NEWS

Bigg Boss 11: ಕ್ಯಾಪ್ಟನ್ ಹನುಮಂತನ ಅಸಲಿ ಆಟ ಶುರು; ಸ್ಪರ್ಧಿಗಳು ಫುಲ್‌‌ ಶಾಕ್‌!

ಕ್ಯಾಪ್ಟನ್ ಹನುಮಂತನ ಅಸಲಿ ಆಟ ಶುರು; ಮನೆಯಲ್ಲಿ ಬುಗಿಲೆದ್ದ ಸ್ಪರ್ಧಿಗಳ ಅಸಮಾಧಾನ! ಕ್ಯಾಪ್ಟನ್ ಹನುಮಂತನ (Captain Hanumantha) ಲಕ್ ಚೆನ್ನಾಗಿದೆ. ಎರಡನೇ ಸಲ ಕ್ಯಾಪ್ಟನ್ ಆಗಿದ್ದಾರೆ. ಮೊದಲು ಬಿಗ್ ಬಾಸ್ ಒಂದು ಚಾನ್ಸ್ ಕೊಟ್ಟಿದ್ದರು. ಎರಡನೇ ಸಲ ಸ್ವಂತ ಆಟದಿಂದಲೇ ಕ್ಯಾಪ್ಟನ್ ಆಗಿದ್ದಾರೆ. ಇದಪ್ಪ ಆಟ ಅಂತ ತ್ರಿವಿಕ್ರಮ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಎಲ್ಲರೂ ತಂತ್ರ-ಕುತಂತ್ರ ಮಾಡಿ ಆಟ ಆಡಿದರು. ಆದರೆ, ಹನಮಂತ ಪ್ರಾಮಾಣಿಕವಾಗಿಯೇ ಆಟ ಆಡಿದರು. ಇದರ ಫಲ ಹನುಮಂತ (Hanumantha) ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ಆದರೆ, ಹನುಮಂತ ನಾಮಿನೇಟ್ ಮಾಡಿರೋದೇ ತಡ, ಮನೆಯ ಸದಸ್ಯರ ಅಸಲಿ ಮುಖಗಳು ಹೊರ ಬಂದಿವೆ. ಭವ್ಯ ನಾಮಿನೇಟ್ ಆಗಿದ್ದಾರೆ. ಗೋಲ್ಡ್ ಸುರೇಶ್ (Gold Suresh) ನಾಮಿನೇಟ್ ಆಗಿದ್ದಾರೆ. ಮಾನಸ ನಾಮಿನೇಟ್ (Nomination) ಆಗಿದ್ದಾರೆ. ಇದರಿಂದ ಹನುಮಂತನ ಕ್ಯಾಪ್ಟನ್ಶಿ ಮುಂದೆ ಹೇಗೆ ಅನ್ನೋ ಪ್ರಶ್ನೆ ಇದೆ. ಇದರ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ಯಾಪ್ಟನ್ ಹನುಮಂತ ಕ್ಯಾಪ್ಟನ್ ಹನುಮಂತನ ಕ್ಯಾಪ್ಟನ್ಶಿ ಹೇಗಿರುತ್ತದೆ? ಈ ಪ್ರಶ್ನೆ ಈಗ ಎದ್ದಿದೆ. ಮೊದಲು ಕ್ಯಾಪ್ಟನ್ ಆದಾಗ ಎಲ್ಲರೂ ಪೆದ್ದ ಅಂದುಕೊಂಡಿದ್ದರು. ಆದರೆ, ಎರಡನೇ ಸಲ ಕ್ಯಾಪ್ಟನ್ ಆಗೋ ಹೊತ್ತಿಗೆ ಮನೆ ಮಂದಿಯ ಅಷ್ಟೂ ಸತ್ಯವನ್ನ ತಿಳಿದುಕೊಂಡಿದ್ದಾರೆ. ಈಗ ಅಸಲಿ ಆಟ ಶುರು ಅಂತ ಹೇಳಿದಂತೆನೂ ಇದೆ. ಕಾರಣ, ಹನುಮಂತ ಕ್ಯಾಪ್ಟನ್ ಆಗಿರೋದು ಸುಮ್ನೆ ಏನೂ ಅಲ್ಲ. ಅಸಲಿ ಆಟ ಆಡಿದ್ದಾರೆ. ಪ್ರಾಮಾಣಿಕವಾಗಿಯೇ ಆಟ ಆಡಿ ಎಲ್ಲರ ಹೃದಯ ಗೆದ್ದಿದ್ದಾರೆ. ಆದರೆ, ಮನೆ ಮಂದಿಯ ವಿಚಾರದಲ್ಲಿ ಎಲ್ಲರಿಗೂ ಖುಷಿ ಆಗಿದೆ ಅಂತ ಹೇಳೋಕೆ ಆಗೋದಿಲ್ಲ. ಆ ಬೇಸರ ಈಗ ಹೊರ ಬಂದಾಗಿದೆ. ಇದನ್ನೂ ಓದಿ: Mokshitha Pai: ಬಿಗ್ ಬಾಸ್ ಮೋಕ್ಷಿತಾ ಪೈ ಮದುವೇನೆ ಆಗಲ್ವಂತೆ; ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ? ನಾಮಿಮೇಟ್ ಪ್ರಕ್ರಿಯೆ ಹನುಮಂತ ಒಂದಷ್ಟು ಸ್ಪರ್ಧಿಗಳನ್ನ ನಾಮಿನೇಟ್ ಮಾಡಿದ್ದಾರೆ. ಮಾನಸ, ಭವ್ಯ ಗೌಡ, ಗೋಲ್ಡ್ ಸುರೇಶ್ ಹೀಗೆ ಇವರನ್ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಸಣ್ಣ ಅಸಮಾಧಾನ ವ್ಯಕ್ತವಾಗಿದೆ. ಚೈತ್ರಾ ಕುಂದಾಪುರ, ಭವ್ಯ ಗೌಡ, ಮಾನಸ ಹೀಗೆ ಇವರೆಲ್ಲ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಈ ಅಸಮಾಧಾನದಿಂದ ಒಂದು ಪ್ರಶ್ನೆ ಈಗ ಎದ್ದಿದೆ. ಮನೆಯ ಸದಸ್ಯರನ್ನ ಇಂತಹ ಪರಿಸ್ಥಿತಿಯಲ್ಲಿ ಹನುಮಂತ ಹೇಗೆ ಹ್ಯಾಂಡಲ್ ಮಾಡ್ತಾರೆ ಅನ್ನೋ ಪ್ರಶ್ನೆ ಇದಾಗಿದೆ. ಆದರೆ, ಹನುಮಂತನೇ ಹೇಳಿದಂತೆ ಒಂದು ವಾರ ಆಟವನ್ನ ನೋಡಿಕೊಳ್ತಿನಿ ಅಂತಲೇ ಹೇಳಿಕೊಂಡಿದ್ದರು ನೋಡಿ. ಹನುಮಂತನ ಅಸಲಿ ಆಟ ಶುರು ಆ ಪ್ರಕಾರ ಹನುಮಂತನ ಅಸಲಿ ಆಟ ಶುರು ಆದಂತೆ ಇದೆ. ಟಾಸ್ಕ್ ಆಡಿಯೇ ಕ್ಯಾಪ್ಟನ್ ಆಗಿದ್ದಾರೆ. ಹೀಗೆ ಕ್ಯಾಪ್ಟನ್ ಆದಾಗ ತುಂಬಾನೆ ಖುಷಿಪಟ್ಟವರು ಬೇರೆ ಯಾರೋ ಅಲ್ಲ. ಅದು ಹುಲಿ ಧನರಾಜ್ ಆಚಾರ್ ಅಂತಲೇ ಹೇಳಬಹುದು. ಹನುಮಂತ ಗೆದ್ದ ಖುಷಿಯಲ್ಲಿ ಆತನನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರೆಸಿರೋದು ಇದೇ ಧನರಾಜ್ ಅವರೇ ಆಗಿದ್ದಾರೆ. ಹನುಮಂತ ಮತ್ತು ಧನರಾಜ್ ದೋಸ್ತಿ ಚೆನ್ನಾಗಿದೆ. ಇಬ್ಬರು ರಿಯಲ್ ಆಗಿಯೇ ಇದ್ದಾರೆ. ರಿಯಲ್ ಆಗಿಯೇ ಮನೆಯಲ್ಲಿ ಆಟ ಆಡ್ತಿದ್ದಾರೆ ಅನ್ನೋ ಫೀಲ್ ಕೂಡ ಇದೆ. ಒಟ್ಟಾರೆ, ಹನುಮಂತ ಆಟ ಗೆದ್ದು ಈಗ ಕ್ಯಾಪ್ಟನ್ ಹನುಮಂತ ಆಗಿದ್ದಾರೆ ಅಂತಲೇ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.