NEWS

Deviramma Temple: ದೇವಿರಮ್ಮನ ಬೆಟ್ಟದ ಮೇಲೆ ರೀಲ್ಸ್ ಮಾಡೋರಿಗೆ ಖಡಕ್‌ ಸೂಚನೆ ಕೊಟ್ಟ ಖಾಕಿ ಪಡೆ

ದೇವಿರಮ್ಮ ಬೆಟ್ಟ ಚಿಕ್ಕಮಗಳೂರು: ದೀಪಾವಳಿ(Deepavali) ಬಂತು ಅಂದ್ರೆ ಸಾಕು ಕಾಫೀನಾಡಲ್ಲಿ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಬೆಟ್ಟದ ತಾಯಿ ದೇವಿರಮ್ಮನ(Deviramma Temple) ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಆದ್ರೆ ಈಗಿನ ಸೋಷಿಯಲ್ ಮೀಡಿಯಾದ(Social Media) ಜನರು ಕಂಡ ಕಂಡಲ್ಲೆಲ್ಲಾ ರೀಲ್ಸ್ ಮಾಡೋ ಗೋಜಿಗೆ ಇಳಿದಿದ್ದಾರೆ, ಹಾಗಾದ್ರೆ ಕಾಫೀನಾಡಲ್ಲಿ ಖಾಕಿ ಈ ರೀತಿ ಖಡಕ್ ಸೂಚನೆ ಕೊಟ್ಟಿದ್ದಾದ್ರು ಯಾಕೆ ಅಂತೀರಾ ಈ ಸ್ಟೋರಿ ನೋಡಿ. ರೀಲ್ಸ್ ಮಾಡೋಕೆ ಪೊಲೀಸರು ಬಿಡಲ್ಲ ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆ ನಿಂತು ವರ್ಷಕ್ಕೊಮ್ಮೆ ದರ್ಶನ ನೀಡೋ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ಭಕ್ತರಿಗೆ ಖಾಕಿ ಪಡೆ ಕಠಿಣ ಸಂದೇಶ ರವಾನಿಸಿದೆ. ಮಳೆ ಬಂದು ಬೆಟ್ಟ ಜಾರುತ್ತಿದೆ. ಬೆಟ್ಟ ಹತ್ತುವಾಗ ಮಾರ್ಗ ಮಧ್ಯೆ ಸೆಲ್ಪಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Hassan Travel Guide: ದೀಪಾವಳಿಯ ಸಾಲು-ಸಾಲು ರಜೆ ಎಂಜಾಯ್‌ ಮಾಡಲು ಹಾಸನದ ಈ ಸ್ಥಳಗಳಿಗೆ ಭೇಟಿ ನೀಡಿ ಬುಧವಾರ ಸಂಜೆ 4 ಗಂಟೆಯಿಂದ ಗುರುವಾರ ಸಂಜೆವರೆಗೂ ಬೆಟ್ಟ ಹತ್ತಿ ದೇವೀರಮ್ಮನ ದರ್ಶನಕ್ಕೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಹಾಗಾಗಿ, ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಸರ್ವ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಬೆಟ್ಟ ಹತ್ತುವ ಮಾರ್ಗದಲ್ಲಿ ಡ್ಯಾನ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು, ಸೆಲ್ಪಿಗಾಗಿ ಭಕ್ತರಿಗೆ ತೊಂದರೆ ಕೊಡುವುದು, ರೀಲ್ಸ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಬೆಟ್ಟ ಹತ್ತುವ ಮಾರ್ಗ ಹೇಗೆ? ಸುಮಾರು 3 ಸಾವಿರ ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆ ನಿಂತಿರೋ ದೇವೀರಮ್ಮನ ನೋಡಲು ಲಕ್ಷಕ್ಕೂ ಅಧಿಕ ಭಕ್ತರು ಬರುವ ಹಿನ್ನೆಲೆ ಪೊಲೀಸರ ಬೆಟ್ಟ ಹತ್ತುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಮಲ್ಲೇನಹಳ್ಳಿ ಮಾರ್ಗ, ಮಾಣಿಕ್ಯಾಧಾರ ಮಾರ್ಗ, ಅರಿಶಿನಗುಪ್ಪೆ ಹಾಗೂ ಕಾಫಿ ತೋಟದ ಒಳಗಿಂದ ಒಟ್ಟು ನಾಲ್ಕು ಮಾರ್ಗದಲ್ಲಿ ಹತ್ತುವ ಬೆಟ್ಟಕ್ಕೆ ನಾಲ್ಕು ಮಾರ್ಗದಲ್ಲೂ ಪೊಲೀಸರು ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿದ್ದಾರೆ. ಸುಮಾರು 3 ಕಿ.ಮೀ. ಎತ್ತದ ಬೆಟ್ಟದಲ್ಲಿ ಪ್ರತಿ 1 ಕಿ.ಮೀ.ಗೆ ಒಂದು ಪೊಲೀಸರ ತಂಡವನ್ನ ನಿಯೋಜನೆ ಮಾಡಲಾಗಿದೆ. ಬೆಟ್ಟದ ಮಾರ್ಗದ 5 ಕಡೆ ಮೆಗಾಫೋನ್ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಮಾರ್ಗದುದ್ದಕ್ಕೂ ಅಲ್ಲಲ್ಲೇ, ಪೊಲೀಸ್, ಆರೋಗ್ಯ ಸಿಬ್ಬಂದಿ, ಅಗ್ನಿಶಾಮಕ, ಸ್ವಯಂಸೇವಕರು ಭಕ್ತರ ಅನುಕೂಲಕ್ಕೆ ಸಿದ್ಧರಿರ್ತಾರೆ. ಬೆಟ್ಟ ಹತ್ತಲು ಸುಸ್ತಾದರೆ ರೋಪ್ (ಹಗ್ಗ) ಹಿಡಿದು ಹತ್ತೋದಕ್ಕೂ ಸ್ವಯಂ ಸೇವಕರು, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ನೆರವಿಗೆ ಬರಲಿದ್ದಾರೆ. ಒಟ್ಟಿನಲ್ಲಿ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮನ ದರ್ಶನ ಪಡೆದು ದೀಪಾವಳಿ ಹಬ್ಬ ಆಚರಿಸಲಿ ಎಂಬುದು ಮಲೆನಾಡಿಗರ ಆಶಯ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.