NEWS

Typhoon Trami: ರಕ್ಕಸ ನಾಲಿಗೆ ಚಾಚಿದ ಟ್ರಾಮಿ ಚಂಡಮಾರುತ! 150ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ!

ಸೈಕ್ಲೋನ್ ಟ್ರಾಮಿ ನವದೆಹಲಿ: ಚಂಡಮಾರುತ ಭೀಕರ (Typhoon Trami) ಆರ್ಭಟಕ್ಕೆ ಭಾರೀ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಕನಿಷ್ಟ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ನೂರಾರು ಮಂದಿ ನಾಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಫಿಲಿಪೈನ್ಸ್‌ನಲ್ಲಿ ಉಷ್ಣವಲಯದ ‘ಟ್ರಾಮಿ’ ಚಂಡಮಾರುತದಿಂದ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಸದ್ಯದ ವರದಿ ಪ್ರಕಾರ ಸತ್ತವರ ಸಂಖ್ಯೆ ಕನಿಷ್ಟ 150ರ ಗಡಿ ದಾಟಿದೆ. ಈ ಅಂಕಿ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೇ ಹಲವರು ನಾಪತ್ತೆಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ಟ್ರಾಮಿ ಚಂಡಮಾರುತವು ಎರಡು ತಿಂಗಳ ಕಾಲ ಭಾರೀ ಮಳೆಗೆ ಕಾರಣವಾಗಿತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಫಿಲಿಪೈನ್ಸ್‌ ದೇಶದ 17 ಪ್ರದೇಶಗಳಲ್ಲಿ 6.7 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಈ ವರ್ಷ ಫಿಲಿಪೈನ್ಸ್‌ಗೆ ಅಪ್ಪಳಿಸಿದ 11 ನೇ ಟೈಫೂನ್ ಟ್ರಾಮಿ ಚಂಡಮಾರುತ ಕೆಲವೇ ಸಮಯದಲ್ಲಿ ಇಡೀ ದೇಶವನ್ನೇ ಅಸ್ತವ್ಯಸ್ತಗೊಳಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Darshan Gets Interim Bail: ದರ್ಶನ್‌ ಇಚ್ಚಿಸಿದ ಆಸ್ಪತ್ರೆಯಲ್ಲೇ ಚಿಕಿತ್ಸೆ! ಆದರೆ ಕಂಡೀಷನ್ಸ್ ಅಪ್ಲೈ! ಹೈಕೋರ್ಟ್ ವಿಧಿಸಿದ ಖಡಕ್ ಷರತ್ತುಗಳೇನು? ಪ್ರವಾಹ, ಭೂಕುಸಿತದಿಂದಾಗಿ ಫಿಲಿಪೈನ್ಸ್‌ನಲ್ಲಿ ವಿನಾಶ ಈ ವರ್ಷ ಫಿಲಿಪೈನ್ಸ್‌ಗೆ ಅಪ್ಪಳಿಸಿದ 11 ನೇ ಟೈಫೂನ್ ಟ್ರಾಮಿ, ಕೆಲವೇ ಸಮಯದಲ್ಲಿ ಫಿಲಿಪೈನ್ಸ್‌ನಾದ್ಯಂತ ತನ್ನ ಕಬಂಧಬಾಹುವನ್ನು ಚಾಚಿದೆ. ಈ ಚಂಡಮಾರುತದಿಂದ ವಿನಾಶಕಾರಿ ಪ್ರವಾಹಗಳು ಮತ್ತು ಭೂಕುಸಿತ ಉಂಟಾಗಿದ್ದು, ಸಾವಿರಾರು ಮನೆಗಳು, ಕಟ್ಟಡಗಳು ಧರಾಶಾಹಿಯಾಗಿ ಲಕ್ಷಾಂತರ ಮಂದಿ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಲುಜಾನ್ ದ್ವೀಪದಾದ್ಯಂತ, ವಿಶೇಷವಾಗಿ ಬಿಕೋಲ್ ಮತ್ತು ಕ್ಯಾಲಬರ್ಜಾನ್ ಪ್ರದೇಶಗಳು ಮತ್ತು ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‌ನ ಪ್ರದೇಶಗಳಲ್ಲಿ ಭಾರೀ ವಿನಾಶ ಉಂಟಾಗಿದೆ. ಚಂಡಮಾರುತದಿಂದ ಪ್ರವಾಹದ ನೀರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ, ಇದರಿಂದಾಗಿ ಸಾರಿಗೆ ಸ್ಥಗಿತಗೊಂಡಿದೆ ಮತ್ತು ವಸತಿ ಪ್ರದೇಶಗಳಲ್ಲಿ ಜನರ ಮನೆಗಳಲ್ಲಿ ಮಣ್ಣು ಸಂಗ್ರಹವಾಗಿದೆ. ಸಾವಿರಾರು ಮನೆಗಳು, ಕಟ್ಟಡಗಳು ಕುಸಿತಗೊಂಡು ಭೀಕರತೆ ಸೃಷ್ಟಿಸಿದೆ. ಟ್ರಾಮಿ ಚಂಡಮಾರುತದ ಪರಿಣಾಮ 1.54 ಶತಕೋಟಿ ಪೆಸೊಗಳಷ್ಟು (ಸುಮಾರು US$26.35 ಮಿಲಿಯನ್) ಮೂಲಸೌಕರ್ಯಕ್ಕೆ ಹಾನಿಯನ್ನುಂಟು ಮಾಡಿದೆ. ಮತ್ತೊಂದೆಡೆ ಕೃಷಿಯು 2.5 ಶತಕೋಟಿ ಪೆಸೊಗಳ (ಸುಮಾರು $43 ಮಿಲಿಯನ್) ನಷ್ಟವನ್ನು ಅನುಭವಿಸಿದೆ. ಫಿಲಿಪ್ಪೀನ್ಸ್‌ನಲ್ಲಿ ಟ್ರಾಮಿ ಚಂಡಮಾರುತದ ನಂತರ, ಹೊಸ ಚಂಡಮಾರುತ ಕಾಂಗ್-ರೇ ಕೂಡ ಮತ್ತೆ ಆ ಭಾಗದಲ್ಲಿ ವಭೀತಿಯನ್ನು ಸೃಷ್ಟಿಸಿದೆ. ಇದನ್ನೂ ಓದಿ: Baba Vanga: ನಿಖರ ಭವಿಷ್ಯ ನುಡಿಯುವ ಬಾಬಾ ವಂಗಾ ಪ್ರಕಾರ 2043ರ ವೇಳೆಗೆ ಈ ದೇಶಗಳಲ್ಲಿ ಬರಲಿದೆ ಮುಸ್ಲಿಂ ಆಳ್ವಿಕೆ! ಟ್ರಾಮಿ ನಂತರ ಫಿಲಿಪೈನ್ಸ್‌ನಲ್ಲಿ ಹೊಸ ಚಂಡಮಾರುತ! ಟ್ರಾಮಿ ಚಂಡಮಾರುತದಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹೊಸ ಚಂಡಮಾರುತವು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಟೈಫೂನ್ ಕಾಂಗ್-ರೇ ಫಿಲಿಪೈನ್ಸ್‌ನ ಬಿಕೋಲ್ ನಗರವನ್ನು ಧ್ವಂಸಗೊಳಿಸಿದೆ. ಈ ವರ್ಷ ಫಿಲಿಪೈನ್ಸ್‌ಗೆ ಅಪ್ಪಳಿಸಿದ 12 ನೇ ಚಂಡಮಾರುತ ಟೈಫೂನ್ ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಫಿಲಿಪೈನ್ಸ್‌ನಿಂದ ನಿರ್ಗಮಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.