NEWS

National Award For BMTC: ಬಿಎಂಟಿಸಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ನಗರ ಸಾರಿಗೆಯಲ್ಲಿ ಶ್ರೇಷ್ಠತೆ’ ಪ್ರಶಸ್ತಿಯ ಗರಿ

ಸಾಂದರ್ಭಿಕ ಚಿತ್ರ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಮತ್ತೊಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ ನಗರ ಸಾರಿಗೆಯಲ್ಲಿ ಶ್ರೇಷ್ಠತೆ ಪ್ರಶಸ್ತಿಗೆ (Award of Excellence in Urban Transport) ಬಿಎಂಟಿಸಿ ಪಾತ್ರವಾಗಿದ್ದು ಇದು ಬೆಂಗಳೂರಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರಿನ ಜನರ ಪಾಲಿಗೆ ಹೆಮ್ಮೆಯಾಗಿರುವ ಬಿಎಂಟಿಸಿ ಸಾರ್ವಜನಿಕರಿಗೆ ತನ್ನ ಸೇವೆ ನೀಡುವ ವಿಚಾರದಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದಿದೆ. ತನ್ನ ಸೇವೆಗಾಗಿ ಈವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಿಎಂಟಿಸಿ, ಈಗ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಗುಜರಾತ್ ನ ಗಾಂಧಿ ನಗರದಲ್ಲಿ ಪ್ರಶಸ್ತಿ ಪ್ರದಾನ ಸಿಟಿ ವಿಥ್ ಬೆಸ್ಟ್ ರೆಕಾರ್ಡ್ ಆಫ್ ಪಬ್ಲಿಕ್ ಇನ್ವಾಲ್ವ್ಮೆಂಟ್ ಇನ್ ಟ್ರಾನ್ಸ್ ಪೋರ್ಟ್ ವಿಭಾಗದಲ್ಲಿ ಬಿಎಂಟಿಸಿಗೆ ಅವಾರ್ಡ್ ಆಫ್ ಎಕ್ಸಲೆನ್ಸ್ ಇನ್ ಅರ್ಬನ್ ಟ್ರಾನ್ಸ್ ಪೋರ್ಟ್ ಪ್ರಶಸ್ತಿ ಲಭಿಸಿದೆ. ಅಕ್ಟೋಬರ್ 27ರಂದು ಗುಜರಾತ್ ನ ಗಾಂಧಿನಗರದ ಮಹಾತ್ಮ ಗಾಂಧಿ ಮಂದಿರ ಕನ್ವೆನ್ಷನ್ ಸೆಂಟರ್ ನಲ್ಲಿ ಪ್ರಶಸ್ತಿಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರವು ನೀಡುವ ಈ ಪ್ರಶಸ್ತಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ವಿತರಿಸಿದ್ದು, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಮಚಂದ್ರನ್ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಿಎಂಟಿಸಿ ಬದ್ಧತೆಗೆ ಒಲಿದ ಪ್ರತಿಷ್ಠಿತ ಪ್ರಶಸ್ತಿ ಕೇಂದ್ರ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯು ನಾಗರಿಕರ ಸುರಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಎಂಟಿಸಿಯ ಬದ್ಧತೆಯನ್ನು ತೋರಿಸುತ್ತದೆ. ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು ಮತ್ತು ನಗರ ಸಾರಿಗೆಯಲ್ಲಿ ಹೊಸ ಹೊಸ ಪರಿಹಾರಗಳನ್ನು ಅಳವಡಿಸುವಲ್ಲಿ ಬಿಎಂಟಿಸಿಯ ಪ್ರಯತ್ನಗಳಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಇದನ್ನೂ ಓದಿ: Doll Show: ಮೈಸೂರಿನ ಈ ಕುಟುಂಬಸ್ಥರಿಂದ ಗೊಂಬೆ ಪ್ರದರ್ಶನ- ಆದ್ರೆ ಇವು ಮಣ್ಣಿನ ಗೊಂಬೆಗಳಲ್ಲ! 2024ರ ಅಕ್ಟೋಬರ್ ನಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಬಿಎಂಟಿಸಿ ಆಯ್ಕೆ ಆಗಿರುವುದು ದೇಶದಲ್ಲಿರುವ ಇತರ ನಗರಗಳ ಸಾರಿಗೆ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಬಿಎಂಟಿಸಿ ಎದ್ದು ಕಾಣುವಂತೆ ಮಾಡಿದೆ. ಈ ಪ್ರಶಸ್ತಿಯು ಬಿಎಂಟಿಸಿಯ ಹೆಚ್ಎಸ್ಆರ್ ಲೇಔಟ್ ಇಂಟ್ರಾ ಲೂಪ್ ಬಸ್ ಸೇವೆಯ ಜಾರಿಯನ್ನು ಗುರುತಿಸಿದೆ. ಈ ರೀತಿಯ ಇಂಟ್ರಾ ಲೇಔಟ್ ಲೂಪ್ ಸರ್ವಿಸ್ ಭಾರತದಲ್ಲಿ ಇದೇ ಮೊದಲಾಗಿದ್ದು, ಇದು ದೇಶದ ಗಮನ ಮತ್ತು ಮೆಚ್ಚುಗೆಯನ್ನು ಪಡೆದಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.