಿ ಸಹಿತ 82 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಮಯಾಂಕ್ 4 ಶತಕ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಈ ವರ್ಷ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ 47, 18 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದ ಮಯಾಂಕ್ ನಂತರ, ಸತತ 5 ಪಂದ್ಯಗಳಲ್ಲಿ 50 + ಸ್ಕೋರ್ ಮಾಡಿದರು. ಇದರಲ್ಲಿ 4 ಶತಕಗಳಿವೆ. ಪಂಜಾಬ್ ವಿರುದ್ಧ ಅಜೇಯ 139, ಅರುಣಾಚಲ ಪ್ರದೇಶ ವಿರುದ್ಧ ಅಜೇಯ 100, ಹೈದರಾಬಾದ್ ವಿರುದ್ಧ 124, ಸೌರಾಷ್ಟ್ರ ವಿರುದ್ಧ 69 ಹಾಗೂ ನಾಗಲ್ಯಾಂಡ್ ವಿರುದ್ಧ ಅಜೇಯ 116 ರನ್​ಗಳಿಸಿದ್ದಾರೆ. ಇದನ್ನೂ ಓದಿ: ಕೋಚ್​ಗಳು ಏನು ಮಾಡ್ತಿದ್ದಾರೆ? ಈ ರೀತಿ 2 ಸರಣಿ ಕಳೆದುಕೊಂಡ್ರು ಅವರು ಮುಂದುವರಿಬೇಕಾ? ಗವಾಸ್ಕರ್ ಪ್ರಶ್ನೆ ಟೂರ್ನಿಯಲ್ಲಿ ಗರಿಷ್ಠ ರನ್​ ಅಮೋಘ ಫಾರ್ಮ್​ನಲ್ಲಿರುವ ಮಯಾಂಕ್ ಅಗರ್ವಾಲ್ ಈ ಟೂರ್ನಿಯಲ್ಲಿ 7 ಇನ್ನಿಂಗ್ಸ್​ಗಳಲ್ಲಿ 4 ಶತಕ ಹಾಗೂ 1 ಅರ್ಧಶತಕದ ಸಹಿತ 613 ರನ್​ಗಳಿಸಿದ್ದಾರೆ. ಅತಿ ಹೆಚ್ಚು ರನ್​ಗಳಿಸಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿದರ್ಭ ಪರ ಆಡುತ್ತಿರುವ ಕರುಣ್ ನಾಯರ್ 5 ಇನ್ನಿಂಗ್ಸ್​ಗಳಿಂದ 4 ಶತಕಗಳೊಂದಿಗೆ 542 ರನ್​ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.