NEWS

Operation Hasta: ಸಂಕ್ರಾಂತಿ ಬಳಿಕ 'ಆಪರೇಷನ್ ಹಸ್ತ' ಫಿಕ್ಸ್? ಹೊಸ ಬಾಂಬ್ ಸಿಡಿಸಿದ ಎಂಬಿ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಲಮ (Operation Kamala) ಭಾರೀ ಸದ್ದು ಮಾಡಿ ಸರ್ಕಾರವನ್ನೇ ಉರುಳಿಸಿತ್ತು. ಆದರೆ ಇದೀಗ ತೆರೆಮರೆಯಲ್ಲಿ ಆಪರೇಷನ್ ಹಸ್ತವೂ (Operation Hastha) ಸದ್ದು ಮಾಡುತ್ತಿದೆ. ಇತ್ತೀಚೆಗೆ ಜೆಡಿಎಸ್ ಶಾಸಕ (JDS MLA) ನೀಡಿರುವ ಸ್ಫೋಟಕ ಹೇಳಿಕೆಯು ರಾಜ್ಯ ರಾಜಕಾರದಲ್ಲಿ ಸಂಚಲನ ಮೂಡಿಸಿತ್ತು. ಅವರ ಹೇಳಿಕೆಗೆ ಪುಷ್ಟಿ ನೀಡುವಂತೆ ಇದೀಗ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಂಕ್ರಾಂತಿ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ ನೋಡೋಣ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ 60 ಪರ್ಸೆಂಟ್ ಲಂಚದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ್ ಅವರು, ಕುಮಾರಸ್ವಾಮಿಯವರಿಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ. ಅವರಿಗೆ ಅವರ ಪಕ್ಷದ ಆಸ್ತಿತ್ವಕ್ಕೆ ಧಕ್ಕೆಯಾಗಿದೆ, ಅವರಿಗೆ ಹತಾಶೆ ಶುರುವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ಕೊಡಲಿ, ಸಂಕ್ರಾಂತಿ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ ನೋಡೋಣ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಸುಳಿವು ನೀಡಿದ್ರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಕುಮಾರಸ್ವಾಮಿಯವರು ನಿಖಿಲ್ ಸೋಲಿನ ಹತಾಶೆಯಲ್ಲಿದ್ದಾರೆ ಕುಮಾರಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ಸಾಕ್ಷಿಗಳಿದ್ದರೆ ಕೊಡಲಿ.. ಹಿಂದೆ ಕೆಂಪಣ್ಣ ದೂರು ನೀಡಿದ್ದರು. ಅದಕ್ಕೆ ನಾವು ಆರೋಪ ಮಾಡಿದ್ದೇವೆ. ಇವರ ಆರೋಪಕ್ಕೆ ಸಾಕ್ಷಿ ಕೊಡಲಿ. ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಸೋಲಿನ ಹತಾಶೆಯಲ್ಲಿದ್ದಾರೆ. ನಿಖಿಲ್ ಬಗ್ಗೆ ನನಗೆ ಸಹಾನುಭೂತಿ ಇದೆ ಇದೆ ಎಂದರು. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! 3 ಗಂಟೆ ಅವಧಿಯಲ್ಲಿ ಬೆಂಗಳೂರಿನ ಮತ್ತೊಂದು ಮಗುವಿನಲ್ಲಿ HMPV ವೈರಸ್ ಪತ್ತೆ! ಅಸಮಧಾನಗೊಂಡಿರುವ ಗುತ್ತಿಗೆದಾರರು ಲಿಸ್ಟ್ ಕೊಡಲಿ ಸರ್ಕಾರದ ನಡೆಯ ಬಗ್ಗೆ ಗುತ್ತಿಗೆದಾರರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಗುತ್ತಿಗೆದಾರರು ಅಸಮಾಧಾನರಾಗಿದ್ದಾರೆ? ಅಂತವರ ಲೀಸ್ಟ್ ಕೊಡಲಿ… ನಾವು ಕ್ರಮ ಜರುಗಿಸ್ತೇವೆ. ಸುಮ್ಮನೆ ಹಿಟ್ ಆಂಡ್ ರನ್ ಸರಿಯಲ್ಲ. ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ಏನು ಮಾಡಿದ್ರು? ಅವರು ಕಂಟ್ರಾಕ್ಟರ್ ಹೌದೋ/ಅಲ್ವೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಂತಾದ್ದೇನಿಲ್ಲ ಎಂದು ಹೇಳಿದರು. ಇದನ್ನೂ ಓದಿ: Amit Shah: ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್‌ಗೆ ಕರೆ; ಸಂಜೆ 6ರವರೆಗೆ ಇಲ್ಲಿ ಬಸ್ ಸಂಚಾರ ಇರಲ್ಲ, ಶಾಲಾ ಕಾಲೇಜುಗಳಿಗೆ ರಜೆ ನಮ್ಮ ಸಿಎಂ ಹಣಕಾಸು ವಿಚಾರದಲ್ಲಿ ಪರ್ಫೆಕ್ಟ್; ಹಣ ಹೊಂದಿಸುವುದು ಗೊತ್ತಿದೆ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಎಂಬ ಶಾಸಕರ ಆರೋಪ ವಿಚಾರಕ್ಕೆ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಅಭಿವೃದ್ಧಿಗೂ ಇದೆ, ಗ್ಯಾರೆಂಟಿಗೂ ಹಣ ಇದೆ. ನೀರಾವರಿಗೆ ಹಣ ಕೇಳ್ತಾರೆ, ಹಿಂದಿನ ಸರ್ಕಾರ ಬೇಕಾಬಿಟ್ಟಿ ಮಾಡಿದೆ. ಹಿಂದಿನ ಸರ್ಕಾರ ಆರ್ಥಿಕ ಶಿಸ್ತನ್ನ ಮೀರಿ‌ ಹೋಗಿತ್ತು. 70 ಸಾವಿರ ಕೋಟಿ ಸಾಲ ಮಾಡಿತ್ತು. ಅವರು ಮಾಡಿರೋದು ಎಕ್ಸಸ್ ಬಿಲ್ ಉಳಿದಿದೆ. ಪಿಡಬ್ಲ್ಯೂಡಿ, ರೂರಲ್ ಡೆವಲಪ್‌ಮೆಂಟ್ ನಲ್ಲಿ ಪೆಂಡಿಂಗ್ ಇದೆ. ಅವರು ಹಣ ಪೆಂಡಿಂಗ್ ಇಟ್ಟು ಹೋದ್ರು. ನಮ್ಮ ಸಿಎಂ ಹಣಕಾಸು ವಿಚಾರದಲ್ಲಿ ಪರ್ಫೆಕ್ಟ್. ಹಣ ಹೊಂದಿಸುವುದು ಗೊತ್ತಿದೆ. ಎಲ್ಲ ಸರಿಪಡಿಸಿಕೊಂಡು ಹೋಗ್ತೇನೆ ಅಂದಿದ್ದಾರೆ. ಈಗ ಅದನ್ನ ಮಾಡ್ತಿದಾರೆ ಎಂದು ತಿಳಿಸಿದರು. ಸೆಮಿಕಂಡೆಕ್ಟರ್‌ಗೆ ಅವಕಾಶ ಕೊಡಿ ಅಂತ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಉಕ್ಕು ಕಾರ್ಖಾನೆ ಸಂಬಂಧ ರಾಜ್ಯ ಸರ್ಕಾರದಿಂದ ಬೇಡಿಕೆ ಬಂದಿಲ್ಲ ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಎಂಬಿ ಪಾಟೀಲ್ ಅವರು, ಸೆಮಿಕಂಡೆಕ್ಟರ್ ಗೆ ಅವಕಾಶ ಕೊಡಿ ಅಂತ ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ. ಎಲ್ಲಾ ಕಂಪನಿಗಳನ್ನ ಅಲ್ಲಿಗೆ ಕರೆಸಿಕೊಳ್ತಿದ್ದಾರೆ. ಅವರು ಇನ್ಸೆಂಟೀವ್ ಜಾಸ್ತಿ ಕೊಡ್ತಾರೆ ಅಂತ ಎಲ್ಲ ಕಂಪನಿಗಳು ಈಗ ಗುಜರಾತ್ ಗೆ ಹೋಗ್ತಿವೆ. ನಮ್ಮಲ್ಲಿ ಜಿಂದಾಲ್ ಸೇರಿ ಹಲವು ಕಂಪನಿಗಳಿವೆ ಎಂದು ಹೇಳಿದರು. (ವರದಿ: ಕಾರ್ತಿಕ್ ನ್ಯೂಸ್ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.