NEWS

Toxic Movie: ಟಾಕ್ಸಿಕ್​ಗೆ ಕಂಟಕ: ಅಸಲಿಗೆ ಈ ಜಾಗ ಯಾರದ್ದು? ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಯಾರು? ತಪ್ಪು ಯಾರದ್ದು?

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಸಿನಿಮಾ (Toxic Cinema) ತಂಡದ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆ (eshwar khandre) ಗರಂ ಆಗಿದ್ದಾರೆ. ಬೆಂಗಳೂರಿನ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಶೂಟಿಂಗ್‌ಗೆ ಬಳಸಿಕೊಂಡಿದ್ದ ಟಾಕ್ಸಿಕ್ ಚಿತ್ರತಂಡ, ಅರಣ್ಯವನ್ನು ಹಾಳು ಮಾಡಿದೆ ಅಂತ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ (Forest Area) ಗಿಡಮರ ಕಡಿದು ಬೃಹತ್ ಸೆಟ್ ಹಾಕಿರುವ ಆರೋಪ ಕೇಳಿ ಬಂದಿದೆ. 20 ಎಕರೆ ಹೆಚ್ ಎಂಟಿ ಅರಣ್ಯ ಪ್ರದೇಶದಲ್ಲಿ ಜಾಗದಲ್ಲಿ ಸಿನಿಮಾ ಸೆಟ್ ಹಾಕಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಸಿನಿಮಾ ಶೂಟಿಂಗ್ ಆಗುತ್ತಿದೆ. ಹಾಗಾದ್ರೆ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಾರಾರು? ಹೆಚ್ ಎಂಟಿ ಅನುಮತಿ ನೀಡಿದೆಯೋ?ಚಿತ್ರೀಕರಣಕ್ಕೂ ಮುನ್ನ ಗಿಡ ಮರ ಕಡಿದು ಸೆಟ್ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೆಯೇ? ಅರಣ್ಯ ಜಾಗದಲ್ಲಿ ಸಿನಿಮಾ ಸೆಟ್ ಅನುಮತಿ ನೀಡಿದವರಾರು? ಈ ಎಲ್ಲದರ ವಿರುದ್ಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಟಾಕ್ಸಿಕ್‌ ಸಿ‌ನಿಮಾ ಶೂಟಿಂಗ್ ಮಾಡಿದ ಜಾಗ ಯಾರದ್ದು? ಒಂದು‌ ಹಳ್ಳಿ ರೀತಿ ಸೆಟ್ ನಿರ್ಮಿಸಿ ಕಳೆದೆರಡು ತಿಂಗಳಿನಿಂದ ಶೂಟಿಂಗ್ ಆಗುತ್ತಿದೆ ಎನ್ನಲಾಗಿದೆ. ಪೀಣ್ಯ ಪ್ಲಾಂಟೇಷನ್ 599 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ ಶೂಟಿಂಗ್‌ ಆಗ್ತಿದೆ. ಈ ಜಾಗವನ್ನು 1950ರಲ್ಲಿ ಡಿನೋಟಿಫಿಕೇಷನ್ ಮಾಡದೇ ದಾನ ಮಾಡಲಾಗಿದೆ ಎನ್ನಲಾಗಿದೆ. ಹೆಚ್ ಎಂಟಿ ಸಂಸ್ಥೆಗೆ ದಾನ, ಮಂಜೂರು ಹೆಸರಿನಲ್ಲಿ ಹಸ್ತಾಂತರ ಆಗಿದ್ದು ಹೆಚ್ ಎಂಟಿ ವಶದಲ್ಲಿರುವ ಜಾಗವೇ ಅರಣ್ಯ ಪ್ರದೇಶ ಎನ್ನಲಾಗಿದೆ. ಎಚ್ ಎಂಟಿ ವಿವಿಧ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಆಗಿದ್ದು, ಹೆಚ್ ಎಂಟಿ 20ಕ್ಕೂ ಹೆಚ್ಚು ಎಕರೆ ಕೆನರಾ ಬ್ಯಾಂಕ್ ಮಾರಾಟ ಆಗಿದೆ ಎನ್ನಲಾಗಿದೆ. ಈ ಜಾಗದಲ್ಲಿ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಣಕ್ಕೂ ಮುನ್ನ ಗಿಡ ಮರ ಕಡಿದಿದ್ದಾರೋ? ಬಿಬಿಎಂಪಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮೇಲ್ನೋಟಕ್ಕೆ ಅರಣ್ಯ ಪ್ರದೇಶ ನಾಶವಾಗಿದೆ. ತನಿಖೆ ಮಾಡಿ ಕ್ರಮಕೈಗೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ ಆಗಿದೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಟಾಕ್ಸಿಕ್ ಸೆಟ್ ಜಾಗಕ್ಕೆ ಬಿಬಿಎಂಪಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರು. ಸೆಟ್ ಪರ್ಮನೆಂಟ್ ಸ್ಟ್ರಕ್ಚರ್ ಅಥವಾ ತಾತ್ಕಾಲಿಕವಾ ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಟಾಕ್ಸಿಕ್ ತಂಡ ಇದು ತಾತ್ಕಾಲಿಕ ಸೆಟ್ ಎಂದು ಪತ್ರದ ಮೂಲಕ‌ ಉತ್ತರ ನೀಡಿತ್ತು. ಶೂಟಿಂಗ್ ಮುಗಿದ ನಂತರ ಸೆಟ್ ತೆಗೆಯುತ್ತೇವೆ ಎಂದು ಬಿಬಿಎಂಪಿಗೆ ತಂಡ ಪತ್ರ ಬರೆದಿತ್ತು ಎನ್ನಲಾಗಿದೆ. ಇದನ್ನೂ ಓದಿ: Actor Darshan: ಇಂದು ದರ್ಶನ್ ಬೇಲ್ ಭವಿಷ್ಯ ನಿರ್ಧಾರ! ನಟನಿಗೆ ಸಿಗುತ್ತಾ ಮಧ್ಯಂತರ ಜಾಮೀನು? ಕಳೆದ ಒಂದು ತಿಂಗಳಿಂದ ಈ‌ ಸೆಟ್ ನಲ್ಲಿ ಶೂಟಿಂಗ್‌‌ ಕೂಡ ನಡೆದಿಲ್ಲ ಎನ್ನಲಾಗ್ತಿದೆ. ಸೆಟ್ ಹಾಕುವ ಸಂದರ್ಭದಲ್ಲೇ ಖಾಲಿ ಬಯಲಿತ್ತಂತೆ. ಕೆಲವು ಕಡೆ ಮಾತ್ರ ಪೊದೆ ರೀತಿ ಇತ್ತು. ಅವುಗಳನ್ನಷ್ಟೇ ಕ್ಲಿಯರ್ ಮಾಡಿ‌ ಸೆಟ್ ಹಾಕಲಾಗಿದೆ ಎಂಬುದು‌ ಸಿನಿಮಾ ಟೀಂ ಮಾಹಿತಿ. ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಅಂತ ಖಂಡ್ರೆ ಹೇಳಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.