NEWS

Uttara Kannada Humanity Story: ಅಪರಿಚಿತನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಭಟ್ಕಳದ ಹಿರಿಯ ಸಿವಿಲ್ ಜಡ್ಜ್!

ಇಲ್ಲಿ ವಿಡಿಯೋ ನೋಡಿ ಉತ್ತರ ಕನ್ನಡ: ಭಟ್ಕಳದ ಹಿರಿಯ ಸಿವಿಲ್ ಜಡ್ಜ್ (Bhatkal Civil judge) ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿಯವರ ಮಾನವೀಯತೆಯ (Humanity) ಈ ನಡೆ ಎಲ್ಲರಿಗೂ ಮಾದರಿ. ಕಳೆದ 4 ವರ್ಷದಿಂದ ಕೊಳಕು, ಹರಿದ ಬಟ್ಟೆಯನ್ನು ಹಾಕಿಕೊಂಡು ರಸ್ತೆಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಶುಚಿಗೊಳಿಸಿ ಹೊಸ ಬಟ್ಟೆ ಹಾಕಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನ್ಯಾಯಾಧೀಶರು ಎಂದರೆ ಕೇವಲ ಕೋರ್ಟ್‌ಗಳಲ್ಲಿ ನ್ಯಾಯ ಹೇಳುವುದಕ್ಕಷ್ಟೇ ಸೀಮಿತವಲ್ಲ. ಅವರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದವರು ಎಂಬುದನ್ನು ನ್ಯಾಯಮೂರ್ತಿ ಕಾಂತ ಕುರಣಿಯವರು ತೋರಿಸಿಕೊಟ್ಟಿದ್ದಾರೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಹಿರಿಯ ಸಿವಿಲ್ ಜಡ್ಜ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾಗಿರುವ ಕಾಂತ ಕುರಣಿಯವರು ನ್ಯಾಯ ನೀಡುವ ಕೆಲಸದ ಜತೆ ಮಾನವೀಯ ಕೆಲಸವನ್ನೂ ಮಾಡಿದ್ದಾರೆ. ಅದೇನೆಂದರೆ ಕಳೆದ 4 ವರ್ಷಗಳಿಂದ ಕೊಳಕು, ಹರಿದ ಬಟ್ಟೆ ತೊಟ್ಟು ರಸ್ತೆಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಶುಚಿಗೊಳಿಸಿ, ಆತನಿಗೆ ಹೊಸ ಬಟ್ಟೆ ಹಾಕಿಸಿ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ನ್ಯಾಯಾಧೀಶ ಕಾಂತ ಕುರಣಿಯವರು ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯಕ್ರಮಕ್ಕೆ ತೆರಳಲು ಹೊರಟಿದ್ದರು. ಈ ವೇಳೆ ನ್ಯಾಯಾಲಯದ ಹೊರಗೆ ಸುಮಾರು 50 ವರ್ಷದ ವ್ಯಕ್ತಿಯೋರ್ವ ಹೊಲಸು ಬಟ್ಟೆ ಧರಿಸಿ, ಕೈಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ ಚೀಲಗಳನ್ನು ಹಿಡಿದು ನಿಂತಿದ್ದ. ಹೊಲಸು ಗಡ್ಡ, ಕುರುಚಲು ತಲೆಕೂದಲನ್ನು ಹೊಂದಿದ್ದ ಈ ವ್ಯಕ್ತಿಯನ್ನು ನೋಡಿ, ಆತನಿಗೆ ಸರಿಯಾದ ಮಾರ್ಗ ತೋರಿಸಬೇಕು ಎಂದು ಜಡ್ಜ್ ನಿರ್ಧರಿಸಿದ್ರು. ತನ್ನ ಹೆಸರು, ಊರಿನ ಬಗ್ಗೆ ಹೇಳಿದ ವ್ಯಕ್ತಿ! ಕೊಳಕಾಗಿದ್ದ ಆ ವ್ಯಕ್ತಿಯನ್ನು ಕರೆಸಿ ನ್ಯಾಯಾಲಯದ ಆವರಣದಲ್ಲಿ ಕೂರಿಸಿದ ನ್ಯಾಯಾಧೀಶರು ಆತನ ಹೆಸರು, ವಿಳಾಸವನ್ನು ತಿಳಿಯಲು ಪ್ರಯತ್ನಿಸಿದ್ರು. ತನ್ನ ಹೆಸರು ನಾಗಭೂಷಣ ಪದ್ಮನಾಭ ಆಚಾರ್ಯ ಎಂದು ಹೇಳಿರುವ ಆ ವ್ಯಕ್ತಿ ತನ್ನ ಊರು ಹಿರಿಯಡ್ಕ ಎಂದು ತಿಳಿಸಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ವಿಚಾರಿಸಿದಾಗ ಆತನ ಮನೆಗೆ ಬೀಗ ಹಾಕಿಕೊಂಡಿರುವುದು ತಿಳಿದು ಬಂದಿತ್ತು. ಆ ವ್ಯಕ್ತಿಗೆ ಅಣ್ಣ, ಅಕ್ಕ ಇರುವ ವಿಚಾರವೂ ಗೊತ್ತಾಗಿದೆ. ಇದನ್ನೂ ಓದಿ: Deviramma Temple: ದೇವಿರಮ್ಮನ ಬೆಟ್ಟದ ಮೇಲೆ ರೀಲ್ಸ್ ಮಾಡೋರಿಗೆ ಖಡಕ್‌ ಸೂಚನೆ ಕೊಟ್ಟ ಖಾಕಿ ಪಡೆ ಸುಮಾರು 10 ವರ್ಷದ ಹಿಂದೆ ಕೋಪಿಸಿಕೊಂಡು ಮನೆಯಿಂದ ಹೊರಬಂದಿದ್ದ ಈತ ಭಟ್ಕಳ, ಮುರ್ಡೇಶ್ವರ ಹಾಗೂ ಹೊನ್ನಾವರದ ಬಸ್ ನಿಲ್ದಾಣ, ರಸ್ತೆ ಬದಿಯಲ್ಲಿ ದಿನ ಕಳೆಯುತ್ತಿದ್ದುದಾಗಿ ತಿಳಿಸಿದ್ದಾನೆ. 7 ವರ್ಷದ ಹಿಂದೆ ತನಗೆ ಅಪೆಂಡಿಕ್ಸ್ ಆಪರೇಷನ್ ಆಗಿತ್ತು ಎನ್ನುವ ಆ ವ್ಯಕ್ತಿ ಹೊಟ್ಟೆ ಮೇಲಿರುವ ಗಾಯವನ್ನು ತೋರಿಸಿದ್ದಾನೆ. ಇದನ್ನೆಲ್ಲ ಕಂಡು ಮರುಗಿದ ನ್ಯಾಯಾಧೀಶರಾದ ಕಾಂತ ಕುರಣಿಯವರು ಆತನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಪೊಲೀಸರು, ವಕೀಲರು, ಕೋರ್ಟ್ ಸಿಬ್ಬಂದಿ ಎಲ್ಲ ಸೇರಿ ಆತನ ಮನವೊಲಿಸಿ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಿಚಿತ ವ್ಯಕ್ತಿಯ ಬಗ್ಗೆ ನ್ಯಾಯಾಧೀಶರು ತೋರಿದ ಕಾಳಜಿ, ಆತನನ್ನು ಆಸ್ಪತ್ರೆಗೆ ಸೇರಿಸಿದ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.