NEWS

Gold Silver Price Today: 1 ಲಕ್ಷದ ಗಟಿ ದಾಟಿದ ಬೆಳ್ಳಿ! ಭರ್ಜರಿ ಏರಿಕೆ ಕಂಡ ಚಿನ್ನ! ಹಬ್ಬದ ಸಮಯದಲ್ಲೇ ಗ್ರಾಹಕರಿಗೆ ಶಾಕ್!

ಚಿನ್ನದ ಬೆಲೆ Today’s Gold Silver Price: ಹಬ್ಬ ಹರಿದಿನಗಳಲ್ಲಿ ಹೆಚ್ಚು ಬಳಕೆಯಾಗುವ ಚಿನ್ನ ಬೆಳ್ಳಿ, ಹೆಂಗಳೆಯರಿಂದ ಹಿಡಿದು ಪುರುಷರವರೆಗೂ ಮೆಚ್ಚಿನ ಲೋಹ ಎಂದೆನಿಸಿದೆ. ಮಹಿಳೆಯರು ಮಾತ್ರವಲ್ಲದೆ ಚಿನ್ನವನ್ನು ಇಷ್ಟಪಡುವ ಪುರುಷರೂ ಇದ್ದಾರೆ. ಅಂತೂ ಇಂತು ಚಿನ್ನವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಎಂಬುದು ಸುಳ್ಳಲ್ಲ. ಚಿನ್ನ ಖರೀದಿಸಲು ಚಿನ್ನದ ದರ ತಗ್ಗಬೇಕು ಎಂದು ಕಾಯುವವರೇ ಹೆಚ್ಚಿರುವಾಗ ಚಿನ್ನ ಮಾತ್ರ ನಾಗಾಲೋಟದಲ್ಲಿ ಓಡುತ್ತಿದೆ. ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಒಂದೆಡೆಯಾದರೆ ಚಿನ್ನ ಖರೀದಿಸುವ ಪ್ಲ್ಯಾನ್ ಮಾಡಿಕೊಂಡಿರುವವರ ಲೆಕ್ಕಾಚಾರ ಕೂಡ ತಲೆಕೆಳಗಾಗಿದೆ ಏಕೆಂದರೆ ಚಿನ್ನ ಹಾವು ಏಣಿ ಆಟವಾಡುತ್ತಿದ್ದು 50 ರ ಗಡಿ ದಾಟಿ ಮುಂದುವರೆಯುತ್ತಿದೆ. ಇದನ್ನೂ ಓದಿ: Darshan Gets Interim Bail: ದರ್ಶನ್‌ ಇಚ್ಚಿಸಿದ ಆಸ್ಪತ್ರೆಯಲ್ಲೇ ಚಿಕಿತ್ಸೆ! ಆದರೆ ಕಂಡೀಷನ್ಸ್ ಅಪ್ಲೈ! ಹೈಕೋರ್ಟ್ ವಿಧಿಸಿದ ಖಡಕ್ ಷರತ್ತುಗಳೇನು? ಚಿನ್ನದ ಬೆಲೆ ಹಬ್ಬದ ಸಮಯದಲ್ಲಾದರೂ ಕಡಿಮೆಯಾಗಬಹುದು ಎಂದು ಅಂದುಕೊಂಡಿದ್ದವರಿಗೆ ಮಾತ್ರ ಈ ಸುದ್ದಿ ಶಾಕ್ ನೀಡಿದೆ. ಚಿನ್ನ ಬೆಳ್ಳಿಯ ಬೆಲೆ ಏರಿಕೆಗೆ ಹಲವಾರು ಜಾಗತಿಕ ಅಂಶಗಳೂ ಕಾರಣವಾಗಿದ್ದು ಯುದ್ಧ, ಹಣದುಬ್ಬರ, ಷೇರು ಮಾರುಕಟ್ಟೆಯ ಏರಿಳಿತಗಳೂ ಚಿನ್ನದ ಬೆಲೆ ಏರಿಕೆಯ ಹಿಂದಿವೆ. ಇನ್ನು ಚಿನ್ನ ಸಾರ್ವಕಾಲಿಕ ಮನ್ನಣೆ ಪಡೆದುಕೊಂಡಿರುವ ಲೋಹವಾಗಿದ್ದು, ಹೂಡಿಕೆಯ ವಿಚಾರದಲ್ಲೂ ಚಿನ್ನ ಮುಂದಿದೆ ಹಾಗೂ ಕಷ್ಟಕಾಲದ ಆಪತ್ಬಾಂಧವ ಎಂದೆನಿಸಿದೆ. ಮಹಾನಗರಗಳಲ್ಲಿ ಚಿನ್ನದ ರೇಟ್ ಹೇಗಿದೆ ಇಂದು ಕೂಡ ಚಿನ್ನ ಎಂದಿನ ತನ್ನ ಬೆಲೆ ಏರಿಕೆಯ ಹಾದಿಯಲ್ಲೇ ಸಾಗಿದ್ದು, ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರ ಮುಖದಲ್ಲಿ ನಿರಾಶೆಯನ್ನುಂಟು ಮಾಡಿದೆ. ಆದರೂ ಚಿನ್ನ ಬೆಳ್ಳಿಯ ಬೆಲೆ ಅಪ್‌ಡೇಟ್ ಅನ್ನು ನಿಮ್ಮ ಮುಂದಿರಿಸುವುದು ನಮ್ಮ ಹೊಣೆಯಾಗಿದ್ದು ಇಂದಿನ ಧಾರಣೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,440 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 7,440 , ರೂ. 7,440, ರೂ. 7,440 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 7,445 ರೂ. ಆಗಿದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 6,087 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 7,440 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ.8,116 ಆಗಿದೆ. ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 48,696 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 59,520 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 64,928 ಆಗಿದೆ. ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 60,870 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ- ರೂ. 74,440 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 81,160 ಆಗಿದೆ. ನೂರು ಗ್ರಾಂ (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 6,08,700 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 7,44,000 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 8,11,600 ಆಗಿದೆ. ಇದನ್ನೂ ಓದಿ: Baba Vanga: ನಿಖರ ಭವಿಷ್ಯ ನುಡಿಯುವ ಬಾಬಾ ವಂಗಾ ಪ್ರಕಾರ 2043ರ ವೇಳೆಗೆ ಈ ದೇಶಗಳಲ್ಲಿ ಬರಲಿದೆ ಮುಸ್ಲಿಂ ಆಳ್ವಿಕೆ! ಬೆಳ್ಳಿಯ ದರ ಹೇಗಿದೆ? ಚಿನ್ನದಂತೆ ಕಾಣುವ ಬೆಳ್ಳಿಯ ಆಭರಣಗಳಿಗೆ ಉತ್ತಮ ಗ್ರಾಹಕರಿದ್ದಾರೆ ಎಂಬುದು ಚಿನ್ನದಂಗಡಿ ಮಾಲೀಕರ ಮಾತಾಗಿದೆ. ಚಿನ್ನದಂತೆ ಬೆಳ್ಳಿ ಕೂಡ ಕೆಲವು ದಿನಗಳಿಂದ ಬೆಲೆ ಏರಿಸಿಕೊಂಡಿದ್ದು ಇಂದು ಬೆಳ್ಳಿ 1 ಲಕ್ಷದ ಗಟಿ ದಾಟಿದೆ. ಹಬ್ಬದಾಚರಣೆಯ ಸಮಯದಲ್ಲೇ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ಚಿನ್ನದಂತೆ ಬೆಳ್ಳಿ ಕೂಡ ಆಭರಣ ರೂಪದಲ್ಲಿ ಪೂಜೆ ಪರಿಕರಗಳಿಗೆ ಬಳಕೆಯಾಗುವ ಲೋಹವಾಗಿದೆ. ಬೆಳ್ಳಿಯ ಆಭರಣ, ಪೂಜಾ ಸಾಮಾಗ್ರಿಗಳಿಗೂ ಇತ್ತೀಚಿನ ದಿನಗಳಲ್ಲಿ ಉತ್ತಮ ಬೇಡಿಕೆ ಇದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ.1,00,000 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 1000, ರೂ.10,000 ಹಾಗೂ ರೂ.1,00,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 1,09,000 ಆಗಿದ್ದರೆ, ದೆಹಲಿಯಲ್ಲಿ ರೂ.1,00,000 ಮುಂಬೈನಲ್ಲಿ ರೂ. 1,00,000 ಹಾಗೂ ಕೊಲ್ಕತ್ತದಲ್ಲೂ ರೂ. 1,00,000 ಗಳಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.