NEWS

Actor Darshan: ಬೆಂಗಳೂರಿಗೆ ಹೆಲಿಕಾಪ್ಟರ್‌‌ನಲ್ಲಿ ಬರ್ತಾರಾ ದರ್ಶನ್‌? ಇಲ್ಲಾ ಕಾರ್‌‌ನಲ್ಲೇ ಬರ್ತಾರಾ?

ದರ್ಶನ್ ಲೈಫ್ ಅಲ್ಲಿ ರೇಣುಕಾ ಸ್ವಾಮಿ; ಇಲ್ಲಿವರೆಗೂ ಇದೆಲ್ಲ ಆಗಿ ಹೋಯಿತು ನೋಡಿ! ದೀಪಾವಳಿ ಹಬ್ಬಕ್ಕೆ (Deepavali festival) ನಟ ದರ್ಶನ್‌ಗೆ ನ್ಯಾಯಾಲಯ ಭರ್ಜರಿ ಗುಡ್‌ನ್ಯೂಸ್ (Good News) ನೀಡಿದ್ದು, ಆರು ವಾರಗಳ ಕಾಲ ಮಧ್ಯಂತರ ಜಾಮೀನು (interim bail) ನೀಡಿ ಆದೇಶ ಪ್ರಕಟಿಸಿದೆ. 131 ದಿನಗಳ ಬಳಿಕ ದರ್ಶನ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಷರತ್ತುಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ ಹೈಕೋರ್ಟ್‌. ಜೂನ್ 22ರಂದು ಜೈಲು ಸೇರಿದ್ದರು ದರ್ಶನ್. ಒಂದು ವಾರದಲ್ಲಿ ಚಿಕಿತ್ಸೆಯ ವಿವರ ನೀಡುವಂತೆ ಆದೇಶ (Order) ಆಗಿದೆ. ಇನ್ನೂ ತನಗೆ ಬೇಲ್‌ ಸಿಕ್ಕ ವಿಚಾರ ಗೊತ್ತಾಗುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದಾರೆ. ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಜೈಲಿನ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರಂತೆ. ಬೆಳಗ್ಗೆಯೇ ದರ್ಶನ್ಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆ ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ನಟ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದರ್ಶನ್ಗೆ ಬೇಲ್ ಸಿಕ್ಕ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ಈ ಹಿಂದೆ ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್ರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ದರ್ಶನ್ ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ರು. ದರ್ಶನ್‌ಗೆ ತೀವ್ರ ಬೆನ್ನುನೋವಿನ ಸಮಸ್ಯೆ ಇದ್ದು, ನಟನಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದ ದರ್ಶನ್ ಪರ ವಕೀಲರು ವಾದ ಮಂಡಿಸಿದ್ರು. ಸರಿಯಾದ ಟೈಮ್ಗೆ ಚಿಕಿತ್ಸೆ ಸಿಗದಿದ್ರೆ ಪಾರ್ಶ್ವವಾಯುವಿಗೆ ಒಳಗಾಗೋ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ದರ್ಶನ್ ಬಳ್ಳಾರಿಯಿಂದ ನೇರವಾಗಿ ಮೈಸೂರಿಗೆ ಪ್ರಯಾಣ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿದ್ದಾರೆ ವಿಜಯಲಕ್ಷ್ಮಿ. ಮೈಸೂರಿಗೆ ಪ್ರಯಾಣ ಕಳೆದ ಒಂದು ತಿಂಗಳಿನಿಂದ ಧನ್ವೀರ್ ಬಳ್ಳಾರಿಯಲ್ಲಿ ಉಳಿದುಕೊಂಡಿದ್ದು, ದರ್ಶನ್ ನ ಕರೆದುಕೊಂಡು ಮೈಸೂರಿಗೆ ಪ್ರಯಾಣ ಮಾಡಲಿದ್ದಾರೆ ಎನ್ನಲಾಗಿದೆ. 70 ದಿನಗಳ ಮೇಲೆ ಕಾಲ್ ಶೀಟ್ ಕೊಡೋದಿಲ್ಲ. ಹೀಗಾಗಿ ಮತ್ತೆ ಸಂಪ್ರದಾಯವನ್ನು ದರ್ಶನ್‌ ಬ್ರೇಕ್‌ ಮಾಡಿದ್ದಾರೆ ಎನ್ನಲಾಗಿದೆ. ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 62 ದಿನ ಮಾತ್ರ ಇದ್ರು. ಅದಾದ ನಂತರ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ರು. ಈಗ ಬಳ್ಳಾರಿ ಜೈಲಿನಲ್ಲೂ ಸಹ 70 ದಿನಗಳ ಒಳಗೆ ಕಾಲ್ ಶೀಟ್ ಮುಗಿಸಿದ್ದಾರೆ ದರ್ಶನ್‌. ಇದನ್ನೂ ಓದಿ: Suriya Film Kanguva: ಖ್ಯಾತ ತಮಿಳು ನಟ ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಎಡಿಟರ್‌ ನಿಗೂಢ ಸಾವು! ಅಸಲಿಗೆ ಆಗಿದ್ದೇನು? ಕೆಲವು ದಿನಗಳ ಹಿಂದೆ ದರ್ಶನ್‌ ಅವರನ್ನು ಹೆಲಿಕಾಪ್ಟರ್ ನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ದರ್ಶನ್‌ ಬಿಡುಗಡೆಯಾದ ಬಳಿಕ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರುವುದು ತುಂಬಾ ಕಷ್ಟವಾಗಬಹುದು. ಸಾವಿರಾರು ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ವೇಳೆ ಅವರೇನಾದರೂ ರಸ್ತೆ ಮಾರ್ಗದಲ್ಲಿ ಬೆಂಗಳೂರಿಗೆ ಬಂದರೆ, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದು, ಅದರಿಂದಾಗಿ ಅವರನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆ ತರಲಿದ್ದಾರೆ ಎನ್ನಲಾಗಿತ್ತು. ವರದಿ: ಸತೀಶ್ ಕನಕಪುರ, ನ್ಯೂಸ್​18 ಕನ್ನಡ ಪ್ರತಿನಿಧಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.