NEWS

Darshan: ಜೂನ್‌ 8 ಟು ಅಕ್ಟೋಬರ್‌ 30! 131 ದಿನಗಳಲ್ಲಿ ಏನೇನೆಲ್ಲಾ ಆಯ್ತು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್‌

ದಾಸ ದರ್ಶನ್ (Dasa Darshan) ಅಭಿಮಾನಿಗಳು ಖುಷಿ ಆಗಿದ್ದಾರೆ. ಹೆಚ್ಚು ಕಡಿಮೆ ಮೂರು ತಿಂಗಳಿಗೂ ಹೆಚ್ಚು ದಿನ ದರ್ಶನ್ ಜೈಲಿನಲ್ಲಿಯೇ ಇದ್ದಾರೆ. ಪರಪ್ಪನ ಅಗ್ರಹಾರದಲ್ಲಿ 50 ಕ್ಕೂ ಹೆಚ್ಚು ದಿನ ಇದ್ದರು. ಆದರೆ, ಎಡವಟ್ಟು ಮಾಡಿಕೊಂಡು ಬಳ್ಳಾರಿ ಜೈಲು (Bellary Jail) ಸೇರಿದ್ದು ಗೊತ್ತೇ ಇದೆ. ಇಡೀ ರಾಜ್ಯ ಇದನ್ನ ನೋಡಿದೆ. ಈ ಒಂದು ಬೆಳವಣಿಗೆಯಿಂದ ಪರಪ್ಪನ ಅಗ್ರಹಾರದ ಕರಾಳ ಸತ್ಯ ಕೂಡ ಹೊರಗೆ ಬಂದೇ ಬಿಡ್ತು ನೋಡಿ. ಆದರೆ, ದರ್ಶನ್ 100 ದಿನ ಆಚರಿಸಿದ್ರು ಮಾತ್ರ ಬಳ್ಳಾರಿ ಜೈಲಿನಲ್ಲಿಯೇ (Bellary Jail) ನೋಡಿ. ಇಲ್ಲಿವರೆಗಿನ ಸೆಲೆಬ್ರಿಟಿ ಜೈಲುವಾಸದಲ್ಲಿ ದರ್ಶನ್ ಹೆಚ್ಚು ದಿನ ಜೈಲಿನಲ್ಲಿ ಇದ್ದ ಕುಖ್ಯಾತಿಗೂ ಪಾತ್ರರಾದ್ರು. ಆದರೆ, ದುರಂತ ನೋಡಿ ಹೇಗಿದೆ.? ಫಿಟ್ ಆ್ಯಂಡ್ ಫೈನ್ ಆಗಿಯೇ ಇದ್ದ ದರ್ಶನ್ (Darshan) ಬೆನ್ನು ನೋವು ಇದೇ ಜೈಲಿನಲ್ಲಿಯೇ ಹೆಚ್ಚಾಗಿ ಕಾಣಿಸಿತ್ತು. ಈ ಒಂದು ಬೆನ್ನು ನೋವಿನಿಂದಲೇ ದರ್ಶನ್‌ಗೆ ಇದೀಗ ಮಧ್ಯಂತರ ಜಾಮೀನು ಸಿಕ್ಕಿದೆ. ಮುಂದಿನ ವಿಚಾರ ಇಲ್ಲಿದೆ ಓದಿ. 3 ತಿಂಗಳಿಗೂ ಹೆಚ್ಚು ದಿನ ಜೈಲು ವಾಸ ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ದರ್ಶನ್ ಜೈಲು ಸೇರಿದ್ದು ಗೊತ್ತೇ ಇದೆ. ಅದರಿಂದ ತಪ್ಪಿಸಿಕೊಳ್ಳಲು ದರ್ಶನ್ ಏನೇನೋ ಮಾಡಿದ್ದಾರೆ ಅನ್ನೋ ವಿಚಾರಗಳು ಹೆಚ್ಚು ಕೇಳಿ ಬಂದವು. ಆದರೆ, ದರ್ಶನ್ ಜೈಲು ವಾಸ ತಪ್ಪಲೇ ಇಲ್ಲ ನೋಡಿ. ಪೊಲೀಸ್ ವಿಚಾರಣೆ ಕೂಡ ತೀವ್ರವಾಗಿಯೇ ನಡೆಯಿತು. ಪೊಲೀಸರು ಸ್ಟ್ರಾಂಗ್ ಸಾಕ್ಷಿಗಳನ್ನು ಕಲೆ ಹಾಕಿದ್ದರು. ಚಾರ್ಜ್‌ಶೀಟ್‌ನಲ್ಲಿ ಸಾಕಷ್ಟು ಸಾಕ್ಷಿಗಳು ಇವೆ. ಹಾಗಾಗಿಯೇ ನ್ಯಾಯ್ಯಾಲಯದಲ್ಲಿ ವಾದ-ವಿವಾಗಳು ಜೋರಾಗಿಯೇ ನಡೆದವು. ಆದರೆ, ದರ್ಶನ್‌ಗೆ ಜಾಮೀನು ಕೆಳ ನ್ಯಾಯಾಲದಲ್ಲಿ ಸಿಗಲೇ ಇಲ್ಲ ನೋಡಿ. ಆಗ ಇಡೀ ದರ್ಶನ್ ಫ್ಯಾನ್ಸ್ ಬೇಸರದಲ್ಲಿಯೇ ಇದ್ದರು. ಬೆನ್ನು ನೋವಿನಿಂದ ನರಳಾಟ ದರ್ಶನ್ ಬಳ್ಳಾರಿ ಜೈಲು ಸೇರಿದ್ಮೇಲೆ ಬೆನ್ನು ನೋವು ಕಾಣಿಸಿತ್ತು. ಅದೆಷ್ಟು ಅಂದ್ರೆ ನಡೆಯೋಕೂ ಸಾಧ್ಯವಾಗದಷ್ಟು ನೋವು ಇತ್ತು. ಹಾಗಾಗಿಯೇ ದರ್ಶನ್ ನ್ಯಾಯಾಲಯಕ್ಕೆ ಮನವಿ ಮಾಡ್ತಾನೇ ಇದ್ದರು. ಆದರೂ ಕೆಳ ನ್ಯಾಯಾಯದಲ್ಲಿ ಜಾಮೀನು ಸಿಗಲೇ ಇಲ್ಲ ನೋಡಿ. ಇದನ್ನೂ ಓದಿ: Actor Darshan: ದರ್ಶನ್​ಗಾಗಿ ಕಾನೂನು ಹೋರಾಟ, ಇದು ವಿಜಯಲಕ್ಷ್ಮಿಗೆ ಸಿಕ್ಕ ದೊಡ್ಡ ವಿಜಯ! ಆದರೆ, ಬೆನ್ನು ನೋವಿನಿಂದಲೇ ನರಳಿದ ದರ್ಶನ್‌ಗೆ ಹೈಕೋರ್ಟ್ ಇದೀಗ ಮಧ್ಯಂತರ ಜಾಮೀನು ನೀಡಿದೆ. 6 ವಾರಗಳ ಕಾಲ ಚಿಕಿತ್ಸೆಗಾಗಿಯೇ ಜಾಮೀನು ಸಿಕ್ಕಿದೆ. ಇದಾದ್ಮೇಲೆ ಮುಂದೇನು ಅನ್ನೋ ಪ್ರಶ್ನೆ ಕೂಡ ಇದೆ. ಆದರೆ, ಇದೀಗ ಅಭಿಮಾನಿಗಳು ಖುಷಿ ಆಗಿದ್ದಾರೆ. ಪತಿಗಾಗಿ ಪರದಾಡಿದ ವಿಜಯ ಲಕ್ಷ್ಮಿ ದರ್ಶನ್ ಜೈಲು ಸೇರಿದ್ಮೇಲೆ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ದೇವರ ಮೊರೆ ಹೋಗಿದ್ದಾರೆ. ಹೋಮ-ಹವನ ಮಾಡಿದ್ದಾರೆ. ಜಾಮೀನಿಗಾಗಿಯೇ ಕೋರ್ಟು ಕಚೇರಿ ಅಂತ ಓಡಾಡಿದ್ದಾರೆ. ನಿರಂತರವಾಗಿಯೇ ಎಲ್ಲೆಡೆ ಓಡಾಡಿದ್ದಾರೆ. ಅದರ ಫಲವೇ ಇದೀಗ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್ ಮಧ್ಯಂತರ ಜಾಮೀನು ಪ್ರಕಟ ಆಗುತ್ತಿದ್ದಂತೇನೆ ದರ್ಶನ್ ಹೇಗೆ ಬರ್ತಾರೆ. ನೇರವಾಗಿಯೇ ಬೆಂಗಳೂರಿಗೆ ಬರ್ತಾರಾ? ಹೆಲಿಕಾಪ್ಟರ್ ಮೂಲಕವೇ ದರ್ಶನ್ ಬೆಂಗಳೂರಿಗೆ ಬರ್ತಾರಾ ಈ ಎಲ್ಲ ಪ್ರಶ್ನೆಗಳೂ ಹುಟ್ಟಿವೆ ನೋಡಿ. ದರ್ಶನ್ ಸಿನಿಮಾಗಳು ರೀ-ರಿಲೀಸ್ ದರ್ಶನ್ ಜೈಲು ಸೇರಿದ್ಮೇಲೆ ಅಭಿಮಾನಿಗಳು ಬೇಸರದಲ್ಲಿಯೇ ಇದ್ದರು. ದರ್ಶನ್‌ ಚಿತ್ರಗಳಿಂದ ಕೆಲಸ ಪಡೆಯುತ್ತಿದ್ದ ಕಾರ್ಮಿಕರು ಬೇಸರಲ್ಲಿಯೇ ಇದ್ದರು. ಇದರ ಬೆನ್ನಲ್ಲಿಯೇ ಸಿನಿಮಾ ಥಿಯೇಟರ್‌ಗಳೂ ಚಿತ್ರಗಳಿಲ್ಲದೇ ಖಾಲಿ ಖಾಲಿ ಆಗಿಯೇ ಇದ್ದವು. ಆದರೆ, ದರ್ಶನ್ ಜೈಲು ಸೇರಿದ್ಮೇಲೆ ಕರಿಯ ಚಿತ್ರ ರೀ-ರಿಲೀಸ್ ಆಯಿತು. ಪೊರ್ಕಿ ರೀ-ರಿಲೀಸ್ ಆಯಿತು. ನಮ್ಮ ಪ್ರೀತಿಯ ರಾಮು ಸಿನಿಮಾ ಕೂಡ ರೀ-ರಿಲೀಸ್ ಆಗೋ ಸಾಧ್ಯತೆ ಇದೆ. ಇದರ ಬೆನ್ನಲ್ಲಿಯೇ ನವಗ್ರಹ ರೀ-ರಿಲೀಸ್ ಆಗುತ್ತಿದೆ. ಒಟ್ಟಾರೆ, ದರ್ಶನ್‌ಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.