NEWS

Hassan: ಹಾಸನಾಂಬೆ ಎದುರೇ ಜಿಲ್ಲಾಧಿಕಾರಿ, ಪೊಲೀಸರ ಗಲಾಟೆ! ಡಿಸಿ ವಿರುದ್ಧ ಶಾಸಕ ಎಚ್​​ಕೆ ಸುರೇಶ್ ಗರಂ! ಅಸಲಿಗೆ ಆಗಿದ್ದೇನು?

ಜಿಲ್ಲಾಧಿಕಾರಿ ವಸರ್ಸ್ ಪೊಲೀಸ್ ಹಾಸನ: ಹಾಸನಾಂಬೆ ದೇವಿ ದರ್ಶನೋತ್ಸವ (Hasanamba Temple) ವೇಳೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆ. ಶಿಷ್ಟಾಚಾರದ ಹೆಸರಿನಲ್ಲಿ ವಾಹನ ತಡೆದ ವಿಚಾರಕ್ಕೆ ವಾಗ್ವಾದ ನಡೆದಿದೆ. ಖುದ್ದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ‌ಸತ್ಯಭಾಮ (Hassan DC Satyabhama) ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಹಲವಾರು ಪೊಲೀಸರು ಸೇರಿ ಜಿಲ್ಲಾಧಿಕಾರಿ ಪಿಎ ಶಶಿ ಎಂಬಾತನನ್ನು ತಳ್ಳಿದ್ದಾರೆ ಎನ್ನಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುವುದಾಗಿ ಜಿಲ್ಲಾಧಿಕಾರಿ ‌ಸತ್ಯಭಾಮ ವಾರ್ನಿಂಗ್ ನೀಡಿದ್ದಾರೆ. ಜಿಲ್ಲಾಧಿಕಾರಿ ಮಾತನ್ನು ಒಪ್ಪಿಕೊಳ್ಳದ ಪೊಲೀಸ್ ಅಧಿಕಾರಿಗಳು, ಡಿಸಿ ಸತ್ಯಭಾಮ ಜೊತೆ ವಾಗ್ದಾದ ನಡೆಸಿದ್ದಾರೆ. ಇನ್ನು, ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಡಿಸಿ ಪಿಎ ಶಶಿ ಕರೆತಂದಿದ್ದ ಶಿಷ್ಟಾಚಾರ ವಾಹನ ತಡೆದಾಗ ಗಲಾಟೆ ಆರಂಭವಾಗಿತ್ತು ಎನ್ನಲಾಗಿದ್ದು, ಗಾಯಗೊಂಡಿದ್ದ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರ್ತವ್ಯದಲ್ಲಿದ್ದ ಮೈಸೂರು ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಮಾಜಾನ್ ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮತ್ತೆ ಸಬ್‌ಇನ್ಸ್‌ಪೆಕ್ಟರ್ ಹಮಾಜಾನ್ ಹಾಜರಾಗಿದ್ದಾರೆ. ಇದನ್ನೂ ಓದಿ: Actor Darshan: ಜಾಮೀನು ಅರ್ಜಿ ವಿಚಾರಣೆ ಮುನ್ನವೇ ನಟ ದರ್ಶನ್​ಗೆ ಗುಡ್‌ನ್ಯೂಸ್; ಈ ಕೇಸ್​​​ನಲ್ಲಿ ಕ್ಲೀನ್‌ಚಿಟ್ ಸಾಧ್ಯತೆ! ಈ ಘಟನೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಮುಸಿಕಿನ ಗುದ್ದಾಟಕ್ಕೆ ಕಾರಣವಾಗಿದೆ. ಹಾಸನಾಂಬೆ ದರ್ಶನಕ್ಕೆ ದಿನ ನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ದರ್ಶನೋತ್ಸವ ನಡುವೆ ಅಧಿಕಾರಿಗಳ ಕಿತ್ತಾಟದಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಶಾಸಕ, ಜಿಲ್ಲಾಧಿಕಾರಿ ಸಿ.ಸತ್ಯಭಾಮ ನಡುವೆ ಜಟಾಪಟಿ ಈ ಘಟನೆ ಬೆನ್ನಲ್ಲೇ ಹಾಸನಾಂಬೆ ದೇವಿ ಗರ್ಭಗುಡಿ ಎದುರು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ಬಿಜೆಪಿ ಶಾಸಕ ಎಚ್.ಕೆ.ಸುರೇಶ್ ನಡುವೆ ವಾಗ್ವಾದ ನಡೆದಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೇವಿಯ ದರ್ಶನಕ್ಕೆ ಆಗಮಿಸಿದ್ದ ವೇಳೆ ಬಿಎಸ್‌ವೈ ಕುಟುಂಬದ ಜೊತೆ ಶಾಸಕ ಎಚ್.ಕೆ.ಸುರೇಶ್ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಕೂಡ ಆಗಮಿಸಿದ್ದರು. ಯಡಿಯೂರಪ್ಪ ಅವರು ಗರ್ಭಗುಡಿಗೆ ಪ್ರವೇಶಿಸುತ್ತಿದ್ದಂತೆ ಅವರ ಹಿಂದೆ ಗರ್ಭಗುಡಿಗೆ ಹೋಗಲು ಶಾಸಕ ಎಚ್.ಕೆ.ಸುರೇಶ್ ಮುಂದಾಗಿದ್ದರು. ಈ ವೇಳೆ ಬೇರೆಯವರಿಗೆ ಡಿಸ್ಟರ್ಬ್ ಆಗ್ತಿದೆ, ಹೋಗಿ ಹೋಗಿ ಎಂದು ಸಿಟ್ಟಿನಲ್ಲಿ ಶಾಸಕ ಎಚ್.ಕೆ.ಸುರೇಶ್‌ಗೆ ಹೇಳಿದ ಡಿಸಿ ಸತ್ಯಭಾಮ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಗರಂ ಆದ ಶಾಸಕರು. ನಾವು ಯಾರಿಗೂ ಡಿಸ್ಟರ್ಬ್ ಮಾಡಲು ಬಂದಿಲ್ಲ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ನಾವು ಸಾರ್ವಜನಿಕ ಸೇವೆಯಲ್ಲಿಯೇ ಇರುವುದು. ಡಿಸ್ಟರ್ಬ್ ಮಾಡಲು ನಾನು ರೆಡಿಯಿಲ್ಲ ಎಂದು ಹೇಳಿದ್ದರಂತೆ. ಈ ವೇಳೆ ಶಾಸಕ ಸುರೇಶ್ ಹಿಂದೆ ನಿಂತಿದ್ದ ಪ್ರೀತಂಗೌಡ ಅವರನ್ನು ಸಮಾಧಾನ ಮಾಡಲು ಮುಂದಾಗಿದ್ದು, ನೀನು ಹೋಗಯ್ಯ, ನೀನು ಹೋಗೋ ನೀನು.. ನಾನು ನೋಡ್ತಾ ಇದ್ದೀನಿ ಅಂತ ಪ್ರೀತಂಗೌಡ ವಿರುದ್ಧವೂ ಗರಂ ಆಗಿದ್ದರಂತೆ. ಈ ವೇಳೆ ಅಯ್ಯೋ ಬನ್ನಿ ಸರ್ ಪ್ಲೀಸ್ ಎಂದ ಡಿಸಿ ಸತ್ಯಭಾಮ ಅವರು ಒಳಪ್ರವೇಶ ಮಾಡಲು ಹೇಳಿದ್ದು, ಇದಕ್ಕೆ ಒಪ್ಪದ ಶಾಸಕರು ನಾನು ಹೋಗೋದೇ ಇಲ್ಲಾ. ನಾನು ನೋಡಿದ್ದೀನಿ, ನಿಮ್ಮನ್ನೇನು ಬಿಡ್ಸಿ ಅಂತಾ ಕೇಳ್ತಾ ಇದ್ದೀನಾ ಎಂದು ಡಿಸಿ ವಿರುದ್ಧ ಶಾಸಕ ಎಚ್.ಕೆ.ಸುರೇಶ್ ಕಿಡಿಕಾರಿದ್ದರು. (ವರದಿ: ಕೃಷ್ಣ ಇಬ್ಬೀಡು, ನ್ಯೂಸ್ 18 ಕನ್ನಡ, ಹಾಸನ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.