NEWS

Darshan Jail Photo: ಬಡವರಿಗೊಂದು ನ್ಯಾಯ, ಇದ್ದವರಿಗೊಂದು ನ್ಯಾಯ! ದರ್ಶನ್​ ಬಿಂದಾಸ್​ ಲೈಫ್​ಗೆ ಅನು ತಾಯಿ ಆಕ್ರೋಶ

ಅನುಕುಮಾರ್ ತಾಯಿ ಚಿತ್ರದುರ್ಗ: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara jail) ಒಂದು ಕಡೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಆರೋಪವಿದ್ದು, ಇನ್ನೊಂದೆಡೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಸಹಚರರ ಜೀವನ ಸ್ಥಿತಿ ಹೇಳತೀರದ್ದಾಗಿದೆ. ಆರೋಪಿ ದರ್ಶನ್ (Darshan) ಆಪ್ತ ಸಹಚರ ಅನುಕುಮಾರ್ (Anukumar) ಕುರಿತು ತಾಯಿ ಜಯಮ್ಮ ನ್ಯೂಸ್​ 18 ನೊಂದಿಗೆ ಮಾತನಾಡಿ “ನಾವು ಮಗನನ್ನು ಬಿಡಿಸಿಕೊಂಡು ಬರುವ ಸ್ಥಿತಿಯಲ್ಲಿ ಇಲ್ಲ, ಅವನ ಪರಸ್ಥಿತಿ ತುಂಬಾ ಭಯಾನಕವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದರು. ದರ್ಶನ್​ರ ಐಷಾರಾಮಿ ಜೀವನ ಇತ್ತೀಚೆಗೆ ಪರಪ್ಪನ ಆಗ್ರಹಾರ ಜೈಲಿನಲ್ಲಿ ನಟ ದರ್ಶನ್​ರವರು ರೌಡಿಶೀಟರ್​​ಗಳೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ, ಐಷಾರಾಮಿ ಜೀವನ ನಡೆಸಲು ಜೈಲಿನ ಅಧಿಕಾರಿಗಳು ಕಾಫಿ, ಸಿಗರೇಟ್ ನೀಡಿದ್ದರು ಹಾಗೂ ದರ್ಶನ್ ತಮ್ಮ ಆಪ್ತರೊಂದಿಗೆ ಜೈಲಿನಿಂದಲೇ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಕರೆ ಮಾಡಿದ್ದರು ಎಂಬ ಆರೋಪವಿದೆ. ಇದನ್ನೂ ಓದಿ: ಗಣಿಗ ‘ಬಾಂಬ್‌’ಗೆ ಜೋಶಿ ಟಾಂಗ್! 100 ಕೋಟಿ ಎಲ್ಲಿದೆ ಅಂತ ಪ್ರಶ್ನಿಸಿದ ಕೇಂದ್ರ ಸಚಿವ ಇದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟು ಈವರೆಗೂ ಜೈಲಿನಿಂದ ಜೈಲು ಅಧೀಕ್ಷಕರು ಮತ್ತು ಸಹ ಅಧೀಕ್ಷಕರು ಸೇರಿ, ಒಟ್ಟು 9 ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದೆ. ಜೊತೆಗೆ ನಟ ದರ್ಶನ್ ಅವರ ಮೇಲೆ ಇಂದು ಒಟ್ಟು ಮೂರು ಎಫ್​ಐಆರ್​ಗಳು ಸಹ ದಾಖಲಾಗಿದೆ ಎಂಬ ವರದಿಯಾಗಿದೆ. ದರ್ಶನ್​ಗೆ ರಾಜಾತಿಥ್ಯ ದರ್ಶನ್ ಐಷಾರಾಮಿ ಜೀವನದ ಕುರಿತು ಕಿಡಿಕಾರಿರುವ ಜಯಮ್ಮ ಅವರು, ಮಗ ಅನುಕುಮಾರನನ್ನು ಅವನ ತಂದೆಯ ಅಂತ್ಯಕ್ರಿಯೆಗೆ ಪೊಲೀಸರು ಕರೆತಂದಿದ್ದೇ ಕೊನೆ, ನಂತರ ಅವನ ಮಖವನ್ನು ನೊಡಿಲ್ಲ. ನನ್ನ ಇನ್ನೊಬ್ಬ ಮಗ ಅವನನ್ನು ಜೈಲಿನಲ್ಲಿ ಭೇಟಿಯಾಗಿದ್ದಾನೆ. ಅವನ ಪರಿಸ್ಥಿತಿ ಹೇಳತೀರದ್ದಾಗಿದ್ದು, ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ಕುರಿತು ಹಣ ಇದ್ದವರಿಗೊಂದು ನ್ಯಾಯ ಬಡವರಿಗೊಂದು ನ್ಯಾಯ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಬೇಲ್ ಅರ್ಜಿಗೂ ಹಣವಿಲ್ಲ! ನಾವು ಕೂಲಿ ಮಾಡಿಕೊಂಡು ಬದುಕುವವರು, ಕಳೆದ ಮೂರು ವರ್ಷಗಳಿಂದ ಮಗ ಅನುಕುಮಾರ ಆಟೋ ಚಾಲಕನಾಗಿ ಮನೆಯನ್ನು ಮುನ್ನಡೆಸುತ್ತಿದ್ದ. ಆದರೆ ಮಗನ ಬಂಧನದಿಂದ ಮನೆಯ ಆಧಾರ ಸ್ತಂಭವೇ ಬಿದ್ದು ಹೋಗಿದೆ. ಸರ್ಕಾರದಿಂದ ಸಿಗುವ ರೇಷನ್ ಅಕ್ಕಿ, ರಾಗಿಯಿಂದ ಜೀವನ ನಡೆಸುತ್ತಿದ್ದೇವೆ. ಮಗನನ್ನು ಬಿಡಿಸಿಕೊಂಡು ಬರಲು, ಬೇಲ್ ಅರ್ಜಿ ಹಾಕಲು ಸಹ ನಮ್ಮ ಬಳಿ ಹಣವಿಲ್ಲ. ಮಗ ಅನುಕುಮಾರ್ ಬಂಧನಕ್ಕೆ ಕಾರಣ ನಟ ದರ್ಶನ್, ಹಾಗಾಗಿ ಅವರೇ ಜೈಲಿನಿಂದ ಹೊರಗೆ ಕರೆತರಬೇಕು. ದರ್ಶನ್ ಅವರು ಹಣವಂತರು ಅದಕ್ಕಾಗಿ ಅವರಿಗೆ ಎಲ್ಲ ಸಿಗುತ್ತದೆ. ಆದರೆ ನಾವು ಬಡವರು ನಮಗೇನು ಸಿಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಮಗನ ಬಂಧನದಿಂದ ತಂದೆ ಹಾರ್ಟ್ ಅಟ್ಯಾಕ್ ಜೂನ್ 14 ರಂದು ರೇಣುಕಾಸ್ವಾಮಿ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. ನಂತರ ನಟ ದರ್ಶನ್ ಸೇರಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ದರ್ಶನ್ ಆಪ್ತ ಅನುಕುಮಾರ್ ಕೂಡ ಒಬ್ಬ. A7 ಆರೋಪಿಯಾಗಿರುವ ಅನುಕುಮಾರ್ ಬಂಧನದ ಸುದ್ಧಿ ತಿಳಿಯುತ್ತಿದ್ದಂತೆ, ಅವನ ತಂದೆ ಚಂದ್ರಣ್ಣ (60) ಚಿತ್ರದುರ್ಗದ ತಮ್ಮ ಮನೆಯಲ್ಲಿ ಹಾರ್ಟ್ ಅಟ್ಯಾಕ್ ನಿಂದ ದುರಂತ ಅಂತ್ಯ ಕಂಡಿದ್ದರು. ವರದಿ: ವಿನಾಯಕ್​, ನ್ಯೂಸ್​​18 ಕನ್ನಡ ಚಿತ್ರದುರ್ಗ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.