NEWS

Darshan: ದರ್ಶನ್‌ ಆಚೆ ಬರೋಕೆ ಅದೊಂದೇ ದೊಡ್ಡ ಸಮಸ್ಯೆ? ಹೈಡ್ರಾಮಾ ನಡೆಯುತ್ತಾ?

ದರ್ಶನ್‌ ನಟ ದರ್ಶನ್‌ಗೆ (Darshan) 131 ದಿನಗಳ ಬಳಿಕ ಮಧ್ಯಂತರ ಜಾಮೀನು (Interim Bail) ಸಿಕ್ಕಿದೆ. ಈ ವಿಚಾರ ತಿಳಿದು ದರ್ಶನ್‌ ಕೂಡ ಸಂತಸಗೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೇ ನಟ ದರ್ಶನ್‌ ಬಳ್ಳಾರಿ ಜೈಲಿನಿಂದ ರಿಲೀಸ್ (Darshan Release) ಆಗಲಿದ್ದಾರೆ. ಈಗಾಗಲೇ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijalakshmi) ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ದರ್ಶನ್‌ ತಮ್ಮ ದಿನಕರ್‌ ಕೂಡ ಆಗಮಿಸಿದ್ದಾರೆ. ಇನ್ನೂ ದರ್ಶನ್‌ರನ್ನ ರಿಲೀಸ್ ಮಾಡುವ ಪ್ರಕ್ರಿಯೆ ಬಗ್ಗೆ ವಿಜಯಲಕ್ಷ್ಮಿ ಅವರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮಧ್ಯಂತರ ಜಾಮೀನು ಪ್ರತಿ ಬಳ್ಳಾರಿ ಜೈಲು ಸೇರುತ್ತಿದ್ದಂತೆ ದರ್ಶನ್‌ ಬಿಡುಗಡೆಯಾಗಲಿದ್ದಾರೆ. ದರ್ಶನ್‌ ಬಿಡುಗಡೆಗೆ ಅದೇ ಸಮಸ್ಯೆಯಾಗುತ್ತಾ? ದರ್ಶನ್‌ಗೆ ಬೇಲ್‌ ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ಮಧ್ಯಂತ ಜಾಮೀನು ಆಗಿದ್ರೂ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್‌ಗೆ ಜೈಕಾರ ಹಾಕುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ಸೇರುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ನೆರೆದಿರುವ ಅಭಿಮಾನಿಗ.ಳಿಗೆ ಅಲ್ಲಿಂದ ಹೋಗುವಂತೆ ಸೂಚಿಸಿದ್ದಾರೆ. ಆದರೂ ಕೆಲ ಅಭಿಮಾನಿಗಳು ಜೋರಾಗಿ ಜೈ ಕಾರ ಹಾಕುತ್ತಾ ಅಲ್ಲೇ ಇದ್ದಾರೆ. ಸಂಜೆ ವೇಳೆಗೆ ಮತ್ತಷ್ಟು ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂದೆ ಸೇರುವ ಸಾಧ್ಯತೆ ಬಹಳ ಹೆಚ್ಚಿದೆ. ಸಂಜೆ ಹೈಡ್ರಾಮ ನಡೆಯುತ್ತಾ? ಹೀಗೆ ಆದ್ರೆ ಸಾಕಷ್ಟು ಮಂದಿ ಜೈಲಿನ ಮುಂದೆ ಸೇರಲಿದ್ದಾರೆ. ಇನ್ನೂ ದರ್ಶನ್‌ ರಿಲೀಸ್ ಆಗುವ ಸಂದರ್ಭದಲ್ಲಿ ನೂಕನುಗ್ಗಲು ಶುರುವಾಗಬಹುದು. ದರ್ಶನ್‌ ನೋಡುವ ಉತ್ಸಾಹದಲ್ಲಿ ಅವರ ಅಭಿಮಾನಿಗಳಿದ್ದಾರೆ. ಈ ವೇಳೆ ಬಳ್ಳಾರಿ ಜೈಲಿನ ಮುಂದೆ ಹೈಡ್ರಾಮ ನಡೆಯುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಮಧ್ಯಂತರ ಜಾಮೀನು ಸಿಕ್ಕಿರೋ ದರ್ಶನ್‌ ಅಪ್ಪಿ-ತಪ್ಪಿನೂ ಈ ತಪ್ಪು ಮಾಡಬಾರದು! ದರ್ಶನ್‌ಗೆ ಬೇಲ್ ಸಿಕ್ಕ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ಸರಿಯಾದ ಟೈಮ್ಗೆ ಚಿಕಿತ್ಸೆ ಸಿಗದಿದ್ರೆ ಪಾರ್ಶ್ವವಾಯುವಿಗೆ ಒಳಗಾಗೋ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ದರ್ಶನ್ ಬಳ್ಳಾರಿಯಿಂದ ನೇರವಾಗಿ ಮೈಸೂರಿಗೆ ಪ್ರಯಾಣ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿದ್ದಾರೆ ವಿಜಯಲಕ್ಷ್ಮಿ. ಆಂಬ್ಯುಲೆನ್ಸ್‌ನಲ್ಲಿ ದರ್ಶನ್‌ ಬರ್ತಾರಾ? ಬಳ್ಳಾರಿಯಿಂದ ಡೈರೆಕ್ಟ್ ಮೈಸೂರಿಗೆ ದರ್ಶನ್‌ ಬರಲಿದ್ದಾರೆ ಎಂದು ವರದಿಯಾಗಿದೆ. ಆದರೆ ದರ್ಶನ್‌ ಬರೋದು ಆಂಬ್ಯುಲೆನ್ಸ್ ಮೂಲಕ ಎನ್ನಲಾಗಿದೆ. ಸಂಜೆ 7 ರ ನಂತರ ಬಳ್ಳಾರಿಯಿಂದ ಹೊರಡೋ ಸಾಧ್ಯತೆ ಇದೆ ಎನ್ನಲಾಗಿದೆ. ಆಂಧ್ರದ ರಸ್ತೆ ಮಾರ್ಗಗಳನ್ನು ಅನುಸರಿಸಲಿದ್ದಾರೆ ಎನ್ನಲಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.