NEWS

HMPV Virus: ಎಚ್ಚರ ಎಚ್ಚರ! 3 ಗಂಟೆ ಅವಧಿಯಲ್ಲಿ ಬೆಂಗಳೂರಿನ ಮತ್ತೊಂದು ಮಗುವಿನಲ್ಲಿ HMPV ವೈರಸ್ ಪತ್ತೆ!

ಬೆಂಗಳೂರು: ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಈ ನಡುವೆ ಕಳೆದ ನಾಲ್ಕು ದಿನ ಚೀನಾ ಪ್ರವಾಸ ಕೈಗೊಂಡಿದ್ದ ಶಾಸಕ ರವಿ ಗಣಿಗ (Ravi Ganiga) ಅವರು, ಚೀನಾದಲ್ಲಿ ಶೇಕಡ 80 ರಷ್ಟು ಜನ ಮಾಸ್ಕ್ (Mask) ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದೀಗ ಬೆಂಗಳೂರಿಗೂ ಈ ವೈರಸ್ ಎಂಟ್ರಿ ಕೊಟ್ಟಿದೆ. ಮೂರು ಗಂಟೆಗಳ ಅವಧಿಯಲ್ಲೇ ಮತ್ತೊಂದು ಮಗುವಲ್ಲಿ ವೈರಸ್ ಪತ್ತೆ ಇಂದು ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ವೈರಸ್ ಪತ್ತೆಯಾಗಿತ್ತು. ಇದು ದೃಢಪಟ್ಟ ಮೂರು ಗಂಟೆಗಳ ಅವಧಿಯಲ್ಲೇ ಇದೀಗ ಮತ್ತೊಂದು ಮೂರು ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಇಂದು ಒಟ್ಟು ಇಬ್ಬರು ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ICMR ನಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಮೊದಲ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮೊದಲ ಮಗುವಿಗೆ ಜ್ವರ ಬಂದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈ ವೇಳೆ ಬ್ಲಡ್ ಟೆಸ್ಟ್ ಮಾಡಿಸಿದಾಗ HMPV ವೈರಸ್ ಪತ್ತೆಯಾಗಿತ್ತು. ಇದೀಗ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮತ್ತೊಂದು ಮೂರು ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! ಬೆಂಗಳೂರಿನಲ್ಲೂ ಕಾಣಿಸಿಕೊಂಡ HMPV ವೈರಸ್! 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆ ಇಂದು ಎರಡು ಮಕ್ಕಳಲ್ಲಿ ಈ HMPV ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಧಿಕಾರಿಗಳು ತುರ್ತು ವರ್ಚುವಲ್ ಸಭೆ ನಡೆಸುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಮುಂಜಾಗೃತ ಕ್ರಮದ ಕುರಿತು ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಇಲಾಖೆ ನಿರ್ದೇಶಕರು, ಜಂಟಿ ನಿರ್ದೇಶರು ಭಾಗಿಯಾಗಿದ್ದಾರೆ. ಇದು ಸಾಮಾನ್ಯ HMPV ಅಥವಾ ಚೀನಾದ ಸ್ಟ್ರೈನ್ ಎನ್ನೋದು ಗೊಂದಲ ಇದೆ ಈ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಹಿತಿ ನೀಡಿದ್ದು, HMPV ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. HMPV ವೈರಸ್ ಭಾರತದಲ್ಲೂ ಇದೆ. ಆದ್ರೆ ಅದು ಮ್ಯೂಟೆಷನ್ ಆಗಿದಿಯಾ ಅನ್ನೋ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾ ವೈರಸ್ ನ ಸ್ಟ್ರಚರ್ ಹೇಗಿದೆ ಎಂದು ತಿಳಿದಿಲ್ಲ. ಈ ಹಿನ್ನೆಲೆ ಇದು ಸಾಮಾನ್ಯ HMPV ಅಥವಾ ಚೀನಾದ ಸ್ಟ್ರೈನ್ ಎನ್ನೋದು ಗೊಂದಲ ಇದೆ. 0.78 ರಷ್ಟು ಭಾರತದಲ್ಲೂ ಸಾಮಾನ್ಯ HMPV ವೈರಸ್ ಕಾಣಿಸುತ್ತೆ. ಇವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಚೀನಾ ನೆಲದಲ್ಲಿ ಕೊರೊನಾ ರೀತಿ ಪರಿಸ್ಥಿತಿ ಇದೀಗ ಮತ್ತೆ ನಿರ್ಮಾಣ ಆಗಿದೆ. ಆ ರೀತಿ ನೋಡುವುದಾದರೆ ಇದು ಕೊರೊನಾ ಮೀರಿಸುವ ಪರಿಸ್ಥಿತಿ ಅಂತಾ ಹೇಳಲಾಗುತ್ತಿದೆ. ಈ ಕಾರಣಕ್ಕೆ ಜನರು ಕೂಡ ನಲುಗಿ ಹೋಗಿದ್ದು, ಇದೀಗ ಹ್ಯೂಮನ್ ಮೆಟಾಫೆನೋಮೋ ವೈರಸ್ ಹಾವಳಿ ಹಿನ್ನೆಲೆ ಚೀನಾ ನೆಲದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.