NEWS

By Election: ನಾಮಪತ್ರ ವಾಪಸ್‌ಗೆ ಇಂದೇ ಕಡೇ ದಿನ; ಶಿಗ್ಗಾವಿಯಲ್ಲಿ ಕಾಂಗ್ರೆಸ್​​​​ಗೆ ಖಾದ್ರಿಯದ್ದೇ ಟೆನ್ಷನ್!

ಅಜ್ಜಂಪೀರ್ ಖಾದ್ರಿ, ಮಾಜಿ ಶಾಸಕ ಬೆಂಗಳೂರು: ಕಾಂಗ್ರೆಸ್ ಬಂಡಾಯಕ್ಕೆ (Congress) ಇಂದು ತೆರೆ ಬೀಳಲಿದೆ. ಅಜ್ಜಂಪೀರ್ ಖಾದ್ರಿ (Sayed Azeempeer Khadri) ಇಂದು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎನ್ನಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ ಖಾದ್ರಿ ನಡೆ. ನಾಮಪತ್ರ ವಾಪಸ್‌ಗೆ ಸಿಎಂ (CM Siddaramaiah), ಡಿಸಿಎಂಗೆ ಸಮ್ಮತಿ ಸೂಚಿಸಿದ್ದಾರೆ. ನಾಮಪತ್ರ ವಾಪಸ್‌ಗೆ ಇಂದೇ ಕೊನೆ ದಿನ ಅಖಾಡದಲ್ಲಿ ಉಳೀತಾರಾ? ಇಲ್ವೇ ನಾಮಪತ್ರ ವಾಪಸ್ ಪಡೀತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಟಿಕೆಟ್ ಸಿಗದೇ ಇರುವ ಕಾರಣ ಅಸಮಾಧಾನ ಸಚಿವ ಜಮೀರ್ ಅಹ್ಮದ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿಯನ್ನ‌ ಬೆಂಗಳೂರಿನಿಂದ ಶಿಗ್ಗಾವಿಗೆ ಕರೆದುಕೊಂಡು ಹೋಗಿದ್ದಾರೆ. ನಾಮಪತ್ರ ವಾಪಾಸ್ ವರೆಗೂ ಜೊತೆಯಲ್ಲೇ ಇರಲಿದ್ದಾರೆ. ನಾಮಪತ್ರ ವಾಪಸ್ ಪಡೆಯೋದಾಗಿ ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ. ನಮ್ಮ ನಾಯಕರು ನನ್ನ ಜೊತೆಗೆ ಮಾತನಾಡಿದ್ದಾರೆ. ಟಿಕೆಟ್ ಸಿಗದೇ ಇರುವ ಕಾರಣ ಅಸಮಾಧಾನ ಆಗಿದ್ದು ನಿಜ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತೇನೆ ಎಂದಿದ್ದಾರೆ. ಈ ಬಾರಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್‌ ಪಡೆಯುತ್ತಾರೆ ಎಂದು ಸಚಿವ ಜಮೀರ್‌ ಹೇಳಿದ್ದಾರೆ. ‘3 ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ’ ಚನ್ನಪಟ್ಟಣ ಸೇರಿ 3 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿ ಘೋಷಣೆ ನಂತರ ನಮ್ಮ ಗೆಲುವು ಸುಲಭವಾಗಿದೆ. ನಿಖಿಲ್ ಕುಮಾರಸ್ವಾಮಿ ಅರ್ಜುನ ಬೇಕಾದ್ರು ಆಗಲಿ, ಭೀಮ ಬೇಕಾದರೂ ಆಗಲಿ ಎಂದು ನಿಖಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿಗಿಂತಲೂ ಯೋಗೀಶ್ವರ್ ಪರವಾಗಿ ಹೆಚ್ಚಾಗಿ ಅನುಕಂಪ ಇದೆ. ಜನರ ತೀರ್ಮಾನವೇ ಅಂತಿಮ ಎಂದಿದ್ದಾರೆ. ಇಂದು ನಿಖಿಲ್ ಪರ ಯದುವೀರ್ ಕ್ಯಾಂಪೇನ್ ಇತ್ತ ಚನ್ನಪಟ್ಟಣ ಉಪ ಚುನಾವಣೆ ರಂಗೇರಿದೆ. ಇಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಯದುವೀರ್ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10 ರಿಂದ ಎಚ್​​​​ಡಿಕೆ ಪ್ರವಾಸ ಪ್ರಾರಂಭವಾಗಲಿದೆ. ಮುಸ್ಲಿಂ ವಾರ್ಡ್ ಗಳಲ್ಲಿ ಪ್ರಚಾರ ನಡೆಸಲಿರುವ ಕುಮಾರಸ್ವಾಮಿ ದರ್ಗಾಗೂ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: Karnataka Waqf Land Raw: ಕರುನಾಡಲ್ಲಿ ವಕ್ಫ್​ ಆಸ್ತಿ ಕಿಚ್ಚು! ಅನ್ನದಾತ ರೈತರ ನಿದ್ದೆಗೆಡಿಸಿದ ಸರ್ಕಾರ ನೋಟಿಸ್​; ರಾಜಕೀಯದಾಟಕ್ಕೆ ಬ್ರಹ್ಮಾಸ್ತ್ರ! ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ ಮೇಲೆ ಕೆಲವರ ಬ್ಯಾಟರಿ ಡೌನ್ ಆಗಿದೆ. ಏನ್ ಗೆದ್ದೆ ಬಿಟ್ವಿ ಎನ್ನುವ ಭ್ರಮೆಯಲ್ಲಿದ್ದರು, ವಾಸ್ತವಿಕ ಪರಿಸ್ಥಿತಿ ಈಗ ಅರ್ಥ ಆಗ್ತಿದೆ. ವಾತಾವರಣ ದಿನೇ ದಿನೇ ಎನ್‌ಡಿಎ ಅಭ್ಯರ್ಥಿ ಪರ‌ ನಿರ್ಮಾಣವಾಗಿದೆ. ನಿಶ್ಚಿತವಾಗಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ತಾರೆ. ಮನೆಗೆ ಅತಿಥಿಗಳು ಬಂದಾಗ ಮನೆಯಲ್ಲಿರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತೆ, ಮನೆಯಿಂದ ಹೊರ ಹೋದ ಮೇಲೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.